Begin typing your search above and press return to search.
    Others

    ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಗೆಲುವಿನ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಪಾಕಿಸ್ತಾನದ ಧ್ವಜವನ್ನು ಬೀಸಲಾಯಿತು ಎಂಬ ಆರೋಪಗಳು ತಪ್ಪು

    IDTU - Karnataka
    6 Jun 2024 10:10 AM GMT
    ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಗೆಲುವಿನ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಪಾಕಿಸ್ತಾನದ ಧ್ವಜವನ್ನು ಬೀಸಲಾಯಿತು ಎಂಬ ಆರೋಪಗಳು ತಪ್ಪು
    x

    ಸಾರಾಂಶ:

    ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಡಿ (ಎಂವಿಎ) ಒಕ್ಕೊಟ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ ಹಿನ್ನಲೆಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಕೆಲವರು ಬೀಸಿದರು ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಅಲ್ಲಿ ಬಳಸಿರುವ ಧ್ವಜವು ಪಾಕಿಸ್ತಾನದ್ದಾಳಾ. ಆದರಿಂದ ಈ ಬಗ್ಗೆ ಆನ್ಲೈನ್ ನಲ್ಲಿ ಮಾಡಿರುವ ಆರೋಪಗಳು ತಪ್ಪು.


    ಹೇಳಿಕೆ:

    ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಒಟ್ಟು ೪೮ ಲೋಕಸಭಾ ಸ್ಥಾನಗಳ ಪೈಕಿ ಮಹಾ ವಿಕಾಸ್ ಅಘಾಡಿ ೩೦ ಸ್ಥಾನಗಳನ್ನು ಗೆದ್ದುಕೊಂಡಿದೆ. ಜೂನ್ ೪, ೨೦೨೪ ರಂದು ಮಹಾರಾಷ್ಟ್ರದ ಅಹ್ಮದ್‌ನಗರದ ಶ್ರೀರಾಮಪುರದಲ್ಲಿ ಎಂವಿಎ ವಿಜಯೋತ್ಸವದ ಸಂದರ್ಭದಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಬೀಸುತ್ತಿರುವುದನ್ನು ತೋರಿಸಲು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸುದರ್ಶನ್ ನ್ಯೂಸ್ ಮರಾಠಿ ಜೂನ್ ೪, ೨೦೨೪ ರಂದು ಮರಾಠಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ವಾರ್ಡ್ ನಂ. ೨ ರಲ್ಲಿ ಮಹಾ ವಿಕಾಸ್ ಅಘಾಡಿ ಅವರ ವಿಜಯವನ್ನು ಆಚರಿಸುವಾಗ, ಅಂದರೆ, ಶ್ರೀರಾಂಪುರದ ವೆಸ್ಟನ್ ಚೌಕ್ ಪ್ರದೇಶದಲ್ಲಿ, ಮುಸ್ಲಿಂ ಸಾಮಾಜಿಕ ಕಾರ್ಯಕರ್ತರು ಪಾಕಿಸ್ತಾನದ ಧ್ವಜವನ್ನು ಬೀಸಿದರು. ... #ಲೋಕಸಭಾ_ಚುನಾವಣೆ2024 #ಫಲಿತಾಂಶ (ಅನುವಾದಿಸಲಾಗಿದೆ)." ಈ ಪೋಷ್ಟ್ ೨೧೫ ಸಾವಿರ ವೀಕ್ಷಣೆಗಳು, ೭೯೨ ಇಷ್ಟಗಳು, ೫೭೮ ಮರುಪೋಷ್ಟ್ ಗಳನ್ನು ಗಳಿಸಿದೆ. ಸುದರ್ಶನ್ ನ್ಯೂಸ್ ಆಗಾಗ್ಗೆ ಸುಳ್ಳು ಕೋಮು ನಿರೂಪಣೆಗಳನ್ನು ಹಂಚಿಕೊಳ್ಳುತ್ತದೆ.

    ಜೂನ್ ೪, ೨೦೨೪ ರಂದು ಸುದರ್ಶನ್ ನ್ಯೂಸ್ ಮರಾಠಿ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌.


    ಮತ್ತೊಬ್ಬ ಬಳಕೆದಾರರು ಜೂನ್ ೫, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋವನ್ನು ವಿವಿಧ ಪ್ಲಾಟ್ಫಾರ್ಮ್ ಗಳಲ್ಲಿ ಹಂಚಿಕೊಳ್ಳಲು #Loksabha_Election2024 ಅನ್ನು ಬಳಸಲಾಗಿದೆ ಎಂದು ನಾವು ಗುರುತಿಸಿದ್ದೇವೆ.


    ಪುರಾವೆ:

    ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಧ್ವಜ ಅದೊಂದು ಇಸ್ಲಾಮಿಕ್ ಧ್ವಜ ಎಂದು ಕಂಡುಬಂದಿದೆ. ಈ ಧ್ವಜವು ಮೊಹರಂ ಅಥವಾ ಈದ್ ಮಿಲಾದ್-ಉನ್-ನಬಿ ಮೆರವಣಿಗೆಗಳಲ್ಲಿ ಹೆಚ್ಚಾಗಿ ಗೋಚರಿಸುತ್ತವೆ ಮತ್ತು ಪಾಕಿಸ್ತಾನಿ ಧ್ವಜ ಎಂದು ಆಗಾಗ್ಗೆ ತಪ್ಪಾಗಿ ಗ್ರಹಿಸಲಾಗಿದೆ.

    ವೈರಲ್ ವೀಡಿಯೋದ ಧ್ವಜ ಮತ್ತು ಪಾಕಿಸ್ತಾನದ ಧ್ವಜಗಳ ಮಧ್ಯದ ಹೋಲಿಕೆ.


    ಎರಡು ಧ್ವಜಗಳ ನಡುವಿನ ವ್ಯತ್ಯಾಸವು ಈ ಕೆಳಗಿನಂತಿದೆ:

    • ಪಾಕಿಸ್ತಾನಿ ಧ್ವಜವು ಎಡಬದಿಯಲ್ಲಿ ಒಂದು ಬಿಳಿ ಲಂಬವಾದ ಪಟ್ಟಿಯನ್ನು ಹೊಂದಿದೆ. ಇದು ಇಸ್ಲಾಮಿಕ್ ಧ್ವಜದಲ್ಲಿ ಕಂಡುಬಂದಿಲ್ಲ.
    • ಇಸ್ಲಾಮಿಕ್ ಧ್ವಜವು ಬಿಳಿ ಚುಕ್ಕೆಗಳನ್ನು ಹೊಂದಿದೆ, ಆದರೆ ಪಾಕಿಸ್ತಾನದ ಧ್ವಜವು ಇವುಗಳನ್ನು ಹೊಂದಿಲ್ಲ.
    • ಇಸ್ಲಾಮಿಕ್ ಧ್ವಜದ ಪಂಚಮುಖದ ನಕ್ಷತ್ರವು ಪಾಕಿಸ್ತಾನಿ ಧ್ವಜಕ್ಕಿಂತ ದೊಡ್ಡದಾಗಿದೆ.

    ನಾವು ವೈರಲ್ ವೀಡಿಯೋವನ್ನು ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಮಹಾರಾಷ್ಟ್ರದ ಶ್ರೀರಾಂಪುರದ ಜವಾಹರಲಾಲ್ ನೆಹರು ರಸ್ತೆಯ ವೆಸ್ಟನ್ ಟವರ್ ಬಳಿ ಘಟನೆ ಸಂಭವಿಸಿದೆ ಎಂದು ಖಚಿತಪಡಿಸಿದ್ದೇವೆ.


    ತೀರ್ಪು:

    ಮಹಾರಾಷ್ಟ್ರದ ಶ್ರೀರಾಂಪುರದಲ್ಲಿ ಮಹಾ ವಿಕಾಸ್ ಅಘಾಡಿಯ (ಎಂವಿಎ) ಚುನಾವಣಾ ಗೆಲುವಿನ ಆಚರಣೆಯ ಸಂದರ್ಭದಲ್ಲಿ ಕಂಡುಬಂದ ಇಸ್ಲಾಮಿಕ್ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರಧ್ವಜ ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂದು ವೈರಲ್ ವೀಡಿಯೋದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಬಗ್ಗೆ ಆನ್ಲೈನ್ ನಲ್ಲಿ ಕಂಡುಬಂದ ಆರೋಪಗಳು ತಪ್ಪು.

    Claim Review :   Flag waved in Maharashtra after the Maha Vikas Agadi's LS win is not the Pakistani flag
    Claimed By :  X user
    Fact Check :  False
    IDTU - Karnataka

    IDTU - Karnataka