- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಇಲ್ಲ, ಡಿಕೆ ಶಿವಕುಮಾರ್...
ಇಲ್ಲ, ಡಿಕೆ ಶಿವಕುಮಾರ್ ವಿಲೀನದ ಬಗ್ಗೆ ಚರ್ಚಿಸಲು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿಲ್ಲ
ಸಾರಾಂಶ:
ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಪಕ್ಷವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಕುರಿತು ಚರ್ಚಿಸಲು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಅಂತಹ ಭೇಟಿ ನಡೆಯುತ್ತಿರುವ ಬಗ್ಗೆ ಯಾವುದೇ ಪುರಾವೆಗಳು ಅಥವಾ ನಂಬಲರ್ಹವಾದ ವರದಿಗಳಿಲ್ಲ. ಆದ್ದರಿಂದ ಈ ಹೇಳಿಕೆ ತಪ್ಪು.
ಹೇಳಿಕೆ:
ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಪ್ರಾದೇಶಿಕ ಪಕ್ಷವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಕುರಿತು ಚರ್ಚಿಸಲು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಆರೋಪಿಸಿ ಎಕ್ಸ್ (ಹಿಂದೆ ಟ್ವಿಟರ್) ಮತ್ತು ತ್ರೆಡ್ಸ್ ಬಳಕೆದಾರರು ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಹೇಳಿಕೆ ಆಂಧ್ರಪ್ರದೇಶದ ತೆಲುಗು ದಿನಪತ್ರಿಕೆಯಿಂದ ಹುಟ್ಟಿಕೊಂಡಿತು ಮತ್ತು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡಿತು. ಎಕ್ಸ್ ನಲ್ಲಿನ ಒಂದು ಪೋಸ್ಟ್, ಜೂನ್ ೨೬, ೨೦೨೪ ರಂದು ಹಂಚಿಕೊಂಡಿದ್ದು, ೨,೪೬೮ ವೀಕ್ಷಣೆಗಳನ್ನು ಗಳಿಸಿದೆ. ಈ ಆಪಾದಿತ ಭೇಟಿಯು ಆಂಧ್ರಪ್ರದೇಶದ ರಾಜಕೀಯ ಭೂದೃಶ್ಯದಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಪೋಷ್ಟ್ ಗಳು ಸೂಚಿಸುತ್ತವೆ, ಇದು ಪ್ರಮುಖ ಪ್ರಾದೇಶಿಕ ಪಕ್ಷವಾದ ವೈಎಸ್‌ಆರ್‌ಸಿಪಿ ರಾಷ್ಟ್ರೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಪರಿಗಣಿಸುತ್ತಿದೆ ಎಂದು ಸೂಚಿಸಲಾಗಿದೆ.
ಜೂನ್ ೨೬, ೨೦೨೪ ರಂದು ವೈರಲ್ ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಈ ಹೇಳಿಕೆಯನ್ನು ತನಿಖೆ ಮಾಡಲು ನಾವು "ವೈಎಸ್ ಜಗನ್ ಮೋಹನ್ ರೆಡ್ಡಿ," "ಡಿಕೆ ಶಿವಕುಮಾರ್," ಮತ್ತು "ಕಾಂಗ್ರೆಸ್‌ನೊಂದಿಗೆ ವೈಎಸ್‌ಆರ್‌ಸಿಪಿ ಮರ್ಜರ್" ನಂತಹ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ಹುಡುಕಾಟವು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಎಕ್ಸ್ ಖಾತೆಯಲ್ಲಿ ಅಧಿಕೃತ ಹೇಳಿಕೆಗೆ ಕರೆದೊಯ್ಯಿತು, ಅಲ್ಲಿ ಅವರು ಈ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು. ಜೂನ್ ೩೦, ೨೦೨೪ ರಂದು ಹೀಗೆಂದು ಹೇಳಿಕೆ ನೀಡಿದ್ದಾರೆ - "ನಾನು ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿರುವಂತೆ ಯಾರೋ ಕಿಡಿಗೇಡಿಗಳು ನಕಲಿ ಫೋಟೊ ಸೃಷ್ಟಿಸಿ ಹರಡುತ್ತಿದ್ದಾರೆ. ನಾನು ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿಲ್ಲ. ಯಾರೂ ಕೂಡ ಇದನ್ನು ನಂಬಬಾರದು."
ಜೂನ್ ೩೦, ೨೦೨೪ ರಂದು ಎಕ್ಸ್ ನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಹಂಚಿಕೊಂಡ ಅಧಿಕೃತ ಹೇಳಿಕೆಯ ಸ್ಕ್ರೀನ್‌ಶಾಟ್.
ಡಿಕೆ ಶಿವಕುಮಾರ್ ಅವರು ರೆಡ್ಡಿ ಪಕ್ಕದಲ್ಲಿ ಪುಷ್ಪಗುಚ್ಛದೊಂದಿಗೆ ನಿಂತಿರುವ ಚಿತ್ರದ ಮೂಲವನ್ನು ಕಂಡುಕೊಳ್ಳಲಾಗಲಿಲ್ಲ. ಅಧಿಕೃತ ವೈಎಸ್ಆರ್ ಸಿಪಿ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಪ್ರತಿಷ್ಠಿತ ಸುದ್ದಿ ಮೂಲಗಳ ಹುಡುಕಾಟವು ಆಪಾದಿತ ಸಭೆ ಅಥವಾ ವಿಲೀನದ ಕುರಿತು ಚರ್ಚೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ವೈಎಸ್‌ಆರ್‌ಸಿಪಿ ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷವಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದೆ. ಆದರೆ, ವೈಎಸ್‌ಆರ್‌ಸಿಪಿ ನಾಯಕನ ಬಗ್ಗೆ ಬಿಜೆಪಿ ಶಾಸಕರೊಬ್ಬರು ಈ ರೀತಿ ಹೇಳಿರುವ ಬಗ್ಗೆ ಕೆಲವು ವರದಿಗಳಿವೆ, ಉದಾಹರಣೆಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದೆ. ಡಿಕೆ ಶಿವಕುಮಾರ್ ಅವರ ನೇರ ನಿರಾಕರಣೆಯೊಂದಿಗೆ ವಿಶ್ವಾಸಾರ್ಹ ಮೂಲಗಳಿಂದ ಸಾಕ್ಷ್ಯಾಧಾರಗಳ ಕೊರತೆಯು ಆರೋಪ ತಪ್ಪು ಎಂದು ಸೂಚಿಸುತ್ತದೆ.
ತೀರ್ಪು:
ವೈಎಸ್‌ಆರ್‌ಸಿಪಿ-ಕಾಂಗ್ರೆಸ್ ವಿಲೀನದ ಕುರಿತು ಚರ್ಚಿಸಲು ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಆಪಾದಿತ ಭೇಟಿಯ ಕುರಿತಾದ ಸಮರ್ಥನೆಗೆ ನಂಬಲರ್ಹವಾದ ಪುರಾವೆಗಳಿಲ್ಲ. ಇದು ಅನಧಿಕೃತ ಚಿತ್ರವನ್ನು ಆಧರಿಸಿದೆ. ಡಿಕೆ ಶಿವಕುಮಾರ್ ಕೂಡ ಇದನ್ನು ತಳ್ಳಿಹಾಕಿದ್ದಾರೆ. ಆದ್ದರಿಂದ, ಈ ಹೇಳಿಕೆ ತಪ್ಪು.