Begin typing your search above and press return to search.
    Others

    ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಕಾನ್ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ

    IDTU - Karnataka
    16 July 2024 10:50 AM GMT
    ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಮಹಿಳಾ ಕಾನ್ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ
    x

    ಸಾರಾಂಶ:

    ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕಾರಣಿ ಕಂಗನಾ ರಣಾವತ್ ಅವರನ್ನು ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಹೇಳಿಕೊಳ್ಳುವ ಪೋಷ್ಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.ಆಕೆಯನ್ನು ಈಗಲೂ ಅಮಾನತುಗೊಳಿಸಲಾಗಿದೆ ಮತ್ತು ಆಕೆ ಅಧಿಕೃತ ವಿಚಾರಣೆಗೆ ಒಳಗಾಗಿದ್ದಾರೆ ಎಂದು ಸಿಐಎಸ್ಎಫ್ ತಿಳಿಸಿದೆ. ಆದರೆ, ಕೆಲವು ಸುದ್ದಿ ಸಂಸ್ಥೆಗಳು ವಿಭಿನ್ನವಾಗಿ ವರದಿ ಮಾಡಿವೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.


    ಹೇಳಿಕೆ:

    ಜೂನ್ ೬, ೨೦೨೪ ರಂದು, ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರು ರೈತರ ಪ್ರತಿಭಟನೆಯ ವಿರುದ್ಧ ನೀಡಿದ ಹೇಳಿಕೆಗಾಗಿ ಮಹಿಳಾ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದರು. ಸಾಮಾಜಿಕ ಮಾಧ್ಯಮ ಬಳಕೆದಾರರು ಆ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ರನ್ನು ಮರುಸೇರ್ಪಡಿಸಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿಕೊಳ್ಳುವ ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಜುಲೈ ೩, ೨೦೨೪ ರಂದು ಹೀಗೊಂದು ಪೋಷ್ಟ್ ಹಂಚಿಕೊಂಡಿದ್ದಾರೆ - “ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಘಟನೆಯ ನಂತರ ಕೌರ್ ಅವರನ್ನು ಆರಂಭದಲ್ಲಿ ಅಮಾನತುಗೊಳಿಸಲಾಗಿತ್ತು. ಆದರೆ, ಆಕೆಯನ್ನು ಪುನಃ ಸೇರಿಸಿಕೊಳ್ಳಲಾಗಿದ್ದು, ಈಗ ಬೆಂಗಳೂರಿನಲ್ಲಿ ನಿಯೋಜನೆ ಮಾಡಲಾಗಿದೆ” (ಅನುವಾದಿಸಲಾಗಿದೆ). ಪೋಷ್ಟ್ ಸುಮಾರು ೧,೮೪೦ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದೇ ದಿನ ಮತ್ತೊಬ್ಬ ಎಕ್ಸ್ ಬಳಕೆದಾರರೂ ಸಹ ಇದೇ ರೀತಿಯ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ.

    ವೈರಲ್ ಹೇಳಿಕೆಯನ್ನು ಹಂಚಿಕೊಳ್ಳುವ ಜುಲೈ ೩, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.

    ಪುರಾವೆ:

    ನಾವು ವೈರಲ್ ಹೇಳಿಕೆಯನ್ನು ವಿಶ್ಲೇಷಿಸಿದ್ದೇವೆ ಮತ್ತು "ಕುಲ್ವಿಂದರ್ ಕೌರ್," "ಬಿಜೆಪಿ ಸಂಸದೆ ಕಂಗನಾ ರಣಾವತ್," "ಸಿಐಎಸ್‌ಎಫ್," ಮತ್ತು "ಸುಸ್ಪೆಂಡೆಡ್" ಮೊದಲಾದ ಇಂಗ್ಲಿಷ್ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಅದು ನಮ್ಮನ್ನು ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ಎಏನ್ಐ) ನ ಜುಲೈ ೩, ೨೦೨೪ ರ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು. ಆ ಪೋಷ್ಟ್ ಹೀಗಿದೆ - “ಬಿಜೆಪಿ ಸಂಸದೆ ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಇನ್ನೂ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆ ಇನ್ನೂ ಸಿಐಎಸ್‌ಎಫ್ ನಲ್ಲಿದೆ” (ಅನುವಾದಿಸಲಾಗಿದೆ).

    ಜುಲೈ ೩, ೨೦೨೪ ರ ಎಏನ್ಐ ನ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಎಕ್ಸ್ ಪೋಷ್ಟ್ ಸಿಐಎಸ್ಎಫ್ ಅನ್ನು ಉಲ್ಲೇಖಿಸಿ ಕುಲ್ವಿಂದರ್ ಕೌರ್ ಇನ್ನೂ ಅಮಾನತಿನಲ್ಲಿದ್ದಾರೆ ಎಂದು ಹೇಳಿದೆ. ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು "ಸಿಐಎಸ್ಎಫ್ ಕಾನ್‌ಸ್ಟೆಬಲ್," "ಕುಲ್ವಿಂದರ್ ಕೌರ್," ಮತ್ತು "ಇಲಾಖೆಯ ವಿಚಾರಣೆ" ಮೊದಲಾದ ಇಂಗ್ಲಿಷ್ ಪದಗಳನ್ನು ಬಳಸಿಕೊಂಡು ಮತ್ತೊಂದು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಇದು ನಮ್ಮನ್ನು ಜುಲೈ ೩, ೨೦೨೪ ರ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಗೆ ಕರೆದೊಯ್ಯಿತು.

    ಜುಲೈ ೩, ೨೦೨೪ ರ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿಯ ಸ್ಕ್ರೀನ್‌ಶಾಟ್.


    ವರದಿಯ ಪ್ರಕಾರ, ಕಾನ್‌ಸ್ಟೆಬಲ್ ಇನ್ನೂ ಅಮಾನತಿನಲ್ಲಿದೆ ಮತ್ತು ಚಂಡೀಗಢ ವಿಮಾನ ನಿಲ್ದಾಣದ ಘಟನೆಯ ಕುರಿತು ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ಅಧಿಕೃತವಾಗಿ ಸ್ಪಷ್ಟಪಡಿಸಿದೆ.

    ಜೂನ್ ೩, ೨೦೨೪ ರಂದು ಡೆಕ್ಕನ್ ಹೆರಾಲ್ಡ್ ಹೀಗೆ ಹೇಳಿಕೊಂಡು ವರದಿ ಮಾಡಿದೆ - “ಕೌರ್ ಅವರನ್ನು ಕರ್ನಾಟಕ ಸಿಐಎಸ್‌ಎಫ್‌ನ ೧೦ ನೇ ಬೆಟಾಲಿಯನ್‌ಗೆ ವರ್ಗಾಯಿಸಲಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಜ್ಯದ ಇತರ ಪ್ರಮುಖ ಸ್ಥಳಗಳಿಗೆ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ೧೦ ನೇ ಬೆಟಾಲಿಯನ್ ಹೊಂದಿದೆ. ವಿಚಾರಣೆ ನ್ಯಾಯಯುತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ೧೦ ನೇ ಬೆಟಾಲಿಯನ್‌ನಲ್ಲಿ ಕೌರ್‌ಗೆ ಯಾವ ಪೋಸ್ಟಿಂಗ್ ನೀಡಲಾಗಿದೆ ಎಂಬುದು ತಿಳಿದಿಲ್ಲ ಮತ್ತು ಅವರ ಪತಿ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.”

    ವಿವಿಧ ನಿರೂಪಣೆಗಳನ್ನು ಒಳಗೊಂಡಿರುವ ಈ ವರದಿಗಳ ಆಧಾರದ ಮೇಲೆ, ಆಕೆಯನ್ನು ಪುನಃ ಮರುಸೇರ್ಪಡೆ ಮಾಡಲಾಗಿದೆಯೇ ಮತ್ತು ಬೆಂಗಳೂರಿಗೆ ವರ್ಗಾಯಿಸಲಾಗಿದೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.


    ತೀರ್ಪು:

    ಚಂಡೀಗಢದಲ್ಲಿ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ ಅವರನ್ನು ಮರುಸೇರ್ಪಡೆ ಮಾಡಲಾಗಿದೆಯೇ ಅಥವಾ ಬೆಂಗಳೂರಿಗೆ ವರ್ಗಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವೈರಲ್ ಹೇಳಿಕೆಯ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಘಟನೆಯ ಕುರಿತು ಇಲಾಖಾ ವಿಚಾರಣೆ ನಡೆಯುತ್ತಿದೆ ಮತ್ತು ಆಕೆಯನ್ನು ಈಗಲೂ ಅಮಾನತುಗೊಳಿಸಲಾಗಿದೆ ಎಂದು ಸಿಐಎಸ್ಎಫ್ ಸ್ಪಷ್ಟಪಡಿಸಿದ್ದರೂ, ಕೆಲವು ಸುದ್ದಿ ಸಂಸ್ಥೆಗಳು ಬೇರೆಯೇ ರೀತಿಯಲ್ಲಿ ವರದಿ ಮಾಡಿವೆ. ಆದ್ದರಿಂದ, ಆಕೆಯ ಆಪಾದಿತ ಮರುಸ್ಥಾಪನೆಯ ಬಗ್ಗೆ ಮಾಡಿರುವ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ.

    Claim Review :   It is unclear if the woman CISF constable who slapped BJP MP Kangana Ranaut has been transferred to Bengaluru
    Claimed By :  X user
    Fact Check :  Misleading
    IDTU - Karnataka

    IDTU - Karnataka