Begin typing your search above and press return to search.
    ಇತ್ತೀಚಿನ

    ಗಣೇಶನ ವಿಗ್ರಹವನ್ನು ಧ್ವಂಸಗೊಳಿಸಿದ್ದು ದೇವಸ್ಥಾನದ ಹಿಂದೂ ಅರ್ಚಕನೇ ಹೊರತು ಮುಸ್ಲಿಂ ವ್ಯಕ್ತಿಗಳಲ್ಲ

    IDTU - Karnataka
    21 July 2024 5:30 AM GMT
    ಗಣೇಶನ ವಿಗ್ರಹವನ್ನು ಧ್ವಂಸಗೊಳಿಸಿದ್ದು ದೇವಸ್ಥಾನದ ಹಿಂದೂ ಅರ್ಚಕನೇ ಹೊರತು ಮುಸ್ಲಿಂ ವ್ಯಕ್ತಿಗಳಲ್ಲ
    x

    ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಕಥೇಲಾ ಸಮಯ್ ಮಾತಾ ಪ್ರದೇಶದಲ್ಲಿರುವ ತೌಲಿಹಾವಾದಲ್ಲಿ ಮುಸ್ಲಿಮರು ವಿಗ್ರಹವನ್ನು ಮುರಿದಿದ್ದಾರೆ ಎಂದು ಆರೋಪಿಸಿ ಗಣೇಶನ ಮುರಿದ ವಿಗ್ರಹದ ಹಲವಾರು ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಈ ಕಾರಣಕ್ಕಾಗಿ ಮುಸ್ಲಿಮರನ್ನು ನಿಂದಿಸಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

    ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು

    ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯಂತೆ ಗಣೇಶ ವಿಗ್ರಹವನ್ನು ರ್ಧವಂಸ ಮಾಡಿದ್ದು ಮುಸ್ಲಮರು ಎಂಬುದು ನಿಜವೇ ಎಂದು ಪರಿಶೀಲಿಸೋಣ.

    ಫ್ಯಾಕ್ಟ್‌ಚೆಕ್ :

    ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ನಡೆಸಿದಾಗ, 16 ಜುಲೈ 2024ರಂದು ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಲಭ್ಯವಾಗಿವೆ.

    (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು).

    ಈ ವರದಿಗಳ ಪ್ರಕಾರ, ಜುಲೈ 16, 2024 ರಂದು, ತೌಲಿಹಾವಾ ಗ್ರಾಮದ ದೇವಾಲಯದ ಅರ್ಚಕ ಕ್ರಿಚಾರಾಮ್ ಎಂಬ ಅರ್ಚಕರು ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಕಥೇಲಾ ಸಮಯ್ ಮಾತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮನ್ನಾನ್ ಮತ್ತು ಸೋನು ಎಂಬ ಇಬ್ಬರು ಮುಸ್ಲಿಂ ಪುರುಷರು ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ, ಗಣೇಶನ ವಿಗ್ರಹವನ್ನು ಮುರಿದಿದ್ದಾರೆ ಮತ್ತು ಅವರ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ತಕ್ಷಣ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಹಾನಿ ಉಂಟುಮಾಡಿದ ಮತ್ತು ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪ ಹೊರಿಸಿದ್ದಾರೆ. ಆದರೆ, ತನಿಖೆಯ ಸಮಯದಲ್ಲಿ, ದೇವಾಲಯದ ಬಳಿ ಆಟವಾಡುತ್ತಿದ್ದ ಮೂವರು ಮಕ್ಕಳಿಂದ ಮಾಹಿತಿ ಪಡೆದಿರುವ ಪೊಲೀಸರು ವಿಗ್ರಹವನ್ನು ಮುರಿದಿದ್ದು ಕ್ರಿಚಾರಾಮ್, ಇಬ್ಬರು ಮುಸ್ಲಿಂ ವ್ಯಕ್ತಿಗಳಲ್ಲ ಎಂದು ತಿಳಿದುಬಂದಿದೆ. ಈ ಸಾಕ್ಷ್ಯದ ಆಧಾರದ ಮೇಲೆ, ಪೊಲೀಸರು ಅರ್ಚಕರನ್ನು ವಿಚಾರಣೆ ನಡೆಸಿದರು, ಮತ್ತು ಅವರು ವಿಗ್ರಹವನ್ನು ಸ್ವತಃ ಮುರಿದಿದ್ದಾಗಿ ಒಪ್ಪಿಕೊಂಡರು. ಸೋನು ಮತ್ತು ಮನ್ನಾನ್ ಕುಟುಂಬಗಳೊಂದಿಗಿನ ದ್ವೇಷದಿಂದಾಗಿ, ಅವರು ಈ ರೀತಿ ವರ್ತಿಸಲು ನಿರ್ಧರಿಸಿದರು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

    https://factly.in/wp-content/uploads/2024/07/Ganesha-Idol-broken-Muslims-Siddarthnagar-UP-img1.png

    ಗ್ರಾಮದ ವ್ಯಾಪ್ತಿಗೆ ಬರುವ ಶೋಹ್ರಾತ್ ಗಢ ಪೊಲೀಸ್ ಠಾಣೆಯ ಸರ್ಕಲ್ ಆಫೀಸರ್ ಆಗಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ವೇಶ್ ಕುಮಾರ್, ಆರ್ಚಕನ ಸುಳ್ಳು ಆರೋಪಗಳಿಗಾಗಿ ಈಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ತರುವಾಯ, ಸಿದ್ಧಾರ್ಥ್ ನಗರ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ (ಇಲ್ಲಿ, ಇಲ್ಲಿ) ಪೋಸ್ಟ್ ಮಾಡಿದ ಸ್ಪಷ್ಟೀಕರಣ ವಿಡಿಯೋ ಲಭ್ಯವಾಗಿದೆ. ಈ ಎಲ್ಲಾ ಮಾಹಿತಿಗಳಿಂದ, ಗಣೇಶನ ವಿಗ್ರಹವನ್ನು ದೇವಾಲಯದ ಅರ್ಚಕ ಕ್ರಿಚಾರಾಮ್ ಮುರಿದಿದ್ದಾರೆಯೇ ಹೊರತು ಮುಸ್ಲಿಂ ಪುರುಷರಲ್ಲ ಎಂಬುದು ಸ್ಪಷ್ಟವಾಗಿದೆ. ಈ ಘಟನೆಯಲ್ಲಿ ದಾಖಲಾದ ಎಫ್ಐಆರ್ ಅನ್ನು ಇಲ್ಲಿ ವೀಕ್ಷಿಸಬಹುದು.

    ಒಟ್ಟಾರೆಯಾಗಿ ಹೇಳುವುದಾದರೆ, ಗಣೇಶನ ವಿಗ್ರಹವನ್ನು ದೇವಾಲಯದ ಅರ್ಚಕ ಕ್ರಿಚಾರಾಮ್ ಮುರಿದು, ದ್ವೇಷದ ಕಾರಣಕ್ಕೆ ಮುಸ್ಲಿಂ ಯುವಕರ ವಿರುದ್ದ ಆರೋಪಿಸಿ ದೂರು ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

    Claim Review :   Hindu priest vandalises Ganesh’s idol, blames 2 Muslim men
    Claimed By :  Facebook User
    Fact Check :  False
    IDTU - Karnataka

    IDTU - Karnataka