- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಮಂಗಳೂರಿನಲ್ಲಿ ಇತ್ತೀಚೆಗೆ...
ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತವೆಂದು ಇಂಡೋನೇಷ್ಯಾದ ಹಳೆಯ ದೃಶ್ಯವನ್ನು ಹಂಚಿಕೊಳ್ಳಲಾಗಿದೆ
ಸಾರಾಂಶ:
ಕರ್ನಾಟಕದ ಮಂಗಳೂರಿನ ಗುರುಪುರ ಬಳಿ ಇತ್ತೀಚಿನ ಭೂಕುಸಿತವನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ವೀಡಿಯೋವು ೨೦೨೦ ರದು ಮತ್ತು ಏಪ್ರಿಲ್ ೯, ೨೦೨೦ ರಂದು ಇಂಡೋನೇಷ್ಯಾದ ಚಿಯಾಂಗ್‌ಜುರ್ ನಲ್ಲಿ ಭೂಕುಸಿತ ಸಂಭವಿಸುವುದನ್ನು ತೋರಿಸುತ್ತದೆ. ಆದ್ದರಿಂದ, ವೀಡಿಯೋವು ಕರ್ನಾಟಕದದ್ದು ಎಂಬ ಹೇಳಿಕೆ ತಪ್ಪು.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ಭೂಕುಸಿತವನ್ನು ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ವೀಡಿಯೋ ಶೀರ್ಷಿಕೆಯಲ್ಲಿ ಹೇಳಲಾಗಿದೆ. ಫೇಸ್‌ಬುಕ್ ಬಳಕೆದಾರರು ಆಗಸ್ಟ್ ೧, ೨೦೨೪ ರಂದು "ಮಂಗಳೂರು ಸಮೀಪದ ಗುರುಪುರದಲ್ಲಿ ಭೂಕುಸಿತ" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಪೋಷ್ಟ್ ೫೨೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮಂಗಳೂರಿನಲ್ಲಿ ಭೂಕುಸಿತವನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಆಗಸ್ಟ್ ೧, ೨೦೨೪ ರಂದು ಹಂಚಿಕೊಂಡಿರುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ಪೋಷ್ಟ್ ಅನ್ನು ವಿಶ್ಲೇಷಿಸಿದ್ದೇವೆ ಮತ್ತು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದು ನಮ್ಮನ್ನು ಮೇ ೨೧, ೨೦೨೦ ರ ಮೇಘಾಲಯ ಪೊಲೀಸರ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು. ಅದು ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಹೊಂದಿದೆ. ಪೋಷ್ಟ್ ನ ಶೀರ್ಷಿಕೆ ಹೀಗಿದೆ, “#FakeNewsAlert ಭೂಕುಸಿತದ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ, ಇದು ಇಂಡೋನೇಷ್ಯಾದ ಚಿಯಾಂಗ್‌ಜುರ್ ಮತ್ತು ಸುಕಾನಗರದ ವಸಾಹತುಗಳಿಂದ ಬಂದಿದೆ, ಮೇಘಾಲಯದ ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಲ. ಸುಳ್ಳು ವಿಷಯ ಅಥವಾ ಶೀರ್ಷಿಕೆಯೊಂದಿಗೆ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ನಾವು ನಾಗರಿಕರನ್ನು ವಿನಂತಿಸುತ್ತೇವೆ” (ಅನುವಾದಿಸಲಾಗಿದೆ).
ಮೇಘಾಲಯ ಪೊಲೀಸರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ತರುವಾಯ, ವೈರಲ್ ವೀಡಿಯೋವನ್ನು ಹೊಂದಿರುವ ಇಂಡೋನೇಷ್ಯಾದ ಸುದ್ದಿವಾಹಿನಿ ಟ್ರಿಬ್ಯೂನ್ ನ್ಯೂಸ್ ಪ್ರಕಟಿಸಿದ ಏಪ್ರಿಲ್ ೯, ೨೦೨೦ ರ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ವರದಿಯ ಪ್ರಕಾರ, ವೀಡಿಯೋ ಇಂಡೋನೇಷ್ಯಾದ ಸಿಯಾಂಜೂರ್‌ನಿಂದ ಬಂದಿದೆ. ಭೂಕುಸಿತವು ಹೆದ್ದಾರಿಗೆ ಅಡ್ಡಿಯಾಯಿತು ಮತ್ತು ಅದರ ಅಡಿಯಲ್ಲಿ ಕೆಲವು ವಾಹನ ಸವಾರರು ಹೂತು ಹೋಗಿದ್ದಾರೆ ಎಂದು ಸಿಯಾಂಜೂರ್‌ನಲ್ಲಿರುವ ಪ್ರಾದೇಶಿಕ ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿಯನ್ನು ವರದಿ ಉಲ್ಲೇಖಿಸಿದೆ.
ಜನವರಿ ೨೦, ೨೦೨೦ ರ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇದಲ್ಲದೆ, ಗುರುಪುರ ಬಳಿ ಇತ್ತೀಚೆಗೆ ಯಾವುದೇ ಭೂಕುಸಿತವಾಗಿದೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಜುಲೈ ೩೧, ೨೦೨೪ ರಂದು ಗುರುಪುರ ಮತ್ತು ಕೈಕಂಬದ ನಡುವಿನ ಆನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೧೬೯ ರಲ್ಲಿ ಭೂಕುಸಿತ ಸಂಭವಿಸಿ ಕೆಲವು ಗಂಟೆಗಳ ಕಾಲ ಟ್ರಾಫಿಕ್ ಮೇಲೆ ಪರಿಣಾಮ ಬೀರುವ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಆದರೆ, ವೈರಲ್ ವೀಡಿಯೋ ಈ ಘಟನೆಯನ್ನು ಪ್ರತಿನಿಧಿಸುವುದಿಲ್ಲ.
ತೀರ್ಪು:
ವೀಡಿಯೋದ ವಿಶ್ಲೇಷಣೆಯು ಅದು ಏಪ್ರಿಲ್ ೯, ೨೦೨೦ ರ ಹಿಂದಿನದು ಎಂದು ತಿಳಿಸುತ್ತದೆ ಮತ್ತು ಇಂಡೋನೇಷ್ಯಾದ ಸಿಯಾಂಜೂರ್‌ನಲ್ಲಿ ಭೂಕುಸಿತ ಸಂಭವಿಸಿದೆ ಎಂದು ತೋರಿಸುತ್ತದೆ. ಹಾಗಾಗಿ ಈ ಘಟನೆ ಕರ್ನಾಟಕದದ್ದು ಎಂಬ ಹೇಳಿಕೆ ತಪ್ಪು.