೨೦೨೨ ರ ಭಾರತ್ ಜೋಡೋ ಸಂಗೀತ ಕಾರ್ಯಕ್ರಮದಲ್ಲಿ ಕಾಣುವ ರಾಹುಲ್ ಗಾಂಧಿಯವರ ವೀಡಿಯೋವನ್ನು ಎಡಿಟ್ ಮಾಡಿ ಅದು ಮುಜ್ರಾ ಕಾರ್ಯಕ್ರಮವೆಂದು ಹೇಳಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಗೀತ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಅವರಿರುವ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಇದು ಅವರು ಮುಜ್ರಾ ಕಾರ್ಯಕ್ರಮಕ್ಕೆ ಹಾಜರಾಗಿರುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿನ ಆಡಿಯೊವು ಭೋಜ್‌ಪುರಿ ಹಾಡನ್ನು ಒಳಗೊಂಡಿರುವಂತೆ ತೋರುತ್ತಿದೆ. ಆದರೆ, ಇದು ಡಿಸೆಂಬರ್ ೨೦೨೨ ರಲ್ಲಿ ಜೈಪುರದಲ್ಲಿ ನಡೆದ ಭಾರತ್ ಜೋಡೋ ಸಂಗೀತ ಕಾರ್ಯಕ್ರಮದ ವೀಡಿಯೋವಾಗಿದೆ. ಗಾಯಕಿ ಸುನಿಧಿ ಚೌಹಾನ್ ಹಾಡುತ್ತಿರುವ ಆಡಿಯೋವನ್ನು ಎಡಿಟ್ ಮಾಡಲಾಗಿದೆ, ಇದು ಈ ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಪೋಷ್ಟ್ ಗಳು ೧ ನಿಮಿಷದ ವೀಡಿಯೋವನ್ನು ಹಂಚಿಕೊಂಡಿವೆ, ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪಕ್ಕದಲ್ಲಿ ಕುಳಿತು ಸಂಗೀತ ಕಾರ್ಯಕ್ರಮವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿಯು ಅವರ ಹಿಂದೆ ಕುಳಿತಿರುವುದನ್ನು ಕಾಣಬಹುದು, ಜೋರಾಗಿ ಸಂಗೀತ ಪ್ಲೇ ಆಗುತ್ತಿದ್ದಂತೆ ಕಾರ್ಯಕ್ರಮವನ್ನು ರೆಕಾರ್ಡ್ ಮಾಡುತ್ತಾರೆ. ಈ ವೀಡಿಯೋ ಕ್ಲಿಪ್‌ನೊಂದಿಗೆ ಹಂಚಿಕೊಂಡಿರುವ ಶೀರ್ಷಿಕೆಯು, ಹೀಗಿದೆ - “ತಮ್ಮ ಕುಟುಂಬದ ಸಂಪ್ರದಾಯಗಳಾದ ಮುಜ್ರಾ ಮತ್ತು ದಬ್ಬಾಳಿಕೆಯನ್ನು ಇಷ್ಟಪಡುವ ರಾಹುಲ್ ಗಾಂಧಿ ಅವರು ರೀಲ್‌ಗಳನ್ನು ಮಾಡುತ್ತಿದ್ದಾರೆ ಮತ್ತು ನಂತರ ಮೋದಿ ಮುಜ್ರಾ ಹೆಸರನ್ನು ತೆಗೆದುಕೊಂಡು ಚುನಾವಣೆಯ ಮಟ್ಟವನ್ನು ಕೆಳಗಿಳಿಸಿದ್ದಾರೆ ಎಂದು ಹೇಳುತ್ತಾರೆ” (ಅನುವಾದಿಸಲಾಗಿದೆ). ಮೋದಿಗೆ ಸಂಬಂಧಿಸಿದ ಮುಜರಾದ ಉಲ್ಲೇಖವು ಮೇ ೨೫ ರಂದು ಅವರು ಮುಸ್ಲಿಮರನ್ನು ಮತಕ್ಕಾಗಿ ಓಲೈಸಲು ಇಂಡಿಯಾ ಬ್ಲಾಕ್ ಮುಜರಾ ಮಾಡುವುದಾಗಿ ಹೇಳಿರುವುದಾಗಿದೆ. ಆ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.
ಜೂನ್ ೪, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ರಾಹುಲ್ ಗಾಂಧಿಯವರ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ರಿವರ್ಸ್ ಇಮೇಜ್ ಸರ್ಚ್ ಮತ್ತು ಕೀವರ್ಡ್ ಸರ್ಚ್ ಮಾಡುವ ಮೂಲಕ, ಡಿಸೆಂಬರ್ ೨೦೨೨ ರ ಎಕ್ಸ್ ಪೋಷ್ಟ್ ಗಳು ಅದೇ ವೀಡಿಯೋವನ್ನು ಹಂಚಿಕೊಳ್ಳುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಷ್ಟ್ ಗಳ ಶೀರ್ಷಿಕೆಗಳಲ್ಲಿ ರಾಹುಲ್ ಗಾಂಧಿ ಜೈಪುರದಲ್ಲಿ ಗಾಯಕಿ ಸುನಿಧಿ ಚೌಹಾನ್ ಅವರ ಭಾರತ್ ಜೋಡೋ ಸಂಗೀತ ಕಾರ್ಯಕ್ರಮದಲ್ಲಿದ್ದರು ಎಂದು ಹೇಳಲಾಗಿದೆ. ಅಖಿಲೇಶ್ ತಿವಾರಿ ಎಂಬ ಮಾಜಿ ಪತ್ರಕರ್ತ ಕೂಡ ಇದೇ ಕ್ಲಿಪ್ ಅನ್ನು ಎಕ್ಸ್‌ನಲ್ಲಿ ಡಿಸೆಂಬರ್ ೧೮, ೨೦೨೨ ರಂದು ಹಂಚಿಕೊಂಡಿದ್ದಾರೆ, “ಭಾರತ್ ಜೋಡೋ ಯಾತ್ರ: ಸುನಿಧಿ ಚೌಹಾನ್ ಅವರ ವರ್ಣರಂಜಿತ ಕಾರ್ಯಕ್ರಮದೊಂದಿಗೆ ನೈಟ್ ಹಾಲ್ಟ್... ಅಶೋಕ್ ಗೆಹ್ಲೋಟ್ ಕೂಡ ರಾಹುಲ್ ಗಾಂಧಿ ಅವರೊಂದಿಗೆ ಕುಳಿತಿದ್ದಾರೆ. @RahulGandhi @ashokgehlot51 #BharatJodoYatra" (ಅನುವಾದಿಸಲಾಗಿದೆ).
ಡಿಸೆಂಬರ್ ೨೦೨೨ ರಲ್ಲಿ ಅದೇ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಮೇಲಿನ ಎಕ್ಸ್ ಪೋಷ್ಟ್ ಗಳಲ್ಲಿ ಹಂಚಿಕೊಳ್ಳಲಾದ ವೀಡಿಯೋ ಕ್ಲಿಪ್ ಯಾವುದೇ ಭೋಜ್‌ಪುರಿ ಹಾಡುಗಳನ್ನು ಹೊಂದಿಲ್ಲ. ಅವೆಲ್ಲವು ಸುನಿಧಿ ಚೌಹಾನ್ ಹಿಂದಿ ಹಾಡನ್ನು ಪ್ರದರ್ಶಿಸುತ್ತಿರುವ ಆಡಿಯೋವನ್ನು ಒಳಗೊಂಡಿರುತ್ತವೆ. ಕಾರ್ಯಕ್ರಮದ ಬಗ್ಗೆ ನಾವು ಹಲವಾರು ವರದಿಗಳನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ ೧೬, ೨೦೨೨ ರಂದು ಟಿವಿ9 ಭಾರತ್ ವರ್ಷ್ ವರದಿಯು ೧೦೦ ದಿನಗಳ ಭಾರತ್ ಜೋಡೋ ಯಾತ್ರೆಯಲ್ಲಿ ಗಾಯಕಿ ಸುನಿಧಿ ಚೌಹಾನ್ ರಾಜಸ್ಥಾನದ ಜೈಪುರದಲ್ಲಿ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಜೈರಾಮ್ ರಮೇಶ್ ಭಾಗವಹಿಸಿದ್ದರು. ಅಲ್ಬರ್ಟ್ ಹಾಲ್ ಮ್ಯೂಸಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸುನಿಧಿ ಯಾತ್ರೆಯ ೧೦೦ ನೇ ದಿನವನ್ನು ಆಚರಿಸಿದರು, ಅಲ್ಲಿ ಅವರು ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು.
ಡಿಸೆಂಬರ್ ೨೦೨೨ ರಲ್ಲಿ ಹಂಚಿಕೊಂಡ ವೀಡಿಯೋ ಕ್ಲಿಪ್ ಸುನಿಧಿ ಚೌಹಾನ್ ಹಾಡಿರುವ ಎಡಿಟ್ ಮಾಡದ ಆಡಿಯೋವನ್ನು ಹೊಂದಿದೆ ಮತ್ತು ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಭೋಜ್‌ಪುರಿ ಹಾಡನ್ನು ಸೇರಿಸಿ ಅದನ್ನು ಎಡಿಟ್ ಮಾಡಲಾಗಿದೆ ಎಂದು ಇದು ಸಾಬೀತುಪಡಿಸುತ್ತದೆ. ಆ ಸಮಯದಲ್ಲಿ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಸಂಯೋಜಕರಾದ ನಿತಿನ್ ಅಗರ್ವಾಲ್ ಅವರು ಡಿಸೆಂಬರ್ ೧೬, ೨೦೨೨ ರಂದು ಎಕ್ಸ್ ನಲ್ಲಿ ಸಂಗೀತ ಕಾರ್ಯಕ್ರಮದ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ವೈರಲ್ ವೀಡಿಯೋದಲ್ಲಿರುವಂತೆಯೇ ದೃಶ್ಯಗಳನ್ನು ಒಳಗೊಂಡಿವೆ.
ಡಿಸೆಂಬರ್ ೧೬, ೨೦೨೩ ರಂದು ನಡೆದ ಭಾರತ್ ಜೋಡೋ ಸಂಗೀತ ಕಾರ್ಯಕ್ರಮದ ದೃಶ್ಯಗಳನ್ನು ಹಂಚಿಕೊಳ್ಳುವ ನಿತಿನ್ ಅಗರ್ವಾಲ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ತೀರ್ಪು:
೨೦೨೨ ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ನಡೆದ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರ ಎಡಿಟ್ ಮಾಡಲಾದ ಕ್ಲಿಪ್ ಅನ್ನು ಇತ್ತೀಚೆಗೆ ರಾಹುಲ್ ಗಾಂಧಿ ಅವರು ಮುಜ್ರಾ ಕಾರ್ಯಕ್ರಮವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಲು ಹಂಚಿಕೊಳ್ಳಲಾಗಿದೆ ಎಂದು ಈ ಹೇಳಿಕೆಯ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.