- Home
- /
- ಸತ್ಯ ಪರಿಶೀಲನೆಗಳು
- /
- ಆಕಾಶ್ ಏರ್ ಫ್ಲೈಟ್...
ಆಕಾಶ್ ಏರ್ ಫ್ಲೈಟ್ ಅಟೆಂಡೆಂಟ್ ಸಂಸ್ಕೃತದಲ್ಲಿ ಸುರಕ್ಷತಾ ಘೋಷಣೆ ಮಾಡಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ವಿಮಾನದೊಳಗಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಅದು ಸಂಸ್ಕೃತದಲ್ಲಿ ಫ್ಲೈಟ್ ಅಟೆಂಡೆಂಟ್ ಮಾಡಿದ ಸುರಕ್ಷತಾ ಘೋಷಣೆಯನ್ನು ತೋರಿಸುತ್ತದೆ. ಆದರೆ, ಈ ವೀಡಿಯೋ ಕ್ಲಿಪ್ ಅನ್ನು ಸಂಸ್ಕೃತ ಆಡಿಯೋದೊಂದಿಗೆ ಡಬ್ ಮಾಡಲಾಗಿದೆ. ಆಕಾಶ್ ಏರ್‌ನ ಇನ್-ಫ್ಲೈಟ್ ಘೋಷಣೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಯುತ್ತವೆ. ಆದ್ದರಿಂದ, ಈ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋ ನಕಲಿಯಾಗಿದೆ.
ಹೇಳಿಕೆ:
ಸುಮಾರು ೧ ನಿಮಿಷದ ಅವಧಿಯ ವೀಡಿಯೋ ಕ್ಲಿಪ್ ಅನ್ನು ಎಕ್ಸ್ (ಹಿಂದೆ ಟ್ವಿಟ್ಟರ್), ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ, ಆಕಾಶ್ ಏರ್ ಫ್ಲೈಟ್ ಸಮಯದಲ್ಲಿ ವಿಮಾನದಲ್ಲಿನ ಸುರಕ್ಷತಾ ಘೋಷಣೆಯನ್ನು ಸಂಸ್ಕೃತದಲ್ಲಿ ಮಾಡಲಾಗಿದೆ ಎಂದು ಹಂಚಿಕೊಳ್ಳಲಾಗಿದೆ. ಕ್ಲಿಪ್‌ನ ಒಳಗಿನ ಪಠ್ಯವು ಹೀಗಿದೆ - “ಸಂಸ್ಕೃತದಲ್ಲಿ ವಿಮಾನ ಪ್ರಕಟಣೆ…!!” ಇಂತಹ ಕ್ರಮಗಳಿಂದ ಭಾರತ ಬದಲಾಗುತ್ತಿದೆ ಎಂಬುದನ್ನು ವೀಡಿಯೋದೊಂದಿಗೆ ಹಂಚಿಕೊಂಡಿರುವ ಶೀರ್ಷಿಕೆಗಳು ಸೂಚಿಸುತ್ತವೆ.
ಜೂನ್ ೧೧, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸುವ ಮೂಲಕ, ಅದನ್ನು ಆರಂಭದಲ್ಲಿ ಜೂನ್ ೬, ೨೦೨೪ ರಂದು ‘SanskritSparrow’ ಹೆಸರಿನ ವೆರಿಫೈಡ್ ಇನ್ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಜೂನ್ ೮ ರಂದು ಎಡಿಟ್ ಮಾಡಿದ ಶೀರ್ಷಿಕೆಯು ಹೀಗೆ ಹೇಳುತ್ತದೆ: “ಮೇಲಿನ ವಿಷಯವು ಡಬ್ ಮಾಡಲಾದ ವಾಯ್ಸ್-ಓವರ್ ಆಗಿದೆ. ಈ ಘೋಷಣೆಯನ್ನು ಯಾವುದೇ ಫ್ಲೈಟ್ ಸಮಯದಲ್ಲಿ ಮಾಡಲಾಗಿಲ್ಲ. ಇದು @akasaair ನಿರ್ವಹಣೆಗೆ ಸಂಬಂಧಿಸಿಲ್ಲ." ಇನ್ಸ್ಟಾಗ್ರಾಮ್ ಖಾತೆಯನ್ನು ಸಮಷ್ಟಿ ಗುಬ್ಬಿ ನಿರ್ವಹಿಸುತ್ತಿದ್ದಾರೆ, ಅವರು ನಿಯಮಿತವಾಗಿ ಸಂಸ್ಕೃತದಲ್ಲಿ ಕಂಟೆಂಟ್ ಮತ್ತು ಅನುವಾದಗಳನ್ನು ಹಂಚಿಕೊಳ್ಳುತ್ತಾರೆ.
ಜೂನ್ ೬, ೨೦೨೪ ರಂದು ಇನ್ಸ್ಟಾಗ್ರಾಮ್ ನಲ್ಲಿ ಆಡಿಯೋ-ಡಬ್ ಮಾಡಲಾಗಿದೆ ಎಂದು ಹೇಳಿಕೊಂಡು ಹಂಚಿಕೊಳ್ಳಲಾದ ವೀಡಿಯೋದ ಸ್ಕ್ರೀನ್‌ಶಾಟ್.
ಎಕ್ಸ್ ನಲ್ಲಿ ಅಧಿಕೃತ ಆಕಾಶ್ ಏರ್ ಖಾತೆಯು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಪೋಷ್ಟ್ ಒಂದಕ್ಕೆ ಪ್ರತಿಕ್ರಿಯಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮೂಲ ಪೋಷ್ಟ್ ಅನ್ನು ತೆಗೆದುಹಾಕಲಾಗಿದೆ, ಆದರೆ ಎಕ್ಸ್‌ನಲ್ಲಿ ಏರ್‌ಲೈನ್‌ನ ಸ್ಪಷ್ಟೀಕರಣವು ಹೀಗಿದೆ - “ನಮ್ಮ ವಿಮಾನದಲ್ಲಿನ ಘೋಷಣೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾಡಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ವೀಡಿಯೋದಲ್ಲಿನ ಪ್ರಕಟಣೆಯು ಅಧಿಕೃತವಾಗಿಲ್ಲ ಮತ್ತು ಅದು ಡಬ್ಬಿಂಗ್ ವೀಡಿಯೋದಂತೆ ತೋರುತ್ತಿದೆ. ಆಕಾಶ್ ಏರ್ ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯು SanskritSparrow ನ ರೀಲ್‌ನ ಅಡಿಯಲ್ಲಿ ಅದೇ ಸ್ಪಷ್ಟೀಕರಣವನ್ನು ಹಂಚಿಕೊಂಡಿದೆ.
೨೦೧೮ ರಲ್ಲಿ, ಬಿಸಿನೆಸ್ ಟುಡೇ ಭಾರತೀಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಒಂದು ಸಲಹೆಯನ್ನು ನೀಡಿದ್ದು, ವಿಮಾನಯಾನ ಸಂಸ್ಥೆಗಳು ಕಾರ್ಯಸಾಧ್ಯವಾದ ಮಟ್ಟಿಗೆ ವಿಮಾನದಲ್ಲಿ ಘೋಷಣೆಗಳಿಗಾಗಿ ಸ್ಥಳೀಯ ಭಾಷೆಗಳನ್ನು ಬಳಸುವುದನ್ನು ಪರಿಗಣಿಸಬೇಕು ಎಂದು ಶಿಫಾರಸು ಮಾಡಿದೆ ಎಂದು ವರದಿ ಮಾಡಿದೆ. ಆದರೆ, ಭಾರತದಲ್ಲಿ ಮಾತನಾಡಲು ಬಹಳಷ್ಟು ಭಾಷೆಗಳಿವೆ, ಆದ್ದರಿಂದ ಇದು ಅಪ್ರಾಯೋಗಿಕವಾಗಿದೆ ಎಂದು ಏರ್‌ಲೈನ್ ಅಧಿಕಾರಿಗಳು ವ್ಯಕ್ತಪಡಿಸಿದರು.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಆಕಾಶ್ ಏರ್ ವಿಮಾನದಲ್ಲಿ ಸಂಸ್ಕೃತದಲ್ಲಿ ಯಾವುದೇ ಘೋಷಣೆಗಳನ್ನು ಮಾಡಲಾಗಿಲ್ಲ ಎಂದು ತೋರಿಸುತ್ತದೆ. ಡಬ್ ಮಾಡಿದ ಸಂಸ್ಕೃತ ಆಡಿಯೋದೊಂದಿಗೆ ವೀಡಿಯೋವನ್ನು ಹಂಚಿಕೊಂಡ ವ್ಯಕ್ತಿ ಮತ್ತು ಏರ್‌ಲೈನ್ ಆನ್‌ಲೈನ್‌ನಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಈ ಕ್ಲೈಮ್‌ನೊಂದಿಗೆ ಹಂಚಿಕೊಳ್ಳಲಾದ ವೀಡಿಯೋವನ್ನು ನಾವು ನಕಲಿ ಎಂದು ವರ್ಗೀಕರಿಸುತ್ತೇವೆ.