Begin typing your search above and press return to search.
    ಸತ್ಯ ಪರಿಶೀಲನೆಗಳು

    ಸುಕನ್ಯಾ ದೇವಿ ಎಂಬ ಯುವತಿಯ ಅತ್ಯಾಚಾರದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು ಎಂಬುದು ನಿಜವೇ?

    IDTU - Karnataka
    8 May 2024 12:25 PM GMT
    ಸುಕನ್ಯಾ ದೇವಿ ಎಂಬ ಯುವತಿಯ ಅತ್ಯಾಚಾರದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು ಎಂಬುದು ನಿಜವೇ?
    x

    "ಕಾಂಗ್ರೇಸ್ಸಿನ ಯುವರಾಜ ರಾಹುಲ್ ಗಾಂಧಿ 24ವರ್ಷದ ಹೆಣ್ಣುಮಗಳನ್ನು ವಿದೇಶೀ ಪುಂಡರೊಂದಿಗೆ ಸೇರಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದು ನಿಮಗೆ ಗೊತ್ತಾ..? ವಿದೇಶಿ ಪುಂಡರೊಂದಿಗೆ ಸೇರಿ ಅವರದ್ದೇ ಪಕ್ಷದ ಕಾರ್ಯಕರ್ತರ ಮಗಳು ಸುಕನ್ಯಾ ಎಂಬ ಮುಗ್ಧ ಹುಡುಗಿಯನ್ನು ಕುಡಿದು ಸ್ನೇಹಿತರೊಂದಿಗೆ ಅತ್ಯಾಚಾರ ಮಾಡಿ ಅವರ ಕುಟುಂಬವನ್ನೇ ಸರ್ವನಾಶ ಮಾಡಿದ ರಾಹುಲ್ ಗಾಂಧಿಯ ಅತ್ಯಾಚಾರದ ರೋಚಕ ಕಥೆ" ಎಂಬ ಧೀರ್ಘ ಬರಹದೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.

    ಹಿಂದೂ ಸಾಮ್ರಾಟ ಧರ್ಮಸೇನೆ ಎಂಬು ಫೇಸ್‌ಬುಕ್ ಪುಟದಿಂದ ಈ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

    ಇತ್ತೀಚೆಗೆ ರಾಜಕೀಯ ವಲಯದಲ್ಲಿ ಲೈಂಗಿಕ ಹಗರಣಗಳ ಆರೋಪ ಪ್ರತ್ಯಾರೋಪ ಕೇಳಿಬರುತ್ತಿರುವ ಹಿನ್ನಲೆಯಲ್ಲಿ 2006ರಲ್ಲಿ ಸುಕನ್ಯಾ ದೇವಿ ಎಂಬ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

    ಫ್ಯಾಕ್ಟ್‌ಚೆಕ್ :

    ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಪೋಸ್ಟ್‌ ಪ್ರಸಾರವಾಗುತ್ತಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಇದೇ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿರುವುದು ಪತ್ತೆಯಾಗಿದೆ. ಇದನ್ನು ಬಿಜೆಪಿ ಮತ್ತು ಬಲಪಂಥೀಯ ಕಾರ್ಯಕರ್ತರು ಹಂಚಿಕೊಳ್ಳುತ್ತಿದ್ದಾರೆ.

    https://www.kannadafactcheck.com/wp-content/uploads/2024/01/BSY-Suppoerter-292x300.png

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸರ್ಚ್ ಮಾಡಿದಾಗ, ಆದರೆ ಸತ್ಯವೇನೆಂದರೆ 2012ರಲ್ಲಿ ರಾಹುಲ್ ಗಾಂಧಿ ವಿರುದ್ಧದ ಅತ್ಯಾಚಾರ ಆರೋಪವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

    https://ensuddi.com/wp-content/uploads/2024/05/WhatsApp-Image-2024-05-08-at-14.06.04-300x209.jpeg

    2006 ರ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಮತ್ತು ಆ ದಿನ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಲು “ಒಂದು ಸಣ್ಣ ಪುರಾವೆಯೂ ಕಂಡುಬಂದಿಲ್ಲ” ಎಂದು ಹೇಳಿದೆ. ಸುಳ್ಳು ಪ್ರಕರಣ ದಾಖಲಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ (ಎಸ್ಪಿ) ಮಾಜಿ ಶಾಸಕ ಕಿಶೋರ್ ಸಮ್ರಿಟೆ ಅವರಿಗೆ ಸುಪ್ರೀಂ ಕೋರ್ಟ್ ಐದು ಲಕ್ಷ ದಂಡ ವಿಧಿಸಿತ್ತು. ಎಂದು ಅಕ್ಟೋಬರ್ 2012 ರಲ್ಲಿ ‘ಇಂಡಿಯಾ ಟುಡೇ‘ ತನ್ನ ಲೇಖನದಲ್ಲಿ ವರದಿ ಮಾಡಿದೆ.

    ಇನ್ನೂ ಆ ಅತ್ಯಾಚಾರ ಪ್ರಕರಣದಲ್ಲಿ ತನ್ನ ವಿರುದ್ಧ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ರಾಹುಲ್ ಗಾಂಧಿ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ತನ್ನ ಲೇಖನದಲ್ಲಿ ತಿಳಿಸಿತ್ತು. ಆದ್ದರಿಂದ ರಾಹುಲ್ ಗಾಂಧಿಯವರು ಸುಕನ್ಯ ದೇವಿಯವರ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು ಎಂಬುದು ಸುಳ್ಳು.

    ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಾಯಕರಿಗೆ ಭಾರಿ ಮುಜುಗರವನ್ನು ತಂದಿದೆ. ಇದನ್ನು ಮರೆಮಾಚಲು ರಾಹುಲ್ ಗಾಂಧಿಗೆ ಸಂಬಂಧವೇ ಇಲ್ಲದ 2006ರಲ್ಲಿ ಸುಕನ್ಯಾ ದೇವಿ ಎಂಬ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ ಎಂಬ ಸುಳ್ಳು ಬರಹದೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

    ಸುಳ್ಳು : ಕಾಂಗ್ರೇಸ್ಸಿನ ಯುವರಾಜ ರಾಹುಲ್ ಗಾಂಧಿ 24ವರ್ಷದ ಹೆಣ್ಣುಮಗಳನ್ನು ವಿದೇಶೀ ಪುಂಡರೊಂದಿಗೆ ಸೇರಿ 200ರಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು.

    ಸತ್ಯ : 2006 ರ ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಮತ್ತು ಆ ದಿನ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಲು “ಒಂದು ಸಣ್ಣ ಪುರಾವೆಯೂ ಕಂಡುಬಂದಿಲ್ಲ” ಎಂದು ಹೇಳಿದೆ. ಸುಳ್ಳು ಪ್ರಕರಣ ದಾಖಲಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ (ಎಸ್ಪಿ) ಮಾಜಿ ಶಾಸಕ ಕಿಶೋರ್ ಸಮ್ರಿಟೆ ಅವರಿಗೆ ಸುಪ್ರೀಂ ಕೋರ್ಟ್ ಐದು ಲಕ್ಷ ದಂಡ ವಿಧಿಸಿತ್ತು.

    ಪೋಸ್ಟ್‌ : ಫೇಸ್‌ಬುಕ್

    ಆಧಾರ : ಇಂಡಿಯಾ ಟುಡೇ. ಟೈಮ್ಸ್‌ ಆಫ್ ಇಂಡಿಯಾ


    Claim Review :   Is it true that Rahul Gandhi was involved in the rape of Sukanya Devi
    Claimed By :  Facebook User
    Fact Check :  Fake
    IDTU - Karnataka

    IDTU - Karnataka