ರಾಜಸ್ಥಾನದ ಬಿಕಾನೇರ್‌ನಲ್ಲಿ ಬಿಸಿಲನ ಶಾಖದಿಂದಾಗಿ ಉಂಟಾದ ಅಪಘಾತ ಎಂದು ಹೇಳಿಕೊಂಡು ಕೇರಳದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾರಾಂಶ:
ಸೋಶಿಯಲ್ ಮೀಡಿಯಾ ಬಳಕೆದಾರರು ರಾಜಸ್ಥಾನದ ಬಿಕಾನೇರ್‌ನಲ್ಲಿ ತೀವ್ರವಾದ ಶಾಖದಿಂದ ಉಂಟಾದ ಬೆಂಕಿ ಅಪಘಾತಎಂದು ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಕೇರಳದ ಇಡುಕ್ಕಿಯಲ್ಲಿ ಸಂಭವಿಸಿದ ಘಟನೆಯಿದು. ಕೇರಳ ಜಲ ಪ್ರಾಧಿಕಾರ (ಕೆಡಬ್ಲ್ಯೂಎ) ಸಂಗ್ರಹಿಸಿದ್ದ ಪ್ಲಾಸ್ಟಿಕ್ ಕೊಳವೆಗಳಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಆದ್ದರಿಂದ, ಈ ವೀಡಿಯೋ ರಾಜಸ್ಥಾನದಲ್ಲಿ ತೀವ್ರವಾದ ಬಿಸಿಲಿನಿಂದ ಉಂಟಾದ ಘಟನೆಯನ್ನು ತೋರಿಸುತ್ತದೆ ಎಂಬ ಹೇಳಿಕೆಗಳು ತಪ್ಪು.
ಹೇಳಿಕೆ:
ರಾಜಸ್ಥಾನದ ಬಿಕಾನೇರ್‌ನಲ್ಲಿ ಬಿಸಿಲಿನ ಬೇಗೆಯಿಂದಾಗಿ ನೀರಿನ ಸಂಪರ್ಕದ ಪೈಪ್‌ಗಳಿಗೆ ಬೆಂಕಿ ತಗುಲಿದ ಅಪಾಯಕಾರಿ ಅಗ್ನಿ ಅವಘಡವನ್ನು ತೋರಿಸುತ್ತದೆ ಎಂದು ಹೇಳಿಕೊಂಡು ವೀಡಿಯೋವೊಂದನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಬಳಕೆದಾರರು ಮೇ ೨೬, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡಿದ್ದು, ಹಿಂದಿಯಲ್ಲಿರುವ ಅದರ ಶೀರ್ಷಿಕೆ ಹೀಗೆ ಹೇಳಿಕೊಂಡಿದೆ, “ಅಧಿಕ ತಾಪಮಾನದ ಕಾರಣ, ಬಿಕಾನೇರ್‌ನಲ್ಲಿ ನೀರಿನ ಸಂಪರ್ಕದ ಪೈಪ್‌ಗಳಿಗೆ ಬೆಂಕಿ ಹತ್ತಿಕೊಂಡಿತು, ಜೆಸಿಬಿ ಸ್ವಲ್ಪದರಲ್ಲೇ ಪಾರಾಯಿತು...! #FACUP24 #SundayInspiration #Viralvideo #IPLFinalonJioCinema #CycloneRemal #LokSabhaPolls(ಕನ್ನಡಕ್ಕೆ ಅನುವಾದಿಸಲಾಗಿದೆ).” ಈ ಪೋಷ್ಟ್ ೬೨.೬ ಸಾವಿರ ವೀಕ್ಷಣೆಗಳು, ೧೮೮ ಇಷ್ಟಗಳು ಮತ್ತು ೪೩ ಮರುಪೋಷ್ಟ್ ಗಳನ್ನು ಗಳಿಸಿದೆ.
ರಾಜಸ್ಥಾನದಲ್ಲಿ ಉಂಟಾದ ಬೆಂಕಿ ಅಪಘಾತವನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
ಎಕ್ಸ್ ನಲ್ಲಿ ೧೪.೭ ಸಾವಿರ ಅನುಯಾಯಿಗಳಿರುವ ಪರಿಶೀಲಿಸಿದ ಬಳಕೆದಾರರು ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ವೀಡಿಯೋದ ಆರಂಭದಲ್ಲಿ ಮಲಯಾಳಂನಲ್ಲಿ ಒಬ್ಬ ವ್ಯಕ್ತಿ ಕಿರುಚುವುದನ್ನು ನಾವು ಕೇಳಿದ್ದೇವೆ. "ಹೇ ಸುನಿ, ಅಲ್ಲಿಂದ ದೂರ ನಿಲ್ಲು (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಇಲ್ಲಿ ಕೇಳಿಬಂದಿದೆ. ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಮಾರ್ಚ್ ೧, ೨೦೨೪ ರ ದಿ ಹಿಂದೂ ಪತ್ರಿಕೆಯ ವರದಿಗೆ ನಮ್ಮನ್ನು ಕರೆದೊಯ್ಯಿತು. ಅದರ ಹೆಡಿಂಗ್ ಹೀಗಿದೆ, "ರೂ.೨.೫ ಕೋಟಿ ಮೌಲ್ಯದ ಜಲ ಜೀವನ್ ಮಿಷನ್ ಪೈಪ್‌ಗಳು ಇಡುಕ್ಕಿಯಲ್ಲಿ ನಾಶವಾಗಿವೆ (ಕನ್ನಡಕ್ಕೆ ಅನುವಾದಿಸಲಾಗಿದೆ)." ಇಡುಕ್ಕಿ ಕೇರಳದಲ್ಲಿನ ಒಂದು ಜಿಲ್ಲೆ.
ಮಾರ್ಚ್ ೧, ೨೦೨೪ರ ದಿ ಹಿಂದೂ ವರದಿಯ ಸ್ಕ್ರೀನ್‌ಶಾಟ್.
ಈ ವರದಿಯ ಪ್ರಕಾರ, ಇಡುಕ್ಕಿ ಜಿಲ್ಲೆಯ ಪೂಪ್ಪಾರ ಗ್ರಾಮ ಕಚೇರಿಯ ಮೈದಾನದ ಬಳಿ ಸಂಗ್ರಹಿಸಲಾಗಿದ್ದ ಹೈ-ಡೆನ್ಸಿಟಿ ಪಾಲಿಎಥಿಲಿನ್ (ಎಚ್‌ಡಿಪಿಇ) ಪೈಪ್‌ಗಳಿಗೆ ಫೆಬ್ರವರಿ ೨೯, ೨೦೨೪ ರ ಸಂಜೆ ಬೆಂಕಿ ಹತ್ತಿಕೊಂಡಿತು.
ನಾವು ನಂತರ "ಇಡುಕ್ಕಿ," "ಪೂಪ್ಪಾರ," "ಪೈಪ್‌ಗಳು," ಮತ್ತು "ಬೆಂಕಿ" ಯಂತಹ ಕೀವರ್ಡ್‌ಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಮಾರ್ಚ್ ೧, ೨೦೨೪ ರ ಮಲಯಾಳಂ ಭಾಷೆಯ 24 ನ್ಯೂಸ್ ನ ವೀಡಿಯೋ ವರದಿಗೆ ನಮ್ಮನ್ನು ಕರೆದೊಯ್ಯಿತು. ಅದರ ಶೀರ್ಷಿಕೆ ಹೀಗಿದೆ "ಇಡುಕ್ಕಿ ಪೂಪ್ಪಾರದಲ್ಲಿ ಭಾರಿ ಬೆಂಕಿ; ಪ್ಲಾಸ್ಟಿಕ್ ಪೈಪ್‌ಗಳು ಸುಟ್ಟು ಹೋಗಿವೆ (ಕನ್ನಡಕ್ಕೆ ಅನುವಾದಿಸಲಾಗಿದೆ).”
ಫೇಸ್‌ಬುಕ್ ಬಳಕೆದಾರರೊಬ್ಬರು ಮಾರ್ಚ್ ೧, ೨೦೨೪ ರಂದು ವೈರಲ್ ವೀಡಿಯೋದ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಎಂದು ಕಂಡು ಬಂದಿದೆ, ಅದರ ಮಲಯಾಳಂ ಶೀರ್ಷಿಕೆ, "#Pooppara ದಲ್ಲಿ ಭಾರಿ ಬೆಂಕಿ (ಅನುವಾದಿಸಲಾಗಿದೆ)" ಎಂದು ಓದುತ್ತದೆ.
ಮಾರ್ಚ್ ೧, ೨೦೨೪ ರ 24 ನ್ಯೂಸ್ ವೀಡಿಯೋ ವರದಿಯ ಸ್ಕ್ರೀನ್‌ಶಾಟ್.
ಮಾರ್ಚ್ ೨, ೨೦೨೪ ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಕೇರಳ ಜಲ ಪ್ರಾಧಿಕಾರವು ಪೊಲೀಸರಿಗೆ ದೂರು ನೀಡಿತು ಮತ್ತು ಘಟನೆಯ ಬಗ್ಗೆ ವಿವರವಾದ ತನಿಖೆಗೆ ಒತ್ತಾಯಿಸಿತು.
ತೀರ್ಪು:
ಕೇರಳದ ಇಡುಕ್ಕಿಯ ಪೂಪ್ಪಾರದಲ್ಲಿ ಸಂಭವಿಸಿದ ಅಗ್ನಿ ಅವಘಡದ ವೀಡಿಯೋವಿದು ಎಂದು ಹೆಚ್ಚಿನ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. ಆದ್ದರಿಂದ, ರಾಜಸ್ಥಾನದ ಬಿಕಾನೇರ್‌ನಲ್ಲಿ ತೀವ್ರವಾದ ಶಾಖದಿಂದ ಉಂಟಾದ ಬೆಂಕಿ ಅವಘಡವನ್ನು ವೀಡಿಯೋ ತೋರಿಸುತ್ತದೆ ಎಂದು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಗಳು ತಪ್ಪು.