- Home
- /
- ಸತ್ಯ ಪರಿಶೀಲನೆಗಳು
- /
- ವಿದೇಶಿ ಪ್ರಯಾಣಕ್ಕಾಗಿ...
ವಿದೇಶಿ ಪ್ರಯಾಣಕ್ಕಾಗಿ ಎಲ್ಲಾ ಭಾರತೀಯ ನಾಗರಿಕರು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಹೊಂದುವ ಅಗತ್ಯವಿಲ್ಲ
ಸಾರಾಂಶ:
ಅಕ್ಟೋಬರ್ ೧, ೨೦೨೪ ರಿಂದ ವಿದೇಶಕ್ಕೆ ಪ್ರಯಾಣಿಸುವ ಮೊದಲು ಎಲ್ಲಾ ಭಾರತೀಯ ನಾಗರಿಕರು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ಐಟಿಸಿಸಿ) ಪಡೆಯಬೇಕು ಎಂಬ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಐಟಿಸಿಸಿ ಅಗತ್ಯವಿದೆ, ಪ್ರತಿ ಪ್ರಯಾಣಿಕರಲ್ಲ, ಎಂದು ಸ್ಪಷ್ಟಪಡಿಸಿದೆ. ಇದು ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
೨೦೨೪ ರ ಯೂನಿಯನ್ ಬಜೆಟ್ ಎಲ್ಲಾ ಭಾರತೀಯ ನಾಗರಿಕರು ದೇಶವನ್ನು ತೊರೆಯುವ ಮೊದಲು ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ (ಐಟಿಸಿಸಿ) ವನ್ನು ಪಡೆಯುವುದನ್ನು ಕಡ್ಡಾಯಗೊಳಿಸಿದೆ ಎಂದು ಹೇಳುವ ಪೋಷ್ಟ್ ಗಳನ್ನು ಫೇಸ್‌ಬುಕ್ ಬಳಕೆದಾರರು ಹಂಚಿಕೊಂಡಿದ್ದಾರೆ.
ವಿದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ಐಟಿಸಿಸಿ ಪಡೆಯಲು ಹೊಸ ಅವಶ್ಯಕತೆಗಳಿವೆ ಎಂದು ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಗಳ ಒಂದು ಸರಣಿಯಲ್ಲಿ ವಿವರಿಸಲಾಗಿದೆ. ಅಕ್ಟೋಬರ್ ೧, ೨೦೨೪ ರಿಂದ ಎಲ್ಲಾ ಭಾರತೀಯ ನಾಗರಿಕರು ಯಾವುದೇ ಉದ್ದೇಶಕ್ಕಾಗಿ ದೇಶವನ್ನು ತೊರೆಯುವ ಮೊದಲು ಐಟಿಸಿಸಿಯನ್ನು ಪಡೆಯಬೇಕು ಎಂದು ಪೋಷ್ಟ್ ಗಳಲ್ಲಿ ಹೇಳಿಕೊಳ್ಳಲಾಗಿದೆ. ಎಕ್ಸ್ ಬಳಕೆದಾರರು ಆಪಾದಿತ ಅಪ್ಲಿಕೇಶನ್ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಅನುಸರಣೆಗೆ ಸಂಭವನೀಯ ದಂಡಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ. ಪೋಷ್ಟ್ ಅನ್ನು ಆಗಸ್ಟ್ ೨೨, ೨೦೨೪ ರಂದು ಹಂಚಿಕೊಳ್ಳಲಾಗಿದೆ ಮತ್ತು ಅದು ೨೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದೇ ರೀತಿಯ ಹೇಳಿಕೆಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿವೆ.
ಆಗಸ್ಟ್ ೨೨, ೨೦೨೪ ರಂದು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ಆಗಸ್ಟ್ ೨೦, ೨೦೨೪ ರಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಪರಿಶೀಲಿಸಿದ್ದೇವೆ. ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ಭಾರತೀಯ ನಾಗರಿಕರಿಗೆ ಐಟಿಸಿಸಿಯನ್ನು ಪಡೆಯುವುದು ಕಡ್ಡಾಯವಲ್ಲ ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ. ಆದಾಯ ತೆರಿಗೆ ಕಾಯಿದೆ, ೧೯೬೧ ರ ಸೆಕ್ಷನ್ ೨೩೦ ರ ಅಡಿಯಲ್ಲಿ, ನಿರ್ದಿಷ್ಟ ಪ್ರಕರಣಗಳಲ್ಲಿ, ಒಬ್ಬ ವ್ಯಕ್ತಿಯು ಗಂಭೀರ ಹಣಕಾಸಿನ ಅಕ್ರಮಗಳಲ್ಲಿ ತೊಡಗಿಸಿಕೊಂಡಿರುವಾಗ ಮತ್ತು ಅವರು ತನಿಖೆಗೆ ಅಗತ್ಯವಿರುವಾಗ ಅಥವಾ ವ್ಯಕ್ತಿಯು ಯಾವುದೇ ಪ್ರಾಧಿಕಾರದಿಂದ ತಡೆಹಿಡಿಯದ ರೂ.೧೦ ಲಕ್ಷಕ್ಕಿಂತ ಹೆಚ್ಚಿನ ನೇರ ತೆರಿಗೆ ಬಾಕಿ ಇರುವ ಸಂದರ್ಭದಲ್ಲಿ ಮಾತ್ರ ಐಟಿಸಿಸಿ ಅಗತ್ಯವಿದೆ ಎಂದು ಪತ್ರಿಕಾ ಪ್ರಕಟಣೆ ವಿವರಿಸುತ್ತದೆ.
ಆಗಸ್ಟ್ ೨೦, ೨೦೨೪ ರ ಸಿಬಿಡಿಟಿ ಪತ್ರಿಕಾ ಪ್ರಕಟಣೆಯ ಸ್ಕ್ರೀನ್‌ಶಾಟ್.
ಜುಲೈ ೨೮, ೨೦೨೪ ರಂದು, ಸಿಬಿಡಿಟಿಯ ಪತ್ರಿಕಾ ಪ್ರಕಟಣೆಯ ಮೊದಲು, ಹಣಕಾಸು ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ದಿ ಹಿಂದೂ ಹೀಗೆಂದು ವರದಿ ಮಾಡಿದೆ - "ಉದ್ದೇಶಿತ ತಿದ್ದುಪಡಿಯು ಎಲ್ಲಾ ನಿವಾಸಿಗಳು ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಲು ಅಗತ್ಯವಾಗಿಸಿಲ್ಲ." ಬಿಸಿನೆಸ್ ಸ್ಟ್ಯಾಂಡರ್ಡ್ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಭಾರತೀಯ ಪ್ರಯಾಣಿಕರಿಗೆ ತೆರಿಗೆ ಕ್ಲಿಯರೆನ್ಸ್ ಅಗತ್ಯತೆಗಳ ಬಗ್ಗೆ ಇದೇ ರೀತಿ ವರದಿ ಮಾಡಿದೆ. ತೆರಿಗೆ ಕಾನೂನುಗಳಿಗೆ ಇತ್ತೀಚಿನ ತಿದ್ದುಪಡಿಗಳು ಭಾರತೀಯ ನಾಗರಿಕರಿಗೆ ಅಂತರರಾಷ್ಟ್ರೀಯ ಪ್ರಯಾಣದ ಮೇಲೆ ಯಾವುದೇ ಹೊಸ ನಿರ್ಬಂಧಗಳನ್ನು ಪರಿಚಯಿಸಿಲ್ಲ ಎಂದು ಇದು ಸೂಚಿಸುತ್ತದೆ.
ಜುಲೈ ೨೮, ೨೦೨೪ ರಂದು ಪ್ರಕಟವಾದ ದಿ ಹಿಂದೂ ವರದಿಯ ಸ್ಕ್ರೀನ್‌ಶಾಟ್.
ತೀರ್ಪು:
ವೈರಲ್ ಹೇಳಿಕೆಯ ವಿಶ್ಲೇಷಣೆಯು ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ಭಾರತೀಯರಿಗೆ ಐಟಿಸಿಸಿಗಳು ಕಡ್ಡಾಯವಲ್ಲ ಎಂದು ಬಹಿರಂಗಪಡಿಸಿದೆ. ಹಣಕಾಸಿನ ಅಕ್ರಮಗಳು ಅಥವಾ ಗಣನೀಯ ತೆರಿಗೆ ಬಾಕಿಗಳನ್ನು ಒಳಗೊಂಡಿರುವ ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ಐಟಿಸಿಸಿಗಳು ಅಗತ್ಯವಿದೆ ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.