Begin typing your search above and press return to search.
    ಈವೆಂಟ್

    ಪಿಎಂ ಕನ್ಯಾ ಯೋಜನೆ ಎಂಬ ಯಾವ ಸ್ಕೀಂಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ

    IDTU - Karnataka
    20 Jun 2024 6:06 AM GMT
    ಪಿಎಂ ಕನ್ಯಾ ಯೋಜನೆ ಎಂಬ ಯಾವ ಸ್ಕೀಂಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ
    x

    “ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ, ಪ್ರಧಾನಿ ಮೋದಿ ಜಾರಿಗೆ ತಂದಿರುವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಅಡಿಯಲ್ಲಿ, ಪತ್ರಿ ತಿಂಗಳು 2000 ರೂ. ಸಿಗುತ್ತದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂದೇಶವು ಹಲವಾರು ವರ್ಷಗಳಿಂದ ಹರಿದಾಡುತ್ತಿದ್ದು, ಯೋಜನೆಗಾಗಿ ಹಲವು ದಾಖಲಾತಿಗಳನ್ನು ‘ಸಿಎಸ್‌ಸಿ’ ಎಂಬ ಪೋರ್ಟಲ್‌ಗೆ ಸಲ್ಲಿಸಬೇಕು ಎಂದು ವೈರಲ್‌ ಸಂದೇಶದಲ್ಲಿ ಹೇಳಲಾಗಿದೆ.

    ವಾಟ್ಸಪ್‌ನಲ್ಲಿ ಹರಿದಾಡುತ್ತಿರವ ಸಂದೇಶದಲ್ಲಿ, “ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ. ಅದು ಹೇಗೆಂದರೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಯೋಜನೆ. ಅದು ಯಾವುದೆಂದರೆ ‘ಪಿ ಎಂ ಕನ್ಯಾ ಯೋಜನೆ’. ಪಿ ಎಂ ಕನ್ಯಾ ಯೋಜನೆಗೆ ಅಜಿ೯ ಸಲ್ಲಿಸಲು; ವಯಸ್ಸಿನ ಮಿತಿ 05 ರಿಂದ 18 ವಷ೯ದೊಳಗಿನವರು, ಆಧಾರ ಕಾರ್ಡ್, ಬ್ಯಾಂಕ್ ಪಾಸಬುಕ್, ಮಗುವಿನ 2 ಭಾವಚಿತ್ರ, ತಂದೆ ತಾಯಿಯ ವಾಷಿ೯ಕ ವರಮಾನ 2 ಲಕ್ಷ ರೂ ದಾಟಿರಬಾರದು ಎಂದು ಹೇಳಲಾಗಿದೆ.

    ಅಷ್ಟೇ ಅಲ್ಲದೆ, “ಅಜಿ೯ಯನ್ನು CSC ಗೆ ಹೋಗಿ ಅಜಿ೯ಯನ್ನು ಸಲ್ಲಿಸಬೇಕು. ಸಲ್ಲಿಸಿದ ನಂತರ ನಿಮಗೆ ಒಂದು ರಶೀದಿ ಕೊಡುತ್ತಾರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಮತ್ಯಾಕೆ ತಡಾ ಈಗಲೇ ಹೋಗಿ ಪ್ರಧಾನಮಂತ್ರಿ ಕನ್ಯಾ ಆಯುಷ್ ಯೋಜನೆಗೆ ಅಜಿ೯ ಸಲ್ಲಿಸಿ. ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬಹುದು” ಎಂದು ಹುರಿದುಂಬಿಸಲಾಗಿದೆ.

    ವಾಟ್ಸಪ್ ಮಾತ್ರವಲ್ಲದೆ, ಫೇಸ್‌ಬುಕ್‌ನಲ್ಲಿ ಕೂಡಾ ಈ ಸಂದೇಶದ ಹರಿದಾಡುತ್ತಿದೆ. ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಕೂಡಾ ನೋಡಬಹುದಾಗಿದೆ.

    ಫ್ಯಾಕ್ಟ್‌ಚೆಕ್ :‌

    ‘ಪಿಎಂ ಕನ್ಯಾ ಆಯುಷ್ ಯೋಜನೆ’ ಎಂಬ ಹೆಸರಿನ ಯಾವುದೆ ಯೋಜನೆಯನ್ನು ಒಕ್ಕೂಟ ಸರ್ಕಾರ ಇದುವರೆಗೂ ರೂಪಿಸಿಲ್ಲ. ಈ ರೀತಿಯ ಯಾವುದೆ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ’(PIB) ಸ್ಪಷ್ಟಪಡಿಸಿದೆ.

    C:-Users-HP-AppData-Local-Temp-ksohtml15836-wps1.jpg

    ಈ ಸಂದೇಶವು ಕಳೆದ ಕೆಲವು ವರ್ಷಗಳಿಂದ ವೈರಲ್ ಆಗುತ್ತಿದೆ. ಇದೀಗ ಕನ್ನಡದಲ್ಲಿ ಭಾಷಾಂತರಗೊಂಡು ಹರಿದಾಡುತ್ತಿದೆ. ಈ ಬಗ್ಗೆ PIB ಫ್ಯಾಕ್ಟ್‌ಚೆಕ್ ಮಾಡಿದ್ದು, “ಈ ಪ್ರತಿಪಾದನೆಗಳು ನಕಲಿಯಾಗಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ. ದಯವಿಟ್ಟು ಅಂತಹ ನಕಲಿ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ” ಎಂದು ಅದು ಎಚ್ಚರಿಸಿದೆ.

    ಒಟ್ಟಾರೆಯಾಗಿ ಹೇಳುವುದಾದರೆ, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಎಂಬ ಯೋಜನೆ ನಕಲಿಯಾಗಿದೆ. ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2000 ರೂ. ಸಿಗುವ ಯಾವುದೆ ಯೋಜನೆಯನ್ನು ಒಕ್ಕೂಟ ಸರ್ಕಾರ ರೂಪಿಸಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶ ನಕಲಿ ಎಂಬುದು ಸಷ್ಟವಾಗಿದೆ.ಪಿಎಂ ಕನ್ಯಾ ಯೋಜನೆ ಎಂಬ ಯಾವ ಸ್ಕೀಂ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲಪಿಎಂ ಕನ್ಯಾ ಯೋಜನೆ ಎಂಬ ಯಾವ ಸ್ಕೀಂ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ

    Claim Review :   The central government has not implemented any scheme called PM Kanya Yojana
    Claimed By :  Whatsapp User
    Fact Check :  False
    IDTU - Karnataka

    IDTU - Karnataka