Begin typing your search above and press return to search.
    ಸತ್ಯ ಪರಿಶೀಲನೆಗಳು

    ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ವೈರಲ್ ಭಾಷಣ 2019ರದ್ದು

    IDTU - Karnataka
    16 Jun 2024 10:47 AM GMT
    ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ವೈರಲ್ ಭಾಷಣ 2019ರದ್ದು
    x

    ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ರಾಹುಲ್ ಗಾಂಧಿಯನ್ನು ನಾಲಾಯಕ್ (ನಿಷ್ಪ್ರಯೋಜಕ) ಎಂದು ಕರೆದಿರುವುದಲ್ಲದೆ, ಅವರಿಗೆ ಹೊಡೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೈರಲ್ ವಿಡಿಯೋದಲ್ಲಿ ಠಾಕ್ರೆ ಅವರು” ರಾಹುಲ್ ಗಾಂಧಿಯನ್ನು ನಿಷ್ಪ್ರಯೋಜಕ ಎಂದಿದ್ದಲ್ಲದೆ, ಅವರಿಗೆ ಥಳಿಸಬೇಕು ಎಂದಿರುವವನು ನಾನೊಬ್ಬನೇ” ಎಂದು ಮರಾಠಿಯಲ್ಲಿ ಹೇಳಿರುವುದು ಇದೆ.

    “ರಾಹುಲ್ ಗಾಂಧಿಯಂತಹ ನಿಷ್ಪ್ರಯೋಜಕ ವ್ಯಕ್ತಿಗೆ ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆಯಬೇಕು ಎಂದು ಬಹಿರಂಗವಾಗಿ ಹೇಳಿರುವವನು ನಾನೊಬ್ಬನೇ : ಉದ್ಧವ್ ಠಾಕ್ರೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಶೇರ್ ಆಗ್ತಿದೆ.

    https://naanugauri.com/wp-content/uploads/2024/06/WhatsApp-Image-2024-06-16-at-1.19.47-PM.jpeg

    ಫ್ಯಾಕ್ಟ್‌ಚೆಕ್ : ಉದ್ದವ್ ಠಾಕ್ರೆ ರಾಹುಲ್ ಗಾಂಧಿ ಕುರಿತು ನೀಡಿರುವ ಹೇಳಿಕೆಯ ವಿಡಿಯೋ ಹಳೆಯದ್ದಾಗಿದೆ. 2019ರಲ್ಲಿ ಹಿಂದುತ್ವ ನಾಯಕ ವಿಡಿ ಸಾವರ್ಕರ್ ಅನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಉದ್ದವ್ ಠಾಕ್ರೆ, ವೈರಲ್ ವಿಡಿಯೋದಲ್ಲಿರುವಂತೆ ಹೇಳಿದ್ದರು.

    ಗೂಗಲ್‌ ರಿವರ್ಸ್ ಇಮೇಜ್‌ನಲ್ಲಿ ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ಬಳಸಿ ಸರ್ಚ್ ಮಾಡಿದಾಗ, ಡಿಸೆಂಬರ್ 15, 2019ರಂದು “ಸಾವರ್ಕರ್ ಅವರನ್ನು ಪಲಾಯನವಾದಿ ಎಂದು ಕರೆದ ರಾಹುಲ್ ಗಾಂಧಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದ ಉದ್ದವ್ ಠಾಕ್ರೆ” ಎಂಬ ಶೀರ್ಷಿಕೆಯಲ್ಲಿ ಇಂಡಿಯಾ ಟಿವಿ ತನ್ನ ಯೂಟ್ಯೂವ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ದೊರೆತಿದೆ.

    https://naanugauri.com/wp-content/uploads/2024/06/ದಸ್ದಗ್ದ.gif

    ಸಾವರ್ಕರ್ ಸ್ಮಾರಕ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಪ್ಟೆಂಬರ್ 18, 2019ರಂದು “Uddhav Thackeray Speech on the occasion of Book Launch of Savarkar” ಎಂಬ ಶೀರ್ಷಿಕೆಯಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಉದ್ದವ್ ಠಾಕ್ರೆಯ ಭಾಷಣದ ಸಂಪೂರ್ಣ ವಿಡಿಯೋ ಇದೆ. ಮರಾಠಿ ಭಾಷೆಯ ಭಾಷಣದಲ್ಲಿ ಅವರು ಕಾಂಗ್ರೆಸ್‌ ನಾಯಕರಾದ ಮಣಿಶಂಕರ್ ಅಯ್ಯರ್, ರಾಹುಲ್ ಗಾಂಧಿ ವಿರುದ್ದ ಕಿಡಿಕಾರಿದ್ದಾರೆ. ವಿಡಿಯೋದಲ್ಲಿ 11:20 ಸೆಕೆಂಡ್‌ನಿಂದ ಅದನ್ನು ವೀಕ್ಷಿಸಬಹುದು.

    https://naanugauri.com/wp-content/uploads/2024/06/DFSDFDGFD.gif

    ನಾವು ನಡೆಸಿದ ಪರಿಶೀಲನೆಯಲ್ಲಿ ” ರಾಹುಲ್ ಗಾಂಧಿ ಕುರಿತು ಉದ್ದವ್ ಠಾಕ್ರೆಯ ಭಾಷಣ 2019ರದ್ದು ಎಂದು ತಿಳಿದು ಬಂದಿದೆ. 2019ರಲ್ಲಿ ಉದ್ದವ್ ಠಾಕ್ರೆಯ ಶಿವಸೇನೆಯ ಇಂಡಿಯಾ ಒಕ್ಕೂಟದ ಭಾಗವಾಗಿರಲಿಲ್ಲ.

    2023ರಲ್ಲಿ ಉದ್ದವ್ ಠಾಕ್ರೆಯ ಪಕ್ಷ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಸೇರಿದೆ. 2024ರ ಲೋಕಸಭೆ ಚುನಾವಣೆಯನ್ನೂ ಕಾಂಗ್ರೆಸ್ ಮತ್ತು ಶಿವಸೇನೆ ಒಗ್ಗಟ್ಟಾಗಿ ಎದುರಿಸಿದೆ

    Claim Review :   Old video of Uddhav Thackeray saying Rahul Gandhi should be beaten up shared as recent
    Claimed By :  Facebook User
    Fact Check :  Misleading
    IDTU - Karnataka

    IDTU - Karnataka