- Home
- /
- ಸತ್ಯ ಪರಿಶೀಲನೆಗಳು
- /
- ಈವೆಂಟ್
- /
- ಟೋಲ್ ಕಾರ್ಮಿಕರ ಮೇಲೆ...
ಟೋಲ್ ಕಾರ್ಮಿಕರ ಮೇಲೆ ಮುಸ್ಲಿಮರು ಹಲ್ಲೆ ನಡೆಸುತ್ತಿರುವ ವೈರಲ್ ವೀಡಿಯೋ ಬಾಂಗ್ಲಾದೇಶದ್ದು, ಭಾರತದಲ್ಲ
ಸಾರಾಂಶ:
ಟೋಲ್ ಕಾರ್ಮಿಕರ ಮೇಲೆ ಜನರು ಹಲ್ಲೆ ನಡೆಸುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಚಂಡೀಗಢದ ಟೋಲ್ ಪ್ಲಾಜಾದಲ್ಲಿ ಮುಸ್ಲಿಮರ ಗುಂಪು ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಈ ವೀಡಿಯೋದೊಂದಿಗೆ ಪ್ರಸಾರ ಮಾಡಲಾಗಿದೆ ಎಂದು ಹೇಳುತ್ತದೆ. ಆದರೆ, ವೀಡಿಯೋದಲ್ಲಿ ತೋರಿಸಿರುವ ಘಟನೆಯು ಬಾಂಗ್ಲಾದೇಶದ ಢಾಕಾದಲ್ಲಿ ಸೆಪ್ಟೆಂಬರ್ ೧೮, ೨೦೨೪ ರಂದು ಸಂಭವಿಸಿದೆ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.
ಹೇಳಿಕೆ:
ಭಾರತದ ಚಂಡೀಗಢ ಪ್ಲಾಜಾದಲ್ಲಿ ಮುಸ್ಲಿಮರು ಟೋಲ್ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಬಳಕೆದಾರರು ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಹೀಗಿದೆ, "ಇಂದು ಚಂಡೀಗಢ ಟೋಲ್ ಪ್ಲಾಜಾದಲ್ಲಿ, ಅವರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ." ಯೂಟ್ಯೂಬ್ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ಅದೇ ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಶೀರ್ಷಿಕೆ ಹೀಗಿದೆ, “ಯಾರಿಗೆ ಕಾನೂನು ಬೇಕು, ಯಾರಿಗೆ ನ್ಯಾಯ ಬೇಕು? ಅವರು ಮಾಡಿದ್ದು ಯಾವಾಗಲೂ ಕಾನೂನು, ಅಲ್ಲವೇ?" ಮಂಗಳೂರಿನ ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರೂ ಈ ವೀಡಿಯೋವನ್ನು ಇದೇ ರೀತಿಯ ಹೇಳಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ ೨೧, ೨೦೨೪ ರಂದು ವೈರಲ್ ವೀಡಿಯೋ ಮತ್ತು ಹೇಳಿಕೆಯನ್ನು ಹಂಚಿಕೊಳ್ಳುವ ಫೇಸ್‌ಬುಕ್‌ನ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ನಮ್ಮನ್ನು ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳಾದ ಢಾಕಾ ಟ್ರಿಬ್ಯೂನ್ ನ ಸುದ್ದಿ ವರದಿಗೆ ಮತ್ತು ಜಮುನಾ ಟಿವಿಯ ವೀಡಿಯೋ ವರದಿಗೆ ಕರೆದೊಯ್ಯಿತು. ವರದಿಗಳ ಪ್ರಕಾರ, ಸೆಪ್ಟೆಂಬರ್ ೧೮, ೨೦೨೪ ರಂದು, ಬಾಂಗ್ಲಾದೇಶದ ಢಾಕಾ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಕುರಿಲ್ ಟೋಲ್ ಪ್ಲಾಜಾದಲ್ಲಿ ಪಿಕಪ್ ಟ್ರಕ್‌ಗಳು, ಸಿಎನ್‌ಜಿ ವಾಹನಗಳು, ಆಟೋ-ರಿಕ್ಷಾಗಳು ಮತ್ತು ಮೋಟಾರ್‌ಸೈಕಲ್‌ಗಳಂತಹ ವಾಹನಗಳನ್ನು ಅಪಘಾತಗಳು ಸಂಭವಿಸುವುದೆಂದು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಅನುಮತಿಸಲಾಗಿಲ್ಲ. ಪಿಕಪ್ ವ್ಯಾನ್ ೩೦-೪೦ ಜನರನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಟೋಲ್ ನೌಕರರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಮುಸ್ಲಿಮರ ಟೋಪಿ ಧರಿಸಿದ್ದ ಒಬ್ಬ ವ್ಯಕ್ತಿ ಹೊರಬಂದು ವಾಗ್ವಾದವನ್ನು ಪ್ರಾರಂಭಿಸಿದನು, ಇದರಿಂದ ಬ್ಯಾರಿಕೇಡ್ ಮುರಿದುಹೋಯಿತು. ಅಲ್ಲಿದ್ದ ವ್ಯಕ್ತಿಗಳು ನಿಯಮಗಳನ್ನು ಒಪ್ಪಲಿಲ್ಲ, ಅದು ಆ ಘಟನೆಗೆ ಕಾರಣವಾಯಿತು.
ಸೆಪ್ಟೆಂಬರ್ ೧೮, ೨೦೨೪ ರಂದು ಅಪ್ಲೋಡ್ ಮಾಡಲಾದ ಜಮುನಾ ಟಿವಿಯ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
"ಕುರಿಲ್ ಟೋಲ್ ಪ್ಲಾಜಾ" ಎಂಬ ಕೀವರ್ಡ್‌ಗಳೊಂದಿಗೆ ಹುಡುಕುವ ಮೂಲಕ, ಇತರ ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್‌ಗಳಾದ ನ್ಯೂಸ್24ಬಿಡಿ ಮತ್ತು ಪ್ರೊಥೊಮಲೊ ನಿಂದ ಹೆಚ್ಚುವರಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ, ಇವೆರಡೂ ಈ ಘಟನೆಯ ಬಗ್ಗೆ ಒಂದೇ ರೀತಿ ವರದಿ ಮಾಡಿದೆ. ಇತ್ತೀಚೆಗೆ ಚಂಡೀಗಢದಲ್ಲಿ ಇಂತಹ ಯಾವುದೇ ಘಟನೆ ನಡೆದಿರುವ ಬಗ್ಗೆ ನಂಬಲರ್ಹವಾದ ವರದಿಗಳಿಲ್ಲ, ಇದು ಘಟನೆ ಭಾರತದಲ್ಲಿ ಸಂಭವಿಸಿಲ್ಲ ಎಂದು ಸಾಬೀತುಪಡಿಸುತ್ತದೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಬಾಂಗ್ಲಾದೇಶದ ಢಾಕಾದಲ್ಲಿರುವ ಕುರಿಲ್ ಟೋಲ್ ಪ್ಲಾಜಾದಿಂದ ಬಂದಿದೆ ಮತ್ತು ಭಾರತದ ಚಂಡೀಗಢ ಟೋಲ್ ಪ್ಲಾಜಾದಿಂದ ಅಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಈ ವಿಡಿಯೋದೊಂದಿಗೆ ಹಂಚಿಕೊಂಡಿರುವ ಭಾರತದಲ್ಲಿ ಟೋಲ್ ನೌಕರರ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆ ತಪ್ಪು.