Begin typing your search above and press return to search.
    ಸತ್ಯ ಪರಿಶೀಲನೆಗಳು

    ಕರ್ನಾಟಕದಲ್ಲಿ ಭಾರತದ ಧ್ವಜದ ಮೇಲೆ ಐಸಿಸ್ ಚಿಹ್ನೆ ಕಾಣಿಸಿಕೊಂಡಿದೆ ಎಂಬ ಆರೋಪಗಳು ಸುಳ್ಳು.

    IDTU - Karnataka
    30 April 2024 9:20 AM GMT
    ಕರ್ನಾಟಕದಲ್ಲಿ ಭಾರತದ ಧ್ವಜದ ಮೇಲೆ ಐಸಿಸ್ ಚಿಹ್ನೆ ಕಾಣಿಸಿಕೊಂಡಿದೆ ಎಂಬ ಆರೋಪಗಳು ಸುಳ್ಳು.
    x

    ಸಾರಾಂಶ:

    ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಐಸಿಸ್ ಚಿಹ್ನೆಯೊಂದಿಗೆ ತ್ರಿವರ್ಣ ಧ್ವಜವನ್ನು ಕರ್ನಾಟಕದಲ್ಲಿ ನಡೆದ ರ‍್ಯಾಲಿಯಲ್ಲಿ ಕಾಣಿಸಿಕೊಂಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ೨೦೨೨ ರಲ್ಲಿ ತೆಲಂಗಾಣದ ಮಹಬೂಬ್‌ನಗರದಲ್ಲಿ ನಡೆದ ಪ್ರತಿಭಟನೆಯಿಂದ ಬಂದಿವೆ ಎಂಬುದನ್ನು ಗಮನಿಸುವುದು ಅತ್ಯಗತ್ಯ ಮತ್ತು ಇದು ಕರ್ನಾಟಕದಲ್ಲಿ ನಡೆದ ಇತ್ತೀಚಿನ ಘಟನೆ ಎಂಬ ಆರೋಪಗಳು ತಪ್ಪು.

    ಹೇಳಿಕೆ:

    ಕರ್ನಾಟಕದಲ್ಲಿ ನಡೆದ ರ‍್ಯಾಲಿಯಲ್ಲಿ ಭಾರತೀಯ ಧ್ವಜದಲ್ಲಿ ಅಶೋಕ ಚಕ್ರವನ್ನು ಐಸಿಸ್ ಚಿಹ್ನೆಯಿಂದ ಬದಲಾಯಿಸಲಾಗಿದೆ ಎಂದು ಆರೋಪಿಸಿ ಎಕ್ಸ್ ನಲ್ಲಿನ ಬಳಕೆದಾರರು ವೀಡಿಯೋ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಬಳಕೆದಾರರು ಏಪ್ರಿಲ್ ೨೪, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಮಲಯಾಳಂ ನಲ್ಲಿರುವ ಇದರ ಶೀರ್ಷಿಕೆ ಹೀಗಿದೆ, "ಕರ್ನಾಟಕದಲ್ಲಿ ರಾಷ್ಟ್ರೀಯ ಧ್ವಜದ ಮೇಲೆ ಅಶೋಕ ಚಕ್ರವನ್ನು ಐಸಿಸ್ ಚಿನ್ಹೆಯಿಂದ ಬದಲಿಸಲಾಗಿದೆ (ಕನ್ನಡಕ್ಕೆ ಅನುವಾದಿಸಲಾಗಿದೆ)." ಈ ಪೋಷ್ಟ್ ೪.೨ ಸಾವಿರ ವೀಕ್ಷಣೆಗಳನ್ನು ಹೊಂದಿದೆ.

    ತ್ರಿವರ್ಣ ಧ್ವಜದ ಮೇಲೆ ಅಶೋಕ ಚಕ್ರವನ್ನು ಬದಲಾಯಿಸಿ ಐಸಿಸ್ ಚಿನ್ಹೆಯನ್ನು ಸೇರಿಸಲಾಗಿದೆ ಎಂದು ಹೇಳಿಕೊಂಡು ಎಕ್ಸ್‌ನಲ್ಲಿ ಪೋಷ್ಟ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್.


    ಬಳಕೆದಾರರು ನಂತರ ತಮ್ಮ ಪೋಷ್ಟ್ ಗೆ ಪ್ರತ್ಯುತ್ತರವಾಗಿ ತನ್ನನ್ನು ತಾನೇ ಸರಿಪಡಿಸಿಕೊಂಡರು ಮತ್ತು ಘಟನೆಯನ್ನು ಕರ್ನಾಟಕದ್ದು ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋವನ್ನು ಇನ್ನಿತರರು ತಪ್ಪು ಸಂದರ್ಭದೊಂದಿಗೆ ಪ್ರಸಾರ ಮಾಡುವ ಸಾಧ್ಯತೆಯಿದೆ.


    ಪುರಾವೆ:

    ಸುದ್ದಿ ನಿರೂಪಕ ಸುಧೀರ್ ಚೌಧರಿ “ಇಂದು, ತೆಲಂಗಾಣದಲ್ಲಿ ಇದೇ ರೀತಿಯ ಮೆರವಣಿಗೆಯ ಸಂದರ್ಭದಲ್ಲಿ, ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜವನ್ನು ಹಾಳುಮಾಡಿದರು. ಅವರು ಅಶೋಕ ಚಕ್ರವನ್ನು ತೆಗೆದು ಇಸ್ಲಾಮಿಕ್ ಕಲ್ಮವನ್ನು ಬರೆದರು. (ಕನ್ನಡಕ್ಕೆ ಅನುವಾದಿಸಲಾಗಿದೆ),” ಎಂದು ಹೇಳುವ ಈ ವೀಡಿಯೋವನ್ನು ನಾವು ವಿಶ್ಲೇಷಿಸಿದ್ದೇವೆ. ಜೀ ನ್ಯೂಸ್‌ನ ಲೋಗೋ ಸಹ ವೀಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಇದು ಡಿಎನ್‌ಎ ಎಂಬ ಕಾರ್ಯಕ್ರಮದ ಕ್ಲಿಪ್ ಅನ್ನು ತೋರಿಸುತ್ತದೆ. ಈ ಕಾರ್ಯಕ್ರಮವನ್ನು ಚೌಧರಿ ಅವರು ಜುಲೈ ೨೦೨೨ ರಲ್ಲಿ ಆಜ್ ತಕ್ ಚಾನೆಲ್‌ಗೆ ಸೇರುವ ಮೊದಲು ಆಯೋಜಿಸಿದ್ದರು. ಈ ಘಟನೆಯು ಜುಲೈ ೨೦೨೨ ರ ಮೊದಲು ವರದಿಯಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

    ನಾವು ಜೀ ನ್ಯೂಸ್ ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಜೂನ್ ೧೦, ೨೦೨೨ ರ ಡಿಎನ್ಎ ಶೋನ ವರದಿಯನ್ನು ಕಂಡುಕೊಂಡಿದ್ದೇವೆ.

    ಜೂನ್ ೧೦, ೨೦೨೨ ರ ಜೀ ನ್ಯೂಸ್‌ನ ಡಿಎನ್ಎ ಕಾರ್ಯಕ್ರಮದ ವೀಡಿಯೋವಿನ ಸ್ಕ್ರೀನ್‌ಶಾಟ್.


    ಈ ವೀಡಿಯೋದಲ್ಲಿ ಸುಮಾರು ೩೩:೦೦ ನಿಮಿಷಗಳ ಅವಧಿಯಲ್ಲಿ, ವರದಿಯು ವೈರಲ್ ವಿಡಿಯೋದಲ್ಲಿನ ಕ್ಲಿಪ್ ಅನ್ನು ತೋರಿಸುತ್ತದೆ. ೨೦೨೨ ರ ಮೇ ೨೭ ರಂದು ಜ್ಞಾನವಾಪಿ ಮಸೀದಿ ವಿವಾದದ ಚರ್ಚೆಯಲ್ಲಿ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ಭಾರತದಲ್ಲಿ ಭಾರೀ ಪ್ರತಿಭಟನೆಗಳು ನಡೆದವು. ೨೦೨೨ ರ ಜೂನ್ ೧೦ ರಂದು ತೆಲಂಗಾಣದ ಮಹೆಬೂಬ್‌ನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರತಿಭಟನಾಕಾರರು ಇಸ್ಲಾಮಿಕ್ ಕಲ್ಮಾದೊಂದಿಗೆ ತ್ರಿವರ್ಣ ಧ್ವಜವನ್ನು ಬೀಸಿದರು. ಈ ಘಟನೆಯು ಕರ್ನಾಟಕದದ್ದು ಎಂದು ಆರೋಪಿಸಿರುವ ಆನ್‌ಲೈನ್ ಪೋಷ್ಟ್ ಗಳು ತಪ್ಪು ಎಂದು ಇದು ಖಚಿತಪಡಿಸುತ್ತದೆ.


    ತೀರ್ಪು:

    ವೀಡಿಯೋದ ವಿಶ್ಲೇಷಣೆಯು ವಿಡಿಯೋವು ಜೂನ್ ೧೦, ೨೦೨೨ ರಲ್ಲಿ ತೆಲಂಗಾಣದ ಮಹಬೂಬ್‌ನಗರದಲ್ಲಿ ನಡೆದ ಪ್ರತಿಭಟನೆಯದ್ದು ಎಂದು ಸ್ಪಷ್ಟಪಡಿಸುತ್ತದೆ. ಅಲ್ಲಿ ಇಸ್ಲಾಮಿಕ್ ಕಲ್ಮಾ ತ್ರಿವರ್ಣದಲ್ಲಿ ಅಶೋಕ ಚಕ್ರವನ್ನು ಬದಲಾಯಿಸಿತು; ಆದ್ದರಿಂದ ಈ ವೀಡಿಯೋ ಕರ್ನಾಟಕದದ್ದು ಎಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಆರೋಪಗಳು ತಪ್ಪು.

    Claim Review :   Allegations of ISIS symbol appearing on Indian flag in Karnataka are false.
    Claimed By :  X user
    Fact Check :  False
    IDTU - Karnataka

    IDTU - Karnataka