- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಮಲ್ಲಿಕಾರ್ಜುನ ಖರ್ಗೆ...
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸಂಸದೀಯ ವೃತ್ತಿಜೀವನಕ್ಕೆ ಸೋನಿಯಾ ಗಾಂಧಿ ಅವರಿಗೆ ಮನ್ನಣೆ ನೀಡಿದ್ದಾರೆ ಎಂದು ಹೇಳಲು ಕ್ಲಿಪ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾರಾಂಶ:
ಸೋನಿಯಾ ಗಾಂಧಿ ಅವರನ್ನು ಸಂಸತ್ತಿಗೆ ಕರೆತಂದಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಎಡಿಟ್ ಮಾಡದ ಮೂಲ ವೀಡಿಯೊದಲ್ಲಿ ಖರ್ಗೆಯವರು ತಮ್ಮನ್ನು ಜನ ಕರೆತಂದಿದ್ದಾರೆಂದು ಹೇಳಿದ್ದಾರೆ. ವೈರಲ್ ಹೇಳಿಕೆ ಕ್ಲಿಪ್ ಮಾಡಿದ ವೀಡಿಯೋವನ್ನು ಆಧರಿಸಿದೆ ಮತ್ತು ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಸತ್ತಿಗೆ ಕರೆತಂದ ಶ್ರೇಯಸ್ಸು ಸೋನಿಯಾ ಗಾಂಧಿಯವರದ್ದು ಎಂದು ಹೇಳಿಕೊಳ್ಳುವ ವೀಡಿಯೋ ಕ್ಲಿಪ್ ಅನ್ನು ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಹಂಚಿಕೊಂಡಿದ್ದಾರೆ. ಖರ್ಗೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಗಾಂಧಿಯವರ ಪಾತ್ರವನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ವೀಡಿಯೋದ ಶೀರ್ಷಿಕೆ ಹೇಳುತ್ತದೆ, ಅವರು ಮತದಾರರಿಗೆ ಬದಲಾಗಿ ಗಾಂಧಿ ಕುಟುಂಬಕ್ಕೆ ತಮ್ಮ ಸ್ಥಾನವನ್ನು ಋಣಿಯಾಗಿದ್ದಾರೆ ಎಂದು ಸೂಚಿಸುತ್ತದೆ. ಎಕ್ಸ್ ಬಳಕೆದಾರರು ಜುಲೈ ೨, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ೩೦,೩೦೦ ವೀಕ್ಷಣೆಗಳನ್ನು ಗಳಿಸಿದೆ. ಅದೇ ದಿನ ಬಿಜೆಪಿ ವಕ್ತಾರರಾದ ಅಮಿತ್ ಮಾಳವಿಯಾ ಅವರು ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಅದು ೭೫,೮೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಜುಲೈ ೨, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಹೇಳಿಕೆಯನ್ನು ಪರಿಶೀಲಿಸಲು, ನಾವು ರಿವರ್ಸ್ ಇಮೇಜ್ ಸರ್ಚ್ ಮೂಲಕ ವೀಡಿಯೋದ ಮೂಲವನ್ನು ಯೂಟ್ಯೂಬ್‌ನಲ್ಲಿ ಕಂಡುಕೊಂಡಿದ್ದೇವೆ. ಸಂಪೂರ್ಣ ವೀಡಿಯೋವನ್ನು ಮೂಲತಃ ಭಾರತೀಯ ಸಂಸತ್ತಿನ ಅಧಿಕೃತ ಟಿವಿ ಚಾನೆಲ್ ಸಂಸದ್ ಟಿವಿ ಮೂಲಕ ಪ್ರಸಾರ ಮಾಡಲಾಗಿದೆ ಎಂದು ಗುರುತಿಸಿದ್ದೇವೆ. ಜುಲೈ ೨, ೨೦೨೪ ರಂದು "ಪ್ರಮೋದ್ ತಿವಾರಿಯವರ ಹೇಳಿಕೆಗಳು | ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದಗಳು" ಎಂಬ ಶೀರ್ಷಿಕೆಯ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ.
ಜುಲೈ ೨, ೨೦೨೪ ರಂದು ಅಪ್‌ಲೋಡ್ ಮಾಡಲಾದ ಸಂಸದ್ ಟಿವಿಯ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ನಾವು ನಂತರ ವೈರಲ್ ಕ್ಲಿಪ್ ಮತ್ತು ಮೂಲ ಕ್ಲಿಪ್ ನ ತುಲನಾತ್ಮಕ ವಿಶ್ಲೇಷಣೆ ನಡೆಸಿದ್ದೇವೆ. ಸಂಸದ್ ಟಿವಿಯ ಎಡಿಟ್ ಮಾಡದ ವೀಡಿಯೋವು ೧೦:೩೪ ರಿಂದ ೧೦:೪೬ ನಿಮಿಷಗಳ ಅವಧಿಯಲ್ಲಿ ಖರ್ಗೆಯವರು ಹಿಂದಿಯಲ್ಲಿ ಹೀಗೆಂದು ಹೇಳುತ್ತಾರೆ - "ಜನರು ನನ್ನನ್ನು ಕರೆತಂದಿದ್ದಾರೆ." ಖರ್ಗೆಯವರು ಅವರ ಸ್ಥಾನಕ್ಕೆ ಯಾವುದೇ ವೈಯಕ್ತಿಕ ರಾಜಕೀಯ ನಾಯಕರ ಮನ್ನಣೆಗಿಂತ ಮತದಾರರೊಂದಿಗಿರುವ ಸಂಬಂಧವನ್ನು ಎತ್ತಿಹೇಳಿದ್ದಾರೆ ಎಂಬುದನ್ನು ಸಂಪೂರ್ಣ ವೀಡಿಯೋವು ತೋರಿಸುತ್ತದೆ.
ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳು ತಪ್ಪು ನಿರೂಪಣೆಯನ್ನು ಹೊರಹಾಕಲು ಪ್ರಯತ್ನಿಸುತ್ತಿರುವುದನ್ನೂ ನಾವು ಕಂಡುಕೊಂಡಿದ್ದೇವೆ. ನಮ್ಮ ಸಂಶೋಧನೆಗಳನ್ನು ಮತ್ತಷ್ಟು ದೃಢೀಕರಿಸಲು ನಾವು ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ಮತ್ತು ಅಧಿಕೃತ ಹೇಳಿಕೆಗಳಾದ್ಯಂತ ಕೀವರ್ಡ್ ಸರ್ಚ್ ನಡೆಸಿದ್ದೇವೆ ಹಾಗು ವೈರಲ್ ಪೋಷ್ಟ್ ಗಳಲ್ಲಿ ಹಂಚಿಕೊಂಡಿರುವ ಹೇಳಿಕೆಗಳನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಹೇಳಿಕೆಗಳನ್ನು ಕಂಡುಬಂದಿಲ್ಲ.
ತೀರ್ಪು:
‘ಜನರೇ ನನ್ನನ್ನು ಕರೆತಂದಿದ್ದಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಮೂಲ ವೀಡಿಯೋದ ವಿಶ್ಲೇಷಣೆಯಿಂದ ತಿತ್ಲಿಡುಬರುತ್ತದೆ. ತಮ್ಮ ಸಂಸದೀಯ ವೃತ್ತಿಗೆ ಅವರು ಸೋನಿಯಾ ಗಾಂಧಿಯವರಿಗೆ ಮನ್ನಣೆ ನೀಡಲಿಲ್ಲ. ತಪ್ಪು ನಿರೂಪಣೆಯನ್ನು ರಚಿಸಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ಈ ವೀಡಿಯೋ ಮತ್ತು ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.