Begin typing your search above and press return to search.
    ಸತ್ಯ ಪರಿಶೀಲನೆಗಳು

    ಇಲ್ಲ, ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಲು ಪ್ರಧಾನಿ ಮೋದಿ ಮಿಸ್ಡ್ ಕಾಲ್ ಅಭಿಯಾನವನ್ನು ಪ್ರಾರಂಭಿಸಲಿಲ್ಲ

    IDTU - Karnataka
    21 Jun 2024 1:40 PM GMT
    ಇಲ್ಲ, ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಲು ಪ್ರಧಾನಿ ಮೋದಿ ಮಿಸ್ಡ್ ಕಾಲ್ ಅಭಿಯಾನವನ್ನು ಪ್ರಾರಂಭಿಸಲಿಲ್ಲ
    x

    ಸಾರಾಂಶ:

    ನಿರ್ದಿಷ್ಟ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಬೆಂಬಲಿಸುವಂತೆ ನಾಗರಿಕರನ್ನು ಕೇಳುವ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದಾರೆ ಎಂದು ಹಲವಾರು ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹೇಳುತ್ತವೆ. ಆದರೆ ಈ ಹೇಳಿಕೆ ೨೦೨೩ ರಿಂದ ಹರಡುತ್ತಿದೆ. ನಮ್ಮ ತನಿಖೆಯು ಈ ಹೇಳಿಕೆ ತಪ್ಪು ಮತ್ತು ಆ ಸಂಖ್ಯೆಯು ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಇತರ ಪ್ರಚಾರಕ್ಕೆ ಸಂಬಂಧಿಸಿದೆ ಎಂದು ಬಹಿರಂಗಪಡಿಸುತ್ತದೆ.


    ಹೇಳಿಕೆ:

    ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನ ಹಲವಾರು ಬಳಕೆದಾರರು ೯೦೯೦೯೦೨೦೨೪ ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಯುಸಿಸಿಗೆ ತಮ್ಮ ಬೆಂಬಲವನ್ನು ತೋರಿಸಲು ಜನರನ್ನು ವಿನಂತಿಸಿದ್ದಾರೆ ಎಂದು ಹೇಳುವ ವೈರಲ್ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ನಾಲ್ಕು ಕೋಟಿ ಮುಸ್ಲಿಮರು ಮತ್ತು ಎರಡು ಕೋಟಿ ಕ್ರೈಸ್ತರು ಯುಸಿಸಿ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ಅದು ಆರೋಪಿಸಿದೆ. ಈ ಮಿಸ್ಡ್ ಕಾಲ್ ನೀಡುವ ಮೂಲಕ ಯುಸಿಸಿಯನ್ನು ಬೆಂಬಲಿಸುವಂತೆ ಹಿಂದೂಗಳನ್ನು ಒತ್ತಾಯಿಸಿದೆ.

    ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ - “ಇಡೀ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ. ಯು.ಸಿ.ಸಿ. ಏಕರೂಪ ನಾಗರಿಕ ಸಂಹಿತೆ. ಏಕರೂಪ ನಾಗರಿಕ ಸಂಹಿತೆ ತರಲು ಬಯಸಿದೆ. ಇದಕ್ಕಾಗಿ ದೇಶದ ನಾಗರಿಕರು ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಕೋರಲಾಗಿದೆ. ಈಗಾಗಲೇ ಎರಡು ದಿನಗಳಲ್ಲಿ 04 ಕೋಟಿ ಮುಸ್ಲಿಮರು ಮತ್ತು 02 ಕೋಟಿ ಕ್ರಿಶ್ಚಿಯನ್ನರು ಯುಸಿಸಿ ವಿರುದ್ಧ ಮತ ಚಲಾಯಿಸಿದ್ದಾರೆ. ಆದ್ದರಿಂದ, ಗಡುವಿನ ಮೊದಲು, ಜುಲೈ 6, ದೇಶದ ಎಲ್ಲಾ ಹಿಂದೂಗಳು ಯುಸಿಸಿ ಪರವಾಗಿ ಮತ ಚಲಾಯಿಸಲು ವಿನಂತಿಸಲಾಗಿದೆ. UCC ಅನ್ನು ಬೆಂಬಲಿಸಲು ಮತ್ತು ದೇಶವನ್ನು ಉಳಿಸಲು ದಯವಿಟ್ಟು 9090902024 ಗೆ ಮಿಸ್ಡ್ ಕಾಲ್ ನೀಡಿ. ನಿಮ್ಮ ಕರೆಯನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು UCC ಗೆ ಬೆಂಬಲವಾಗಿ ಒಪ್ಪಿಕೊಳ್ಳಲಾಗುತ್ತದೆ. ದಯವಿಟ್ಟು ಈ ಮಾಹಿತಿಯನ್ನು ಎಲ್ಲಾ ಹಿಂದೂಗಳೊಂದಿಗೆ ಹಂಚಿಕೊಳ್ಳಿ. 9090902024 ಗೆ ಮಿಸ್ಡ್ ಕಾಲ್ ನೀಡಿದ ಎಲ್ಲರಿಗೂ ಶುಭಾಶಯಗಳು.”

    ಜೂನ್ ೨೦, ೨೦೨೪ ರಂದು ವೈರಲ್ ಹೇಳಿಕೆಯನ್ನು ಹಂಚಿಕೊಂಡಿರುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ‘೯೦೯೦೯೦೨೦೨೪’ ಸಂಖ್ಯೆಯ ಕೀವರ್ಡ್ ಸರ್ಚ್ ೨೦೨೩ ರಲ್ಲಿ ಪ್ರಾರಂಭವಾದ ಭಾರತೀಯ ಜನತಾ ಪಕ್ಷದ ‘ಜನರ ಸಂಪರ್ಕದಿಂದ ಜನರ ಸಮರ್ಥನೆ’ ಅಭಿಯಾನಕ್ಕೆ ನಮ್ಮನ್ನು ಕರೆದೊಯ್ಯಿತು, ಇದು ಉಸಿಸಿ ಗೆ ಸಂಬಂಧಿಸಿಲ್ಲ. ೨೦೨೪ ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಸರ್ಕಾರದಲ್ಲಿ ತಮ್ಮ ಒಂಬತ್ತು ವರ್ಷಗಳ ಸೇವೆಯನ್ನು ಬೆಂಬಲಿಸಲು ಮಿಸ್ಡ್ ಕಾಲ್ ನೀಡಲು ಜನರನ್ನು ಪ್ರೋತ್ಸಾಹಿಸುವ ಮೂಲಕ ಬಿಜೆಪಿ ಮೇ ೩೦, ೨೦೨೩ ರಂದು ‘ಜನರ ಸಂಪರ್ಕದಿಂದ ಜನರ ಸಮರ್ಥನೆ’ ಅಭಿಯಾನವನ್ನು ಘೋಷಿಸಿತು. ಬಿಜೆಪಿ ಕರ್ನಾಟಕ ಈ ಅಭಿಯಾನವನ್ನು ತಮ್ಮ ಅಧಿಕೃತ ಎಕ್ಸ್ ಪೋಷ್ಟ್ ನಲ್ಲಿ ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ, “ಪ್ರಧಾನಿ ಶ್ರೀ @narendramodi ಸರ್ಕಾರದ 9 ವರ್ಷಗಳ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ. ‘ಜನರ ಸಂಪರ್ಕದಿಂದ ಜನರ ಸಮರ್ಥನೆ’ ಅಭಿಯಾನದೊಂದಿಗೆ ಕೈಜೋಡಿಸಲು 9090902024 ಕ್ಕೆ ಕರೆ‌ ನೀಡಿ.”

    ಜೂನ್ ೦೧, ೨೦೨೩ ರಂದು ಹಂಚಿಕೊಳ್ಳಲಾದ ಬಿಜೆಪಿ ಕರ್ನಾಟಕದ ಅಧಿಕೃತ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


    ನಾವು ಟ್ರೂಕಾಲರ್‌ನಲ್ಲಿ ಈ ಸಂಖ್ಯೆಯನ್ನು ಹುಡುಕಿದಾಗ, "ಏಕರೂಪ ನಾಗರಿಕ ಸಂಹಿತೆ ಉಸಿಸಿ ಬೆಂಬಲ" ಎಂದು ಪಟ್ಟಿ ಮಾಡಲಾಗಿದ್ದರೂ ನಾವು ಸುಮಾರು ೯,೨೬೦ ಸ್ಪ್ಯಾಮ್ ವರದಿಗಳನ್ನು ಕಂಡುಕೊಂಡಿದ್ದೇವೆ.

    ೯೦೯೦೯೦೨೦೨೪ ಸಂಖ್ಯೆಯ ಟ್ರೂಕಾಲರ್ ಹುಡುಕಾಟದ ಸ್ಕ್ರೀನ್‌ಶಾಟ್‌ಗಳು.


    ಇಂಡಿಯಾ ಟುಡೇ ಸುದ್ದಿ ವರದಿಯ ಪ್ರಕಾರ, ಮಿಸ್ಡ್ ಕಾಲ್ ಸಂಖ್ಯೆ (೯೦೯೦೯೦೨೦೨೪) ಬಿಜೆಪಿಯ ಬೆಂಬಲ ನೆಲೆಯನ್ನು ಹೆಚ್ಚಿಸುವ ಕಾರ್ಯತಂತ್ರದ ಭಾಗವಾಗಿದೆ, ವಿಶೇಷವಾಗಿ ಇದು ೨೦೧೯ ರ ಚುನಾವಣೆಯಲ್ಲಿ ಬಿಜೆಪಿ ಸೋತ ಕ್ಷೇತ್ರಗಳಲ್ಲಿ ಅವರು ಹೆಚ್ಚು ಗಮನ ಹರಿಸಲು ಇದು ಮಾಡಲಾಗಿದೆ.

    ಮೇ ೩೧, ೨೦೨೩ ರಂದು ಪ್ರಕಟವಾದ ಇಂಡಿಯಾ ಟುಡೇ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ಭಾರತದ ಕಾನೂನು ಆಯೋಗವು ಜುಲೈ ೦೭, ೨೦೨೩ ರಂದು ಉಸಿಸಿ ಗೆ ಸಂಬಂಧಿಸಿದ ಮೋಸದ ಮೆಸೇಜ್ ಗಳು ಮತ್ತು ಕರೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದೂ, ಅವುಗಳು ಯಾವುದೇ ಒಳಗೊಳ್ಳುವಿಕೆ ಮತ್ತು ಸಂಪರ್ಕವನ್ನು ಇವರು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ತಮ್ಮ ೨೦೨೪ ರ ಲೋಕಸಭಾ ಚುನಾವಣಾ ಪ್ರಣಾಳಿಕೆಗೆ ಸಲಹೆಗಳನ್ನು ಸಂಗ್ರಹಿಸುವುದು ಸೇರಿದಂತೆ ವಿವಿಧ ಪ್ರಚಾರಗಳಿಗಾಗಿ ಬಿಜೆಪಿ ಈ ಸಂಖ್ಯೆಯನ್ನು (೯೦೯೦೯೦೨೦೨೪) ಬಳಸಿದೆ. ಬಿಜೆಪಿ ಕರ್ನಾಟಕ ಇದನ್ನು ಫೆಬ್ರವರಿ ೨೦೨೪ ರಲ್ಲಿ ತನ್ನ ಅಧಿಕೃತ ಎಕ್ಸ್ ಪೋಸ್ಟ್‌ ನಲ್ಲಿ ಹಂಚಿಕೊಂಡಿದೆ.

    ಫೆಬ್ರವರಿ ೨೭, ೨೦೨೪ ರಂದು ಹಂಚಿಕೊಂಡಿರುವ ಬಿಜೆಪಿ ಕರ್ನಾಟಕದ ಅಧಿಕೃತ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಬಿಜೆಪಿಯು ಯುಸಿಸಿ ಅನುಷ್ಠಾನವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದ್ದರೂ, ಈ ಮಿಸ್ಡ್ ಕಾಲ್ ಅಭಿಯಾನವು ಯುಸಿಸಿ ಬೆಂಬಲದೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ. ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳಿಲ್ಲ.


    ತೀರ್ಪು:

    ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಿಸ್ಡ್ ಕಾಲ್ ಅಭಿಯಾನ ಆರಂಭಿಸಿದ್ದಾರೆ ಎಂಬ ಹೇಳಿಕೆ ತಪ್ಪು. ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಸಂಖ್ಯೆಯನ್ನು ಬಿಜೆಪಿಯು ತಮ್ಮ ‘ಜನರ ಸಂಪರ್ಕದಿಂದ ಜನರ ಸಮರ್ಥನೆ’ ಅಭಿಯಾನಕ್ಕೆ ಬಳಸಿಕೊಂಡಿದೆ, ಇದು ಯುಸಿಸಿಗೆ ಸಂಬಂಧಿಸಿಲ್ಲ.

    Claim Review :   No, PM Modi did not launch a Missed Call Campaign to support the Uniform Civil Code
    Claimed By :  Facebook User
    Fact Check :  False
    TagsBJP
    IDTU - Karnataka

    IDTU - Karnataka