Begin typing your search above and press return to search.
    ಈವೆಂಟ್

    ಇಲ್ಲ, ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿಲ್ಲ

    IDTU - Karnataka
    18 May 2024 9:10 AM GMT
    ಇಲ್ಲ, ಶಾರುಖ್ ಖಾನ್ ಟಿಪ್ಪು ಸುಲ್ತಾನ್ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿಲ್ಲ
    x

    ಸಾರಾಂಶ:

    ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಶಾರುಖ್ ಖಾನ್ ಅವರ ಟಿಪ್ಪು ಸುಲ್ತಾನ್ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಿದರು. ಆದರೆ, ಟಿಪ್ಪು ಸುಲ್ತಾನ್ ಬಗ್ಗೆ ಯಾವುದೇ ಚಿತ್ರವನ್ನು ಮಾಡುವುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಘೋಷಣೆ ಮಾಡಿಲ್ಲ. ಈ ಹಿಂದೆ, ಟಿಪ್ಪು ಸುಲ್ತಾನ್ ಆಧಾರಿತ ಚಲನಚಿತ್ರದಲ್ಲಿ ನಟ ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳಲು ಹಳೆಯ ಒಂದು ಅಭಿಮಾನಿಗಳ ವೀಡಿಯೋವನ್ನು ಬಳಸಿಕೊಂಡು ಇದೇ ರೀತಿಯ ತಪ್ಪು ಹೇಳಿಕೆಗಳನ್ನು ಪ್ರಸಾರ ಮಾಡಲಾಗಿತ್ತು.

    ಹೇಳಿಕೆ:

    ೧೮ನೇ ಶತಮಾನದ ರಾಜನಾದ ಟಿಪ್ಪು ಸುಲ್ತಾನ್ ಕುರಿತ ಶಾರುಖ್ ಖಾನ್ ಅವರ ಸಿನಿಮಾವನ್ನು ಬಹಿಷ್ಕರಿಸುವಂತೆ ಕರೆ ನೀಡುವ ಕನ್ನಡ ಪೋಷ್ಟ್ ಗಳನ್ನು ಕೆಲವರು ಹಂಚಿಕೊಂಡಿದ್ದಾರೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಶಾರುಖ್ ಖಾನ್ ಅವರ ಚಲನಚಿತ್ರವನ್ನು ನೋಡುವ ಬದಲು, ಅದೇ ಹಣದಲ್ಲಿ ಹಸಿದವರಿಗೆ ಆಹಾರ ನೀಡಿ. ಟಿಪ್ಪುವನ್ನು ಬಹಿಷ್ಕರಿಸಿ. ಶಾರುಖ್ ಖಾನ್ ಅವರನ್ನು ಬಹಿಷ್ಕರಿಸಿ."

    ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


    ಪುರಾವೆ:

    ನಾವು ಶಾರುಖ್ ಖಾನ್ ಅವರ ಮುಂಬರುವ ಪ್ರಾಜೆಕ್ಟ್‌ಗಳಿಗಾಗಿ ಹುಡುಕಿದೆವು ಮತ್ತು ಟಿಪ್ಪು ಸುಲ್ತಾನ್‌ ಬಗ್ಗೆ ಯಾವುದೇ ಚಲನಚಿತ್ರವನ್ನು ಮಾಡುವುದಾಗಿ ಇಲ್ಲಿಯವರೆಗೆ ಘೋಷಿಸಿಲ್ಲ ಎಂದು ಕಂಡುಬಂದಿದೆ. ಹೀಗಿರುವಾಗ, ಸಂದೀಪ್ ಸಿಂಗ್ ಎಂಬ ನಿರ್ಮಾಪಕರೊಬ್ಬರು ಟಿಪ್ಪು ಸುಲ್ತಾನ್ ಕುರಿತಾದ ತನ್ನ ಪ್ರಾಜೆಕ್ಟ್ ಅನ್ನು ನಿಲ್ಲಿಸಿರುವ ಬಗ್ಗೆ ಹೇಳಿಕೊಂಡಿರುವ ವರದಿಗಳು ಕಂಡುಬಂದವು. ಜುಲೈ ೨೪, ೨೦೨೩ ರ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು ನಿರ್ಮಾಪಕ ಸಂದೀಪ್ ಸಿಂಗ್ ತನ್ನ ಚಲನಚಿತ್ರವನ್ನು ಘೋಷಿಸಿದ ಎರಡು ತಿಂಗಳೊಳಗೆ ಅದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಗಮನಿಸಿದೆ. ವರದಿಯು ನಿರ್ಮಾಪಕರ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಅನ್ನು ಹಂಚಿಕೊಂಡು, ಅಲ್ಲಿ ಅವರು ತನಗೆ, ತಮ್ಮ ಕುಟುಂಬಕ್ಕೆ ಅಥವಾ ತಮ್ಮ ಸ್ನೇಹಿತರಿಗೆ ಬೆದರಿಕೆ ಹಾಕದಂತೆ ಜನರನ್ನು ಕೋರಿಕೊಂಡಿರುವುದ್ದಾಗಿ ಉಲ್ಲೇಖಿಸಿದೆ. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದರೆ ಕ್ಷಮೆ ಯಾಚಿಸಿದ್ದಾರೆ ಎಂದು ಕೂಡ ಅವರ ಎಕ್ಸ್ ಪೋಷ್ಟ್ ಅನ್ನು ಉಲ್ಲೇಖಿಸಿ ವರದಿ ಹೇಳಿಕೊಂಡಿದೆ. ಆದಾಗ್ಯೂ, ಈಗ ಸ್ಥಗಿತಗೊಂಡಿರುವ ಈ ಚಿತ್ರದಲ್ಲಿ ಯಾರು ನಟಿಸಲಿದ್ದರು ಎಂಬುದು ಸ್ಪಷ್ಟವಾಗಿಲ್ಲ.

    ಜುಲೈ ೨೩, ೨೦೨೩ ರಂದು ಹಂಚಿಕೊಂಡ ಸಂದೀಪ್ ಸಿಂಗ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌.


    ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಟಿಪ್ಪು ಸುಲ್ತಾನನ ವಿಷಯವು ಪ್ರಮುಖ ರಾಜಕೀಯ ವಿಷಯಗಳಲ್ಲಿ ಒಂದಾಗಿತ್ತು, ಮತ್ತು ಹಲವಾರು ಬಲಪಂಥೀಯ ಅನುಯಾಯಿಗಳು ಟಿಪ್ಪುವನ್ನು ಧಾರ್ಮಿಕ ಮತಾಂಧ ಎಂದು ಆರೋಪಿಸಿದ್ದರು ಮತ್ತು ಅವರು ಹಲವಾರು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ಕೂಡ ಹೇಳಿಕೊಂಡಿದ್ದರು. ಸಮಾನವಾದ ಆರೋಪಗಳು ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವ ಬಗ್ಗೆ ಉಂಟಾದ ರಾಜಕೀಯ ಗದ್ದಲದಲ್ಲೂ ಕಂಡುಬಂದಿದ್ದವು.

    ಟಿಪ್ಪು ಸುಲ್ತಾನ್ ಕುರಿತಾದ ಚಲನಚಿತ್ರವೊಂದರಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿರುವ ಕುರಿತು ನಾವು ಹಲವಾರು ಹಳೆಯ ಪೋಷ್ಟ್ ಗಳನ್ನು ನೋಡಿದ್ದೇವೆ. ಆದಾಗ್ಯೂ, ಶಾರುಖ್ ಖಾನ್ ಅವರ ಹೊಸ ಚಲನಚಿತ್ರ ಎಂದು ಹೇಳಿಕೊಳ್ಳುವ ಜನರು ಹಂಚಿಕೊಂಡ ಪೋಸ್ಟರ್‌ಗಳು "ಮನರಂಜನಾ ಉದ್ದೇಶಗಳಿಗಾಗಿ" ಮಾಡಿದ ಯೂಟ್ಯೂಬ್ ವೀಡಿಯೋದಿಂದ ಬಂದವು ಎಂದು ಕಂಡುಬಂದಿದೆ.

    "ಟಿಪ್ಪು ಸುಲ್ತಾನ್ ಟ್ರೇಲರ್ ಹೊಸ ಶಾರುಖ್ ಖಾನ್ ಚಲನಚಿತ್ರ" ಎಂಬ ಶೀರ್ಷಿಕೆಯ ವೀಡಿಯೋವನ್ನು ೨೦೧೮ ರಲ್ಲಿ 'ಸೂಫಿ ಸ್ಟುಡಿಯೋ' ಎಂಬ ಚಾನಲ್ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ. ಆದರೆ, ವೀಡಿಯೋವನ್ನು ನೋಡಿದ ನಂತರ, ಅದರ ಪ್ರಾರಂಭದಲ್ಲಿ, "ಇದು ಮನರಂಜನಾ ಉದ್ದೇಶಕ್ಕಾಗಿ ಮಾತ್ರ ಅಭಿಮಾನಿಗಳ ವೀಡಿಯೊವಾಗಿದೆ. ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಯ ಉದ್ದೇಶ. ಯೂಟ್ಯೂಬ್ ನಲ್ಲಿ ಕಂಡುಬರುವ ವಿವಿಧ ವಿಡಿಯೋಗಳಿಂದ ಸಂಪಾದಿಸಲಾದ ಕ್ಲಿಪ್‌ಗಳು. ಎಲ್ಲಾ ಹಕ್ಕುಗಳು ಮಾಲೀಕರಿಗೆ ಸಲ್ಲುತ್ತದೆ,” ಎಂದು ಹೇಳುವ ಹಕ್ಕು ನಿರಾಕರಣೆ ನೋಡಬಹುದು.

    ಇದು ಫ್ಯಾನ್‌ಮೇಡ್ ವೀಡಿಯೊ ಎಂದು ಡಿಸ್ಕ್ಲೆಮೆರ್ ತೋರಿಸುವ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


    ವೀಡಿಯೋ ಮೂಲ ಚಲನಚಿತ್ರದ ಟ್ರೇಲರ್‌ನದ್ದಲ್ಲ, ಆದರೆ ಅಭಿಮಾನಿಗಳ ವೀಡಿಯೋದಿಂದ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ. ೨೦೨೧ ರಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನಿಜವೆಂದು ಭಾವಿಸಿ ಹಂಚಿಕೊಂಡಿದ್ದರು. ಟಿಪ್ಪು ಸುಲ್ತಾನ್ ಕುರಿತಾದ ಚಲನಚಿತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಂಡಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಅಧಿಕೃತ ಪ್ರಕಟಣೆಗಳಿಲ್ಲ.

    ತೀರ್ಪು:

    ಶಾರುಖ್ ಖಾನ್ ಅಭಿನಯದ ಟಿಪ್ಪು ಸುಲ್ತಾನ್ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳ ಪೋಷ್ಟ್ ಗಳು ತಪ್ಪು ಮಾಹಿತಿಯನ್ನು ಹೊಂದಿವೆ. ಅಂತಹ ಯಾವುದೇ ಚಲನಚಿತ್ರವನ್ನು ಘೋಷಿಸಲಾಗಿಲ್ಲ ಮತ್ತು ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ, ಅಂತಹ ಚಲನಚಿತ್ರವನ್ನು ಘೋಷಿಸಲಾಗಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಹಾಗಾಗಿ ಇಲ್ಲದ ಸಿನಿಮಾದ ಹೆಸರಿನಲ್ಲಿ ಮಾಡಲಾದ ಆರೋಪಗಳನ್ನು ತಪ್ಪು ಎಂದು ಗುರುತಿಸಿದ್ದೇವೆ.


    Claim Review :   No, Shah Rukh Khan is not working on a movie based on Tipu Sultan
    Claimed By :  X user
    Fact Check :  False