Begin typing your search above and press return to search.
    Others

    ಕೇರಳದಲ್ಲಿ ರೈಲನ್ನು ಹಳಿತಪ್ಪಿಸುವ ಮುಸ್ಲಿಮರ ಪ್ರಯತ್ನವನ್ನು ವೀಡಿಯೋ ತೋರಿಸುತ್ತದೆ ಎಂದು ಹಳೆಯ ವೀಡಿಯೋವನ್ನು ಕೋಮು ಕೋನದಿಂದ ಹಂಚಿಕೊಳ್ಳಲಾಗಿದೆ.

    IDTU - Karnataka
    2 April 2024 11:04 AM GMT
    ಕೇರಳದಲ್ಲಿ ರೈಲನ್ನು ಹಳಿತಪ್ಪಿಸುವ ಮುಸ್ಲಿಮರ ಪ್ರಯತ್ನವನ್ನು ವೀಡಿಯೋ ತೋರಿಸುತ್ತದೆ ಎಂದು ಹಳೆಯ ವೀಡಿಯೋವನ್ನು ಕೋಮು ಕೋನದಿಂದ ಹಂಚಿಕೊಳ್ಳಲಾಗಿದೆ.
    x

    ಸಾರಾಂಶ:

    ರೈಲ್ವೇ ಸಿಬ್ಬಂದಿಗಳು ರೈಲ್ವೆ ಹಳಿಯಿಂದ ಕಲ್ಲುಗಳನ್ನು ತೆಗೆದುಹಾಕುವ ಮತ್ತು ರೈಲ್ವೆ ಹಳಿಯ ಸಂದಿಯಲ್ಲಿ ಸಣ್ಣ ಕಬ್ಬಿಣದ ರಾಡ್ಒಂದನ್ನು ಹೊರತೆಗೆಯುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ಕೇರಳದಲ್ಲಿ ರೈಲೊಂದನ್ನು ಹಳಿತಪ್ಪಿಸಲು ಮುಸ್ಲಿಮರು ಪ್ರಯತ್ನಿಸುತ್ತಿರುವುದೆಂದು ಹೇಳಿಕೊಳ್ಳಲಾಗಿದೆ. ಆದರೆ, ಈ ವೀಡಿಯೋ ಅಕ್ಟೋಬರ್ ೨೦೨೩ ರರಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ. ಆ ಸಮಯದಲ್ಲಿ ಇಬ್ಬರು ಮಕ್ಕಳು ರೈಲ್ವೆ ಹಳಿ ಮೇಲೆ ಕಲ್ಲುಗಳನ್ನು ಹಾಕಿದ್ದರೆಂದು ವರದಿಯಾಗಿದೆ.

    ಹೇಳಿಕೆ:

    ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಪೋಸ್ಟ್‌ಗಳು ರೈಲ್ವೆ ಕಾರ್ಮಿಕರು ರೈಲ್ವೆ ಹಳಿಯಿಂದ ಕಲ್ಲುಗಳು ಮತ್ತು ಸಣ್ಣ ಕಬ್ಬಿಣದ ರಾಡ್ಅನ್ನು ತೆಗೆದುಹಾಕುತ್ತಿರುವ ವೀಡಿಯೋವನ್ನು ತೋರಿಸುತ್ತವೆ. ಫೇಸ್‌ಬುಕ್ ಪೋಷ್ಟ್ ನಲ್ಲಿರುವ ಅಸ್ಸಾಮಿ ಶೀರ್ಷಿಕೆಯು ಕೇರಳದಲ್ಲಿ ರೈಲನ್ನು ಹಳಿತಪ್ಪಿಸಲು ಕೆಲವು ಮುಸ್ಲಿಮರು ಪ್ರಯತ್ನಿಸಿದ್ದರು ಎಂದು ಹೇಳುತ್ತದೆ. ತೆಲುಗು ಮತ್ತು ಹಿಂದಿ ಶೀರ್ಷಿಕೆಗಳೊಂದಿಗೆ ಇತರ ಪೋಷ್ಟ್ ಗಳು ಆ ಕೆಲಸವನ್ನು ಮುಸ್ಲಿಮರು ಮಾಡಿದರೆಂದು ಉಲ್ಲೇಖಿಸುವುದಿಲ್ಲ ಆದರೆ "ಭಾರತದ ದ್ರೋಹಿಗಳು", "ಅಂತಹ ಕೆಲಸಗಳನ್ನು ಯಾರು ಮಾಡುತ್ತಾರೆ ಎಂದು ಹೇಳುವ ಅಗತ್ಯವಿಲ್ಲ" ಮತ್ತು "ಕೆಲವು ಹರಾಮಿ ಜನರು ಇದನ್ನು ಮಾಡಿದ್ದಾರೆ" ಎಂಬ ಪದಗುಚ್ಛಗಳನ್ನು ಬಳಸುತ್ತವೆ.

    ವೀಡಿಯೋದಲ್ಲಿ ಕೇರಳದಲ್ಲಿ ಮುಸ್ಲಿಮರು ರೈಲ್ವೇ ಹಳಿಯ ಮೇಲೆ ಹಾಕಿರುವ ಕಲ್ಲುಗಳನ್ನು ತೆಗೆಯಲಾಗಿದೆದೆಯೆಂದು ಹೇಳಿ ಹಂಚಿಕೊಂಡಿರುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ವೀಡಿಯೋದ ನಿರ್ದಿಷ್ಟ ಫ್ರೇಮ್‌ಗಳನ್ನುಪಯೋಗಿಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅಕ್ಟೋಬರ್ ೨, ೨೦೨೩ ರಂದು ಅದೇ ತುಣುಕನ್ನು ಒಳಗೊಂಡಿರುವ ಎನ್‌ಡಿಟಿವಿವರದಿಯನ್ನು ಕಂಡುಕೊಂಡಿದ್ದೇವೆ. ಆ ವರದಿಯು ಉದಯಪುರ-ಜೈಪುರ ಮಾರ್ಗದಲ್ಲಿ ನಡೆದ ವಂದೇ ಭಾರತ್ ಎಕ್ಸ್‌ಪ್ರೆಸ್ ಪೈಲಟ್ ನ ಘಟನೆಯನ್ನು ವಿವರಿಸಿದೆ. ರೈಲ್ವೆ ಹಳಿಗಳ ಮೇಲೆ ಕಲ್ಲುಗಳನ್ನು ಗಮನಿಸಿದ್ದು, ಸಂಭಾವ್ಯ ಹಳಿತಪ್ಪುವ ಅಪಾಯವನ್ನು ತಡೆಗಟ್ಟಲಾಯಿತು. "ಸ್ಥಳದಲ್ಲಿ ರೆಕಾರ್ಡ್ ಮಾಡಲಾದ ವೀಡಿಯೋಲ್ಲಿ ರೈಲ್ವೇ ಸಿಬ್ಬಂದಿಗಳು ಹಳಿಗಳಿಂದ ಕಲ್ಲುಗಳನ್ನು ತೆಗೆಯುತ್ತಿರುವುದನ್ನು ತೋರಿಸುತ್ತದೆ" ಎಂದು ವರದಿಯಲ್ಲಿ ವೀಡಿಯೋವನ್ನು ಉಲ್ಲೇಖಿಸಲಾಗಿದೆ.

    ಅಕ್ಟೋಬರ್ ೨, ೨೦೨೩ ರಂದು ನಡೆದ ಘಟನೆಯ ವೈರಲ್ ವೀಡಿಯೋ ಕುರಿತು ಪ್ರಕಟಿಸಲಾದ ಎನ್‌ಡಿಟಿವಿಯ ವರದಿಯ ಸ್ಕ್ರೀನ್‌ಶಾಟ್.


    ಅಕ್ಟೋಬರ್ ೨, ೨೦೨೩ ರಂದು ಬೆಳಗ್ಗೆ ಸುಮಾರು ೧೦:೦೦ ಗಂಟೆಗೆ ರಾಜಸ್ಥಾನದ ಚಿತ್ತೋರ್‌ಗಢ್ ಜಿಲ್ಲೆಯ ಗಂಗ್ರಾರ್-ಸೋನಿಯಾನಾ ಪ್ರದೇಶದಲ್ಲಿ ಒಂದು ಘಟನೆ ಸಂಭವಿಸಿದೆ ಎಂದು ನ್ಯೂಸ್18 ವರದಿ ಮಾಡಿದೆ. ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ವಾಯುವ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಯಾಪ್ಟನ್ ಶಶಿ ಕಿರಣ್ ಉಲ್ಲೇಖಿಸಿದ್ದಾರೆ. ಹಾಗು, ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿರುವ ಲಭ್ಯವಿರುವ ಅತ್ಯಂತ ಹಳೆಯ ಪೋಷ್ಟ್ ಅನ್ನು ನಾವು ಗುರುತಿಸಿದ್ದೇವೆ. ಇದು ಅಕ್ಟೋಬರ್ ೨, ೨೦೨೩ ರಂದು @Railwhispers ಹೆಸರಿನ ಖಾತೆಯ ಎಕ್ಸ್ ಪೋಷ್ಟ್ ಆಗಿದೆ. ವೀಡಿಯೋ ಶೀರ್ಷಿಕೆಯು ಆ ಘಟನೆಯು ಭಿಲ್ವಾರಾ ಟ್ರ್ಯಾಕ್ ಮೇಲೆ ನಡೆಯಿತೆಂದು ಹೇಳುತ್ತದೆ.

    ಅಕ್ಟೋಬರ್ ೨, ೨೦೨೩ ರಂದು ಹಂಚಿಕೊಂಡ ರೈಲ್ವೆ ಹಳಿಯಿಂದ ಕಲ್ಲುಗಳನ್ನು ತೆಗೆದುಹಾಕುವ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಅಕ್ಟೋಬರ್ ೪, ೨೦೨೩ ರಂದು ಇಂಡಿಯಾ ಟುಡೇ ಪೋಲೀಸರನ್ನು ಉಲ್ಲೇಖಿಸಿ ಈ ಕೃತ್ಯವನ್ನು ಇಬ್ಬರು ಮಕ್ಕಳು ಮಾಡಿದ್ದಾರೆ ಎಂದು ವರದಿ ಮಾಡಿದೆ. "ಗಂಗ್ರಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ದಾಸ್ ಪ್ರಕಾರ, ಇಬ್ಬರು ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ರೈಲು ಹಳಿಗಳ ಮೇಲೆ ಕಲ್ಲುಗಳು ಮತ್ತು ಕಬ್ಬಿಣದ ರಾಡ್‌ಗಳನ್ನು ಹಾಕಿದ್ದಾರೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಎರಡೂ ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ವೈರಲ್ ವೀಡಿಯೋವು ಕೋಮುವಾದ ನಿರೂಪಣೆಯನ್ನು ಹೊಂದಿದೆಯೇ ಎಂಬುದು ಅಸ್ಪಷ್ಟವಾಗಿದ್ದು, ವರದಿಯಾಗಿರುವಂತೆ ರಾಜಸ್ಥಾನದಲ್ಲಿ ಅಪ್ರಾಪ್ತ ವಯಸ್ಕರ ಒಳಗೊಳ್ಳುವಿಕೆಯು ಪೋಷ್ಟ್ ಗಳಲ್ಲಿ ಹೇಳಿರುವುದಕ್ಕೆ ವಿರುದ್ಧವಾಗಿ, ವೀಡಿಯೋವಿನ ಮೂಲವು ಕೇರಳವಲ್ಲ ಎಂದು ಸೂಚಿಸುತ್ತದೆ.


    ತೀರ್ಪು:

    ವಿಶ್ಲೇಷಿಸಿ ನೋಡಿದಾಗ ವೀಡಿಯೋವು ಅಕ್ಟೋಬರ್ ೨೦೨೩ ರಲ್ಲಿ ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ರೈಲು ಹಳಿಯಿಂದ ಕಲ್ಲುಗಳನ್ನು ತೆಗೆಯುತ್ತಿರುವ ಹಳೆಯ ದೃಶ್ಯವನ್ನು ತೋರಿಸುತ್ತದೆ. ಈ ವೀಡಿಯೋ ಕೇರಳದಲ್ಲಿ ನಡೆಯಿತೆಂದು ಕೋಮು ಕೋನದ ಆರೋಪದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

    Claim Review :   An old video has been shared with a communal angle claiming that the video shows Muslims attempting to derail a train in Kerala.
    Claimed By :  X user
    Fact Check :  False
    IDTU - Karnataka

    IDTU - Karnataka