Begin typing your search above and press return to search.
    ಈವೆಂಟ್

    ಕಾನ್ಪುರ ಪೊಲೀಸರು ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿರುವ ವೀಡಿಯೋವನ್ನು ಅಕ್ರಮ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ ಎಂಬ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

    IDTU - Karnataka
    24 Sep 2024 12:40 PM GMT
    ಕಾನ್ಪುರ ಪೊಲೀಸರು ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿರುವ ವೀಡಿಯೋವನ್ನು ಅಕ್ರಮ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ ಎಂಬ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಅಕ್ರಮ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಕಾನ್ಪುರದ ಮುಸ್ಲಿಂ ಪೊಲೀಸ್ ಅಧಿಕಾರಿ ಎಂಬ ಹೇಳಿಕೆಯೊಂದಿಗೆ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯನ್ನು ಕೆಲವು ಪುರುಷರು ಎಳೆದುಕೊಂಡು ಹೋಗುತ್ತಿರುವುದನ್ನು ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಸೆಪ್ಟೆಂಬರ್ ೧೦, ೨೦೨೪ ರಂದು ಅಂಗವಿಕಲ ವ್ಯಕ್ತಿಯಿಂದ ಲಂಚ ಕೇಳುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿರುವುದನ್ನು ವೀಡಿಯೋ ತೋರಿಸುತ್ತದೆ. ಯಾವುದೇ ಅಕ್ರಮ ಶಸ್ತ್ರಾಸ್ತ್ರ ಸರಬರಾಜಿಗೆ ವೀಡಿಯೋ ಸಂಬಂಧಿಸಿಲ್ಲ. ಆದ್ದರಿಂದ ಈ ಹೇಳಿಕೆ ತಪ್ಪು.


    ಹೇಳಿಕೆ:

    ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಸೆಪ್ಟೆಂಬರ್ ೨೨, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ವ್ಯಕ್ತಿಯನ್ನು ಕೆಲವರು ಎಳೆದಾಡುತ್ತಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ಮುಸ್ಲಿಂ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೋಸ್ಟ್ ಗಳು ಹೇಳುತ್ತವೆ. ಒಂದು ಶೀರ್ಷಿಕೆ ಹೀಗೆಂದು ಹೇಳುತ್ತದೆ, "ಉ. ಪ್ರದೇಶದ ಕಾನ್ಪುರದಲ್ಲಿ ಡಿಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದ ಶಹನವಾಜ್ ಖಾನ್ ಕೋಟ್ಯಂತರ ರೂ. ಅಕ್ರಮ ಶಸ್ತ್ರಾಸ್ತ್ರ ಬಂದೂಕು, ಪಿಸ್ತೂಲು ಗಳೊಂದಿಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದು, ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದರೂ ಮುಸಲ್ಮಾನ ಯಾವತ್ತೂ ದೇಶಪ್ರೇಮಿಯಾಗಲಾರ." ಯೂಟ್ಯೂಬ್ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ಅದೇ ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಸೆಪ್ಟೆಂಬರ್ ೨೨, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಅದು ನಮ್ಮನ್ನು ನವಭಾರತ್ ಟೈಮ್ಸ್ ಮತ್ತು ಅಮರ್ ಉಜಾಲಾದ ಸುದ್ದಿ ವರದಿಗಳಿಗೆ ಕರೆದೊಯ್ಯಿತು. ವರದಿಗಳ ಪ್ರಕಾರ, ಸೆಪ್ಟೆಂಬರ್ ೧೦, ೨೦೨೪ ರಂದು ಪ್ರಕರಣವೊಂದರಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಕಾನುಪುರದ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಅಂಗವಿಕಲ ವ್ಯಕ್ತಿಯಿಂದ ರೂ.೧೫,೦೦೦ ಲಂಚಕ್ಕೆ ಒತ್ತಾಯಿಸಿದರು. ದಿವ್ಯಾಂಗ್ ರಿಂಕು ಪಾಸ್ವಾನ್ ಅವರು ಜುಲೈ ೨೦೨೪ ರಲ್ಲಿ ಕಿದ್ವಯೀ ನಗರ್ ಪೊಲೀಸ್ ಠಾಣೆಯಲ್ಲಿ ಎಸ್ ಸಿ -ಎಸ್ ಟಿ ಕಾಯಿದೆ, ಹಲ್ಲೆ, ಮೌಖಿಕ ನಿಂದನೆ ಮತ್ತು ಕೊಲೆ ಬೆದರಿಕೆಗಳ ಸೆಕ್ಷನ್‌ಗಳ ಅಡಿಯಲ್ಲಿ ವರದಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಎಸಿಪಿ ಬಾಬುಪುರ್ವ ನಡೆಸುತ್ತಿದ್ದರು.

    ಪ್ರಕರಣದ ಪ್ರಗತಿಯನ್ನು ಪರಿಶೀಲಿಸಲು ರಿಂಕು ಎಸಿಪಿ ಕಛೇರಿಗೆ ಹೋದಾಗ, ಹೆಡ್ ಕಾನ್‌ಸ್ಟೆಬಲ್ ಶಹನವಾಜ್ ಖಾನ್ ಮತ್ತು ಯೋಗೇಶ್ ಕುಮಾರ್ ಪ್ರಕರಣವನ್ನು ಮುಂದುವರಿಸಲು ರೂ.೨೦,೦೦೦ ಗೆ ಬೇಡಿಕೆಯಿಟ್ಟರು ಎಂದು ಸುದ್ದಿ ವರದಿಗಳು ಸೇರಿಸುತ್ತವೆ. ನಂತರ ರೂ.೧೫,೦೦೦ ಇತ್ಯರ್ಥಪಡಿಸಿಕೊಂಡಿದ್ದು, ರಿಂಕು ವಿಜಿಲೆನ್ಸ್ ತಂಡಕ್ಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಕಾನ್ಸ್ಟೇಬಲ್ ನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಯೋಜನೆ ರೂಪಿಸಿದ್ದರು. ಲಂಚದ ಆರೋಪದ ಮೇಲೆ ಹೆಡ್ ಕಾನ್ಸ್‌ಟೇಬಲ್ ಶಹನವಾಜ್ ನನ್ನು ಬಂಧಿಸಿದ ವಿಜಿಲೆನ್ಸ್ ತಂಡದ ಸದಸ್ಯರು ನಾಗರಿಕ ಉಡುಪಿನಲ್ಲಿ ಸಮೀಪದಲ್ಲಿಯೇ ಇದ್ದರು. ಅವರನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸ್ ಠಾಣೆಯ ಮೇಲೆ ತನಿಖೆ ಮುಂದುವರೆಸಲಾಯಿತು.

    ಸೆಪ್ಟೆಂಬರ್ ೧೦, ೨೦೨೪ ರಂದು ಪ್ರಕಟವಾದ ಅಮರ್ ಉಜಾಲಾ ವರದಿಯ ಸ್ಕ್ರೀನ್‌ಶಾಟ್.


    ತೀರ್ಪು:

    ವೈರಲ್ ವೀಡಿಯೋದ ವಿಶ್ಲೇಷಣೆಯು ಕಾನ್ಪುರದ ಹೆಡ್ ಕಾನ್‌ಸ್ಟೆಬಲ್ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದನ್ನು ತೋರಿಸುತ್ತದೆ ಮತ್ತು ಇದು ಯಾವುದೇ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಈ ಹೇಳಿಕೆ ತಪ್ಪು.

    Claim Review :   Video of Kanpur police caught taking bribe shared with communal narrative involving illegal weapons
    Claimed By :  X user
    Fact Check :  False
    IDTU - Karnataka

    IDTU - Karnataka