Begin typing your search above and press return to search.
    Others

    ರಾಮ್ ರಹೀಮ್ ಅವರ ಭಾವಚಿತ್ರವನ್ನು ಹಿಡಿದಿರುವ ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಅವರ ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ

    IDTU - Karnataka
    30 May 2024 12:10 PM GMT
    ರಾಮ್ ರಹೀಮ್ ಅವರ ಭಾವಚಿತ್ರವನ್ನು ಹಿಡಿದಿರುವ ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಕೌರ್ ಬಾದಲ್ ಅವರ ಈ ಚಿತ್ರವನ್ನು ಎಡಿಟ್ ಮಾಡಲಾಗಿದೆ
    x

    ಸಾರಾಂಶ:

    ಪಂಜಾಬ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಮುನ್ನ ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್ ಕೌರ್ ಬಾದಲ್ ಅವರು ರಾಮ್ ರಹೀಮ್ ಅವರ ಚೌಕಟ್ಟಿನ ಫೋಟೋವನ್ನು ಹಿಡಿದಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಇದು ಎಡಿಟ್ ಮಡಿದ ಚಿತ್ರವಾಗಿದೆ. ಮೂಲ ಚಿತ್ರವು ಆಕೆ ಗೋಲ್ಡನ್ ಟೆಂಪಲ್‌ನ ವರ್ಣಚಿತ್ರವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಆದ್ದರಿಂದ ಈ ಹೇಳಿಕೆ ಮತ್ತು ಚಿತ್ರ ನಕಲಿ.


    ಹೇಳಿಕೆ:

    ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ಗಳು ಶಿರೋಮಣಿ ಅಕಾಲಿ ದಳದ ನಾಯಕಿ ಮತ್ತು ಪಂಜಾಬ್‌ನ ಬಟಿಂಡಾದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ವಿವಾದಾತ್ಮಕ ಧಾರ್ಮಿಕ ನಾಯಕ ಗುರ್ಮೀತ್ ರಾಮ್ ರಹೀಮ್ ಅವರ ಚೌಕಟ್ಟಿನ ಭಾವಚಿತ್ರವನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರು ಡೇರಾ ಸಚ್ಚಾ ಸೌದಾ ಎಂಬ ಸಂಘಟನೆಯ ಮುಖ್ಯಸ್ಥರಾಗಿದ್ದರು, ಇತ್ತೀಚೆಗೆ ೨೦೦೨ ರ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡರು ಮತ್ತು ೨೦೧೭ ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾದಾಗಿನಿಂದ ಜೈಲು ಪಾಲಾಗಿದ್ದಾರೆ.

    ಜೂನ್ ೧, ೨೦೨೪ ರಂದು ಪಂಜಾಬ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಚಿತ್ರದೊಳಗಿನ ಪಂಜಾಬಿ ಪಠ್ಯವು ಹೀಗೆ ಹೇಳುತ್ತದೆ, “ಡೇರಾ ಬೆಂಬಲಿಗರು ಹರ್‌ಸಿಮ್ರತ್ ಬಾದಲ್ ಅವರನ್ನು ಡೇರಾ ಮುಖ್ಯಸ್ಥ ಸದ್ಗುರು ರಾಮ್ ರಹೀಮ್ ಜಿ ಅವರ ಫೋಟೋದೊಂದಿಗೆ ಗೌರವಿಸಿದರು ಮತ್ತು ಅಕಾಲಿ ದಳಕ್ಕೆ ತಮ್ಮ ಮತಗಳನ್ನು ವಾಗ್ದಾನ ಮಾಡಿದರು” (ಅನುವಾದಿಸಲಾಗಿದೆ).

    ಮೇ ೨೪, ೨೦೨೪ ರಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗದ ವೈರಲ್ ಚಿತ್ರದ ಸ್ಕ್ರೀನ್‌ಶಾಟ್.


    ಪುರಾವೆ:

    ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ನಡೆಸಿದ ನಂತರ, ನಾವು ಅದನ್ನು ಏಪ್ರಿಲ್ ೧೮, ೨೦೨೪ ರಂದು ಬಾದಲ್ ಅವರು ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ಅನ್ನು ಪತ್ತೆಹಚ್ಚಿದ್ದೇವೆ. ಪೋಷ್ಟ್ ನಲ್ಲಿ, ಫೋಟೋ ಫ್ರೇಮ್ ವಿಭಿನ್ನ ಚಿತ್ರವನ್ನು ಪ್ರದರ್ಶಿಸುವುದನ್ನು ಹೊರತುಪಡಿಸಿ, ಪೋಷ್ಟ್ ನಲ್ಲಿ ಒಂದು ಚಿತ್ರವು ವೈರಲ್ ಫೋಟೋಗೆ ಹೊಂದಿಕೆಯಾಗಿದೆ. ಮೂಲ ಫೋಟೋ ಅವರು ಗೋಲ್ಡನ್ ಟೆಂಪಲ್ ನ ಚಿತ್ರವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಶೀರ್ಷಿಕೆಯ ಪ್ರಕಾರ, ಪಂಜಾಬ್‌ನ ಮಾನ್ಸಾ ಪಟ್ಟಣದಲ್ಲಿ ಪ್ರಚಾರ ಮಾಡುವಾಗ ಅವರು ಫೋಟೋ ಫ್ರೇಮ್ ಪಡೆದರು. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಗುರ್ಮೀತ್ ರಾಮ್ ರಹೀಮ್ ಅವರ ಫೋಟೋವನ್ನು ವರ್ಣಚಿತ್ರದ ಮೇಲೆ ಎಡಿಟ್ ಮಾಡಿ ಸೇರಿಸಲಾಗಿದೆ ಎಂದು ತೋರುತ್ತದೆ, ಆದರೆ ಮೂಲ ಚಿತ್ರದಲ್ಲಿರುವ ವ್ಯಕ್ತಿಗಳು ವರ್ಣಚಿತ್ರದ ಹಿಂದೆ ಕಂಡುಬರುತ್ತಾರೆ.

    ಏಪ್ರಿಲ್ ೧೮, ೨೦೨೪ ರಂದು ಹರ್ಸಿಮ್ರತ್ ಕೌರ್ ಬಾದಲ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಮೂಲ ಚಿತ್ರದ ಸ್ಕ್ರೀನ್‌ಶಾಟ್.


    ಈ ಚಿತ್ರವು ವೈರಲ್ ಆದ ನಂತರ, ಶಿರೋಮಣಿ ಅಕಾಲಿದಳದ ವಕ್ತಾರ ಅರ್ಶ್‌ದೀಪ್ ಸಿಂಗ್ ಕ್ಲೇರ್ ಹೇಳಿಕೆಯನ್ನು ಬಿಡುಗಡೆ ಮಾಡಿ ಚಿತ್ರವು ನಿಜವಾಗಿಯೂ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಕ್ಲೆರ್ ಅವರ ಸ್ಪಷ್ಟೀಕರಣದ ವೀಡಿಯೋವನ್ನು ಪಂಜಾಬಿ ಮಾಧ್ಯಮ ಔಟ್ಲೆಟ್ ರೊಜಾನಾ ಟೈಮ್ಸ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಅಲ್ಲದೆ, ವೈರಲ್ ಹೇಳಿಕೆಗೆ ಸಂಬಂಧಿಸಿದಂತೆ ಶಿರೋಮಣಿ ಅಕಾಲಿ ದಳವು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರಿಗೆ ದೂರು ಸಲ್ಲಿಸಿದೆ ಮತ್ತು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ವಿನಂತಿಸಿದೆ ಎಂದು ಹಿಂದಿ ಭಾಷೆಯ ಪತ್ರಿಕೆ ಜಗಬಾನಿ ವರದಿ ಮಾಡಿದೆ.


    ತೀರ್ಪು:

    ವೈರಲ್ ಚಿತ್ರದ ವಿಶ್ಲೇಷಣೆಯು ಸಂಸದ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಅಪರಾಧಿ ಗುರ್ಮೀತ್ ರಾಮ್ ರಹೀಮ್ ಅವರ ಭಾವಚಿತ್ರವನ್ನು ಹಿಡಿದಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿರುವ ಎಡಿಟ್ ಮಡಿದ ಚಿತ್ರ ಎಂದು ತೋರಿಸುತ್ತದೆ. ಮೂಲ ಚಿತ್ರವು ಆಕೆ ಗೋಲ್ಡನ್ ಟೆಂಪಲ್‌ನ ಚಿತ್ರವನ್ನು ಹಿಡಿದಿರುವುದನ್ನು ತೋರಿಸುತ್ತದೆ. ಆದ್ದರಿಂದ, ಈ ಹೇಳಿಕೆ ಮತ್ತು ಚಿತ್ರವು ನಕಲಿಯಾಗಿದೆ.

    Claim Review :   This image of Shiromani Akali Dal's Harsimrat Kaur Badal holding Ram Rahim's portrait is edited
    Claimed By :  Instagram User
    Fact Check :  Fake
    IDTU - Karnataka

    IDTU - Karnataka