- Home
- /
- ಸತ್ಯ ಪರಿಶೀಲನೆಗಳು
- /
- ಇಲ್ಲ, ಭಾರತದ ಮಾಜಿ...
ಇಲ್ಲ, ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿಲ್ಲ
ಸಾರಾಂಶ:
ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮತ್ತು ಅವರ ಕುಟುಂಬವು ಕಾಶಿಯ ಆರ್ಯ ಸಮಾಜ ದೇವಸ್ಥಾನದಲ್ಲಿ "ಸನಾತನ ಧರ್ಮ" ವನ್ನು ಸ್ವೀಕರಿಸಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ, ಈ ನಿರೂಪಣೆಯಲ್ಲಿ ಒಳಗೊಂಡಿರುವ ವ್ಯಕ್ತಿ ಪ್ರಸಿದ್ಧ ಕ್ರಿಕೆಟಿಗನಲ್ಲ, ಬದಲಿಗೆ ಉತ್ತರ ಪ್ರದೇಶದ ಚಂದೌಲಿಯ ಒಬ್ಬ ನಿವಾಸಿ ಎಂದು ತಿಳಿದುಬಂದಿದೆ. ಆದ್ದರಿಂದ, ಈ ಹೇಳಿಕೆ ತಪ್ಪು.
ಹೇಳಿಕೆ:
ಮೊಹಮ್ಮದ್ ಅಜರುದ್ದೀನ್ ಅವರ ಧಾರ್ಮಿಕ ಮತಾಂತರದ ಹೇಳಿಕೆಯನ್ನು ಹಲವಾರು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಪ್ರಸಾರ ಮಾಡುತ್ತಿವೆ. ೧.೯ ಲಕ್ಷ ಅನುಯಾಯಿಗಳನ್ನು ಹೊಂದಿರುವ ಇನ್ಸ್ಟಾಗ್ರಾಮ್ ಖಾತೆ @kesari_brigade ಜುಲೈ ೩, ೨೦೨೪ ರಂದು ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಅದು ೧೫ ಸಾವಿರಕ್ಕೂ ಹೆಚ್ಚು ಇಷ್ಟಗಳನ್ನು ಗಳಿಸಿದೆ. ಪೋಷ್ಟ್ ನ ಕನ್ನಡ ಶೀರ್ಷಿಕೆಯು ಹೀಗೆ ಹೇಳುತ್ತದೆ - "ಮೊಹಮ್ಮದ್ ಅಜರುದ್ದೀನ್ ತನ್ನ ಹೆಂಡತಿ ಮತ್ತು ಮಗನೊಂದಿಗೆ ಮುಸ್ಲಿಂ ಧರ್ಮವನ್ನು ತೊರೆದು ಕಾಶಿಯ ಆರ್ಯ ಸಮಾಜ ದೇವಾಲಯದಲ್ಲಿ ಸನಾತನ ಧರ್ಮವನ್ನು ಸ್ವೀಕರಿಸಿದರು..!" ವಿವಿಧ ಭಾಷೆಗಳಲ್ಲಿ ಫೇಸ್‌ಬುಕ್, ತ್ರೆಡ್ಸ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಇದೇ ರೀತಿಯ ಪೋಷ್ಟ್ ಗಳು ಅದೇ ರೀತಿಯ ನಿರೂಪಣೆ ಮತ್ತು ಚಿತ್ರಗಳನ್ನು ಹಂಚಿಕೊಂಡಿವೆ.
ಜುಲೈ ೩, ೨೦೨೪ ರಂದು ವೈರಲ್ ಹೇಳಿಕೆಯನ್ನು ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಮೊಹಮ್ಮದ್ ಅಜರುದ್ದೀನ್ ಮತ್ತು ಧಾರ್ಮಿಕ ಮತಾಂತರಗಳನ್ನು ಸಂಬಂಧಿಸಿದ ಕೀವರ್ಡ್ ಸರ್ಚ್ ಮತ್ತು ಸುದ್ದಿಗಳನ್ನು ಹುಡುಕುತ್ತಾ ನಮ್ಮ ತನಿಖೆ ಪ್ರಾರಂಭವಾಯಿತು. ಈ ಹುಡುಕಾಟವು ಜುಲೈ ೧, ೨೦೨೪ ರ ದಿನಾಂಕದ ಎಬಿಪಿ ನ್ಯೂಸ್ ವರದಿಗೆ ನಮ್ಮನ್ನು ಕರೆದೊಯ್ಯಿತು. ಅದರ ಶೀರ್ಷಿಕೆ ಹೀಗಿದೆ - "ಯುಪಿ ನ್ಯೂಸ್: 'ಮೊಹಮ್ಮದ್ ಅಜರುದ್ದೀನ್' ತನ್ನ ಹೆಂಡತಿ ಮತ್ತು ಮಗನೊಂದಿಗೆ ಕಾಶಿಯಲ್ಲಿ ಇಸ್ಲಾಂ ಧರ್ಮವನ್ನು ತೊರೆದರು, ಈ ಕಾರಣವನ್ನು ನೀಡಿದರು" (ಅನುವಾದಿಸಲಾಗಿದೆ). ಈ ಮೊಹಮ್ಮದ್ ಅಜರುದ್ದೀನ್ ಉತ್ತರ ಪ್ರದೇಶದ ಚಂದೌಲಿಯ ನಿವಾಸಿ ಎಂಬ ಸ್ಪಷ್ಟತೆಯನ್ನು ಈ ವರದಿ ಒದಗಿಸಿದೆ.
ಜುಲೈ ೧, ೨೦೨೪ ರ ಎಬಿಪಿ ನ್ಯೂಸ್ ವರದಿಯ ಸ್ಕ್ರೀನ್‌ಶಾಟ್.
ಹೆಚ್ಚಿನ ಸಂಶೋಧನೆಯು ಅಮರ್ ಉಜಾಲಾ ಜಾಲತಾಣದಲ್ಲಿ ಇದೇ ರೀತಿಯ ವಿವರಗಳನ್ನು ನೀಡುವ ವರದಿಯನ್ನು ಬಹಿರಂಗಪಡಿಸಿದೆ. ಹೇಳಿಕೆಯಲ್ಲಿನ ದೃಶ್ಯ ಅಂಶಗಳನ್ನು ಪರಿಶೀಲಿಸಲು, ವೈರಲ್ ಪೋಷ್ಟ್ ಗಳಲ್ಲಿ ಬಳಸಲಾದ ಚಿತ್ರಗಳ ಮೇಲೆ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಚಿತ್ರಗಳು ಚಂದೌಲಿ ನಿವಾಸಿ ಮೊಹಮ್ಮದ್ ಅಜರುದ್ದೀನ್ ಅವರನ್ನು ಬಿಂಬಿಸುತ್ತವೆ, ಮಾಜಿ ಕ್ರಿಕೆಟಿಗನಲ್ಲ ಎಂದು ಫಲಿತಾಂಶಗಳು ದೃಢಪಡಿಸಿವೆ. ಮುಖ್ಯವಾಗಿ, ನಮ್ಮ ಹುಡುಕಾಟವು ಯಾವುದೇ ಧಾರ್ಮಿಕ ಮತಾಂತರದ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅಥವಾ ಅವರ ಪ್ರತಿನಿಧಿಗಳಿಂದ ಯಾವುದೇ ಹೇಳಿಕೆಗಳನ್ನು ನೀಡಲಿಲ್ಲ.
ತೀರ್ಪು:
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹೇಳಿಕೆ ತಪ್ಪು. ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ವ್ಯಕ್ತಿ ಚಂದೌಲಿಯ ನಿವಾಸಿ, ಮಾಜಿ ಭಾರತೀಯ ಕ್ರಿಕೆಟಿಗನಲ್ಲ.