ಕಲ್ಲಂಗಡಿಗಳಿಗೆ ರಾಸಾಯನಿಕಗಳನ್ನು ಚುಚ್ಚುತ್ತಿರುವ ನೈಜ ಘಟನೆ ಎಂದು ಸಾರ್ವಜನಿಕ ಜಾಗೃತಿಗಾಗಿ ಮಾಡಿದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ಕಲ್ಲಂಗಡಿ ಹಣ್ಣಿಗೆ ರಾಸಾಯನಿಕಗಳನ್ನು ಚುಚ್ಚಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಿರುವುದನ್ನು ತೋರಿಸುವ ವೀಡಿಯೋ ನಿಜವಾದ ಘಟನೆಯದ್ದಲ್ಲ. ಇದು ಸಾರ್ವಜನಿಕ ಜಾಗೃತಿ ಮೂಡಿಸಲು ರಚಿಸಲಾದ ವೀಡಿಯೋ ಮತ್ತು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ಕಲ್ಲಂಗಡಿ ಹಣ್ಣುಗಳಿಗೆ ರಾಸಾಯನಿಕಗಳನ್ನು ಚುಚ್ಚಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಿಂದಿಯಲ್ಲಿ ಹಂಚಿಕೊಂಡಿರುವ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು, “ನೋಡಿ, ಅವರು ಕಲ್ಲಂಗಡಿಯಲ್ಲಿ ರಾಸಾಯನಿಕಗಳನ್ನು ಹಾಕುತ್ತಿದ್ದಾರೆ, ಇದು ವಿಷವಾಗಿದೆ (ಕನ್ನಡಕ್ಕೆ ಅನುವಾದಿಸಲಾಗಿದೆ)” ಎಂದು ಬರೆಯಲಾಗಿದೆ. ಇದೇ ರೀತಿಯ ಪೋಷ್ಟ್ ಗಳನ್ನು ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಹಲವಾರು ಜನರು ಇದು ನೈಜ ಘಟನೆಯ ವೀಡಿಯೋವಲ್ಲ ಎಂದು ಉಲ್ಲೇಖಿಸದೆ ಹಂಚಿಕೊಂಡ ಕಾರಣ, ಇದು ನೈಜ ಘಟನೆಯ ವೀಡಿಯೋ ಎಂದು ಹಲವರು ನಂಬುವಂತೆ ಮಾಡಿದೆ.
ವೈರಲ್ ವೀಡಿಯೋದೊಂದಿಗೆ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಕಲ್ಲಂಗಡಿ ಹಣ್ಣುಗಳಿಗೆ ರಾಸಾಯನಿಕಗಳನ್ನು ಚುಚ್ಚುತ್ತಿದ್ದಾರೆ ಎಂದು ಆರೋಪಿಸಿ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದಕ್ಕೆ ಕೋಮುವಾದ ಕೋಣವನ್ನು ಕೂಡ ನೀಡಿದ್ದಾರೆ. ಹಿಂದಿಯಲ್ಲಿ ಪೋಷ್ಟ್ ನ ಶೀರ್ಷಿಕೆಯು, "ಶಾಂತಿಯ ರಾಯಭಾರಿಗಳು ಕಲ್ಲಂಗಡಿಗಳಿಗೆ ರಾಸಾಯನಿಕಗಳನ್ನು ಚುಚ್ಚಿದಾಗ ಸಿಕ್ಕಿಬಿದ್ದಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)," ಎಂದು ಓದುತ್ತದೆ. "ಶಾಂತಿಯ ರಾಯಭಾರಿಗಳು" ಅಥವಾ "शांतिदूत" ನಂತಹ ಪದಗಳು ಮುಸ್ಲಿಂ ಸಮುದಾಯದ ಜನರನ್ನು ಉಲ್ಲೇಖಿಸಲು ಕೆಲವು ಬಲಪಂಥೀಯ ಅನುಯಾಯಿಗಳು ಸಾಮಾನ್ಯವಾಗಿ ಬಳಸುತ್ತಾರೆ.
ವೈರಲ್ ವೀಡಿಯೋವನ್ನು ಕೋಮು ಸ್ಪಿನ್‌ನೊಂದಿಗೆ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಅದೇ ವೀಡಿಯೋದ ದೀರ್ಘ ಆವೃತ್ತಿಯನ್ನು ಒಂದು ಫೇಸ್‌ಬುಕ್ ಪುಟವು ಏಪ್ರಿಲ್ ೨೯, ೨೦೨೪ ರಂದು ಹಚ್ಚಿಕೊಂಡಿದೆ ಎಂದು ಕಂಡುಬಂದಿದೆ. "ಸೋಶಿಯಲ್ ಮೆಸೇಜ್" (ಸಾಮಾಜಿಕ ಸಂದೇಶ) ಎಂಬ ಹೆಸರಿನ ಪುಟವು ಅದರ "ಇಂಟ್ರೋ" ವಿಭಾಗದಲ್ಲಿ ಹಿಂದಿಯಲ್ಲಿ, "ಈ ಪುಟದಲ್ಲಿ ಪೋಷ್ಟ್ ಮಾಡಲಾದ ಕೆಲವು ವೀಡಿಯೋಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಜಾಗೃತಿ ಮತ್ತು ಮನರಂಜನೆಯ ಉದ್ದೇಶಕ್ಕಾಗಿ ಮಾಡಲಾಗಿದೆ," ಎಂದು ಹೇಳಿಕೊಂಡಿದೆ.
"ಸೋಶಿಯಲ್ ಮೆಸೇಜ್" ಫೇಸ್‌ಬುಕ್ ಪುಟದಲ್ಲಿ ಕಂಡುಬಂದ ಇಂಟ್ರೋ ವಿಭಾಗದ ಸ್ಕ್ರೀನ್‌ಶಾಟ್.
"ಸೋಶಿಯಲ್ ಮೆಸೇಜ್" ಹಂಚಿಕೊಂಡ ಈ ವೀಡಿಯೋವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ, ವೀಡಿಯೋದ ಸುಮಾರು ೨೮ ಸೆಕೆಂಡ್‌ಗಳಲ್ಲಿ "ಈ ವೀಡಿಯೋ ಸಂಪೂರ್ಣ ಕಾಲ್ಪನಿಕವಾಗಿದೆ, ವೀಡಿಯೋದಲ್ಲಿನ ಎಲ್ಲಾ ಘಟನೆಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆ. ಯಾವುದೇ ರೀತಿಯ ಚಟುವಟಿಕೆಯನ್ನು ಉತ್ತೇಜಿಸುವುದಿಲ್ಲ ಅಥವಾ ಯಾವುದೇ ರೀತಿಯ ಆಚರಣೆಗಳನ್ನು ದೂಷಿಸುವುದಿಲ್ಲ. ವಾಸ್ತವಿಕ ವ್ಯಕ್ತಿಗಳು, ಜೀವಂತ ಅಥವಾ ಸತ್ತ ಅಥವಾ ನಿಜವಾದ ಘಟನೆಗಳಿಗೆ ಯಾವುದೇ ಹೋಲಿಕೆಯು ಸಂಪೂರ್ಣವಾಗಿ ಕಾಕತಾಳೀಯವಾಗಿದೆ,"ಎಂದು ಬರೆದಿರುವುದನ್ನು ನಾವು ನೋಡಬಹುದು.
"ಸೋಶಿಯಲ್ ಮೆಸೇಜ್" ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡ ವೈರಲ್ ವೀಡಿಯೋದ ಹಕ್ಕು ನಿರಾಕರಣೆಯ ಸ್ಕ್ರೀನ್‌ಶಾಟ್.
ವೀಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಜಾಗೃತಿ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ಆದಾಗ್ಯೂ, ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ಹಲವಾರು ವೀಡಿಯೋಗಳಲ್ಲಿ ಈ ಹಕ್ಕು ನಿರಾಕರಣೆ ಕಾಣೆಯಾಗಿದೆ. ನಾವು ಈ ಫೇಸ್‌ಬುಕ್ ಪುಟದಲ್ಲಿ ಹಲವಾರು ಇತರ ಸ್ಕ್ರಿಪ್ಟ್ ಮಾಡಿದ ವೀಡಿಯೋಗಳನ್ನು ಕೂಡ ನೋಡಿದ್ದೇವೆ. ಇದನ್ನು ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮಾಡಲಾಗಿದೆ. ವೀಡಿಯೋದ ಹಕ್ಕು ನಿರಾಕರಣೆ ವಿಭಾಗವನ್ನು ತೆಗೆದುಹಾಕಲಾಗಿದೆ ಮತ್ತು ಅದನ್ನು ನೈಜ ಘಟನೆ ಎಂದು ಬಿಂಬಿಸಲು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ತೀರ್ಪು:
ಹಣ್ಣುಗಳನ್ನು ಹಣ್ಣಾಗಿಸಲು ಮತ್ತು ರುಚಿ ಮೂಡಿಸುವ ಉದ್ದೇಶದಿಂದ ಚುಚ್ಚುಮದ್ದು ಬಳಸುವ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಫೇಸ್‌ಬುಕ್‌ನಲ್ಲಿ ವೀಡಿಯೋವನ್ನು ನೈಜ ಘಟನೆ ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಮುಸ್ಲಿಂ ಸಮುದಾಯದ ಜನರು ಇದಕ್ಕೆ ಕಾರಣವೆಂದು ತೋರಿಸಲು ಕೋಮು ನಿರೂಪಣೆಯೊಂದಿಗೆ ಕೂಡ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.