- Home
- /
- ಸತ್ಯ ಪರಿಶೀಲನೆಗಳು
- /
- ಹಿಂದೂ ಒಡೆತನದ ಅಂಗಡಿಯಿಂದ...
ಹಿಂದೂ ಒಡೆತನದ ಅಂಗಡಿಯಿಂದ ಸರಕುಗಳನ್ನು ಖರೀದಿಸಿದ್ದಕ್ಕಾಗಿ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಎಂದು ಹಳೆಯ ವೀಡಿಯೋವನ್ನು ಇತ್ತೀಚಿನದ್ದೆಂದು ಹಂಚಿಕೊಳ್ಳಲಾಗಿದೆ.
ಸಾರಾಂಶ:
ಹಿಂದೂ ಒಡೆತನದ ಅಂಗಡಿಯಿಂದ ಸರಕುಗಳನ್ನು ಖರೀದಿಸಿದ್ದಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಪುರುಷರ ಗುಂಪೊಂದು ಕರ್ನಾಟಕದಲ್ಲಿ ತಮ್ಮ ಸಮುದಾಯದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಕೆಲವು ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಘಟನೆಯು ನಡೆದದ್ದು ನಿಜವಾದರೂ, ಇದು ೨೦೨೦ ರ ಹಳೆಯ ವೀಡಿಯೋ ಎಂಬುದನ್ನು ಗಮನಾರ್ಹ, ಮತ್ತು ದೃಶ್ಯಗಳು ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ.
ಹೇಳಿಕೆ:
ಅಲ್ಪಸಂಖ್ಯಾತ ಸಮುದಾಯದ ಕೆಲವು ವ್ಯಕ್ತಿಗಳು ಕರ್ನಾಟಕದಲ್ಲಿ ಒಂದೆಡೆ ಮಹಿಳೆಯರನ್ನು ತಡೆಯುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಎಕ್ಸ್ ನಲ್ಲಿನ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬಳಕೆದಾರರು ಏಪ್ರಿಲ್ ೦೪, ೨೦೨೪ ರಂದು ವೀಡಿಯೋ ಪೋಷ್ಟ್ ಮಾಡಿದ್ದು, ಮೂಲತಃ ಹಿಂದಿಯಲ್ಲಿರುವ ಶೀರ್ಷಿಕೆಯು, ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “ಕರ್ನಾಟಕ ಹಿಂದೂ ಮಾಲೀಕತ್ವದ ಅಂಗಡಿಯಿಂದ ಕೇಸರಿ ಬಟ್ಟೆಯ ವಸ್ತುಗಳನ್ನು ಖರೀದಿಸಿದ್ದಕ್ಕಾಗಿ ಮುಸ್ಲಿಂ ಮಹಿಳೆಯರಿಗೆ ಬೆದರಿಕೆ ಮತ್ತು ನಿಂದನೆ ಮಾಡಿದ್ದಾರೆ.” ಪೋಷ್ಟ್ ೧೯.೬ ಸಾವಿರ ವೀಕ್ಷಣೆಗಳು, ೧.೩ ಸಾವಿರ ಇಷ್ಟಗಳು ಮತ್ತು ೯೬೧ ಮರುಪೋಷ್ಟ್ ಗಳನ್ನು ಗಳಿಸಿದೆ. ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಈ ಬಳಕೆದಾರರು ನಿಯಮಿತವಾಗಿ ಕೋಮು ಪೋಷ್ಟ್ ಗಳನ್ನು ಹಂಚಿಕೊಳ್ಳುತ್ತಾರೆ ಎಂಬುದು ಕಂಡುಬಂದಿದೆ.
ಹಿಂದೂ-ಮಾಲೀಕತ್ವದ ಅಂಗಡಿಯಿಂದ ಖರೀದಿಗಳನ್ನು ಮಾಡಲು ಪುರುಷರ ಗುಂಪು ಇಬ್ಬರು ಮಹಿಳೆಯರನ್ನು ಪ್ರಶ್ನಿಸಿದ ಇತ್ತೀಚಿನ ಘಟನೆಯನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
೧೧.೫ ಸಾವಿರ ಅನುಯಾಯಿಗಳನ್ನು ಹೊಂದಿರುವ ಒಬ್ಬ ಬಳಕೆದಾರರು ಎಕ್ಸ್ ನಲ್ಲಿ ೬೬೮ ವೀಕ್ಷಣೆಗಳನ್ನು ಹೊಂದಿರುವ ಸಮಾನವಾದ ಶೀರ್ಷಿಕೆಯೊಂದಿಗೆ ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ಬಳಕೆದಾರರು ಕೂಡ ಆಗಾಗ್ಗೆ ಅಲ್ಪಸಂಖ್ಯಾತ ವಿರೋಧಿ ಪೋಷ್ಟ್ ಗಳನ್ನು ಹಂಚಿಕೊಳ್ಳುತ್ತಾರೆ.
ಎಕ್ಸ್ ನಲ್ಲಿ ಹಂಚಿಕೊಂಡ ಸಮಾನವಾದ ಪೋಷ್ಟ್ ನ ಸ್ಕ್ರೀನ್‌ಶಾಟ್.
ಬಳಕೆದಾರರು #Karnataka, #Congress, #Ramadan, ಮತ್ತು #RamazanHorror ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿರುವುದು ಈ ವೀಡಿಯೊವು ಇತ್ತೀಚಿನ ಘಟನೆಯನ್ನು ತೋರಿಸುತ್ತದೆ ಎಂದು ಸೂಚಿಸುತ್ತದೆ.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ೨೦೨೦ ರ ಮೇ ೧೭ ರ ಒಂದು ಎಕ್ಸ್ ನಲ್ಲಿ ಹಂಚ್ಸಿಕೊಂಡ ಒಂದು ಥ್ರೆಡ್ ಗೆ ನಮ್ಮನ್ನು ಕರೆದೊಯ್ಯಿತು. ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಈ ರಂಜಾನ್ ಸಮಯದಲ್ಲಿ ಮುಸ್ಲಿಮರು ಶಾಪಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆ ಗುಂಪು ಸ್ವತಃ ಹೇಳುತ್ತಿದೆ, ಮತ್ತು ಸ್ಪೀಕರ್‌ಗಳಲ್ಲಿ ಮಸೀದಿಗಳಿಂದ ಅದೇ ಘೋಷಿಸಲಾಗುತ್ತಿದೆ! ಈ ಮೂರ್ಖರು ಬಡ ಮುಸ್ಲಿಂ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಹಿಂದೂಗಳ ವಿರುದ್ಧ ವಿಷವನ್ನು ಉಗುಳುತ್ತಾರೆ, ಹಿಂದೂಗಳ ಇಚ್ಛೆಯನ್ನು ನಮಗೆ ಹೇಳುತ್ತಿದ್ದಾರೆ! (ಕನ್ನಡಕ್ಕೆ ಅನುವಾದಿಸಲಾಗಿದೆ).”
ಮೇ ೨೦೨೦ ರಲ್ಲಿ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಘಟನೆಯು ಕರ್ನಾಟಕದ ದಾವಣಗೆರೆಯದ್ದು ಎಂದು ಈ ಪೋಷ್ಟ್ ನ ಥ್ರೆಡ್ ನಲ್ಲಿ ಉಲ್ಲೇಖಿಸಲಾಗಿದೆ.
ನಾವು ವೀಡಿಯೋವನ್ನು ಜಿಯೋಲೊಕೇಟ್ ಮಾಡಿದಾಗ ಈ ಘಟನೆಯು ದಾವಣಗೆರೆಯ ಎವಿಕೆ ಕಾಲೇಜು ರಸ್ತೆಯಲ್ಲಿ ನಡೆದಿದೆ ಎಂದು ಕಂಡುಬಂದಿದೆ. ಪುರುಷರ ಗುಂಪು ತಡೆಯುವ ಮೊದಲು ಮಹಿಳೆಯರು ಬಿ ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಅಂಗಡಿಯಿಂದ ಬಟ್ಟೆ ಖರೀದಿಸಿದ್ದಾರೆ ಎಂದು ಇದು ಸ್ಪಷ್ಟಪಡಿಸಿದೆ.
ಇದರಿಂದ ಸುಳುಹುಗಳನ್ನು ತೆಗೆದುಕೊಂಡು, ನಾವು “ದಾವಣಗೆರೆ,” “ಮಹಿಳೆಯರು,” ಮತ್ತು “ಅಂಗಡಿ” ಮುಂತಾದ ಕೀವರ್ಡ್‌ಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಮೇ ೧೮, ೨೦೨೦ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ನಾವು ಕಂಡುಕೊಂಡಿದ್ದೇವೆ.
ಈ ಚಿತ್ರವು ಏಪ್ರಿಲ್ ೨೨, ೨೦೨೩ ರಂದು ಪ್ರಕಟವಾದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ತೋರಿಸುತ್ತದೆ.
ಈ ವರದಿಯ ಪ್ರಕಾರ, ದಾವಣಗೆರೆಯ ಅಂಗಡಿಯೊಂದರಲ್ಲಿ ತಮ್ಮ ಸಮುದಾಯದ ಮಹಿಳೆಯರನ್ನು ಬಟ್ಟೆ ಖರೀದಿಸುವುದನ್ನು ತಡೆದ ಅಲ್ಪಸಂಖ್ಯಾತ ಸಮುದಾಯದ ಐವರು ಪುರುಷರನ್ನು ಬಂಧಿಸಲಾಗಿದೆ. ಕಾನೂನುಬಾಹಿರ ಸಭೆ, ಗಲಭೆ ಮತ್ತು ಧರ್ಮ ಅಥವಾ ಜನಾಂಗದ ಮೇಲಿನ ದಾಳಿ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೂಡ ವರದಿಯಲ್ಲಿ ಹೇಳಿಕೊಂಡಿದೆ.
ಆದ್ದರಿಂದ, ದೃಶ್ಯಗಳು ಇತ್ತೀಚಿನವು ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ತಪ್ಪು.
ತೀರ್ಪು:
ವೀಡಿಯೋದ ವಿಶ್ಲೇಷಣೆಯು ೨೦೨೦ ರ ಘಟನೆಯ ವೀಡಿಯೋ ಇದು ಎಂದು ಬಹಿರಂಗಪಡಿಸುತ್ತದೆ; ಆದ್ದರಿಂದ, ಇತ್ತೀಚೆಗೆ ಹಿಂದೂ ಒಡೆತನದ ಅಂಗಡಿಯಿಂದ ಬಟ್ಟೆ ಖರೀದಿಸಿದ್ದಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಗಳು ತಪ್ಪು.