- Home
- /
- ಸತ್ಯ ಪರಿಶೀಲನೆಗಳು
- /
- ತೆಲಂಗಾಣದಲ್ಲಿ ರಿಯಾಯಿತಿ...
ತೆಲಂಗಾಣದಲ್ಲಿ ರಿಯಾಯಿತಿ ಕುರಿತ ಫ್ಲೆಕ್ಸ್ ಬೋರ್ಡ್‌ನ ಹಳೆಯ ಚಿತ್ರವನ್ನು ಕರ್ನಾಟಕದೆಂದು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ
ಸಾರಾಂಶ:
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ರಂಜಾನ್ ಹಬ್ಬದ ರಿಯಾಯಿತಿ ಫ್ಲೆಕ್ಸ್ ಬೋರ್ಡ್ "ಲವ್ ಜಿಹಾದ್" ಅನ್ನು ಉತ್ತೇಜಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ, ಚಿತ್ರವು ತೆಲಂಗಾಣದಲ್ಲಿ ೨೦೧೯ ರದು, ಅಲ್ಲಿ ಮಾಲ್‌ನವರು ರಂಜಾನ್ ರಿಯಾಯಿತಿಯನ್ನು ಜಾಹೀರಾತು ಮಾಡುವ ಮೂಲಕ ಫ್ಲೆಕ್ಸ್ ಬೋರ್ಡ್ ಅನ್ನು ಹಾಕಿದ್ದರು. ಹಾಗಾಗಿ ಈ ಚಿತ್ರ ಕರ್ನಾಟಕದದ್ದು ಎಂಬ ಹೇಳಿಕೆ ತಪ್ಪು.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಮುಸ್ಲಿಮರ ಟೋಪಿ ಧರಿಸಿರುವ ಪುರುಷ ಮತ್ತು ಸೀರೆ ಧರಿಸಿರುವ ಮಹಿಳೆಯನ್ನು ತೋರಿಸುವ ರಿಯಾಯಿತಿ ಕುರಿತ ಫ್ಲೆಕ್ಸ್ ಬೋರ್ಡ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ಪಠ್ಯ ತೆಲುಗು ಭಾಷೆಯಲ್ಲಿ ಹೀಗೆಂದು ಹೇಳುತ್ತದೆ, "ರಂಜಾನ್ ರಿಯಾಯಿತಿ: ೧೦-೫೦% ರಿಯಾಯಿತಿ" ( ಅನುವಾದಿಸಲಾಗಿದೆ). ಆಫರ್ ಲಭ್ಯವಿರುವ ವಿಳಾಸಗಳೊಂದಿಗೆ ಇದು "ಸಿಎಂಆರ್ ಶಾಪಿಂಗ್ ಮಾಲ್" ಎಂಬ ಹೆಸರನ್ನು ದೊಡ್ಡ ಪಠ್ಯದಲ್ಲಿ ತೋರಿಸುತ್ತದೆ ಮತ್ತು #Karnataka ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಚಿತ್ರದಲ್ಲಿ ಕೆಳಭಾಗದಲ್ಲಿ ಪಠ್ಯವನ್ನು ಹೊಂದಿದೆ ಮತ್ತು ಮುಸ್ಲಿಮರು ಹಿಂದೂ ಮಹಿಳೆಯೊಂದಿಗೆ ಬಂದರೆ ೧೦% ರಿಂದ ೫೦% ರಷ್ಟು ರಿಯಾಯಿತಿಯನ್ನು ಸ್ವೀಕರಿಸಬಹುದು ಎಂದು ಹೇಳುತ್ತದೆ. ಕೋಮು ಶೀರ್ಷಿಕೆಗಳನ್ನು ವೈರಲ್ ಚಿತ್ರವನ್ನು ಹಂಚಿಕೊಳ್ಳಲು ಬಳಸಲಾಗಿದೆ. ಕರ್ನಾಟಕದ ಜನರು ಅದರ “ಪ್ರಚಾರ” ದ ಆಧಾರದ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಮತ ಹಾಕಿದ್ದಾರೆ ಎಂದು ಹೇಳಿಕೊಳ್ಳಲಾಗಿದೆ.
ಅಕ್ಟೋಬರ್ ೧, ೨೦೨೪ ರಂದು ವೈರಲ್ ಚಿತ್ರವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ಚಿತ್ರವನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಜೂನ್ ೨೦೧೯ ರಿಂದ ಎಕ್ಸ್ ಬಳಕೆದಾರರೊಬ್ಬರು ಇದೇ ರೀತಿಯ ಪೋಷ್ಟ್ ಅನ್ನು ಹಂಚಿಕೊಂಡಿರುವುದನ್ನು ಕಂಡುಹಿಡಿದಿದ್ದೇವೆ. ಇದು ವೈರಲ್ ಪೋಷ್ಟ್ ನಲ್ಲಿ ನೋಡಿದಂತೆ ಕೆಳಭಾಗದಲ್ಲಿರುವ ಪಠ್ಯವನ್ನು ಹೊರತುಪಡಿಸಿ ಫ್ಲೆಕ್ಸ್ ಬೋರ್ಡ್‌ನ ಅದೇ ಚಿತ್ರವನ್ನು ಒಳಗೊಂಡಿದೆ. ಅದರ ಶೀರ್ಷಿಕೆಯು ಹೀಗಿದೆ, “ಈ ಹೋರ್ಡಿಂಗ್ ನಿಖರವಾಗಿ ಏನನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದೆ? #LoveJihad? ಅಂತಹ ‘ಅಂತರ್-ಧರ್ಮ’ ಪ್ರದರ್ಶನದಲ್ಲಿ ಪುರುಷ ಯಾವಾಗಲೂ ಮುಸ್ಲಿಂ ಮತ್ತು ಮಹಿಳೆ ಯಾವಾಗಲೂ ಹಿಂದೂ ಏಕೆ? ಇದಕ್ಕೆ ವಿರುದ್ಧವಾಗಿ ಏಕೆ ಮಾಡಬಾರದು?” ಚಿತ್ರವು ಇತ್ತೀಚಿನದಲ್ಲ ಮತ್ತು ಕನಿಷ್ಠ ೨೦೧೯ ರಿಂದ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದೆ ಎಂದು ಇದು ಸಾಬೀತುಪಡಿಸುತ್ತದೆ.
ಹೆಚ್ಚಿನ ಸಂಶೋಧನೆಯು ಜೂನ್ ೩, ೨೦೧೯ ರಿಂದ ಎಟಿಕೆ ನ್ಯೂಸ್‌ನ ಫೇಸ್‌ಬುಕ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಇದು ಅದೇ ಚಿತ್ರವನ್ನು ಹಂಚಿಕೊಳ್ಳುತ್ತದೆ ಮತ್ತು ಶೀರ್ಷಿಕೆಯ ಭಾಗವು ಹೀಗೆ ಹೇಳುತ್ತದೆ, "ಆರ್‌ಎಸ್‌ಎಸ್ ಮತ್ತು ಬಿಜೆಪಿ ಶಾಸಕ ರಾಜಾ ಸಿಂಗ್ ಸಿಎಂಆರ್ ಶಾಪಿಂಗ್ ಮಾಲ್ ನ ರಂಜಾನ್ ಜಾಹೀರಾತನ್ನು ಕುರಿತು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಬ್ಯಾನರ್‌ಗಳನ್ನು ತಕ್ಷಣವೇ ನಗರದ ಎಲ್ಲೆಡೆಯಿಂದ ತೆಗೆದುಹಾಕುವಂತೆ ಅವರು ಕೇಳಿಕೊಂಡರು." ರಾಜಾ ಸಿಂಗ್ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದಾರೆ.
ಜೂನ್ ೩, ೨೦೧೯ ರಂದು ಎಟಿಕೆ ನ್ಯೂಸ್ ನ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಮೇ ೩೧, ೨೦೨೪ ರಂದು ಸಿಎಂಆರ್ ಶಾಪಿಂಗ್ ಮಾಲ್ ಹಂಚಿಕೊಂಡಿರುವ ಫೇಸ್‌ಬುಕ್ ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಫ್ಲೆಕ್ಸ್ ಬೋರ್ಡ್‌ಗಾಗಿ ಕ್ಷಮೆಯಾಚಿಸಲಾಗಿದೆ. ಪೋಷ್ಟ್ ನಲ್ಲಿ ಹೀಗೆಂದು ಹೇಳಲಾಗಿದೆ, "ಇಡೀ ಸಿಎಂಆರ್ ತೆಲಂಗಾಣ ಸಮೂಹದಿಂದ ಮಾಡಿದ ಪ್ರಮಾದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಅಥವಾ ಯಾವುದೇ ವ್ಯತ್ಯಾಸವನ್ನು ಸೃಷ್ಟಿಸುವ ಉದ್ದೇಶ ನಮಗಿಲ್ಲ. ನಾವು ಎಲ್ಲಾ ಧರ್ಮಗಳನ್ನು ಬೆಂಬಲಿಸುತ್ತೇವೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಪ್ರತಿ ಸಮುದಾಯವನ್ನು ಗೌರವಿಸುತ್ತೇವೆ. ಎಲ್ಲಾ ಹೋರ್ಡಿಂಗ್ ಗಳನ್ನು ತೆಗೆದುಹಾಕಲಾಗಿದೆ ಮತ್ತು ಭವಿಷ್ಯದಲ್ಲಿ ಈ ರೀತಿಯ ಯಾವುದನ್ನೂ ಪುನರಾವರ್ತಿಸುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಸಿಎಂಆರ್ ಶಾಪಿಂಗ್ ಮಾಲ್ ಆಂಧ್ರಪ್ರದೇಶವು ಯಾವುದೇ ರೀತಿಯಲ್ಲಿ ಇದರೊಂದಿಗೆ ಸಂಬಂಧ ಹೊಂದಿಲ್ಲ ಅಥವಾ ಸಂಬಂಧಿಸಿಲ್ಲ" (ಅನುವಾದಿಸಲಾಗಿದೆ). ಇದು ಫ್ಲೆಕ್ಸ್ ಬೋರ್ಡ್ ತೆಲಂಗಾಣದಿಂದ ಬಂದಿದ್ದು ಕರ್ನಾಟಕದಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಜೂನ್ ೩, ೨೦೧೯ ರ ಸಿಎಂಆರ್ ಶಾಪಿಂಗ್ ಮಾಲ್‌ನ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇದಲ್ಲದೆ, ನಾವು ಫ್ಲೆಕ್ಸ್ ಬೋರ್ಡ್‌ನಲ್ಲಿನ ಸಂಪೂರ್ಣ ಪಠ್ಯವನ್ನು ಅನುವಾದಿಸಿದ್ದೇವೆ ಮತ್ತು ವೈರಲ್ ಚಿತ್ರದಲ್ಲಿ ಹೇಳಿರುವಂತೆ ಮುಸ್ಲಿಮರು ಹಿಂದೂ ಮಹಿಳೆಯರೊಂದಿಗೆ ಬಂದರೆ ಅವರಿಗೆ ರಿಯಾಯಿತಿ ನೀಡಲಾಗುವುದು ಎಂದು ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ೨೦೧೯ ರಿಂದ ಮೇಲಿನ ಉಲ್ಲೇಖಗಳಲ್ಲಿ ತೋರಿಸಿರುವಂತೆ, ಫ್ಲೆಕ್ಸ್ ಬೋರ್ಡ್‌ನ ಸಾರ್ವಜನಿಕ ಗ್ರಹಿಕೆ ಕೋಮುವಾದಿಯಾಗಿತ್ತು. ಅಲ್ಲದೆ, ೨೦೧೯ ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು, ೨೦೨೩ ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಡೆಯಿತು.
ತೀರ್ಪು:
ವೈರಲ್ ಚಿತ್ರದ ವಿಶ್ಲೇಷಣೆಯಿಂದ ಅದು ೨೦೧೯ ರಲ್ಲಿ ತೆಲಂಗಾಣದ ಮಾಲ್‌ನಿಂದ ಹಾಕಲಾದ ಫ್ಲೆಕ್ಸ್ ಬೋರ್ಡ್ ಅನ್ನು ತೋರಿಸುತ್ತದೆ, ಕರ್ನಾಟಕ ಅಲ್ಲ ಎಂದು ತಿಳಿದುಬಂದಿದೆ. ಕರ್ನಾಟಕ ಮತ್ತು ಕಾಂಗ್ರೆಸ್‌ಗೆ ಸಂಬಂಧಿಸಿ ಕೋಮುವಾದಿ ನಿರೂಪಣೆಯೊಂದಿಗೆ ಚಿತ್ರವನ್ನು ಇತ್ತೀಚೆಗೆ ಮತ್ತೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ಈ ಹೇಳಿಕೆ ತಪ್ಪು.