Begin typing your search above and press return to search.
    Others

    ಪಶ್ಚಿಮ ಬಂಗಾಳದ ನಕಲಿ ವೈದ್ಯರ ರಾಕೆಟ್‌ನ ಹಳೆಯ ಸುದ್ದಿಯ ಕ್ಲಿಪ್ ಅನ್ನು ಇತ್ತೀಚಿನ ಘಟನೆಯೆಂದು ಹಂಚಿಕೊಳ್ಳಲಾಗಿದೆ

    IDTU - Karnataka
    30 May 2024 1:10 PM GMT
    ಪಶ್ಚಿಮ ಬಂಗಾಳದ ನಕಲಿ ವೈದ್ಯರ ರಾಕೆಟ್‌ನ ಹಳೆಯ ಸುದ್ದಿಯ ಕ್ಲಿಪ್ ಅನ್ನು ಇತ್ತೀಚಿನ ಘಟನೆಯೆಂದು ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ೫೬೦ ನಕಲಿ ವೈದ್ಯರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಎನ್‌ಡಿಟಿವಿಯ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವೈದ್ಯರಲ್ಲಿ ಒಬ್ಬರು ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಪೋಷ್ಟ್ ಪ್ರತಿಪಾದಿಸುತ್ತದೆ. ಆದರೆ, ಈ ವೀಡಿಯೋ ಜೂನ್ ೨೦೧೭ ರದ್ದು ಮತ್ತು ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.

    ಹೇಳಿಕೆ:

    ಎನ್‌ಡಿಟಿವಿ ಸುದ್ದಿ ವೀಡಿಯೋ ಕ್ಲಿಪ್ ಅನ್ನು ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮತ್ತು ಲಿಂಕ್‌ಡಿನ್‌ನಂತಹ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇತ್ತೀಚಿನ ನಕಲಿ ವೈದ್ಯರ ರಾಕೆಟ್ ಅನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೊಳ್ಳಲಾಗಿದೆ, ಅಲ್ಲಿ ೫೬೦ ವೈದ್ಯರು ನಕಲಿ ವೈದ್ಯಕೀಯ ಪಧಾವಿಗಳಿಂಧ ಅಭ್ಯಾಸ ಮಾಡುತ್ತಿದ್ದಾರೆ. ಇವರನ್ನು ಬೆಲ್ಲೆವ್ಯೂ ಮತ್ತು ಕೊಠಾರಿಯಂತಹ ಉನ್ನತ ಆಸ್ಪತ್ರೆಗಳಿಂದ ಬಂಧಿಸಲಾಯಿತು. ಈ ೫೬೦ ನಕಲಿ ವೈದ್ಯರಲ್ಲಿ ಒಬ್ಬರು ಇತ್ತೀಚೆಗೆ ಭಾರತದ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದುಹೇಳಿಕೊಳ್ಳಲಾಗಿದೆ.

    ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಕೋಲ್ಕತ್ತಾ ಹಗರಣಗಳ ಹೊಸ ನಗರವಾಗಿದೆ. ಶಿಕ್ಷಕರು, ಓಬಿಸಿ ಮೀಸಲಾತಿಪಡೆಧವರು ಮತ್ತು ಈಗ ಕೆಟ್ಟದು: ನಕಲಿ ವೈದ್ಯರು ಜೀವನ ಜೊತೆ ಆಟವಾಡುವುದು. ಕೋಲ್ಕತ್ತಾದಲ್ಲಿ ಮಾರಾಟವಾದ ಸುಮಾರು ೫೬೦ ನಕಲಿ ವೈದ್ಯಕೀಯ ಪದವಿಗಳು ಮತ್ತು ಬೆಲ್ಲೆವ್ಯೂ, ಕೊಠಾರಿ ಮುಂತಾದ ಉನ್ನತ ಆಸ್ಪತ್ರೆಗಳಿಂದ ಬಂಧಿಸಲ್ಪಟ್ಟ ನಕಲಿ ವೈದ್ಯರು. ಅವರಲ್ಲಿ ಒಬ್ಬರು ರಾಷ್ಟ್ರಪತಿಗಳ ಪ್ರಶಸ್ತಿಯನ್ನು ಸಹ ಪಡೆದರು. ಕೋಲ್ಕತ್ತಾ ದೇಶದ ಹೊಸ ಕ್ರೈಂ ಹಬ್ ಆಗಿದೆ." (ಅನುವಾದಿಸಲಾಗಿದೆ)

    ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಇತ್ತೀಚೆಗೆ ೫೬೦ ನಕಲಿ ವೈದ್ಯರ ಬಂಧನದ ಬಗ್ಗೆ ಎಕ್ಸ್ ಪೋಸ್ಟ್‌ ನ ಸ್ಕ್ರೀನ್‌ಶಾಟ್.


    ಪುರಾವೆ:

    ವೀಡಿಯೋದ ಪ್ರಮುಖ ಫ್ರೇಮ್‌ಗಳ ರಿವೆರ್ಸೆ ಇಮೇಜ್ ಸರ್ಚ್ ನಡೆಸಿದಾಗ, ಏನ್ ಡಿಟಿವಿಯ ಜೂನ್ ೦೮, ೨೦೧೭ ರಂದು ಪ್ರಕಟಿಸಲಾಗಿದೆ ಈ ಸುದ್ದಿ ವರದಿಯನ್ನು ಗುರುತಿಸಿದ್ದೇವೆ: “6 Fake Doctors Arrested In Bengal In A Month, 3 From Top Kolkata Hospitals” (ಒಂದು ತಿಂಗಳಲ್ಲಿ ಬಂಗಾಳದಲ್ಲಿ ೬ ನಕಲಿ ವೈದ್ಯರು ಅರೆಸ್ಟ್, ೩ ಟಾಪ್ ಕೋಲ್ಕತ್ತಾ ಆಸ್ಪತ್ರೆಗಳಿಂದ). ಈ ವೀಡಿಯೋ ವರದಿ ಮಾಡಿದ ಒಂದು ತಿಂಗಳೊಳಗೆ ಆರು ನಕಲಿ ವೈದ್ಯರ ಬಂಧನವಾಗಿದ್ಧರು, ಇದು ಇತ್ತೀಚಿನದಲ್ಲ.

    ಜೂನ್ ೨೦೧೭ ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಕಲಿ ವೈದ್ಯರ ಬಂಧನವನ್ನು ಸೂಚಿಸುವ ಏನ್ ಡಿಟಿವಿ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ಹೆಚ್ಚಿನ ಹುಡುಕಾಟವು ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಕ್ವಿಂಟ್, ಫಸ್ಟ್‌ಪೋಸ್ಟ್, ದಿ ಸ್ಟೇಟ್ಸ್‌ಮೆನ್ ಮತ್ತು ದಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ೨೦೧೭ ರ ಹಲವಾರು ಇತರ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಪಶ್ಚಿಮ ಬಂಗಾಳದ ಸಿಐಡಿ ೫೦೦ ಕ್ಕೂ ಹೆಚ್ಚು ವೈದ್ಯರನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಕಲಿ ಪದವಿಗಳನ್ನು ಬಳಸಿ ವೈದ್ಯಕೀಯ ಅಭ್ಯಾಸ ಮಾಡುವುದನ್ನು ಗುರುತಿಸಿದೆ ಎಂದು ಈ ವರದಿಗಳು ಹೇಳಿಕೊಂಡಿವೆ.

    ಈ ದಂಧೆಯ ಭಾಗವಾಗಿ, ೨೦೧೭ ರ ಮೇ ೧೯ ರಂದು ೬ ನೇ ಡಾ. ಮಾಲತಿ ಅಲೆನ್ ನೊಬೆಲ್ ಪ್ರಶಸ್ತಿಯ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸುಭೇಂದು ಭಟ್ಟಾಚಾರ್ಯ ಅವರನ್ನು ಸಿಐಡಿ ಬಂಧಿಸಿತು.

    ವೈರಲ್ ಪೋಷ್ಟ್ ನಲ್ಲಿ ಉಲ್ಲೇಖಿಸಲಾದ ಘಟನೆಯು ೨೦೧೭ ರಲ್ಲಿ ಸಂಭವಿಸಿದೆ ಮತ್ತು ಇದು ಇತ್ತೀಚಿನ ಘಟನೆಯಲ್ಲ.

    ತೀರ್ಪು:

    ಇತ್ತೀಚೆಗೆ ಕೊಲ್ಕತ್ತಾದಲ್ಲಿ ೫೬೦ ನಕಲಿ ವೈದ್ಯರನ್ನು ಬಂಧಿಸಲಾಗಿದ್ದು, ಒಬ್ಬರು ಭಾರತದ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದಿದ್ದಾರೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ. ಹಂಚಿಕೊಳುತ್ತಿರುವ ವೈರಲ್ ವೀಡಿಯೋ ಜೂನ್ ೨೦೧೭ ರ ಅಗಿಧೆ ಮತ್ತು ಆದ್ದರಿಂದ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹಳೆಯ ಘಟನೆಯನ್ನು ಪ್ರಸ್ತುತ ಘಟನೆಯಾಗಿ ತಪ್ಪಾಗಿ ಪ್ರತಿನಿಧಿಸುತ್ತವೆ.


    Claim Review :   An Old News Clip of a Fake Doctors Racket busted in West Bengal is shared as a recent incident
    Claimed By :  Facebook User
    Fact Check :  Misleading
    IDTU - Karnataka

    IDTU - Karnataka