ಅಮರಾವತಿಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವದ ವೇಳೆ ಪಾಕಿಸ್ತಾನದ ಧ್ವಜ ಬೀಸಲಾಗಿತ್ತು ಎಂದು ತೋರಿಸಲು ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳಲಾಗಿದೆ
ಸಾರಾಂಶ:
ಮಹಾರಾಷ್ಟ್ರದ ಅಮರಾವತಿಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವದ ಸಂದರ್ಭದಲ್ಲಿ ಜನರು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಬೀಸಿದರು ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಫೋಟೋವನ್ನು ಎಡಿಟ್ ಮಾಡಲಾಗಿದೆ. ಆದ್ದರಿಂದ ಆನ್ಲೈನ್ ನಲ್ಲಿ ಕಂಡುಬಂದ ಈ ಬಗ್ಗೆಯ ಆರೋಪಗಳು ತಪ್ಪು.
ಹೇಳಿಕೆ:
ಕಾಂಗ್ರೆಸ್ ಪಕ್ಷದ ಬಲವಂತ ವಾಂಖೆಡೆ ಅವರು ಅಮರಾವತಿಯಲ್ಲಿ ಬಿಜೆಪಿಯ ಹಾಲಿ ಸಂಸದ ನವನೀತ್ ರಾಣಾ ಅವರನ್ನು ಸೋಲಿಸಿದ್ದಾರೆ ಮತ್ತು ಮಹಾರಾಷ್ಟ್ರದ ಒಟ್ಟು ೪೮ ಲೋಕಸಭಾ ಸ್ಥಾನಗಳಲ್ಲಿ ಮಹಾ ವಿಕಾಸ್ ಅಘಾಡಿ ಅವರು ೩೦ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಭ್ರಮಿಸಲು ದೊಡ್ಡ ಕಾರಣವನ್ನು ಹೊಂದಿತ್ತು. ಜೂನ್ ೪, ೨೦೨೪ ರಂದು ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ ರ‍್ಯಾಲಿಯಲ್ಲಿ ಮಹಾರಾಷ್ಟ್ರದ ಅಮರಾವತಿಯ ರಾಜಕಮಲ್ ಚೌಕದಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಬೀಸುತ್ತಿರುವುದನ್ನು ತೋರಿಸಲು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಎಕ್ಸ್ ನಲ್ಲಿ ಬಳಕೆದಾರರು ಜೂನ್ ೬, ೨೦೨೪ ರಂದು ಫೋಟೋವನ್ನು ಹಂಚಿಕೊಂಡಿದ್ದು, ಅದರ ಮರಾಠಿಯಲ್ಲಿರುವ ಶೀರ್ಷಿಕೆ ಹೀಗಿದೆ, "ಕಾಂಗ್ರೆಸ್ ಎಲ್ಲಿ ಚುನಾಯಿತರಾಗಿದ್ದರೂ, ಪಾಕಿಸ್ತಾನಿ ಧ್ವಜಗಳು ಹಾರುತ್ತವೆ.. ರಾಜಕಮಲ್ ಚೌಕ್, ಅಮರಾವತಿ (ಅನುವಾದಿಸಲಾಗಿದೆ)."
ಜೂನ್ ೬, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಫೇಸ್‌ಬುಕ್‌ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ (ಇಲ್ಲಿ ಮತ್ತು ಇಲ್ಲಿ).
ಪುರಾವೆ:
ನಾವು ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಮತ್ತು ಇದು ಜೂನ್ ೫, ೨೦೨೪ ರಂದು "ಅಮರಾವತಿಯ ದೃಶ್ಯ #congress (ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ಕಂಡುಬಂದ ೨೮ ಸೆಕೆಂಡ್ ಗಳ ಯೂಟ್ಯೂಬ್ ವೀಡಿಯೋದತ್ತ ನಮ್ಮನ್ನು ಕರೆದೊಯ್ಯಿತು. ತ್ರಿವರ್ಣ ಧ್ವಜವನ್ನು ಬೀಸುವ ಜನರನ್ನು ಹೊಂದಿರುವ ಬೃಹತ್ ಆಚರಣೆಯನ್ನು ವೀಡಿಯೋ ತೋರಿಸುತ್ತದೆ.
ಮಾರ್ಚ್ ೨೯, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಈ ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ ಇದರಲ್ಲಿ ಯಾರೂ ಕೂಡ ಪಾಕಿಸ್ತಾನದ ಧ್ವಜವನ್ನು ಬೀಸುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಆದರೂ, ವೈರಲ್ ಚಿತ್ರವು ೦:೦೫ ಟೈಮ್‌ಸ್ಟ್ಯಾಂಪ್‌ನಲ್ಲಿ ಯೂಟ್ಯೂಬ್ ವೀಡಿಯೋದ ಕೀಫ್ರೇಮ್‌ನ ಎಡಿಟ್ ಮಾಡಿದ ಆವೃತ್ತಿಯನ್ನು ತೋರಿಸುತ್ತದೆ ಎಂದು ನಾವು ಗುರುತಿಸಿದ್ದೇವೆ. ಜನರು ಅದನ್ನು ಬೀಸಿದ್ದಾರೆ ಎಂದು ತೋರಿಸಲು ಪಾಕಿಸ್ತಾನದ ಧ್ವಜವನ್ನು ಎಡಿಟ್ ಮಾಡುವ ಮೂಲಕ ಸೇರಿಸಲಾಗಿದೆ ಎಂದು ಇದು ಖಚಿತಪಡಿಸುತ್ತದೆ.
ವೈರಲ್ ಚಿತ್ರ (ಎಡ) ಮತ್ತು ವಿಡಿಯೋದಲ್ಲಿನ ಅದೇ ಕೆಯ್ಫ್ರಾಮ್ ನ ಸ್ಕ್ರೀನ್‌ಶಾಟ್ ಮಧ್ಯೆ ಹೋಲಿಕೆ.
ವೈರಲ್ ಹೇಳಿಕೆಯು ಚಿತ್ರವು ಮಹಾರಾಷ್ಟ್ರದ ಅಮರಾವತಿಯ ರಾಜಕಮಲ್ ಚೌಕ್ತೋ ಅನ್ನು ತೋರಿಸುತ್ತದೆ ಎಂದು ಸೂಚಿಸುತ್ತದೆ. ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ರಾಜಕಮಲ್ ಚೌಕ್," "ಅಮರಾವತಿ," ಮತ್ತು "ಕಾಂಗ್ರೆಸ್" ಮೊದಲಾದ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಇದು ೨೦೨೪ ರ ಜೂನ್ ೪ ರ ಯೂಟ್ಯೂಬ್ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು. ಇದು ರಾಜಕಮಲ್ ಚೌಕದಲ್ಲಿ ನಡೆದ ಆಚರಣೆಯನ್ನು ವಿಭಿನ್ನ ಕೋನದಿಂದ ತೋರಿಸುತ್ತದೆ. ಪಾಕಿಸ್ತಾನದ ಧ್ವಜವನ್ನು ಯಾರೂ ಬೀಸುತ್ತಿರುವುದನ್ನು ವೀಡಿಯೋ ತೋರಿಸುವುದಿಲ್ಲ. ಇದಲ್ಲದೆ, ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ ರ‍್ಯಾಲಿಯಲ್ಲಿ ಅಮರಾವತಿಯಿಂದ ಪಾಕಿಸ್ತಾನದ ಧ್ವಜವನ್ನು ಬೀಸುವ ಯಾವುದೇ ಘಟನೆಯನ್ನು ಸುದ್ದಿವಾಹಿನಿಗಳು ವರದಿ ಮಾಡಿಲ್ಲ. ವೈರಲ್ ಫೋಟೋ ಮಹಾರಾಷ್ಟ್ರದ ಅಮರಾವತಿಯ ರಾಜಕಮಲ್ ಸ್ಕ್ವೇರ್ ಅನ್ನು ತೋರಿಸುತ್ತದೆ ಎಂದು ನಾವು ಜಿಯೋಲೊಕೇಟ್ ಮಾಡುವ ಮೂಲಕ ಖಚಿತಪಡಿಸಿದ್ದೇವೆ.
ತೀರ್ಪು:
ಮಹಾರಾಷ್ಟ್ರದ ಅಮರಾವತಿಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಸಂಭ್ರಮಾಚರಣೆಯಲ್ಲಿ ಜನರು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಬೀಸಲಿಲ್ಲ ಎಂದು ವೈರಲ್ ಫೋಟೋ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಆನ್ಲೈನ್ ನಲ್ಲಿ ಈ ಬಗ್ಗೆ ಕಂಡುಬಂದ ಆರೋಪಗಳು ತಪ್ಪು.