Begin typing your search above and press return to search.
    ಈವೆಂಟ್

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಹ್ಯಾಂಡ್‌ಶೇಕ್ ಮಾಡಲು ಬಂದಾಗ ಪ್ರಧಾನಿ ಮೋದಿ ಅದನ್ನು ತಿರಸ್ಕರಿಸಿದ್ದಾರೆ ಎಂಬುದು ಸುಳ್ಳು

    IDTU - Karnataka
    18 Jun 2024 10:58 AM GMT
    ಅಮೆರಿಕ ಅಧ್ಯಕ್ಷ ಜೋ ಬೈಡನ್ ಹ್ಯಾಂಡ್‌ಶೇಕ್ ಮಾಡಲು ಬಂದಾಗ ಪ್ರಧಾನಿ ಮೋದಿ ಅದನ್ನು ತಿರಸ್ಕರಿಸಿದ್ದಾರೆ ಎಂಬುದು ಸುಳ್ಳು
    x

    ಇಟಲಿಯಲ್ಲಿ ನಡೆದ 2024 ರ ಜಿ 7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಚ ಜೋ ಬೈಡನ್ ಕೈ ಕುಲುಕಿ ಹಸ್ತಲಾಘವ ಮಾಡಲು ಮುಂದಾದಾಗ ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.

    ಜಿ7 ಶೃಂಗಸಭೆಯಲ್ಲಿ ಇತ್ತೀಚೆಗೆ ಇಟಲಿಯಲ್ಲಿ ನಡೆದಿತ್ತು ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಚ ಜೋ ಬೈಡನ್ ಹಸ್ತಲಾಘವ ಮಾಡಲು ಯಸಿದ್ದರು ಆದರೆ ಪ್ರಧಾನಿ ಮೋದಿ ಅದನ್ನು ನಿರಾಕರಿಸಿದರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

    ಫ್ಯಾಕ್ಟ್‌ಚೆಕ್ :

    ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಾದ ಪೋಸ್ಟ್‌ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2024 ರ G7 ಶೃಂಗಸಭೆಯ ಸ್ಪಷ್ಟವಾದ ಮೂಲ ಆವೃತ್ತಿ ಲಭ್ಯವಾಗಿದೆ.ಅದನ್ನು ಇಲ್ಲಿಮತ್ತು ಇಲ್ಲಿ ನೋಡಬಹುದು.

    ಮೂಲ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪ್ರಧಾನಿ ಮೋದಿಯವರ ಪಕ್ಕದಲ್ಲಿ ನಡೆದುಕೊಂಡು ಬಂದು ಕೈ ಕುಲುಕಲು ಕೈ ಚಾಚಿದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಬಿಡೆನ್ ಅಲ್ಲ ಎಂದು ತಿಳಿದು ಬಂದಿದೆ.

    https://factly.in/wp-content/uploads/2024/06/PM-Modi-Biden-Hand-Shake-Image-01-1-1-1024x678.jpg

    ಅಲ್ಲದೆ, ಆ ವ್ಯಕ್ತಿಯು ಹ್ಯಾಂಡ್‌ಶೇಕ್‌ಗಾಗಿ ತನ್ನ ಕೈಯನ್ನು ಚಾಚುತ್ತಿರುವಂತೆ ತೋರುತ್ತಿಲ್ಲ, ಅವರು ಪ್ರಧಾನಿ ಮೋದಿಯನ್ನು ವೇದಿಕೆಯತ್ತ ತೆರಳಲು ಮಾರ್ಗದರ್ಶನ ನೀಡುತ್ತಿರುವುದನ್ನು ನೋಡಬಹುದು, ನಂತರ ಪ್ರಧಾನಿ ಮೋದಿಗೆ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಸ್ವಾಗತ ಕೋರುತ್ತಾರೆ.


    G7 ಹಂತದಲ್ಲಿ ಇತರ ನಾಯಕರು ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ ದೃಶ್ಯಗಳನ್ನು ನೋಡಬಹುದು. ಇಲ್ಲಿಯೂ ಪ್ರಧಾನಿ ಮೋದಿಗೆ ಮಾರ್ಗದರ್ಶನ ನೀಡಿದ, ಅದೇ ವ್ಯಕ್ತಿ ಅಮೆರಿಕ ಅಧ್ಯಕ್ಚ ಜೋ ಬೈಡನ್ ಸೇರಿದಂತೆ ಇತರ ನಾಯಕರನ್ನು ಮುಖ್ಯ ವೇದಿಕೆಯ ಕಡೆಗೆ ಮಾರ್ಗದರ್ಶನ ಮಾಡುತ್ತಿದ್ದರು.

    ಇದಲ್ಲದೆ, ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಚ ಜೋ ಬೈಡನ್ ಅವರೊಂದಿಗೆ ಹಸ್ತಲಾಘವ ಮಾಡುತ್ತಿರುವ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ, ಅದನ್ನು ಪಿಎಂ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

    ಒಟ್ಟಾರೆಯಾಗಿ ಹೇಳುವುದಾದರೆ, G7 ಶೃಂಗಸಭೆಯ ವೈರಲ್ ವೀಡಿಯೊದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕಾಣಿಸಿಕೊಂಡಿರುವ ವ್ಯಕ್ತಿ ಅಮೆರಿಕ ಅಧ್ಯಕ್ಚ ಜೋ ಬೈಡನ್ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

    Claim Review :   The person seen with PM Modi in this viral video from the G7 summit is not Joe Biden
    Claimed By :  X user
    Fact Check :  False