Begin typing your search above and press return to search.
    ಚುನಾವಣೆ

    ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸುವಾಗ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಿಕೊಂಡು ಕೇರಳದ ಘಟನೆಯ ವೀಡಿಯೋ ಹಂಚಿಕೊಳ್ಳಲಾಗಿದೆ.

    IDTU - Karnataka
    7 May 2024 12:00 PM GMT
    ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸುವಾಗ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಿಕೊಂಡು ಕೇರಳದ ಘಟನೆಯ ವೀಡಿಯೋ ಹಂಚಿಕೊಳ್ಳಲಾಗಿದೆ.
    x

    ಸಾರಾಂಶ:

    ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಸುಡುವಾಗ ಕಾಂಗ್ರೆಸ್ ಪ್ರತಿಭಟನಾಕಾರರ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳುವ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ೨೦೧೨ ರಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಲರ್ ವಿರುದ್ಧ ಕೇರಳದ ಕಾಂಗ್ರೆಸ್ ಪರ ವಿದ್ಯಾರ್ಥಿ ಸಂಘ (ಕೆಎಸ್‌ಯು) ಪ್ರತಿಭಟನೆ ನಡೆಸಿದ್ದು, ಬೆಂಕಿ ಹಿಡಿದ ಘಟನೆ ಅಲ್ಲಿ ಸಂಭವಿಸಿದೆ. ಇದರ ವೀಡಿಯೋವನ್ನು ಕರ್ನಾಟಕದ್ದು ಎಂದು ಹೇಳಿಕೊಂಡು ಮಾಡಿರುವ ಆರೋಪಗಳು ತಪ್ಪು.


    ಹೇಳಿಕೆ:

    ಎಕ್ಸ್ ನಲ್ಲಿನ ಬಳಕೆದಾರರು ಪ್ರತಿಕೃತಿಯನ್ನು ಸುಡಲು ಪ್ರಯತ್ನಿಸುತ್ತಿರುವಾಗ ಪ್ರತಿಭಟನಾಕಾರರ ಬಟ್ಟೆಗೆ ಬೆಂಕಿ ಹಿಡಿದಿರುವುದನ್ನು ತೋರಿಸುವ ವೀಡಿಯೋ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ೭.೩ ಸಾವಿರ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರು ಮೇ ೫, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದು ಅದರ ಶೀರ್ಷಿಕೆ ಹೀಗಿದೆ, "ಕರ್ನಾಟಕದಲ್ಲಿ ಮೋದಿಯವರ ಪ್ರತಿಕೃತಿಯನ್ನು ಸುಡುವಾಗ ಐವರು ಕಾಂಗ್ರೆಸ್ಸಿಗರ ಲುಂಗಿಗೆ ಬೆಂಕಿ ಹೊತ್ತಿಕೊಂಡಿತು! ಇದೆಲ್ಲ ಹೇಗೆ ಸಂಭವಿಸಿತು ಎಂಬುದನ್ನು ನೋಡಿ. ಈಗ ಮೋದಿಜಿಯವರ ಪ್ರತಿಕೃತಿಗಳು ಸಹ ಪಾಠ ಕಲಿಸಲು ಪ್ರಾರಂಭಿಸಿವೆ. ಇದು ಮೋದಿಜಿ ಶಕ್ತಿ (ಕನ್ನಡಕ್ಕೆ ಅನುವಾದಿಸಲಾಗಿದೆ)." ಈ ಪೋಷ್ಟ್ ೯೩.೭ ಸಾವಿರ ವೀಕ್ಷಣೆಗಳು, ೨.೧ ಸಾವಿರ ಇಷ್ಟಗಳು ಮತ್ತು ೬೨೨ ಮರುಪೋಷ್ಟ್ ಗಳನ್ನು ಗಳಿಸಿದೆ.

    ಕರ್ನಾಟಕದಲ್ಲಿ ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸಲು ಯತ್ನಿಸಿದ ಕಾಂಗ್ರೆಸ್ ಪ್ರತಿಭಟನೆ ನಡುವೆ ಸಂಭವಿಸಿದ ಅವಘಡವನ್ನು ತೋರಿಸುತ್ತದೆ ಎಂದು ಎಕ್ಸ್‌ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.


    ಈ ವೀಡಿಯೋವನ್ನು ಹಂಚಿಕೊಂಡ ಇನ್ನಷ್ಟು ಬಳಕೆದಾರರು ಎಕ್ಸ್ ನಲ್ಲಿ #Modi #India #IPL2024 #RCBvsGT #Election2024 #Karnataka #Amethi #RahulGandhi #AbkiBaar400Paar ಮೊದಲಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.

    ಈ ವೀಡಿಯೋ ಫೇಸ್‌ಬುಕ್‌ನಲ್ಲಿ ಕೂಡ ವ್ಯಾಪಕವಾಗಿ ಹರಿದಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಬಳಕೆದಾರರು ಮೇ ೫, ೨೦೨೪ ರಂದು ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ಕರ್ನಾಟಕದಲ್ಲಿ ಮೋದಿ ಜಿ ಅವರ ಪ್ರತಿಕೃತಿಯನ್ನು ಸುಡುವಾಗ ಮೋದಿ ಜಿಯವರ ಶಕ್ತಿಯು ಐದು ಕಾಂಗ್ರೆಸ್ಸಿಗರ ಲುಂಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ" (ಕನ್ನಡಕ್ಕೆ ಅನುವಾದಿಸಲಾಗಿದೆ)."

    ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಮತ್ತುಸೆಪ್ಟೆಂಬರ್ ೨, ೨೦೨೪ ರಿಂದ ಮೇಕ್ ಎ ಜಿಐಎಫ್ ಪೋಷ್ಟ್ ಅನ್ನು ಕಂಡುಕೊಂಡಿದ್ದೇವೆ. ವೀಡಿಯೋದ ಶೀರ್ಷಿಕೆಯು ಹೀಗೆ ಹೇಳುತ್ತದೆ, "ಪತ್ತನಂತಿಟ್ಟದಲ್ಲಿ ಕೆಎಸ್‌ಯು ಮೆರವಣಿಗೆಯ ಸಮಯದಲ್ಲಿ ನಡೆದ ತಮಾಷೆಯ ಘಟನೆ, ಬೆಂಕಿ ಅಪಘಾತ ನ್ಯಾರೋ ಎಸ್ಕೇಪ್(ಕನ್ನಡಕ್ಕೆ ಅನುವಾದಿಸಲಾಗಿದೆ). " ಪತ್ತನಂತಿಟ್ಟ ಕೇರಳದ ಒಂದು ಜಿಲ್ಲೆ ಎಂಬುದು ಇಲ್ಲಿ ಗಮನಾರ್ಹ.

    ಸೆಪ್ಟೆಂಬರ್ ೨, ೨೦೨೪ ರ "Makeagif" ವೀಡಿಯೋದ ಸ್ಕ್ರೀನ್‌ಶಾಟ್.


    ನಂತರ ನಾವು "ಕೆಎಸ್‌ಯು," "ಮಾರ್ಚ್," "ಪತ್ತನಂತಿಟ್ಟ," ಮತ್ತು "ಅಗ್ನಿ ಅಪಘಾತ" ಮುಂತಾದ ಕೀವರ್ಡ್‌ಗಳನ್ನು ಬಳಸಿ ಇನ್ನಷ್ಟು ವಿಶ್ಲೇಷಣೆ ನಡೆಸಿದಾಗ, ಜುಲೈ ೪, ೨೦೧೨ ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಏಷ್ಯಾನೆಟ್ ನ್ಯೂಸ್‌ನ ವರದಿಯನ್ನು ಕಂಡುಕೊಂಡಿದ್ದೇವೆ. ಇದರ ಶೀರ್ಷಿಕೆಯು, "ಪತ್ತನಂತಿಟ್ಟಾ ದಲ್ಲಿ ಕೆಎಸ್‌ಯು ಕಾರ್ಯಕರ್ತರಿಗೆ ಲಕ್ಕಿ ಫೈರ್ ಎಸ್ಕೇಪ್ (ಕನ್ನಡಕ್ಕೆ ಅನುವಾದಿಸಲಾಗಿದೆ)," ಎಂದು ಹೇಳಿಕೊಂಡಿದೆ.

    ಜುಲೈ ೪, ೨೦೧೨ ರ ಏಷ್ಯಾನೆಟ್ ನ್ಯೂಸ್ ವರದಿಯ ಸ್ಕ್ರೀನ್‌ಶಾಟ್.


    ಈ ಸುದ್ದಿ ವರದಿಯ ಪ್ರಕಾರ, ಕೇರಳದ ಪತ್ತನಂತಿಟ್ಟದ ಸೆಂಟ್ರಲ್ ಜಂಕ್ಷನ್‌ನಲ್ಲಿ, ಭ್ರಷ್ಟಾಚಾರ ಆರೋಪದ ಕುರಿತು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ವಿರುದ್ಧ ತನಿಖೆಗೆ ಒತ್ತಾಯಿಸಿ ಕೇರಳದ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೆಎಸ್‌ಯು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಈ ಘಟನೆ ಸಂಭವಿಸಿದೆ. ವೈಸ್ ಚಾನ್ಸಲರ್ ಅವರ ಪ್ರತಿಕೃತಿ ದಹಿಸಲು ಯತ್ನಿಸಿದಾಗ ಪ್ರತಿಭಟನಾಕಾರರ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯು ೨೦೧೨ ರದ್ದು ಮತ್ತು ಕೇರಳದಿಂದ ಬಂದಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.


    ತೀರ್ಪು:

    ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಲರ್ ವಿರುದ್ಧ ತನಿಖೆಗೆ ಒತ್ತಾಯಿಸಿ ಕೇರಳದ ಪತ್ತನಂತಿಟ್ಟದಲ್ಲಿ ಕೆಎಸ್‌ಯು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ ಎಂದು ವೀಡಿಯೋದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಆದ್ದರಿಂದ, ಘಟನೆಯು ಕರ್ನಾಟಕದ್ದು ಎಂದು ಆನ್‌ಲೈನ್ ನಲ್ಲಿ ಕಂಡುಬಂದಿರುವ ಹೇಳಿಕೆಗಳು ತಪ್ಪು.

    Claim Review :   Users falsely claim that video shows a fire accident in Karnataka at a Congress protest while burning the effigy of PM Modi.
    Claimed By :  X user
    Fact Check :  False
    IDTU - Karnataka

    IDTU - Karnataka