- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಮೌಲಾನಾ ಮಹಮೂದ್ ಅಸಾದ್...
ಮೌಲಾನಾ ಮಹಮೂದ್ ಅಸಾದ್ ಮದಾನಿ ಅವರ ಕ್ಲಿಪ್ ಮಾಡಿದ ವೀಡಿಯೋವನ್ನು ಅವರು ಹಿಂದೂಗಳನ್ನು ಭಾರತವನ್ನು ತೊರೆಯಲು ಹೇಳಿದರೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
೨೦೨೪ ರ ಲೋಕಸಭಾ ಚುನಾವಣೆಯ ನಂತರ ಹಿಂದೂಗಳನ್ನು ಭಾರತವನ್ನು ತೊರೆಯುವಂತೆ ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಮದಾನಿ ಹೇಳಿದರು ಎಂದು ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ವೀಡಿಯೋ ೨೦೨೨ ರ ಭಾಷಣದಿಂದ ಬಂದಿದೆ, ಅಲ್ಲಿ ಮದಾನಿ ನಿರ್ದಿಷ್ಟವಾಗಿ ಹಿಂದೂಗಳನ್ನು ಉಲ್ಲೇಖಿಸಲಿಲ್ಲ. ವೀಡಿಯೋ ಕ್ಲಿಪ್ ಅನ್ನು ಸಂದರ್ಭದಿಂದ ಹೊರಗಿಡಲಾಗಿದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಹುಮತದ ಕೊರತೆಯೊಂದಿಗೆ ೨೪೦ ಕ್ಷೇತ್ರಗಳನ್ನು ಗೆದ್ದ ನಂತರ ಮೌಲಾನಾ ಮಹಮೂದ್ ಅಸಾದ್ ಮದಾನಿ ಹಿಂದೂಗಳಿಗೆ ಭಾರತವನ್ನು ತೊರೆಯಲು ಹೇಳಿದರು ಎಂಬ ಹೇಳಿಕೆಯೊಂದಿಗೆ ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಂತಹ ಇತರ ವೇದಿಕೆಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಪ್ರತಿಕ್ರಿಯೆಯಾಗಿ ಮದಾನಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೋಷ್ಟ್ ಗಳು ಸೂಚಿಸಿವೆ.
@RealBababanaras ಎಂಬ ಎಕ್ಸ್ ಬಳಕೆದಾರರು ಜುಲೈ ೧೬, ೨೦೨೪ ರಂದು ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ - "ಬಿಜೆಪಿ ಬಹುಮತದೊಂದಿಗೆ ೩೨ ಸ್ಥಾನಗಳನ್ನು ಕಳೆದುಕೊಂಡಿತು. ಈಗ ಅವರು ಹಿಂದೂಗಳಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಹಿಂದೂಗಳಿಗೆ ಭಾರತವನ್ನು ತೊರೆಯಲು ಹೇಳಿದರು. ಘಜ್ವಾ-ಎ-ಹಿಂದ್-೨೦೪೭ ರ ಗುರಿಗಾಗಿ ಪಿಎಫ್ಐ ಸರಿಯಾದ ದಿಕ್ಕಿನಲ್ಲಿದೆ ಎಂದು ಅವರು ಭಾವಿಸುತ್ತಾರೆ. ಹೇ ಹಿಂದೂಗಳೇ, ನಿಮಗಾಗಿ ಹೊಸ ಸ್ಥಳವನ್ನು ಹುಡುಕಿ ಅಥವಾ ಮತಾಂತರಗೊಳ್ಳಿರಿ." ಈ ಪೋಷ್ಟ್ ೧೪,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಜುಲೈ ೧೬, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಯೂಟ್ಯೂಬ್ ನಲ್ಲಿ ಕೀವರ್ಡ್ ಸರ್ಚ್ ಮೂಲಕ, ಮೇ ೩೧, ೨೦೨೨ ರಂದು ಟಿವಿ9 ಉತ್ತರ ಪ್ರದೇಶ ಉತ್ತರಾಖಂಡ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಮೇ ೨೯, ೨೦೨೨ ರಂದು ಮಿಲ್ಲತ್ ಟೈಮ್ಸ್ ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಲಾದ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಪತ್ತೆ ಮಾಡಿದ್ದೇವೆ. ಭಾಷಣದ ವೀಡಿಯೋ ಆವೃತ್ತಿಯು ಜಾಮಿಯತ್ ಉಲಾಮಾ-ಎ-ಹಿಂದ್‌ನ ರಾಷ್ಟ್ರೀಯ ಆಡಳಿತ ಮಂಡಳಿಯಲ್ಲಿ ಮದಾನಿ ಮಾತನಾಡುವುದನ್ನು ತೋರಿಸುತ್ತದೆ. ಈ ಸುದೀರ್ಘ ವೀಡಿಯೋದಲ್ಲಿ ವೈರಲ್ ಕ್ಲಿಪ್ ೨:೧೬ ನಿಮಿಷಗಳ ಅವಧಿಯಲ್ಲಿ ಕಂಡುಬರುತ್ತದೆ.
ಮೇ ೨೯, ೨೦೨೨ ರಂದು ಅಪ್‌ಲೋಡ್ ಮಾಡಲಾದ ಮಿಲ್ಲತ್ ಟೈಮ್ಸ್ ನ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಭಾಷಣದಲ್ಲಿ ಮದಾನಿ "ಈ ದೇಶ ನಮ್ಮದು, ದೇಶಕ್ಕೆ ನಾವು ಜವಾಬ್ದಾರರಾಗಿರಬೇಕು, ನಮ್ಮ ಧರ್ಮ, ಉಡುಗೆ-ತೊಡುಗೆ, ಆಹಾರ ಪದ್ಧತಿ ಬೇರೆ ಬೇರೆ, ನಮ್ಮ ಧರ್ಮವನ್ನು ಸಹಿಸಲಾಗದಿದ್ದರೆ ಬೇರೆ ಕಡೆ ಹೋಗಿ" ಎಂದರು. ಮುಸ್ಲಿಮರು ಭಾರತದ ಪ್ರಜೆಗಳು, ವಿದೇಶಿಯರಲ್ಲ, ಮತ್ತು ಅವರು ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಉಳಿಯಲು ನಿರ್ಧರಿಸಿದರು ಎಂದು ಅವರು ಹೇಳಿದರು. ಆ ಸಮಯದಲ್ಲಿ ಮದಾನಿಯ ಹೇಳಿಕೆಯನ್ನು ಒಳಗೊಂಡಿರುವ ಜಾಗ್ರಣ್ ಮತ್ತು ಲೈವ್ ಹಿಂದೂಸ್ತಾನ್‌ನಲ್ಲಿ ಮೇ ೨೦೨೨ ರ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ.
ತೀರ್ಪು:
೨೦೨೨ ರ ಭಾಷಣದಿಂದ ಮೌಲಾನಾ ಮಹಮೂದ್ ಅಸಾದ್ ಮದಾನಿಯವರ ವೀಡಿಯೋ ಕ್ಲಿಪ್ ಅನ್ನು ಸಂದರ್ಭದಿಂದ ಹೊರಗಿಟ್ಟು ಹಂಚಿಕೊಳ್ಳಲಾಗಿದೆ ಎಂದು ಈ ಹೇಳಿಕೆಯ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ೨೦೨೪ ರ ಲೋಕಸಭಾ ಚುನಾವಣೆಯ ನಂತರ ಹಿಂದೂಗಳನ್ನು ಭಾರತ ಬಿಟ್ಟು ತೊಲಗಿ ಎಂದು ಹೇಳಿಲ್ಲ. ಆದ್ದರಿಂದ, ಈ ವೀಡಿಯೋ ಕ್ಲಿಪ್‌ನೊಂದಿಗೆ ಹಂಚಿಕೊಳ್ಳಲಾದ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.