ಬೆಂಗಳೂರಿನ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಅನ್ನು ತೋರಿಸಲು ಎಡಿಟ್ ಮಾಡಲಾದ ಚಿತ್ರವು ತಪ್ಪು ನಿರೂಪಣೆಗಳೊಂದಿಗೆ ಮರುಕಳಿಸಿದೆ
ಸಾರಾಂಶ:
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಅನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಇದೊಂದು ಎಡಿಟ್ ಮಾಡಲಾದ ಚಿತ್ರವಾಗಿದೆ. ಚಿತ್ರದಲ್ಲಿರುವ ಚರ್ಚ್‌ನ ನಿಜವಾದ ಹೆಸರು "ಅವರ್ ಲೇಡಿ ಆಫ್ ಡೋಲೌರ್ಸ್ ಚರ್ಚ್," ಮತ್ತು ಇದು ಮುಂಬೈನಲ್ಲಿದೆ. ಈ ಚರ್ಚ್‌ನ ಹೆಸರನ್ನು ಚಿತ್ರದಲ್ಲಿ ಎಡಿಟ್ ಮಾಡಿಕೊಂಡು ಆನ್‌ಲೈನ್‌ನಲ್ಲಿ ಕೋಮು ನಿರೂಪಣೆಗಳೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ಚರ್ಚ್ ಒಂದರ ಚಿತ್ರವನ್ನು ಹಂಚಿಕೊಂಡು, ಅದರ ಹೆಸರು "ಲಿಂಗಾಯತ ಕ್ಯಾಥೋಲಿಕ್ ಚರ್ಚ್" ಎಂದು ಹೇಳಿಕೊಂಡಿದ್ದಾರೆ. ವಿವಿಧ ಹಿಂದೂ ಜಾತಿಗಳನ್ನು ಅವುಗಳ ಹೆಸರಿನಲ್ಲಿ ಚರ್ಚ್‌ಗಳನ್ನು ರಚಿಸುವ ಮೂಲಕ ಕ್ರಿಶ್ಚಿಯನ್ ಧರ್ಮಕ್ಕೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿ ಈ ಚಿತ್ರವನ್ನು ಕೋಮು ನಿರೂಪಣೆ ಹೊಂದಿರುವ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ಚಿತ್ರದ ಪ್ರಕಾರ, ಚರ್ಚ್ ಬೆಂಗಳೂರಿನಲ್ಲಿದೆ ಮತ್ತು ಏಪ್ರಿಲ್ ೨೦೧೮ ರಲ್ಲಿ ಸ್ಥಾಪಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಕನ್ನಡದಲ್ಲಿ ಕಂಡುಬಂದ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗೆ ಹೇಳುತ್ತದೆ, “ನಮ್ಮ ಕರ್ಮ ಕ್ರೈಸ್ತರು ಈ ರೀತಿ ಹಿಂದೂ ಧರ್ಮದ ಎಲ್ಲಾ ಜಾತಿಗಳನ್ನು ಬಳಕೆ ಮಾಡಿಕೊಂಡು ಅವರ ಧರ್ಮಕ್ಕೆ ಸೇರಿಸಿಕೊಳ್ಳುತ್ತಿದ್ದರೆ."
ವೈರಲ್ ಚಿತ್ರದೊಂದಿಗೆ ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಎಂದು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಅದು ಯಾವುದೇ ವಿಶ್ವಾಸಾರ್ಹ ರಿಸಲ್ಟ್ ನೀಡಲಿಲ್ಲ. ಈ ಹೆಸರಿನ ಚರ್ಚ್‌ಗೆ ಸಂಬಂಧಿಸಿದ ಯಾವುದೇ ಸುದ್ದಿ ಲೇಖನಗಳು ಕೂಡ ಕಂಡುಬರಲಿಲ್ಲ. ಈ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ೨೦೧೮ ರಲ್ಲಿ ಹಂಚಿಕೊಂಡ ಸಮಾನವಾದ ಹಲವಾರು ಪೋಷ್ಟ್ ಗಳನ್ನು ಇದೇ ರೀತಿಯ ನಿರೂಪಣೆಗಳೊಂದಿಗೆ ಹಂಚಿಕೊಂಡಿರುವುದಾಗಿ ಕಂಡುಬಂದಿದೆ.
೨೦೧೮ ರಲ್ಲಿ ಅದೇ ನಿರೂಪಣೆಗಳೊಂದಿಗೆ ಹಂಚಿಕೊಂಡ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
"ಬ್ಯೂಟಿಫುಲ್ ಇಂಡಿಯನ್ ಚರ್ಚ್‌ಗಳು" ಎಂಬ ವೆಬ್‌ಸೈಟ್‌ನಲ್ಲಿ ಏಪ್ರಿಲ್ ೧೪, ೨೦೧೨ ರ ಬ್ಲಾಗ್ ಪೋಷ್ಟ್ ಒಂದರಲ್ಲಿ ಹಂಚಿಕೊಂಡಿರುವ ಚಿತ್ರವನ್ನು ಸಹ ನಾವು ಕಂಡುಕೊಂಡಿದ್ದೇವೆ. ಆದರೆ, ವೈರಲ್ ಚಿತ್ರದಲ್ಲಿನ ಚರ್ಚ್‌ನಂತೆ ಕಾಣುವ ಈ ಚಿತ್ರದಲ್ಲಿ, ಹೆಸರು "ಅವರ್ ಲೇಡಿ ಆಫ್ ಡೋಲರ್ಸ್ ಚರ್ಚ್," ಎಂದು ಓದುತ್ತದೆ. ಈ ಚಿತ್ರದಲ್ಲಿ ಹಿಂದಿಯಲ್ಲಿ ಬರೆದಿರುವ ದಾಹಾನು ಎಂಬ ಸ್ಥಳದ ಹೆಸರನ್ನು ಉಲ್ಲೇಖಿಸಿರುವ ಪಠ್ಯವನ್ನು ಸಹ ನೋಡಬಹುದು. ಹೆಚ್ಚಿನ ಹುಡುಕಾಟವು ಈ ಚರ್ಚ್ ಮುಂಬೈನಲ್ಲಿದೆ ಎಂದು ಕಂಡುಕೊಂಡಿದ್ದೇವೆ.
"ಬ್ಯೂಟಿಫುಲ್ ಇಂಡಿಯನ್ ಚರ್ಚಸ್" ಎಂಬ ವೆಬ್‌ಸೈಟ್‌ನಲ್ಲಿ ಕಂಡುಬಂದ ಚರ್ಚ್‌ನ ಚಿತ್ರದ ಸ್ಕ್ರೀನ್‌ಶಾಟ್.
ನಾವು ಈ ಚರ್ಚ್ ಅನ್ನು ಮುಂಬೈನ ದಹಾನುಗೆ ಜಿಯೋಲೊಕೇಟ್ ಮಾಡಲು ಸಹ ಸಾಧ್ಯವಾಯಿತು. ಆದರೆ, ಚರ್ಚ್‌ನ ಇತ್ತೀಚಿನ ಬಣ್ಣ ಮತ್ತು ಮುಂಭಾಗವು ವೈರಲ್ ಚಿತ್ರಕ್ಕಿಂತ ಭಿನ್ನವಾಗಿದೆ. ಹೆಚ್ಚಿನ ಹುಡುಕಾಟದ ನಂತರ, ಗೂಗಲ್ ಬಳಕೆದಾರರೊಬ್ಬರು ಈ ಚರ್ಚ್ ನ ಮೇ ೨೦೧೭ ರಲ್ಲಿ ಚಿತ್ರಿಸಿದ ಚಿತ್ರವೊಂದನ್ನು ಇದೇ ಲೊಕೇಶನ್ ಗೆ ಟ್ಯಾಗ್ ಮಾಡಿ ಹಂಚಿಕೊಂಡಿರುವುದಾಗಿ ಕಂಡುಬಂದಿದೆ. ಈ "ಅವರ್ ಲೇಡಿ ಆಫ್ ಡೋಲೌರ್ಸ್ ಚರ್ಚ್" ಅನ್ನು ಮೇ ೨೦೧೭ ರ ನಂತರ ನವೀಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ.
ಚರ್ಚ್ ಅನ್ನು ಟ್ಯಾಗ್ ಮಾಡುವ ಮೂಲಕ ಗೂಗಲ್ ನಲ್ಲಿ ಬಳಕೆದಾರರು ಹಂಚಿಕೊಂಡ ಚಿತ್ರದ ಸ್ಕ್ರೀನ್‌ಶಾಟ್.
ಇದು ಚರ್ಚ್‌ನ ನಿಜವಾದ ಹೆಸರು “ಅವರ್ ಲೇಡಿ ಆಫ್ ಡೊಲೊರ್ಸ್ ಚರ್ಚ್” ಮತ್ತು ಅದು ಮುಂಬೈನ ದಹಾನುದಲ್ಲಿದೆ ಎಂದು ತೋರಿಸುತ್ತದೆ. ಚರ್ಚ್‌ನ ಹೆಸರನ್ನು ಬೆಂಗಳೂರಿನಿಂದ ಬಂದಿದೆ ಎಂದು ತೋರಿಸಲು ಎಡಿಟ್ ಮಾಡಲಾಗಿದೆ ಮತ್ತು ತಪ್ಪಾದ ಕೋಮು ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ.
ತೀರ್ಪು:
“ಬೆಂಗಳೂರಿನ ಲಿಂಗಾಯತ ಕ್ಯಾಥೋಲಿಕ್ ಚರ್ಚ್ ಅನ್ನು ತೋರಿಸುವುದಾಗಿ ಹೇಳಿಕೊಂಡು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದು ಅದರ ವಿಶ್ಲೇಷಣೆಯು ಕಂಡುಹಿಡಿದಿದೆ. ಈ ಚಿತ್ರವು ಮುಂಬೈನ ದಹಾನುದಲ್ಲಿರುವ ಚರ್ಚ್‌ನದ್ದಾಗಿದೆ ಮತ್ತು ಅದರ ಹೆಸರು "ಅವರ್ ಲೇಡಿ ಆಫ್ ಡೋಲೋರ್ಸ್ ಚರ್ಚ್." ಈ ಚರ್ಚ್‌ನ ಹೆಸರನ್ನು ಎಡಿಟ್ ಮಾಡಿಕೊಂಡು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಕೋಮು ನಿರೂಪಣೆಗಳೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.