- Home
- /
- ಸತ್ಯ ಪರಿಶೀಲನೆಗಳು
- /
- ವೀಡಿಯೋ ೨೦೧೯ರ ಸಿಎಎ...
ವೀಡಿಯೋ ೨೦೧೯ರ ಸಿಎಎ ವಿರೋಧಿ ಪ್ರತಿಭಟನೆಯನ್ನು ತೋರಿಸುತ್ತದೆಯೇ ಹೊರತು ಇತ್ತೀಚೆಗೆ ನಮಾಜ್ ಹೆಸರಿನಲ್ಲಿ ನಡೆದ ಗಲಭೆಯನ್ನಲ್ಲ
ಸಾರಾಂಶ:
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ಮಹಿಷಾಸುರ ರೈಲು ನಿಲ್ದಾಣವನ್ನು ಜನರು ಧ್ವಂಸಗೊಳಿಸುತ್ತಿರುವುದನ್ನು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ರೈಲು ಹಾರ್ನ್ ಮಾಡಿದ್ದರಿಂದ ನಮಾಜ್ ಅರ್ಪಣೆಗೆ ಅಡ್ಡಿಯಾದ ಕಾರಣ ಇದು ಸಂಭವಿಸಿದೆ ಎಂದು ಪೋಷ್ಟ್ ಗಳು ಹೇಳಿಕೊಂಡಿವೆ. ಆದರೆ, ಈ ವೀಡಿಯೋ ೨೦೧೯ ರದ್ದು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಗಳನ್ನು ತೋರಿಸುತ್ತದೆ. ಆದ್ದರಿಂದ, ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಮು ಕೋನವನ್ನು ನೀಡಿಕೊಂಡು ಮಾಡಿರುವ ಆರೋಪಗಳು ತಪ್ಪು.
ಹೇಳಿಕೆ:
ಜನರು ರೈಲು ನಿಲ್ದಾಣವನ್ನು ಧ್ವಂಸಗೊಳಿಸುವುದನ್ನು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ನಮಾಜ್ ಅರ್ಪಿಸುವಾಗ ರೈಲುಗಳ ಹಾರ್ನ್ ತೊಂದರೆಯನ್ನುಂಟುಮಾಡಿದೆ ಎಂದು ಆರೋಪಿಸಿ ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾರೆ. ಕೋಲುಗಳು ಮತ್ತು ಬೆತ್ತಗಳಿಂದ ಶಸ್ತ್ರಸಜ್ಜಿತವಾದ ಹಲವಾರು ಜನರು ರೈಲ್ವೆ ಆಸ್ತಿಯನ್ನು ಹಾನಿಗೊಳಿಸುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಅವರು ಕಿಟಕಿಗಳನ್ನು ಒಡೆಯುವುದು, ಉಪಕರಣಗಳನ್ನು ಒಡೆದು ಹಾಕುವುದು ಮತ್ತು ನಿಲ್ದಾಣದ ಮೂಲಸೌಕರ್ಯಕ್ಕೆ ಸಾಮಾನ್ಯ ವಿನಾಶವನ್ನು ಉಂಟುಮಾಡುವುದನ್ನು ಕೂಡ ಇಲ್ಲಿ ನೋಡಬಹುದು. ಫೇಸ್‌ಬುಕ್‌ನಲ್ಲಿ ಬಳಕೆದಾರರೊಬ್ಬರು ಕನ್ನಡ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ: "*ರೈಲಿನ ಶಿಳ್ಳೆ ಶಬ್ದ ತಮ್ಮ ನಮಾಜ್‌ಗೆ ಭಂಗ* ತರುತ್ತಿದೆಯೊಂದು ಆಕ್ರೋಶಗೊಂಡು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ರೈಲು ನಿಲ್ದಾಣವನ್ನು ಧ್ವಂಸಗೊಳಿಸುತ್ತಿರುವ ದೃಶ್ಯ. ಅವನ್ಯಾವನೋ *ಹಿಂದುಗಳು ಹಿಂಸಾಚಾರಿಗಳು* ಅಂತ ಬೋಗಳುತ್ತಿದ್ದ... ಅಂತವನಿಗೆ ಲಕ್ಷಾಂತರ ಘಟನೆಗಳ ನಡುವೆ ಈ ಘಟನೆಯೂ ಸಮರ್ಪಣೆ... ಭಾರತದ ಭವಿಷ್ಯ ನಮ್ಮ ಕಣ್ಣ ಮುಂದೆ ಕಾಣುತ್ತಿದೆ.. ಇವರಿಗೆ ರೈಲಿನ ಶಿಳ್ಳೆ ಶಬ್ದ ಇಷ್ಟು ಕೋಪ ಬಂದ್ರೇ ನಾವು ಡೈಲಿ ನೋಮಾಜ್ ಮಾಡುವ ಶಬ್ದ ಏಗಿರುತ್ತೆ. ನಾವು ಏನು ಮಾಡಬೇಕು?"
ಮತ್ತೊಬ್ಬ ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಇದೇ ರೀತಿಯ ಕೋಮು ನಿರೂಪಣೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ೮.೯೧ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ವೈರಲ್ ವೀಡಿಯೋವನ್ನು ಹಂಚಿಕೊಂಡ ಎಕ್ಸ್ ಮತ್ತು ಫೇಸ್‌ಬುಕ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ಈ ಆರೋಪವನ್ನು ಪರಿಶೀಲಿಸಲು ನಾವು ವೀಡಿಯೋದಲ್ಲಿನ ಕೀಫ್ರೇಮ್ ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಯೂಟ್ಯೂಬ್ ನಲ್ಲಿ ಕಂಡುಬಂದ ವೈರಲ್ ವೀಡಿಯೋದ ದೀರ್ಘ ಆವೃತ್ತಿಗೆ ನಮ್ಮನ್ನು ಕರೆದೊಯ್ಯಿತು. ಮೊಹಮ್ಮದ್ ಎಜಾಜ್ ಅಹ್ಮದ್ ಎಂಬ ಹೆಸರಿನ ಚಾನೆಲ್ ಡಿಸೆಂಬರ್ ೧೪, ೨೦೧೯ ರಂದು ಸಂಪೂರ್ಣ ವೀಡಿಯೋವನ್ನು ಅಪ್‌ಲೋಡ್ ಮಾಡಿದೆ. ಇದು ಸಾಗರ್ ದೀಘಿಯಲ್ಲಿರುವ ನೌಪಾರಾ ಮಹಿಸಾಸುರ್ ನಿಲ್ದಾಣದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ಎಂದು ಹೇಳಿಕೊಂಡಿದೆ.
ದೃಶ್ಯಾವಳಿಯಲ್ಲಿ ಗೋಚರಿಸುವ ಫಲಕಗಳ ಆಧಾರದ ಮೇಲೆ ನಾವು ವೀಡಿಯೋದಲ್ಲಿರುವ ರೈಲ್ವೆ ನಿಲ್ದಾಣವನ್ನು 'ನೌಪರಾ ಮಹಿಷಾಸುರ' ಎಂದು ಗುರುತಿಸಿದ್ದೇವೆ. ಈ ನಿಲ್ದಾಣವು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿದೆ.
ಡಿಸೆಂಬರ್ ೧೪, ೨೦೧೯ ರಂದು ಪೋಷ್ಟ್ ಮಾಡಿದ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
"ನೌಪರಾ ಮಹಿಷಾಸುರ ರೈಲು ನಿಲ್ದಾಣ" ಮತ್ತು "ಧ್ವಮ್ಸ" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಘಟನೆಯ ಕುರಿತು ಸುದ್ದಿ ವರದಿಗಳಿಗಾಗಿ ಹುಡುಕಿದೆವು. ಇದು ಡಿಸೆಂಬರ್ ೧೫, ೨೦೧೯ ರಂದು ಬೆಂಗಾಲಿ ನ್ಯೂಸ್ ಪೋರ್ಟಲ್ ಬರ್ತಮಾನ್ ಪತ್ರಿಕಾ ದಲ್ಲಿ ಪ್ರಕಟವಾದ ವರದಿಗೆ ನಮ್ಮನ್ನು ಕರೆದೊಯ್ಯಿತು.
ಡಿಸೆಂಬರ್ ೧೫, ೨೦೧೯ರ ಬರ್ತಮಾನ್ ಪತ್ರಿಕಾ ವರದಿಯ ಸ್ಕ್ರೀನ್‌ಶಾಟ್.
ನೌಪರಾ ಮಹಿಷಾಸುರ ನಿಲ್ದಾಣ ಸೇರಿದಂತೆ ಹಲವು ರೈಲ್ವೆ ನಿಲ್ದಾಣಗಳಲ್ಲಿ ಸಿಎಎ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಲು ಜನರು ಜಮಾಯಿಸಿ ಧ್ವಂಸ ಮಾಡಲು ಆರಂಭಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು ಈ ವೀಡಿಯೋದ ಹೆಚ್ಚಿನ ವಿಶ್ಲೇಷಣೆ ನಡೆಸಿದಾಗ ನವೆಂಬರ್ ೧೮, ೨೦೨೦ ರಂದು ವೈಲ್ಡ್ ಫಿಲ್ಮ್ಸ್ ಇಂಡಿಯಾ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಈ ವೀಡಿಯೋ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದೆ ಎಂದು ವೀಡಿಯೋದ ವಿವರಣೆಯು ಸೂಚಿಸಿದೆ. ಇದು ೨೦೧೯ರ ವೀಡಿಯೋವಾಗಿದೆ ಮತ್ತು ಕೆಲವು ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಹೇಳಿರುವ ಹಾಗೆ ನಮಾಜ್ ಕೊಡುಗೆಗಳನ್ನು ಅಡ್ಡಿಪಡಿಸುವ ರೈಲು ಹಾರ್ನ್/ಶಿಳ್ಳೆಗಳಿಗೆ ಸಂಬಂಧಿಸಿಲ್ಲ ಎಂದು ತೋರಿಸುತ್ತದೆ.
ತೀರ್ಪು:
೨೦೧೯ ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿರುವ ನೌಪಾರಾ ಮಹಿಷಾಸುರ ರೈಲು ನಿಲ್ದಾಣವನ್ನು ಜನರು ಧ್ವಂಸಗೊಳಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಈ ವೀಡಿಯೋ ನಮಾಜ್ ಅರ್ಪಿಸುವಾಗ ರೈಲು ಹಾರ್ನ್ ಗಳು ತೊಂದರೆಯನ್ನುಂಟುಮಾಡಿವೆ ಎಂದು ನಡೆಸಿದ ಹಲ್ಲೆ ಎಂಬ ಆರೋಪಗಳು ಸುಳ್ಳು. ಆದ್ದರಿಂದ ಆನ್ಲೈನ್ ನಲ್ಲಿ ಕಂಡುಬಂದಿರುವ ಇಂತಹ ಕೋಮು ನಿರೂಪಣೆಯೊಂದಿಗೆ ಹಂಚಿಕೊಂಡಿರುವ ಹೇಳಿಕೆಗಳು ತಪ್ಪು.