- Home
- /
- ಸತ್ಯ ಪರಿಶೀಲನೆಗಳು
- /
- ಬಿಜೆಪಿ ನಾಯಕನ ಅಶ್ಲೀಲ...
ಬಿಜೆಪಿ ನಾಯಕನ ಅಶ್ಲೀಲ ಫೋಟೋವನ್ನು ಡಿ.ಕೆ ಶಿವಕುಮಾರ್‌ರದ್ದು ಎಂದು ತಪ್ಪಾಗಿ ಹಂಚಿಕೊಂಡ ಜೆಡಿಎಸ್ ಯುವ ಘಟಕ ಹೆಸರಿನ ಫೇಸ್‌ಬುಕ್ ಪೇಜ್
ರಾಜ್ಯ ಯುವ ಘಟಕ ಜಾತ್ಯಾತೀತ ಜನತಾದಳ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಓರ್ವ ಪುರುಷ ಮತ್ತು ಮಹಿಳೆ ಅರೆನಗ್ನ ಸ್ಥಿತಿಯಲ್ಲಿರುವ ಬ್ಲರ್ ಫೋಟೋವೊಂದನ್ನು ಹಂಚಿಕೊಳ್ಳಲಾಗಿದ್ದು, “ಯಾರಿರಬಹುದು ಕಾಮೆಂಟ್ ಬಾಕ್ಸ್ ನಿಮ್ಮದೇ..! ಸಿಡಿ ಶಿ….ಕುಮಾರನ ಸಂತತಿಗಳೇ ಹು ಶುರು ಮಾಡಿ ನೀವು HD ವಿಡಿಯೋ ರಿಲೀಸ್ ಮಾಡಿ ನಾವು FullHD ರಿಲೀಸ್ ಮಾಡ್ತೀವಿ … ಅಬ್ಬಬಾ ರುಚಿಕರ ಸಂಭಾಷಣೆ..ವಿಡಿಯೋ ತುಂಬಾ ಕಾಸ್ಟ್ಲಿ ಯಾರು ಕೇಳಬೇಡಿ ಅವರು ಬಿಟ್ಟರೆ ನಾವು ಬಿಡೋಣ ಈಗಲೇ ಬಿಟ್ಟರೆ ಏನು ಮಜ…ಬಿಡ್ರೋ ಬಿಡ್ರಿ ನೋಡೋಣ…” ಎಂದು ಬರೆದುಕೊಳ್ಳಲಾಗಿದೆ.
ಫೋಟೋದಲ್ಲಿ ಮಹಿಳೆ ಜೊತೆ ಇರುವ ಪುರುಷ ಡಿಸಿಎಂ ಡಿಕೆ ಶಿವಕುಮಾರ್ ಎಂಬರ್ಥದಲ್ಲಿ ಪೋಸ್ಟ್ ಹಾಕಲಾಗಿದೆ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಫ್ಯಾಕ್ಟ್‌ಚೆಕ್ : ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿರುವ ಫೋಟೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಅದನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಡಿದ್ದೇವೆ. ಈ ವೇಳೆ ನವೆಂಬರ್ 3, 2019ರಂದು democraticaccent.com ಎಂಬ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಟಕಗೊಂಡ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ “ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲ್ ತಾಂಡೇಲ್ ಅವರು ಮಹಿಳೆಯೊಬ್ಬರೊಂದಿಗೆ ಇರುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ” ಎಂದು ಹೇಳಲಾಗಿದೆ.
ನವೆಂಬರ್ 20, 2019ರಂದು ‘ದಿ ವೀಕ್’ ಈ ಕುರಿತು ಪ್ರಕಟಿಸಿದ ಸುದ್ದಿಯಲ್ಲಿ” ಮಹಿಳೆಯೊಂದಿಗೆ ಇರುವ ಫೋಟೋ ವೈರಲ್ ಆದ ಬಳಿಕ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲ್ ತಾಂಡೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ ಎಂದು ಹೇಳಿದೆ.
ಹಾಗಾಗಿ, ಜೆಡಿಎಸ್ ಯುವಘಟಕದ ಹೆಸರಿನಲ್ಲಿರುವ ಫೇಸ್‌ಬುಕ್ ಪೇಜ್ ಪರೋಕ್ಷವಾಗಿ ಹೇಳಿದಂತೆ, ಅವರು ಹಂಚಿಕೊಂಡಿರುವ ಫೋಟೋದಲ್ಲಿರುವ ವ್ಯಕ್ತಿ ಡಿಸಿಎಂ ಡಿ.ಕೆ ಶಿವಕುಮಾರ್ ಅಲ್ಲ. ಬದಲಾಗಿ, ಅದು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲ್ ತಾಂಡೇಲ್ ಆಗಿದ್ದಾರೆ.