- Home
- /
- ಸತ್ಯ ಪರಿಶೀಲನೆಗಳು
- /
- ಕರ್ನಾಟಕದ ಪೊಲೀಸರು...
ಕರ್ನಾಟಕದ ಪೊಲೀಸರು ಮಹಿಳೆಯರಿಗಾಗಿ ಯಾವುದೇ ಉಚಿತ ರಾತ್ರಿ ಪ್ರಯಾಣ ಸೇವೆಗಳನ್ನು ಪ್ರಾರಂಭಿಸಿಲ್ಲ
ಸಾರಾಂಶ:
ಕರ್ನಾಟಕ ರಾಜ್ಯ ಪೊಲೀಸರು ಮಹಿಳೆಯರಿಗಾಗಿ ಉಚಿತ ರಾತ್ರಿ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂಬ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಅಧಿಕೃತ ಮೂಲಗಳು ಅಂತಹ ಕಾರ್ಯಕ್ರಮದ ಅಸ್ತಿತ್ವವನ್ನು ನಿರಾಕರಿಸಿವೆ. ಹೇಳಿಕೆ ತಪ್ಪುದಾರಿಗೆಳೆಯುವ ಚಿತ್ರವನ್ನು ಆಧರಿಸಿದೆ ಮತ್ತು ಅದು ತಪ್ಪಾಗಿದೆ.
ಹೇಳಿಕೆ:
ರಾತ್ರಿ ೧೦ ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯ ಪೊಲೀಸರಿಂದ ಮನೆಗೆ ಉಚಿತ ಸವಾರಿ ಪಡೆಯಲು ವಿನಂತಿಸಲು ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (೧೦೯೧ ಮತ್ತು ೭೮೩೭೦೧೮೫೫೫) ಸಂಪರ್ಕಿಸಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಈ ಮಾಹಿತಿಯನ್ನು ವ್ಯಾಪಕವಾಗಿ ಹಂಚಿಕೊಳ್ಳಲು ಕೂಡ ಪ್ರೋತ್ಸಾಹಿಸಲಾಗಿದೆ. ಫೇಸ್‌ಬುಕ್ ಬಳಕೆದಾರರು ಈ ಸಂದೇಶವನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು "ಪ್ರಮುಖ ಸುದ್ದಿ" ಎಂದು ಗುರುತಿಸಿದ್ದಾರೆ.
ಹೇಳಿಕೆಯು ನಿರ್ದಿಷ್ಟವಾಗಿ ಕರ್ನಾಟಕ ರಾಜ್ಯ ಪೊಲೀಸರ ಆಪಾದಿತ ಒಳಗೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ, ಮತ್ತು ಕೆಲವು ಪೋಸ್ಟ್ ಗಳು ಈ ಸೇವೆಯು "ಭಾರತದಾದ್ಯಂತ" ಲಭ್ಯವಿದೆ ಎಂದು ಪ್ರತಿಪಾದಿಸುತ್ತವೆ. ಮಹಿಳೆಯರು ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ಕಳುಹಿಸಬಹುದು, ನಂತರ ಅವರು ಅವರನ್ನು ಪತ್ತೆ ಹಚ್ಚಿ ಸಹಾಯ ಮಾಡುತ್ತಾರೆ ಎಂದು ಈ ಪೋಷ್ಟ್ ಗಳು ಸೂಚಿಸುತ್ತವೆ.
ಆಗಸ್ಟ್ ೨೨, ೨೦೨೪ ರಂದು ಹೇಳಿಕೆಯನ್ನು ಹಂಚಿಕೊಳ್ಳುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ಹೇಳಿಕೆಗೆ ಸಂಬಂಧಿತ ಪದಗಳೊಂದಿಗೆ ಕೀವರ್ಡ್ ಸರ್ಚ್ ನಡೆಸಿದ್ದೇವೆ ಮತ್ತು ಕರ್ನಾಟಕದಲ್ಲಿ ಅಂತಹ ಉಪಕ್ರಮದ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ನಾವು ನಂತರ ವೈರಲ್ ಪೋಷ್ಟ್ ಗಳಲ್ಲಿ ಉಲ್ಲೇಖಿಸಲಾದ ಸಹಾಯವಾಣಿ ಸಂಖ್ಯೆ ೭೮೩೭೦೧೮೫೫೫ ಮೂಲವನ್ನು ಸಂಶೋಧಿಸಿದೆವು. ಇದು ಡಿಸೆಂಬರ್ ೧, ೨೦೧೯ ರ ಹಿಂದೂಸ್ತಾನ್ ಟೈಮ್ಸ್ ವರದಿಗೆ ನಮ್ಮನ್ನು ಕರೆದೊಯ್ಯಿತು. ವರದಿಯ ಪ್ರಕಾರ, ಪಂಜಾಬ್‌ನ ಲುಧಿಯಾನ ಪೊಲೀಸರು ಈ ಸಂಖ್ಯೆಯನ್ನು ಬಳಸುವ ಮಹಿಳೆಯರಿಗೆ ಉಚಿತ ರಾತ್ರಿ "ಪಿಕ್ ಮತ್ತು ಡ್ರಾಪ್" ಸೇವೆಯನ್ನು ಪ್ರಾರಂಭಿಸಿದ್ದರು. ಪ್ರಸ್ತುತ ಹೇಳಿಕೆಯಲ್ಲಿ ಈ ಹಳೆಯ ಮತ್ತು ಸ್ಥಳೀಯ ಉಪಕ್ರಮದ ಮಾಹಿತಿಯನ್ನು ಕರ್ನಾಟಕಕ್ಕೆ ಸಂಬಂಧಿಸಿ ದುರ್ಬಳಕೆ ಮಾಡಿರಬಹುದು ಎಂದು ಇದು ಸೂಚಿಸುತ್ತದೆ.
ಹೆಚ್ಚಿನ ತನಿಖೆಯು ಡಿಸೆಂಬರ್ ೫, ೨೦೧೯ ರ ಟೈಮ್ಸ್ ಆಫ್ ಇಂಡಿಯಾ ವರದಿಗೆ ನಮ್ಮನ್ನು ಕರೆದೊಯ್ಯಿತು. ಇದು ಲುಧಿಯಾನ ಪೊಲೀಸ್ ಸಹಾಯವಾಣಿ ಸಂಖ್ಯೆಗಳು ವೈರಲ್ ಆಗಿವೆ ಎಂದು ಗಮನಿಸಿದೆ, ಇದರ ಪರಿಣಾಮವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕೇರಳದಿಂದ ಕರೆಗಳು ಬಂದವು. ಇದು ಮೂಲ ಸಂದರ್ಭವನ್ನು ಮೀರಿ ಹರಡುತ್ತಿರುವ ಇಂತಹ ಹೇಳಿಕೆಗಳ ಇತಿಹಾಸವನ್ನು ಸೂಚಿಸುತ್ತದೆ.
ಡಿಸೆಂಬರ್ ೧, ೨೦೧೯ ರಂದು ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಸ್ಕ್ರೀನ್‌ಶಾಟ್.
ಆಗಸ್ಟ್ ೨೨, ೨೦೨೪ ರಂದು ಕರ್ನಾಟಕ ರಾಜ್ಯ ಪೊಲೀಸರು ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಇದು ತಪ್ಪು ಮಾಹಿತಿಯೆಂದು ಅಧಿಕೃತವಾಗಿ ತಿಳಿಸಿದ್ದಾರೆ. ಪೋಷ್ಟ್ ನಲ್ಲಿ "ಗಮನಿಸಿ !! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಈ ಮಾಹಿತಿಯು ಸುಳ್ಳಾಗಿದೆ. ತುರ್ತು ಸಹಾಯಕ್ಕಾಗಿ 112 ಗೆ ಕರೆಮಾಡಿ" ಎಂದು ಹೇಳಲಾಗಿದೆ. ಈ ಎಕ್ಸ್ ಪೋಷ್ಟ್ ಮಾಹಿತಿಯನ್ನು "ಫೇಕ್" (ನಕಲಿ) ಎಂದು ಸ್ಪಷ್ಟವಾಗಿ ಲೇಬಲ್ ಮಾಡುವ ಚಿತ್ರವನ್ನು ಒಳಗೊಂಡಿದೆ ಮತ್ತು ತುರ್ತು ಸಂದರ್ಭಗಳಲ್ಲಿ ೧೧೨ ಗೆ ಕರೆ ಮಾಡಲು ಜನರಿಗೆ ಸಲಹೆ ನೀಡುತ್ತದೆ.
ಆಗಸ್ಟ್ ೨೨, ೨೦೨೪ ರಂದು ಹಂಚಿಕೊಳ್ಳಲಾದ ಕರ್ನಾಟಕ ರಾಜ್ಯ ಪೊಲೀಸ್ ನ ಅಧಿಕೃತ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ನಾವು ಇತರ ರಾಜ್ಯ ಪೊಲೀಸ್ ಇಲಾಖೆಗಳ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಪರಿಶೀಲಿಸಿದ್ದೇವೆ. ಹಾಗು ಹೇಳಿಕೆಯ ಕೆಲವು ಮಾರ್ಪಾಡುಗಳು ಸೂಚಿಸಿದಂತೆ ಈ ರೀತಿಯ ರಾಷ್ಟ್ರವ್ಯಾಪಿ ಯೋಜನೆಯ ಬಗ್ಗೆ ಯಾವುದೇ ದೃಢೀಕರಿಸುವ ಮಾಹಿತಿ ಕಂಡುಬರಲಿಲ್ಲ. ೧೦೯೧ ಭಾರತದಲ್ಲಿ ಮಾನ್ಯವಾದ ಮಹಿಳಾ ಸಹಾಯವಾಣಿ ಸಂಖ್ಯೆಯಾಗಿದ್ದರೂ, ಇದು ಕರ್ನಾಟಕ ಪೊಲೀಸ್ ಅಥವಾ ಇತರ ರಾಜ್ಯ ಪೊಲೀಸ್ ಇಲಾಖೆಗಳಿಗಾಗಲಿ ಮತ್ತು ಯಾವುದೇ ಉಚಿತ ಪ್ರಯಾಣ ಸೇವೆಯೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.
ಪುರಾವೆ:
ಈ ಹೇಳಿಕೆಯ ವಿಶ್ಲೇಷಣೆಯು ಕರ್ನಾಟಕ ರಾಜ್ಯ ಪೊಲೀಸ್ ಮಹಿಳೆಯರಿಗೆ ಉಚಿತ ರಾತ್ರಿ ಸವಾರಿ ಸೇವೆಯನ್ನು ಪ್ರಾರಂಭಿಸಿಲ್ಲ ಎಂದು ತಿಳಿಸುತ್ತದೆ. ಇದನ್ನು ಪೊಲೀಸರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದೇ ರೀತಿಯ ಸೇವೆಗಳು ರಾಷ್ಟ್ರವ್ಯಾಪಿ ಲಭ್ಯವಿರುತ್ತವೆ ಎಂಬ ಹೇಳಿಕೆಗಳು ಸಹ ತಪ್ಪು.