- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಕರ್ನಾಟಕದಲ್ಲಿ...
ಕರ್ನಾಟಕದಲ್ಲಿ ರಥಯಾತ್ರೆಗೆ ಅಡ್ಡಿ ನಿಂತಿದ್ದ ವಾಹನಗಳನ್ನು ಭಕ್ತರು ಎತ್ತಿ ಎಸೆಯುವ ವೀಡಿಯೋವನ್ನು ಕೋಮು ಕೋನದಿಂದ ಹಂಚಿಕೊಳ್ಳಲಾಗಿದೆ.
ಸಾರಾಂಶ:
ಎತ್ತಿ ಎಸೆಯಲಾದ ವಾಹನಗಳು ಮುಸ್ಲಿಂ ಸಮುದಾಯದ ಜನರಿಗೆ ಸೇರಿದವು ಎಂದು ಯಾವುದೇ ವರದಿಗಳು ಸೂಚಿಸಿಲ್ಲ. ಕರ್ನಾಟಕದ ದಕ್ಷಿಣ ಕನ್ನಡದ ಒಂದು ರಥಯಾತ್ರೆಯ ಸಂದರ್ಭದಲ್ಲಿ ನಡೆದ ಘಟನೆಯನ್ನು ಕೋಮು ಕೋನದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗೆ ಸೇರಿದ ವಾಹನಗಳನ್ನು ಹಿಂದೂ ಭಕ್ತರು ಬಲವಂತವಾಗಿ ಎತ್ತಿ ಎಸೆದಿದ್ದಾರೆ ಎಂದು ಹೇಳಿಕೊಂಡು ವೀಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್ ಗಳ ಪ್ರಕಾರ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರಥೋತ್ಸವದ ಸಂದರ್ಭದಲ್ಲಿ ಎಳೆಯುತ್ತಿದ್ದ ರಥದ ದಾರಿಯಲ್ಲಿ ನಿಂತಿದ್ದವು. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗಿದೆ, “ಕರ್ನಾಟಕದ ಹಿಂದೂ ಭಕ್ತರು ಹಲವಾರು ವಿನಂತಿಗಳ ನಂತರವೂ ರಥಕ್ಕಾಗಿ ತನ್ನ ಕಾರನ್ನು ಪಕ್ಕಕ್ಕೆ ಸರಿಸಲು ಮುಸ್ಲಿಂ ವ್ಯಕ್ತಿ ನಿರಾಕರಿಸಿದಾಗ ಈ ರೀತಿ ಪ್ರತಿಕ್ರಿಯಿಸಿದರು. ಏಕತೆಯ ಶಕ್ತಿ.(ಕನ್ನಡಕ್ಕೆ ಅನುವಾದಿಸಲಾಗಿದೆ).” ಈ ಪೋಷ್ಟ್ ಬರೆಯುವ ಸಮಯದಲ್ಲಿ ೭೪೪ ಸಾವಿರ ವೀಕ್ಷಣೆಗಳನ್ನು ಗಳಿಸಿದೆ.
ಇದೇ ರೀತಿಯ ಪೋಷ್ಟ್ ಗಳನ್ನು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಮುಸ್ಲಿಮರು ಉದ್ದೇಶಪೂರ್ವಕವಾಗಿ ರಥದ ಮಾರ್ಗವನ್ನು ನಿರ್ಬಂಧಿಸುತ್ತಿದ್ದಾರೆ ಎಂದು ಹೇಳಿಕೊಂಡು ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ದೇವಸ್ಥಾನದ ರಥೋತ್ಸವವನ್ನು ತಡೆಯುತ್ತಿದ್ದ ಮುಸ್ಲಿಮರ ವಾಹನಗಳನ್ನು ಭಕ್ತರು ಬಲವಂತವಾಗಿ ತೆಗೆದಿದ್ದಾರೆ ಎಂದು ಹೇಳಿಕೊಂಡು ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಇದೇ ವೀಡಿಯೋವನ್ನು ಹೊಂದಿರುವ ಕನ್ನಡದ ಅನೇಕ ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಏಪ್ರಿಲ್ ೪, ೨೦೨೪ ರಂದು ಟಿವಿ9 ಕನ್ನಡದ ಒಂದು ಸುದ್ದಿ ವರದಿಯು ಕರ್ನಾಟಕದ ದಕ್ಷಿಣ ಕನ್ನಡದ ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವದ ಸಂದರ್ಭದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದೆ. ರಥೋತ್ಸವ ಸಾಗಬೇಕಿದ್ದ ದಾರಿಯಲ್ಲಿ ನಿಂತಿದ್ದ ವಾಹನಗಳು ಅಡ್ಡಾದವು, ನಂತರ ಭಕ್ತರು ಈ ವಾಹನಗಳನ್ನು ಎತ್ತಿ ಎಸೆದು ರಥೋತ್ಸವಕ್ಕೆ ದಾರಿ ಮಾಡಿಕೊಟ್ಟರು ಎಂದು ವರದಿ ಹೇಳಿಕೊಂಡಿದೆ.
ಟಿವಿ9 ಕನ್ನಡದ ಸುದ್ದಿ ವರದಿಯ ಸ್ಕ್ರೀನ್‌ಶಾಟ್.
ಅದೇ ರೀತಿ, ದಕ್ಷಿಣ ಕನ್ನಡದ ಸ್ಥಳೀಯ ಸುದ್ದಿ ವರದಿ ಔಟ್‌ಲೆಟ್ ದಿ ಮಂಗಳೂರು ಮಿರರ್‌ನ ಸುದ್ದಿ ವರದಿಯು ಅದೇ ದೃಶ್ಯಗಳು ಮತ್ತು ಅಂತಹುದೇ ವರದಿಯನ್ನು ಒಳಗೊಂಡಿದೆ. ವಾಹನಗಳನ್ನು ಎತ್ತಿ ಎಸೆಯಲಾದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಘಟನೆಯು ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಯಿತು ಎಂದು ಈ ವರದಿಯು ಗಮನಿಸಿದೆ.
ಈ ವರದಿಗಳಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಸೇರಿದ ವಾಹನಗಳ ಬಗ್ಗೆ ಯಾವುದೇ ಮಾಹಿತಿಯನ್ನಾಗಲಿ ಅಥವಾ ಮೆರವಣಿಗೆಯನ್ನು ತಡೆಯುತ್ತಿದ್ದ ವಾಹನಗಳನ್ನು ತೆಗೆದುಹಾಕಲು ಮುಸ್ಲಿಮರು ನಿರಾಕರಿಸಿದ್ದಾರೆ ಎಂಬುದನ್ನಾಗಲಿ ಉಲ್ಲೇಖಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಭಕ್ತರು ಎತ್ತಿ ಎಸೆದ ವಾಹನದ ನೋಂದಣಿ ಸಂಖ್ಯೆ “ಕೆಎ ೦೫ ಎಂವಿ ೧೫೫೪” ಎಂದು ಕಾಣಿಸಿಕೊಂಡಿದೆ ಮತ್ತು ಈ ವಾಹನದ ಮಾಲೀಕತ್ವದ ವಿವರಗಳನ್ನು ಹುಡುಕಿದಾಗ ವೆಂಕಟೇಶ್ ಎಂಬ ವ್ಯಕ್ತಿ ಈ ವಾಹನದ ಮಾಲೀಕ ಎಂದು ಮತ್ತು ಬೆಂಗಳೂರು ದಕ್ಷಿಣ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ.
ವಾಹನದ ಮಾಲೀಕತ್ವದ ವಿವರಗಳನ್ನು ಹೊಂದಿರುವ ಸ್ಕ್ರೀನ್‌ಶಾಟ್.
ತೀರ್ಪು:
ಇದು ಬಪ್ಪನಾಡು ದುರ್ಗಾಪರಮೇಶ್ವರಿ ರಥೋತ್ಸವದ ವೇಳೆ ನಡೆದ ಘಟನೆಯ ವೀಡಿಯೋ. ಆದರೆ, ಈ ವಾಹನಗಳು ಮುಸ್ಲಿಂ ಸಮುದಾಯದ ಜನರಿಗೆ ಸೇರಿದ್ದು ಎಂದು ಯಾವುದೇ ವರದಿಗಳು ಸೂಚಿಸುವುದಿಲ್ಲ ಮತ್ತು ರಥೋತ್ಸವದಲ್ಲಿ ಯಾವುದೇ ಕೋಮು ಹಲಭೆಗಳ ಬಗ್ಗೆ ವರದಿಯಾಗಿಲ್ಲ. ಈ ವಾಹನವು ವೆಂಕಟೇಶ್ ಎಂಬ ವ್ಯಕ್ತಿಗೆ ನೋಂದಣಿಯಾಗಿದೆ ಎಂದು ಆರ್‌ಟಿಒ ಮಾಹಿತಿ ಗಮನಿಸಿದೆ.