Begin typing your search above and press return to search.
    ಸತ್ಯ ಪರಿಶೀಲನೆಗಳು

    ಚಿನ್ನಾಭರಣ ಮಳಿಗೆಯಲ್ಲಿ AC ಸ್ಪೋಟಗೊಂಡ ಘಟನೆಯನ್ನು ಬಾಂಬ್ ಸ್ಫೋಟ ಎಂದು ತಪ್ಪಾಗಿ ಹಂಚಿಕೆ

    IDTU - Karnataka
    3 May 2024 2:01 PM GMT
    ಚಿನ್ನಾಭರಣ ಮಳಿಗೆಯಲ್ಲಿ AC ಸ್ಪೋಟಗೊಂಡ ಘಟನೆಯನ್ನು ಬಾಂಬ್ ಸ್ಫೋಟ ಎಂದು ತಪ್ಪಾಗಿ ಹಂಚಿಕೆ
    x

    “ಕರ್ನಾಟಕದಲ್ಲಿ ಮತ್ತೊಂದು ಭಯಾನಕ ಘಟನೆ, ಬಳ್ಳಾರಿ ಕರ್ನಾಟಕದ ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್ ನಲ್ಲಿ ಸ್ಫೋಟ, ಹಲವರಿಗೆ ಗಾಯ ಕಾಂಗ್ರೆಸ್ ಆಡಳಿತದಲ್ಲಿ ಈ ರಾಜ್ಯವು ಕ್ರಮೇಣ ವಾಸಿಸಲು ಅತ್ಯಂತ ಅಸುರಕ್ಷಿತ ರಾಜ್ಯವಾಗುತ್ತಿದೆ. ಇದು 2014 ರ ಹಿಂದಿನ ಭಾರತದ ವಿಲಕ್ಷಣ ಸ್ಥಿತಿಯನ್ನು ನೆನಪಿಸುತ್ತದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಗಳಲ್ಲಿ ವ್ಯಾಪಕವಾಗಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

    ಈಗ, ಮತ್ತೊಂದು ಬ್ಲಾಸ್ಟ್, ಬಳ್ಳಾರಿಯ ಕಲ್ಯಾಣ್ ಜ್ಯುವೆಲ್ಲರ್ಸ್ ನಲ್ಲಿ ಸ್ಫೋಟ. ಫ್ರೀಬೀಸ್ ಕಾಂಗ್ರೆಸ್ ಕರ್ನಾಟಕಕ್ಕೆ ಸುಸ್ವಾಗತ. ಎಂದು ಪ್ರತಿಪಾದಿಸಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.ಇದೇ ಪೋಸ್ಟ್‌ಅನ್ನು ಹಲವು ಎಕ್ಸ್‌ ಖಾತೆ ಬಳಕೆದಾರರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶಿಲಿಸೋಣ.

    ಫ್ಯಾಕ್ಟ್‌ಚೆಕ್‌

    ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2 ಮೇ 2024ರಂದು ಈಟಿವಿ ಭಾರತ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

    https://www.kannadafactcheck.com/wp-content/uploads/2024/05/AC-Blast-Ballary-300x208.png

    2 ಮೇ 2024ರಂದು ಬಳ್ಳಾರಿ ನಗರದ ತೇರು ಬೀದಿಯಲ್ಲಿರುವ ಕಲ್ಯಾಣ್​ ಜ್ಯುವೆಲರ್ಸ್ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಸಿ ಸ್ಪೋಟಗೊಂಡು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಡಿವೈಎಸ್‌ಪಿ, ಬ್ರೂಸ್‌ಪೇಟೆ ಸರ್ಕಲ್‌ ಇನ್ಸ್​ಪೆಕ್ಟ‌ರ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಂದು ಈಟಿವಿ ಭಾರತ್ ವರದಿ ಮಾಡಿದೆ. ಅವರು ಎಲ್ಲಿಯೂ ಇದು ಉಗ್ರರ ದಾಳಿ ಎಂದು ಉಲ್ಲೇಖಿಸಿಲ್ಲ.

    ಈ ಘಟನೆ ಕುರಿತು ಫ್ರಿ ಪ್ರೆಸ್‌ ಜರ್ನಲ್ ಅವರು ಕೂಡ ಸುದ್ದಿ ಮಾಡಿದ್ದು ವರದಿಯ ಪ್ರಕಾರ, ಕರ್ನಾಟಕದ ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್‌ನಲ್ಲಿ ಏರ್ ಕಂಡೀಷನರ್ ಬ್ಲಾಸ್ಟ್ ಆಗಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸಂಜೆ 6:30ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.” ಎಂದು ತಿಳಿಸಿದ್ದಾರೆ.

    ಮುಂದುವರೆದು ” ಅಗ್ನಿಶಾಮಕ ಸಿಬ್ಬಂದಿ, ನಗರ ಡಿವೈಎಸ್ಪಿ, ಬ್ರೂಸ್‌ಪೇಟೆ ವೃತ್ತ ನಿರೀಕ್ಷಕರು ಮತ್ತು ಅವರ ತಂಡಗಳು ಘಟನಾ ಸ್ಥಳಕ್ಕೆ ತಕ್ಷಣ ಸ್ಪಂದಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಥವಾ ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ.” ಎಂದು ತಿಳಿಸಿದ್ದಾರೆ. ಆದ್ದರಿಂದ ಈ ಘಟನೆ ಆಚಾತುರ್ಯವಾಗಿ ಸಂಭವಿಸದೆಯೇ ಹೊರತು ಉಗ್ರರ ದಾಳಿ ಅಲ್ಲ ಮತ್ತು ಇದಕ್ಕೂ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೂ ಯಾವುದೇ ಸಂಬಂದವಿಲ್ಲ.

    https://www.kannadafactcheck.com/wp-content/uploads/2024/05/AC-blast-300x200.png

    ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೇಫೆಯಲ್ಲಿ ಸ್ಪೋಟ ಸಂಭವಿಸಿ ಅನೇಕರು ಈ ದಾಳಿಯಲ್ಲಿ ಗಾಯಗೊಂಡಿದ್ದರು. ವಿರೋಧ ಪಕ್ಷದವರು ಕಾಂಗ್ರೆಸ್‌ ಸರ್ಕಾರದ ಸಮಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚು ಸಂಭವಿಸುತ್ತವೆ ಎಂದು ಟೀಕಿಸಿದ್ದರು ಮತ್ತು ಇದಕ್ಕೆ ಕಾರಣ ಮುಸ್ಲಿಮರು ಎಂದು ಆರೋಪಿಸಿದ್ದರು. ಅದರಂತೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮುಸ್ಲಿಂ ಯುವಕರನ್ನೆ ಎನ್‌ಐಎ ಬಂಧಿಸಿದೆ.

    ಒಟ್ಟಾರೆಯಾಗಿ ಹೇಳುವುದಾದರೆ, ಯಾವುದೇ ಪೂರ್ವಾಪರ ಮಾಹಿತಿ ಪಡೆಯದೆ ಅಥವಾ ಘಟನೆಯ ಹಿನ್ನಲೆಯನ್ನು ತಿಳಿದುಕೊಳ್ಳದೆ ಈ ರೀತಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗಿದೆ. ಹಾಗೆಯೇ ಕೆಲವು ಕಿಡಿಗೇಡಿಗಳು ಘಟನೆಯನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡು ಕೋಮು ಸಾಮರಸ್ಯ ಹಾಳೂ ಮಾಡುವ ದುರುದ್ದೇಶದಿಂದ ಪೋಸ್ಟ್‌ಅನ್ನು ಹಂಚಿಕೊಂಡಿರುವಂತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

    Claim Review :   Incident of AC explosion in jewelery shop falsely shared as bomb blast
    Claimed By :  X user
    Fact Check :  False
    IDTU - Karnataka

    IDTU - Karnataka