- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಇಲ್ಲ, ರಾಮೇಶ್ವರಂ ಕೆಫೆ...
ಇಲ್ಲ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಲೀಂ ಎಂಬ ವ್ಯಕ್ತಿಯನ್ನು ಎನ್‌ಐಎ ಬಂಧಿಸಿಲ್ಲ
ಸಾರಾಂಶ:
ಮಾರ್ಚ್ ೧, ೨೦೨೪ ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಪಿಎಫ್‌ಐ ತೆಲಂಗಾಣ ಉತ್ತರದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲೀಂ ಅವರ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಅವರನ್ನು ಮಾರ್ಚ್ ೨, ೨೦೨೪ ರಂದು ಆಂಧ್ರಪ್ರದೇಶದ ಕಡಪ್ಪ ಜಿಲ್ಲೆಯ ಮೈದುಕೂರಿನಿಂದ ಭಾರತ ವಿರೋಧಿ ಪಿತೂರಿ ಒಳಗೊಂಡ ನಿಜಾಮಾಬಾದ್ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು.
ಹೇಳಿಕೆ:
ಮಾರ್ಚ್ ೧, ೨೦೨೪ ರಂದು, ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ ಸುಮಾರು ೧.೦೦ ಗಂಟೆಗೆ ಒಂದು ಕಡಿಮೆ-ತೀವ್ರತೆಯ ಐಈಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟ ಸಂಭವಿಸಿದೆ. ಈ ಸ್ಫೋಟದ ಪರಿಣಾಮವಾಗಿ ಸುಮಾರು ಒಂಬತ್ತು ಜನರು ಗಾಯಗೊಂಡರು, ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೀಗಿರುವಾಗ, ಘಟನೆಯ ಬಹು ಸಿಸಿಟಿವಿ ದೃಶ್ಯಗಳು ಮತ್ತು ಸಂಭಾವ್ಯ ಶಂಕಿತನ ದೃಶ್ಯಗಳನ್ನು ಮಾಧ್ಯಮಗಳು ಹಂಚಿಕೊಂಡವು.
ಮಾರ್ಚ್ ೩, ೨೦೨೪ ರಂದು ಆಂಧ್ರಪ್ರದೇಶದ ಕಡಪ್ಪ ಜಿಲ್ಲೆಯಿಂದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಲೀಂ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಷ್ಟ್ ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಈ ಕೆಲವು ಪೋಷ್ಟ್ ಗಳಲ್ಲಿ ಬಂಧಿತ ಶಂಕಿತನು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನ ಪ್ರಮುಖ ಸದಸ್ಯನಾಗಿದ್ದಾನೆ ಎಂದು ಗಮನಿಸಲಾಗಿದೆ.
ಸೋಶಿಯಲ್ ಮೀಡಿಯಾ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಮಾರ್ಚ್ ೨, ೨೦೨೪ ರಂದು ಆಂಧ್ರಪ್ರದೇಶದ ಕಡಪ್ಪ ಜಿಲ್ಲೆಯ ಮೈದುಕೂರಿನ ಅಬ್ದುಲ್ ಸಲೀಂ ಎಂಬ ವ್ಯಕ್ತಿಯನ್ನು ಎನ್‌ಐಎ ಬಂಧಿಸಿದೆ ಎಂದು ಕಂಡುಬಂದಿದೆ. ಆದರೆ, ಈ ಬಂಧನಕ್ಕೂ ಬೆಂಗಳೂರು ಸ್ಫೋಟಕ್ಕೂ ಸಂಬಂಧವಿಲ್ಲ. ಮಾರ್ಚ್ ೨, ೨೦೨೪ ರ ಹಲವಾರು ಸುದ್ದಿ ವರದಿಗಳು ಈ ಬಂಧನದ ಬಗ್ಗೆ ವರದಿ ಮಾಡಿವೆ. ನಿಜಾಮಾಬಾದ್ ಪಿಎಫ್‌ಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಲೀಂನನ್ನು ಬಂಧಿಸಲಾಗಿದೆ ಎಂದು ಈ ವರದಿಗಳು ಗಮನಿಸಿವೆ.
ಎನ್‌ಐಎ ತನ್ನ ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಮಾರ್ಚ್ ೨, ೨೦೨೪ ರಂದು ಪತ್ರಿಕಾ ಪ್ರಕಟಣೆಯೊಂದನ್ನು ಹಂಚಿಕೊಂಡಿದೆ. ಪತ್ರಿಕಾ ಪ್ರಕಟಣೆಯಲ್ಲಿ “ಪಿಎಫ್‌ಐ ತೆಲಂಗಾಣ ಉತ್ತರದ ರಾಜ್ಯ ಕಾರ್ಯದರ್ಶಿ ಅಬ್ದುಲ್ ಸಲೀಂ ಅವರು ಈ ಪ್ರಕರಣದಲ್ಲಿ ಬಂಧಿತರಾದ ೧೫ ನೇ ಆರೋಪಿಯಾಗಿದ್ದಾರೆ. ಮೂಲತಃ ರಾಜ್ಯ ಪೊಲೀಸರು ಜುಲೈ ೨೦೨೨ ರಲ್ಲಿ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಅದೇ ವರ್ಷ ಆಗಸ್ಟ್‌ನಲ್ಲಿ ಎನ್‌ಐಎ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ೨೦೪೭ ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದು ಪಿಎಫ್‌ಐ ಮತ್ತು ಅದರ ಕಾರ್ಯಕರ್ತರ ಪಿತೂರಿಯ ಅವಿಭಾಜ್ಯ ಅಂಗವಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಅಬ್ದುಲ್ ಸಲೀಂ ಪರಾರಿಯಾಗಿದ್ದಾನೆ ಮತ್ತು ಎನ್‌ಐಎ ನಂತರ ಆತನ ಬಂಧನಕ್ಕೆ ಬಹುಮಾನವನ್ನು ಘೋಷಿಸಿದೆ. ಗುಪ್ತಚರ ನೇತೃತ್ವದ ಕಾರ್ಯಾಚರಣೆಯ ಆಧಾರದ ಮೇಲೆ ಆಂಧ್ರಪ್ರದೇಶದ ಕಡಪ್ಪ ಜಿಲ್ಲೆಯ ಮೈದುಕೂರಿನಿಂದ ಅವರನ್ನು ಬಂಧಿಸಲಾಯಿತು," ಎಂದು ಹೇಳಿಕೊಂಡಿದೆ.
ಎನ್‌ಐಎ ಪತ್ರಿಕಾ ಪ್ರಕಟಣೆಯ ಸ್ಕ್ರೀನ್‌ಶಾಟ್.
ಆತನ ಬಂಧನಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ವರದಿಗಳಲ್ಲಾಗಲಿ ಅಥವಾ ಎನ್‌ಐಎ ಪತ್ರಿಕಾ ಪ್ರಕತನದಲ್ಲಾಗಲಿ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಅಬ್ದುಲ್ ಸಲೀಂ ಭಾಗಿಯಾಗಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಬ್ದುಲ್ ಸಲೀಂ ಅವರ ಬಂಧನವು ಮಾರ್ಚ್ ೨, ೨೦೨೪ ರಂದು ವರದಿಯಾಗಿದೆ ಮತ್ತು ರಾಮೇಶ್ವರಂ ಕೆಫೆ ಸ್ಫೋಟದ ಕುರಿತು ಸುದ್ದಿ ನವೀಕರಣದಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ೨, ೨೦೨೪ ರವರೆಗೆ ಯಾವುದೇ ಬಂಧನಗಳನ್ನು ಮಾಡಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ಉಲ್ಲೇಖಿಸಿವೆ.
ಇದಲ್ಲದೆ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಮಾರ್ಚ್ ೨, ೨೦೨೪ ರಂದು ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಲ್ಲಿಯವರೆಗೆ ಯಾವುದೇ ಬಂಧನಗಳನ್ನು ಮಾಡಲಾಗಿಲ್ಲ ಎಂದು ಗಮನಿಸಿದರು. ನಿಜಾಮಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಲೀಂನನ್ನು ಬಂಧಿಸಲಾಗಿದೆ ಮತ್ತು ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿಲ್ಲ ಎಂದು ಕಡಪ್ಪ ಪೊಲೀಸರನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ಸುದ್ದಿ ವರದಿಯೊಂದನ್ನು ಪ್ರಕಟಿಸಿದೆ.
ತೀರ್ಪು:
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಅಬ್ದುಲ್ ಸಲೀಂ ಎಂಬ ವ್ಯಕ್ತಿಯನ್ನು ಎನ್‌ಐಎ ಬಂಧಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಆರೋಪಗಳು ತಪ್ಪು. ಆಗಸ್ಟ್ ೨೦೨೨ ರಿಂದ ಅವರು ತನಿಖೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅವರನ್ನು ಬಂಧಿಸಿದೆ ಮತ್ತು ತೆಲಂಗಾಣದಲ್ಲಿ ಹಿರಿಯ ಪಿಎಫ್‌ಐ ನಾಯಕರಾಗಿದ್ದ ಅಬ್ದುಲ್ ಸಲೀಂ ೨೦೨೨ ರಿಂದ ತಲೆಮರೆಸಿಕೊಂಡಿದ್ದರು.