- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಕೊಡಗು ಜಿಲ್ಲೆಯ ೨೦೨೧ ರ...
ಕೊಡಗು ಜಿಲ್ಲೆಯ ೨೦೨೧ ರ ನೈತಿಕ ಜಾಗರೂಕತೆಯ ಘಟನೆಯ ವೀಡಿಯೋವನ್ನು ಕೋಮು ಹೇಳಿಕೆಯೊಂದಿಗೆ ಮರುಹಂಚಿಕೊಳ್ಳಲಾಗಿದೆ
ಸಾರಾಂಶ:
ಕೊಡಗು ಜಿಲ್ಲೆಯಿಂದ ೨೦೨೧ ರಲ್ಲಿ ಶಾಲೆಗೆ ಹೋಗುವ ಇಬ್ಬರು ಅಲ್ಪಸಂಖ್ಯಾತ ಬಾಲಕಿಯರ ನೈತಿಕ ಜಾಗರೂಕತೆಯ ಘಟನೆಯನ್ನು ಒಳಗೊಂಡಿರುವ ವೀಡಿಯೋವನ್ನು ಅವರು "ಹಿಂದೂ ಹುಡುಗಿಯನ್ನು" ಬುರ್ಖಾ ಧರಿಸಿ "ಲವ್ ಜಿಹಾದ್" ಅನ್ನು ಮುಂದುವರಿಸಲು ಮುಸ್ಲಿಂ "ಹುಡುಗನೊಂದಿಗೆ ಹೋಗುವಂತೆ" ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಇತ್ತೀಚೆಗೆ ಮರುಹಂಚಿಕೆ ಮಾಡಲಾಗಿದೆ. ಅಲ್ಪಸಂಖ್ಯಾತ ಬಾಲಕಿಯರೊಬ್ಬರ ತಂದೆ, "ಘಟನೆಯ ದಿನ ಬೆಳಿಗ್ಗೆ ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ನನ್ನ ಮಗಳ ಸ್ನೇಹಿತೆ ತನ್ನ ಬುರ್ಖಾವನ್ನು ನೀಡಿದ್ದಳು" ಎಂದು ಸುದ್ದಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಈ ಘಟನೆಯಲ್ಲಿ “ಹಿಂದೂ” ಹುಡುಗಿಯೊಬ್ಬಳು ಭಾಗಿಯಾಗಿದ್ದಾಳೆ ಎಂಬ ಹೇಳಿಕೆಯನ್ನು ಸುಳ್ಳೆಂದು ಸಾಬೀತುಪಡಿಸುತ್ತದೆ. ಆದ್ದರಿಂದ ಈ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಪುರುಷರ ಗುಂಪೊಂದು ಪ್ರಶ್ನಿಸಿದಾಗ ಬುರ್ಖಾ ಧರಿಸಿದ ಹುಡುಗಿ ಮತ್ತು ಇನ್ನೊಬ್ಬ ಹುಡುಗಿ ಫೇಸ್‌ಮಾಸ್ಕ್‌ಗಳನ್ನು ಹಿಡಿದಿರುವ ವೀಡಿಯೋವನ್ನು ಎಕ್ಸ್ (ಹಿಂದಿನ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮಾರ್ಚ್ ೩, ೨೦೨೪ ರಂದು ಹಂಚಿಕೊಂಡ ವೀಡಿಯೋದಲ್ಲಿ, ಕೆಲವು ಪುರುಷರು ತಮ್ಮ ಬುರ್ಖಾವನ್ನು "ಅನುಷಾ" ಎಂಬ ಇನ್ನೊಬ್ಬ ಹುಡುಗಿಗೆ ಏಕೆ ನೀಡಿದರು ಎಂದು ಕೇಳುತ್ತಾರೆ. ಹುಡುಗಿಯರು ವೀಡಿಯೋ ಚಿತ್ರೀಕರಣ ಮಾಡದಂತೆ ವಿನಂತಿಸುವಾಗ ಅವರು ಹೇಳಿಕೆಯಲ್ಲಿರುವಂತಹ ಕೆಲಸ ಮಾಡಿದ್ದಕ್ಕಾಗಿ ಅವರು ಚಿತ್ರೀಕರಣ ಮಾಡುತ್ತಿರುವ ವೀಡಿಯೋ ವೈರಲ್ ಆಗಬೇಕು ಎಂದು ಅವರು ಒತ್ತಾಯಿಸುತ್ತಾರೆ.
ಈ ವೀಡಿಯೋದೊಂದಿಗೆ ಹಂಚಿಕೊಳ್ಳಲಾದ ಶೀರ್ಷಿಕೆ ಹೀಗಿದೆ, “ಹಿಂದೂಗಳೇ ಎಚ್ಚೆತ್ತುಕೊಳ್ಳಿ.! ಇದು ಕರ್ನಾಟಕದ ವಿಡಿಯೋ !! ವಿಡಿಯೋದಲ್ಲಿರುವ ಬುರ್ಖಾ ತೊಟ್ಟಿರುವ ಹುಡುಗಿ ಹಿಂದೂ ಹುಡುಗಿಯನ್ನು ಬ್ರೈನ್‌ವಾಶ್ ಮಾಡಿ ಆ ಹಿಂದೂ ಹುಡುಗಿಗೆ ಬುರ್ಖಾ ಧರಿಸುವಂತೆ ಮಾಡಿ ಕಾರಿಡಾರ್‌ನಲ್ಲಿ ನಿಂತ ಶಾಂತಿಪ್ರಿಯ ಹುಡುಗನೊಂದಿಗೆ ಹೋಗುವಂತೆ ಹೇಳುತ್ತಿದ್ದಾಳೆ. ಇದು ಲವ್ ಜಿಹಾದ್ ಪ್ರಕರಣ.” ಈ ಪೋಷ್ಟ್ ಗಳಲ್ಲಿನ ಹೆಚ್ಚಿನ ಕಾಮೆಂಟ್‌ಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಒಳಗೊಂಡಿವೆ.
ವೀಡಿಯೋದಲ್ಲಿ ತೋರಿಸಿರುವ ಇಬ್ಬರು ಹುಡುಗಿಯರು ಅಲ್ಪಸಂಖ್ಯಾತ ಸಮುದಾಯದ ಹುಡುಗನೊಂದಿಗೆ ಹೋಗಲು ಹಿಂದೂ ಹುಡುಗಿಗೆ ತಮ್ಮ ಬುರ್ಖಾವನ್ನು ನೀಡಿದರು ಎಂದು ಹೇಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ ರಿವರ್ಸ್-ಇಮೇಜ್ ಸರ್ಚ್ ನಡೆಸುವ ಮೂಲಕ, ನಾವು ನವೆಂಬರ್ ೧೮, ೨೦೨೧ ರಂದು ಪತ್ರಕರ್ತ ಮೊಹಮ್ಮದ್ ಇರ್ಷಾದ್ ಅವರು ಹಂಚಿಕೊಂಡ ಎಕ್ಸ್ ಪೋಷ್ಟ್ ಗಳ ಥ್ರೆಡ್ ಅನ್ನು ಪತ್ತೆಹಚ್ಚಿದ್ದೇವೆ. ಥ್ರೆಡ್‌ನಲ್ಲಿ, ಘಟನೆಯು ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ ಎಂದು ಅವರು ವಿವರಿಸುತ್ತಾರೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳನ್ನು ಹಿಂದೂಪರ ಸಂಘಟನೆಗಳ ಪುರುಷರು ಅಮಾನುಷವಾಗಿ ನಡೆಸಿಕೊಂಡರು ಮತ್ತು ನಂತರ ಅವರನ್ನು ಪೊಲೀಸರು ಬಂಧಿಸಿದರು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಶೀರ್ಷಿಕೆಗಳಲ್ಲಿ ಹೇಳಿರುವಂತೆ ವೀಡಿಯೋದಲ್ಲಿ “ಹಿಂದೂ ಹುಡುಗಿ” ಅಥವಾ ಯಾವುದೇ ಹುಡುಗ ಕಾಣಿಸುವುದಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಉಲ್ಲೇಖಿಸಲು "ಶಾಂತಿ-ಪ್ರೀತಿಯ" ವ್ಯಕ್ತಿ ಅಥವಾ ಸಮುದಾಯ ಎಂಬ ಪದಗಳನ್ನು ಬಳಸುತ್ತಾರೆ.
ನವೆಂಬರ್ ೧೯, ೨೦೨೧ ರಂದು, ಶನಿವಾರಸಂತೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಾಲಕಿಯರೊಬ್ಬರ ತಂದೆ ಪೊಲೀಸರಿಗೆ ದೂರು ನೀಡಿದ್ದು, ಶಾಲೆಗೆ ಹೋಗುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಜ್ವಲ್ ಮತ್ತು ಕೌಶಿಕ್ ಎಂಬ ಇಬ್ಬರು ಪುರುಷರನ್ನು ಜೈಲಿಗೆ ಕಳುಹಿಸಲಾಗಿದೆ. ಹಾಗು ಆ ತಂದೆಯು ಹೀಗೆಂದು ಹೇಳಿಕೆ ನೀಡಿದ್ದಾರೆ, "ನನ್ನ ಮಗಳು ಮತ್ತು ಆಕೆಯ ಸ್ನೇಹಿತೆಯ ಮೇಲೆ ಸಂಘಪರಿವಾರದ ಹುಡುಗರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಗುರುವಾರ ಬೆಳಿಗ್ಗೆ, ನನ್ನ ಮಗಳು ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳು. ತರಗತಿಗಳಿಗೆ ಪ್ರವೇಶಿಸುವ ಮೊದಲು ಅವರು ಬುರ್ಖಾವನ್ನು ತೆಗೆದುಹಾಕಬೇಕು. ಈ ಮಧ್ಯೆ, ನನ್ನ ಮಗಳ ಸ್ನೇಹಿತೆ ತನ್ನ ಬುರ್ಖಾವನ್ನು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಬೆಳಿಗ್ಗೆ ನೀಡಿದ್ದಳು. ಆ ಕ್ರಿಶ್ಚಿಯನ್ ಹುಡುಗಿ ಗುರುವಾರ ಕಾಲೇಜಿಗೆ ಹಾಜರಾಗಿರಲಿಲ್ಲ. ಇದಲ್ಲದೆ, ನನ್ನ ಮಗಳು ಮತ್ತು ಅವಳ ಸ್ನೇಹಿತೆ ಈ ಕ್ರಿಶ್ಚಿಯನ್ ಹುಡುಗಿ ಸಂಜೆ ಬುರ್ಖಾವನ್ನು ಹಿಂದಿರುಗಿಸಲು ಕಾಯುತ್ತಿದ್ದರು. ಆದರೆ, ಬುರ್ಖಾವನ್ನು ಹಿಂತಿರುಗಿಸುವಾಗ, ನನ್ನ ಮಗಳು ಮತ್ತು ಅವಳ ಸ್ನೇಹಿತೆಯ ಮೇಲೆ ೪೦ ಕ್ಕೂ ಹೆಚ್ಚು ಗೂಂಡಾಗಳು ದಾಳಿ ಮಾಡಿದರು."
ದಿ ಟೈಮ್ಸ್ ಆಫ್ ಇಂಡಿಯಾದ ಈ ಲೇಖನ ಮತ್ತು ಯೂಟ್ಯೂಬ್‌ನಲ್ಲಿ ಲಭ್ಯವಿರುವ ಮಿರರ್ ನೌ ನ ಸುದ್ದಿ ವರದಿ ವೀಡಿಯೋ ದಂತಹ ಇತರ ವರದಿಗಳು ಬುರ್ಖಾವನ್ನು ಕೊಟ್ಟ ಹುಡುಗಿ ಯಾವ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಹೊರತುಪಡಿಸಿದರೆ ಅದನ್ನೇ ಹೇಳುತ್ತವೆ. ಗಮನಿಸಬೇಕಾದ ಇನ್ನೊಂದು ವಿವರವೆಂದರೆ ಅನುಷಾ ಎಂಬ ಹೆಸರು ಹಿಂದೂ ಸಮುದಾಯಕ್ಕೆ ಸೀಮಿತವಾಗಿಲ್ಲ. ಇದು ಕ್ರಿಶ್ಚಿಯನ್ನರು, ಜೈನರು, ಬೌದ್ಧರು ಮತ್ತು ಇತರ ಧಾರ್ಮಿಕ ಗುಂಪುಗಳಲ್ಲಿ ಬಳಸಲಾಗುವ ಸಾಮಾನ್ಯ ಹೆಸರು. ಈ ಹೆಸರಿಂದಾಗಿ ಇಬ್ಬರು ಅಲ್ಪಸಂಖ್ಯಾತ ಹುಡುಗಿಯರು "ಹಿಂದೂ ಹುಡುಗಿ" ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪವನ್ನು ಹುಟ್ಟುಹಾಕಿರಬಹುದು.
ತೀರ್ಪು:
ಈ ವೈರಲ್ ವೀಡಿಯೋದ ವಿಶ್ಲೇಷಣೆಯು ನವೆಂಬರ್ ೨೦೨೧ ರ ಹಳೆಯ ವೀಡಿಯೋ ಎಂದು ತಿಳಿದುಬಂದಿದೆ, ಇದನ್ನು ಸ್ವಲ್ಪ ಬದಲಾದ ನಿರೂಪಣೆಯೊಂದಿಗೆ ಮರುಹಂಚಿಕೊಳ್ಳಲಾಗಿದೆ, ಹಾಗು ಕೋಮು ನಿರೂಪಣೆಯನ್ನು ಒತ್ತಿಹೇಳಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಶಾಲಾಬಾಲಕಿಯರ ವಿರುದ್ಧ ಬಲಪಂಥೀಯರು ಸಾರ್ವಜನಿಕ ಸ್ಥಳದಲ್ಲಿ ನೈತಿಕ ಜಾಗರೂಕತೆ ಮಾಡಿದ ಘಟನೆಯನ್ನು ವೀಡಿಯೋ ತೋರಿಸುತ್ತದೆ. ಘಟನೆಯ ಸುದ್ದಿ ವರದಿಗಳು ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ ಮತ್ತು ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ, ಇದು ಹಳೆಯ ವೀಡಿಯೋವನ್ನು ಬಳಸಿಕೊಂಡು ರಚಿಸಿರುವ ತಪ್ಪುದಾರಿಗೆಳೆಯುವ ಹೇಳಿಕೆ.