- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಕೋವಿಡ್ ಲಾಕ್‌ಡೌನ್...
ಕೋವಿಡ್ ಲಾಕ್‌ಡೌನ್ ನಿಯಮಗಳ ಉಲ್ಲಂಘನೆಯ ವಿರುದ್ಧ ಕರ್ನಾಟಕದಲ್ಲಿ ಪೊಲೀಸ್ ಕ್ರಮದ ೨೦೨೦ ರ ವೀಡಿಯೋ ತಪ್ಪು ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ
ಸಾರಾಂಶ:
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಭಯೋತ್ಪಾದನೆಯನ್ನು ಪ್ರಚಾರ ಮಾಡುವ ಶಂಕೆಯ ಮೇಲೆ ಮಸೀದಿಯ ವಿರುದ್ಧ ಪೊಲೀಸ್ ಕ್ರಮದ ಆಪಾದಿತ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ವೀಡಿಯೋ ೨೦೨೦ ರ ಹಿಂದಿನದು ಮತ್ತು ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ನಮಾಜ್ ಆಯೋಜಿಸಿದ್ದಕ್ಕಾಗಿ ಬೆಳಗಾವಿಯ ಮಸೀದಿಯ ವಿರುದ್ಧ ಪೊಲೀಸ್ ಕ್ರಮವನ್ನು ತೋರಿಸುತ್ತದೆ. ಇದು ಈ ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಎಕ್ಸ್ ಬಳಕೆದಾರರು ೩೫ ಸೆಕೆಂಡುಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಅದು ಮಸೀದಿಯಿಂದ ಹೊರಬರುತ್ತಿರುವ ಜನರನ್ನು ಪೊಲೀಸರು ಲಾಠಿಯಿಂದ ಥಳಿಸುತ್ತಿರುವುದನ್ನು ತೋರಿಸುತ್ತದೆ. ವೆರಿಫೈಡ್ ಎಕ್ಸ್ ಬಳಕೆದಾರರು ಮೇ ೨೮, ೨೦೨೪ ರಂದು ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚ್ಕೊಂಡಿದ್ದಾರೆ - "ಭಾರತೀಯ ಪೊಲೀಸರು ಮುಸ್ಲಿಮರೊಂದಿಗೆ ವ್ಯವಹರಿಸುವಲ್ಲಿ ಪರಿಣತರಾಗಿದ್ದಾರೆ ಏಕೆಂದರೆ ಮಸೀದಿಗಳು ಭಯೋತ್ಪಾದನೆಯ ಮೂಲ ಎಂದು ಅವರಿಗೆ ತಿಳಿದಿದೆ." ಪೋಷ್ಟ್ ೩೨.೨೪ ಲಕ್ಷ ವೀಕ್ಷಣೆಗಳು, ೨೨ ಸಾವಿರ ಇಷ್ಟಗಳು ಮತ್ತು ೪.೨ ಸಾವಿರ ಮರುಪೋಷ್ಟ್ ಗಳನ್ನು ಗಳಿಸಿದೆ.
ಮೇ ೨೮, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಇತರ ಎಕ್ಸ್ ಬಳಕೆದಾರರು ಸಹ ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ)
ಪುರಾವೆ:
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಅದು ಎಎನ್ಐ ಲೋಗೋವನ್ನು ಹೊಂದಿದೆ ಎಂದು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಸರ್ಚ್ ನಡೆಸುವುದು, ಮಾರ್ಚ್ ೨೬, ೨೦೨೦ ರಂದು ಎಕ್ಸ್ ನಲ್ಲಿ ಹಂಚಿಕೊಂಡ ಎಎನ್ಐನ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಪೋಷ್ಟ್ ನ ಶೀರ್ಷಿಕೆ ಹೀಗಿದೆ, "#WATCH ಪೊಲೀಸರು ಬೆಳಗಾವಿಯಲ್ಲಿ #Coronaviruslockdown ಅನ್ನು ಉಲ್ಲಂಘಿಸಿದ್ದಕ್ಕಾಗಿ ಜನರನ್ನು ಥಳಿಸಿದ್ದಾರೆ. ಮಸೀದಿಯ ಹೊರಗೆ ಜನರು ಪ್ರಾರ್ಥನೆ ಮುಗಿಸಿ ಹೊರಡುತ್ತಿದ್ದಾಗ ಈ ಘಟನೆ ನಡೆದಿದೆ. #Karnataka" (ಅನುವಾದಿಸಲಾಗಿದೆ).
ಮಾರ್ಚ್ ೨೬, ೨೦೨೦ ರ ಎಎನ್ಐನ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
"ಬೆಳಗಾವಿ," "ಲಾಠಿಚಾರ್ಜ್," "ಮಸೀದಿ," ಮತ್ತು "ಕೋವಿಡ್ ಲಾಕ್‌ಡೌನ್" ನಂತಹ ಇಂಗ್ಲಿಷ್ ಕೀವರ್ಡ್‌ಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ಘಟನೆಯನ್ನು ವಿವರಿಸುವ ಎಎನ್ಐನ ಮಾರ್ಚ್ ೨೬, ೨೦೨೦ ರ ವರದಿಗೆ ನಮ್ಮನ್ನು ಕರೆದೊಯ್ಯಿತು.
ಮಾರ್ಚ್ ೨೮, ೨೦೨೦ ರ ಎಎನ್ಐ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಕರ್ನಾಟಕದ ಬೆಳಗಾವಿ ಸ್ಥಳೀಯ ಮಸೀದಿಯಲ್ಲಿ ಮಾರ್ಚ್ ೨೬, ೨೦೨೦ ರಂದು ಜನರು ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಹೋದಾಗ ಈ ಘಟನೆ ಸಂಭವಿಸಿದೆ. ಲೋಕಮತ್ ಟೈಮ್ಸ್, ಬಿಸಿನೆಸ್ ಸ್ಟ್ಯಾಂಡರ್ಡ್, ನ್ಯೂಸ್18 ಹಿಂದಿ, ಮತ್ತು ಹಿಂದೂಸ್ತಾನ್ ಟೈಮ್ಸ್‌ನಂತಹ ಇತರ ಸುದ್ದಿ ಮಾಧ್ಯಮಗಳು ಕೂಡ ಘಟನೆಯನ್ನು ವರದಿ ಮಾಡಿವೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಕರ್ನಾಟಕದ ಬೆಳಗಾವಿಯಲ್ಲಿ ೨೦೨೦ ರಲ್ಲಿ ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಜನರ ವಿರುದ್ಧ ಪೊಲೀಸ್ ಕ್ರಮದ ಘಟನೆಯದು ಎಂದು ಸ್ಪಷ್ಟಪಡಿಸಿದೆ. ಆ ಪೊಲೀಸ್ ಕ್ರಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲಾಗಿದೆ. ಆದ್ದರಿಂದ ಈ ಹೇಳಿಕೆ ತಪ್ಪು.