Begin typing your search above and press return to search.
    ಚುನಾವಣೆ

    ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸುತ್ತಿದೆ ಎಂಬ ವೈರಲ್ ಪತ್ರ ನಕಲಿ

    IDTU - Karnataka
    1 Jun 2024 11:40 AM GMT
    ಕರ್ನಾಟಕದಲ್ಲಿ ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸುತ್ತಿದೆ ಎಂಬ ವೈರಲ್ ಪತ್ರ ನಕಲಿ
    x

    ಸಾರಾಂಶ:

    ಸಾಮಾಜಿಕ ಮಾಧ್ಯಮ ಬಳಕೆದಾರರು ಕರ್ನಾಟಕದ ಸಚಿವ ಎಂ.ಬಿ ಪಾಟೀಲ್ ಅವರದ್ದು ಎಂಬ ಉದ್ದೇಶಿತ ಪತ್ರದ ಚಿತ್ರವೊಂದನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕರ್ನಾಟಕ ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸಿ ಮುಸ್ಲಿಮರನ್ನು ಒಗ್ಗೂಡಿಸುತ್ತದೆ ಎಂದು ಈ ಪಾತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ಪತ್ರ ನಕಲಿಯಾಗಿದ್ದು, ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಇದಲ್ಲದೆ, ಈ ನಕಲಿ ಪತ್ರವನ್ನು ಹಂಚಿಕೊಂಡ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದರು.

    ಹೇಳಿಕೆ:

    ರಾಜ್ಯದಲ್ಲಿ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕರ್ನಾಟಕ ಕಾಂಗ್ರೆಸ್ "ಹಿಂದೂಗಳನ್ನು ವಿಭಜಿಸಲಿದೆ" ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬರೆದ ಉದ್ದೇಶಿತ ಪಾತ್ರವೊಂದರ ಚಿತ್ರವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ಪತ್ರವನ್ನು ಜೂಲೈ ೧೦, ೨೦೧೭ ರಂದು ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಬರೆದು ಸಿಹಿ ಹಾಕಿರುವುದಾಗಿ ಅದರಲ್ಲಿ ಕಂಡುಬಂದಿದೆ. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಕೂಡ ಪಾಟೀಲ್ ಅವರು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಕ್ಸ್‌ (ಹಿಂದಿನ ಟ್ವಿಟರ್) ನಲ್ಲಿ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಬಿಜೆಪಿಯನ್ನು ಸೋಲಿಸಲು ಹಿಂದೂಗಳ ವಿಭಜನೆಯನ್ನು ಒತ್ತಾಯಿಸಿ ಕಾಂಗ್ರೆಸ್ ಸಚಿವ @MBPatil ಅವರು ೨೦೧7 ರಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ! ಇದನ್ನು ಸಾಧಿಸಲು ಅವರು ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್‌ನ ಸಹಾಯವನ್ನು ಸಹ ಕೋರಿದರು." ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ರಾಜ್ಯದಲ್ಲಿ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ವಿಭಜಿಸುತ್ತಿದೆ ಎಂದು ಇದು ಸೂಚಿಸುತ್ತದೆ.

    ವೈರಲ್ ಪತ್ರದ ಚಿತ್ರದೊಂದಿಗೆ ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ಈ ಪತ್ರದ ಮೇಲ್ಭಾಗದಲ್ಲಿ "ಬಿ.ಎಲ್.ಡಿ.ಇ. ಅಸೋಸಿಯೇಷನ್, ಬಿಜಾಪುರ ಲಿಂಗಾಯತ ಜಿಲ್ಲಾ ಶೈಕ್ಷಣಿಕ ಸಂಘ (ಬಿ.ಎಲ್.ಡಿ.ಇ.ಎ)" ಎಂದು ಬರೆಯಲಾಗಿದೆ. ಈ ಸಂಸ್ಥೆಯ ಬಗ್ಗೆ ಹುಡುಕಿದಾಗ ಡಾ.ಎಂ.ಬಿ. ಪಾಟೀಲ್ ಅದರ ಅಧ್ಯಕ್ಷರಾಗಿದ್ದಾರೆ ಎಂದು ಕಂಡುಬಂದಿದೆ. ಆದರೆ, ವೈರಲ್ ಪತ್ರದಲ್ಲಿ ಉಲ್ಲೇಖಿಸಿರುವ "ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ (ಜಿಸಿಸಿ)" ಮತ್ತು "ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ (ಡಬ್ಲ್ಯುಐಒ)" ಸಂಸ್ಥೆಗಳ ಬಗ್ಗೆ ನಡೆಸಿದ ಹೆಚ್ಚಿನ ಹುಡುಕಾಟದಲ್ಲಿ ಅಂತಹ ಯಾವುದೇ ಸಂಸ್ಥೆಗಳು ಇರುವುದಾಗಿ ಕಂಡುಬರಲಿಲ್ಲ. ಭಾರತದ ಒಳಗೆ ಅಥವಾ ಹೊರಗೆ ಅಂತಹ ಸಂಸ್ಥೆಗಳ ವಿವರಗಳನ್ನು ಎಲ್ಲೂ ಉಲ್ಲೇಖಿಸಿಲ್ಲ. ಇದು ಈ ಪತ್ರ ನಕಲಿಯಾಗಿ ರಚಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.

    ಇನ್ನಷ್ಟು ಕೀವರ್ಡ್ ಹುಡುಕಾಟ ನಡೆಸಿದಾಗ, ಏಪ್ರಿಲ್ ೨೪, ೨೦೧೯ ರಂದು ಎನ್‌ಡಿಟಿವಿ ಯ ಸುದ್ದಿ ಲೇಖನಕ್ಕೆ ನಮ್ಮನ್ನು ಕರೆದೊಯ್ಯಿತು. ಇದರ ಹೆಡಿಂಗ್ ಹೀಗಿದೆ, "ಪೋಸ್ಟ್‌ಕಾರ್ಡ್ ನ್ಯೂಸ್ ಸಹ-ಸಂಸ್ಥಾಪಕನನ್ನು ಮತ್ತೆ ಬಂಧಿಸಲಾಗಿದೆ, ನಕಲಿ ಸುದ್ದಿಗಳನ್ನು ಹರಡಿದ ಆರೋಪ ಹೊರಿಸಲಾಗಿದೆ (ಅನುವಾದಿಸಲಾಗಿದೆ)." ಈ ಲೇಖನದಲ್ಲಿ ಸಾಮಾಜಿಕ ಮಾಧ್ಯಮ ಕಾರ್ಯಕರ್ತ ಮತ್ತು ಆನ್‌ಲೈನ್ ನ್ಯೂಸ್ ಪೋರ್ಟಲ್ ಪೋಷ್ಟ್ ಕಾರ್ಡ್ ನ್ಯೂಸ್‌ನ ಸಹ-ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಪೊಲೀಸರು ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಬಂಧಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

    ಏಪ್ರಿಲ್ ೨೪, ೨೦೧೯ ರಂದು ಎನ್‌ಡಿಟಿವಿ ಪ್ರಕಟಿಸಿದ ಸುದ್ದಿ ಲೇಖನದ ಸ್ಕ್ರೀನ್‌ಶಾಟ್.


    ನಂತರ ಸಚಿವ ಎಂ.ಬಿ. ಪಾಟೀಲ್ ಅವರು ಆಗಿನ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರವನ್ನು ಪ್ರಸಾರ ಮಾಡಿದ ಬಗ್ಗೆ ಪಾಟೀಲ್ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಕೂಡ ಆ ಸುದ್ದಿ ಲೇಖನದಲ್ಲಿ ಹೇಳಿಕೊಳ್ಳಲಾಗಿದೆ.

    ಏಪ್ರಿಲ್ ೧೬, ೨೦೧೯ ರಂದು ಹಂಚಿಕೊಂಡಿರುವ ಎಂ.ಬಿ ಪಾಟೀಲ್ ಅವರ ಎಕ್ಸ್ ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಅಲ್ಲಿ ಅವರು ಪತ್ರವನ್ನು ನಕಲಿ ಎಂದು ಪ್ರತಿಪಾದಿಸಿದರು ಮತ್ತು ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿರುವ ಬಿಜೆಪಿಯು ಅಂತಹ ನಕಲಿ ಪತ್ರಗಳನ್ನು ಅವಲಂಬಿಸಿದೆ ಎಂದು ಆರೋಪಿಸಿದ್ದಾರೆ. ಈ ಪೋಷ್ಟ್ ನ ಶೀರ್ಷಿಕೆಯು ಹೀಗಿದೆ, “ಈ ಪತ್ರವು ನಕಲಿಯಾಗಿದೆ. ಅದನ್ನು ತಯಾರಿಸಿ ಪ್ರಕಟಿಸಿದವರ ವಿರುದ್ಧ ಫೋರ್ಜರಿಗಾಗಿ ಕಾನೂನು ಕ್ರಮ ಜರುಗಿಸುತ್ತೇನೆ. ಬಿಜೆಪಿಯ ಹತಾಶೆ ಎದ್ದು ಕಾಣುತ್ತಿದೆ. ಅವರು ಸಂಪೂರ್ಣವಾಗಿ ನಕಲಿ ಪತ್ರಗಳ ಮೇಲೆ ಅವಲಂಬಿತರಾಗಿದ್ದಾರೆ ಏಕೆಂದರೆ ಅವರು ಜನರ ಬೆಂಬಲವನ್ನು ಕಳೆದುಕೊಂಡಿದ್ದಾರೆ."

    ಕರ್ನಾಟಕ ಕಾಂಗ್ರೆಸ್ ಕೂಡ ಈ ಪತ್ರವನ್ನು ನಕಲಿ ಎಂದು ಕರೆದಿದೆ ಮತ್ತು ಏಪ್ರಿಲ್ ೨೦೧೯ ರಲ್ಲಿ ಈ ಬಗ್ಗೆ ಪೊಲೀಸ್ ತನಿಖೆಗೆ ಕರೆ ನೀಡಿತು.

    ಏಪ್ರಿಲ್ ೧೬, ೨೦೧೯ ರಂದು ಹಂಚಿಕೊಂಡ ಎಂ.ಬಿ ಪಾಟೀಲ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಅದೇ ನಕಲಿ ಪತ್ರವನ್ನು ಪೋಷ್ಟ್ ಕಾರ್ಡ್ ನ್ಯೂಸ್‌ನೊಂದಿಗೆ ಹಂಚಿಕೊಳ್ಳಲು ತೊಡಗಿದ್ದಕ್ಕಾಗಿ ಮತ್ತೊಬ್ಬ ಪತ್ರಕರ್ತ ಎಸ್.ಎ.ಹೇಮಂತ್ ಕುಮಾರ್ ಅವರ ಬಂಧನದ ಬಗ್ಗೆ ಡೆಕ್ಕನ್ ಹೆರಾಲ್ಡ್‌ ಪ್ರಕಟಿಸಿದ ಮತ್ತೊಂದು ಸುದ್ದಿ ವರದಿಯನ್ನು ಕೂಡ ನಾವು ಗುರುತಿಸಿದ್ದೇವೆ. ಹೀಗಾಗಿ, ಪತ್ರವು ನಕಲಿ ಎಂಬುದು ಸ್ಪಷ್ಟವಾಗಿದೆ ಮತ್ತು ಕರ್ನಾಟಕದಲ್ಲಿ "ಹಿಂದೂಗಳನ್ನು ವಿಭಜಿಸಲು" ಸಂಚು ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಈ ಪತ್ರವನ್ನು ಪ್ರಸಾರ ಮಾಡಿದ್ದಕ್ಕಾಗಿ ಕೆಲವರನ್ನು ಬಂಧಿಸಲಾಗಿದೆ.

    ತೀರ್ಪು:

    ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ರಾಜ್ಯದಲ್ಲಿ ಹಿಂದೂಗಳನ್ನು ವಿಭಜಿಸುವ ಕರ್ನಾಟಕ ಕಾಂಗ್ರೆಸ್ ನ ಸಂಚನ್ನು ತೋರಿಸಲು ಉದ್ದೇಶಿಸಿರುವ ಪತ್ರವು ನಕಲಿಯಾಗಿದೆ. ಈ ಪತ್ರವನ್ನು ಪ್ರಕಟಿಸಿದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದು, ಈ ಆರೋಪವನ್ನು ಕಾಂಗ್ರೆಸ್ ಪಕ್ಷವು ನಿರಾಕರಿಸಿ, ಪತ್ರವನ್ನು ನಕಲಿ ಎಂದು ಹೇಳಿದೆ.


    Claim Review :   Viral letter stating Congress dividing Hindus in Karnataka is fake
    Claimed By :  X user
    Fact Check :  Fake