Begin typing your search above and press return to search.
    Others

    ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ರಾಹುಲ್ ಗಾಂಧಿ ವೀಕ್ಷಿಸುತ್ತಿರುವುದನ್ನು ತೋರಿಸಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

    IDTU - Karnataka
    13 Jun 2024 11:10 AM GMT
    ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ರಾಹುಲ್ ಗಾಂಧಿ ವೀಕ್ಷಿಸುತ್ತಿರುವುದನ್ನು ತೋರಿಸಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನವನ್ನು ಕಾರ್ ಒಳಗಿರುವ ಸಣ್ಣ ಟಿವಿಯೊಂದರಲ್ಲಿ ವೀಕ್ಷಿಸುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಕ್ಲಿಪ್ ಅನ್ನು ರಾಹುಲ್ ಗಾಂಧಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಷ್ಟ್ ಮಾಡಿದ ವೀಡಿಯೋದಿಂದ ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿ ಟಿವಿ ಸ್ಕ್ರೀನ್ ಆಫ್ ಆಗಿತ್ತು. ಆದ್ದರಿಂದ, ಆನ್‌ಲೈನ್ ನಲ್ಲಿ ಈ ಬಗ್ಗೆ ಮಾಡಿರುವ ಹೇಳಿಕೆಗಳು ತಪ್ಪು.

    ಹೇಳಿಕೆ:

    ಜೂನ್ ೯, ೨೦೨೪ ರಂದು ಪ್ರಧಾನಿ ಮೋದಿಯವರು ತಮ್ಮ ಸತತ ಮೂರನೇ ಅವಧಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷ ನಾಯಕರು ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿರಲಿಲ್ಲ. ಆದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾದ ವೀಡಿಯೋವೊಂದು ಕಾರ್ ನ ಒಳಗೆ ಕುಳಿತುಕೊಂಡು ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸುವುದನ್ನು ರಾಹುಲ್ ಗಾಂಧಿ ವೀಕ್ಷಿಸಿದ್ದಾರೆ ಎಂದು ಹೇಳಿಕೊಂಡಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಪರಿಶೀಲಿಸಿದ ಬಳಕೆದಾರರೊಬ್ಬರು ಜೂನ್ ೯, ೨೦೨೪ ರಂದು "ರಾಹುಲ್ ಗಾಂಧಿ ರೈಟ್ ನೌ (ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ೧೩.೩ ಸಾವಿರ ವೀಕ್ಷಣೆಗಳು, ೪೨೫ ಇಷ್ಟಗಳು ಮತ್ತು ೭೨ ಮರುಪೋಷ್ಟ್ಗಳನ್ನು ಗಳಿಸಿದೆ.

    ಜೂನ್ ೯, ೨೦೨೪ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಎಕ್ಸ್ ನಲ್ಲಿ ಮತ್ತೊಬ್ಬ ಪರಿಶೀಲಿಸಿದ ಬಳಕೆದಾರರು ಜೂನ್ ೯, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಕೂಡ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ಪುರಾವೆ:

    ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಅದರ ಮೇಲೆ ಕಂಡುಬಂದ ವಾಟರ್‌ಮಾರ್ಕ್ ಒಂದು ಹೀಗೆ ಓದುತ್ತದೆ - “@amarprasadreddy.”

    ವಿಡಿಯೋದಲ್ಲಿ ಕಂಡುಬಂದ ವಾಟರ್‌ಮಾರ್ಕ್‌ನ ಸ್ಕ್ರೀನ್‌ಶಾಟ್.

    ವಾಟರ್‌ಮಾರ್ಕ್‌ನ ಆಧಾರದ ಮೇಲೆ, ಬಿಜೆಪಿ ಕಾರ್ಯಕಾರಿ ಅಮರ್ ಪ್ರಸಾದ್ ರೆಡ್ಡಿ ಅವರು ಆರಂಭದಲ್ಲಿ ಈ ವೀಡಿಯೋವನ್ನು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.

    ಜೂನ್ ೯, ೨೦೨೪ ರಂದು ಎಕ್ಸ್ (ಎಡ) ಮತ್ತು ಇನ್ಸ್ಟಾಗ್ರಾಮ್ (ಬಲ) ನಲ್ಲಿ ಅಮರ್ ಪ್ರಸಾದ್ ರೆಡ್ಡಿ ಅವರು ಹಂಚಿಕೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


    ತರುವಾಯ, ನಾವು ರಾಹುಲ್ ಗಾಂಧಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನು ವಿಶ್ಲೇಷಿಸಿದ್ದೇವೆ ಮತ್ತು ಏಪ್ರಿಲ್ ೧೭, ೨೦೨೪ ರಂದು ಪೋಷ್ಟ್ ಮಾಡಿದ ವೀಡಿಯೋದ ಮೂಲ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಹಿಂದಿಯಲ್ಲಿರುವ ಅದರ ಶೀರ್ಷಿಕೆ ಹೀಗಿದೆ, "ಭಾರತದ ಬಗ್ಗೆ ಚಿಂತಿಸುತ್ತ, ಭಾರತವನ್ನು ಹುಡುಕುತ್ತ! (ಅನುವಾದಿಸಲಾಗಿದೆ)."

    ಏಪ್ರಿಲ್ ೧೭, ೨೦೨೪ ರಂದು ರಾಹುಲ್ ಗಾಂಧಿ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವೀಡಿಯೋ ಸಂದೇಶದ ಸ್ಕ್ರೀನ್‌ಶಾಟ್.


    ಮೂಲ ವೀಡಿಯೋದಲ್ಲಿ ಕಾರಿನಲ್ಲಿರುವ ಟಿವಿ ಸ್ಕ್ರೀನ್ ಖಾಲಿಯಾಗಿದೆ ಎಂದು ಎರಡೂ ವೀಡಿಯೋಗಳ ಕೀಫ್ರೇಮ್‌ಗಳನ್ನು ನಾವು ಹೋಲಿಸಿನೋಡಿದಾಗ ಕಂಡುಬಂದಿದೆ, ಮತ್ತು ಎಡಿಟ್ ಮಾಡಿದ ಈ ವೀಡಿಯೋದ ಆವೃತ್ತಿಯ ಪರದೆಯ ಮೇಲೆ ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿರುವುದರ ದೃಶ್ಯವನ್ನು ಜೋಡಿಸಲಾಗಿದೆ.

    ಮೂಲ ವೀಡಿಯೋದ ಕೀಫ್ರೇಮ್ (ಎಡ) ಮತ್ತು ವೈರಲ್ ವೈರಲ್ ವೀಡಿಯೋ (ಬಲ) ಮಧ್ಯೆ ಹೋಲಿಕೆ.


    ತೀರ್ಪು:

    ವೈರಲ್ ವೀಡಿಯೋದ ವಿಶ್ಲೇಷಣೆಯು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ಪ್ರಮಾಣ ವಚನ ಸಮಾರಂಭವನ್ನು ಕಾರಿನ ಒಳಗಿರುವ ಟಿವಿ ಸ್ಕ್ರೀನ್ ಮೇಲೆ ವೀಕ್ಷಿಸುತ್ತಿರುವುದನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಎಂದು ಖಚಿತಪಡಿಸಿದೆ. ಮೂಲ ವೀಡಿಯೋದಲ್ಲಿ ಟಿವಿ ಸ್ಕ್ರೀನ್ ಖಾಲಿಯಾಗಿತ್ತು. ಆದ್ದರಿಂದ, ಆನ್‌ಲೈನ್ ನಲ್ಲಿ ಈ ಬಗ್ಗೆ ಕಂಡುಬಂಡ ಹೇಳಿಕೆಗಳು ತಪ್ಪು.


    Claim Review :   Edited video falsely shared to show Rahul Gandhi watching PM Narendra Modi’s oath-taking ceremony
    Claimed By :  X user
    Fact Check :  False
    IDTU - Karnataka

    IDTU - Karnataka