Begin typing your search above and press return to search.
    Others

    ವಯನಾಡಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಪರಿಹಾರ ಕಾರ್ಯಗಳನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳಲು ೨೦೧೮ ರ ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ

    IDTU - Karnataka
    8 Aug 2024 8:40 AM GMT
    ವಯನಾಡಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಪರಿಹಾರ ಕಾರ್ಯಗಳನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳಲು ೨೦೧೮ ರ ಹಳೆಯ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಇತ್ತೀಚಿನ ಭೂಕುಸಿತದ ನಂತರ ಕೇರಳದ ವಯನಾಡ್ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತರು ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವುದನ್ನು ತೋರಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಚಿತ್ರಗಳು ೨೦೧೮ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದ್ದು ಮತ್ತು ಸಂದರ್ಭಾನುಸಾರವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಈ ಚಿತ್ರದ ತನಿಖೆಯು ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ.

    ಹೇಳಿಕೆ:

    ಕೇರಳದ ವಯನಾಡಿನಲ್ಲಿ ಇತ್ತೀಚಿನ ಭೂಕುಸಿತಗಳು ಗಮನಾರ್ಹ ಹಾನಿ ಮತ್ತು ನಿವಾಸಿಗಳ ಸ್ಥಳಾಂತರಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ, ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಈ ಇತ್ತೀಚಿನ ಭೂಕುಸಿತದ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಬಿಂಬಿಸುವ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಸ್ಥಳೀಯ ಸಂಸದರು ಗೈರುಹಾಜರಾಗಿರುವಾಗ ಆರ್‌ಎಸ್‌ಎಸ್ ಸದಸ್ಯರು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ ಎಂದು ಪೋಷ್ಟ್ ಗಳು ಸೂಚಿಸುತ್ತವೆ. ಕೆಲವು ಬಳಕೆದಾರರು ಸ್ಥಳೀಯ ಎಂಪಿಯವರ ಗೈರುಹಾಜರಿಯನ್ನು ಈ ಚೀಟಿಗಳನ್ನು ಬಳಸುವ ಮೂಲಕ ಟೀಕಿಸಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕ ಎಂದು ಸ್ವತಃ ಹೇಳಿಕೊಂಡಿರುವ ಶೀತಲ್ ಚೋಪ್ರಾ ಎಂಬವರು ರಾಹುಲ್ ಗಾಂಧಿ ಎಲ್ಲಿಯೂ ಕಾಣಿಸದಿದ್ದರೂ, ಆರ್‌ಎಸ್‌ಎಸ್ ಧರ್ಮ, ಜಾತಿ ಮತ್ತು ಸಿದ್ಧಾಂತವನ್ನು ಲೆಕ್ಕಿಸದೆ ಸೇವೆಯನ್ನು ನಂಬುತ್ತದೆ ಎಂದು ಹೇಳಿಕೊಂಡು ಈ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಟೀಕಿಸಿದ್ದಾರೆ. ಜುಲೈ ೩೧, ೨೦೨೪ ರ ಹೊತ್ತಿಗೆ ಅವರ ಪೋಷ್ಟ್ ೩ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

    ಜುಲೈ ೩೧, ೨೦೨೪ ರಂದು ಹಂಚಿಕೊಳ್ಳಲಾದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ಈ ವೈರಲ್ ಚಿತ್ರಗಳ ಕುರಿತು ನಮ್ಮ ತನಿಖೆಯು ಅವುಗಳನ್ನು ಸಂದರ್ಭಕ್ಕೆ ಮೀರಿ ಹಂಚಿಕೊಳ್ಳಲಾಗುತ್ತಿದೆ ಮತ್ತು ವಯನಾಡಿನಲ್ಲಿ ಪ್ರಸ್ತುತ ರಕ್ಷಾ ಪ್ರಯತ್ನಗಳನ್ನು ಇವು ತೋರಿಸಿಲ್ಲ ಎಂದು ತಿಳಿದುಬಂದಿದೆ. ರಿವರ್ಸ್ ಇಮೇಜ್ ಹುಡುಕಾಟಗಳ ಮೂಲಕ, ಈ ಚಿತ್ರಗಳು ಆಗಸ್ಟ್ ೨೦೧೮ ರ ಕೇರಳದ ಪ್ರವಾಹದ ಸಮಯದಲ್ಲಿ ಚಿತ್ರೀಕರಿಸಿದ್ದವು ಎಂದು ನಾವು ಕಂಡುಕೊಂಡಿದ್ದೇವೆ. ಈ ಚಿತ್ರಗಳ ಮೂಲವು ಆಗಸ್ಟ್ ೧೮, ೨೦೧೮ ರಂದು ಎಬಿವಿಪಿ-ಭಾಸ್ಕರಾಚಾರ್ಯ ಕಾಲೇಜಿನ ಫೇಸ್‌ಬುಕ್ ಪೋಷ್ಟ್ ಆಗಿದೆ. ಆ ಸಮಯದಲ್ಲಿ ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಹೋಗಿದ್ದ ಆರ್‌ಎಸ್‌ಎಸ್‌ನ ಸೇವಾ ಭಾರತಿ ಕೇರಳ ಮತ್ತು ಎಬಿವಿಪಿ ಸ್ವಯಂಸೇವಕರನ್ನು ತೋರಿಸುತ್ತದೆ ಎಂದು ಈ ಪೋಷ್ಟ್ ವಿವರಿಸುತ್ತದೆ. ಈ ಪೋಷ್ಟ್ ದೇಣಿಗೆ ಮತ್ತು ಪ್ರವಾಹ ಪರಿಹಾರ ಪ್ರಯತ್ನಗಳಿಗೆ ಸಹಾಯಕ್ಕಾಗಿ ನೀಡಿರುವ ಕರೆಯನ್ನು ಕೂಡ ಒಳಗೊಂಡಿದೆ. ಪ್ರವಾಹದ ಪೀಡಿತ ಪ್ರದೇಶಗಳಲ್ಲಿ ಜನರು ನಡೆದುಕೊಂಡು ಹೋಗುವುದು, ಶುಚಿಗೊಳಿಸುವ ಕಾರ್ಯಾಚರಣೆಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ರಕ್ಷಣಾ ಪ್ರಯತ್ನಗಳು ಸೇರಿದಂತೆ ಪ್ರವಾಹ ಪರಿಹಾರ ಕಾರ್ಯದ ವಿವಿಧ ದೃಶ್ಯಗಳನ್ನು ಈ ಚಿತ್ರಗಳು ತೋರಿಸುತ್ತವೆ.

    ಆಗಸ್ಟ್ ೧೮, ೨೦೧೮ ರಂದು ಎಬಿವಿಪಿ-ಭಾಸ್ಕರಾಚಾರ್ಯ ಕಾಲೇಜು ಅಪ್‌ಲೋಡ್ ಮಾಡಿದ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಹೆಚ್ಚಿನ ತನಿಖೆಯು ಈ ಚಿತ್ರಗಳ ೨೦೧೮ ರ ಮೂಲವನ್ನು ದೃಢೀಕರಿಸುವ ಹೆಚ್ಚುವರಿ ಮೂಲಗಳಿಗೆ ನಮ್ಮನ್ನು ಕರೆದೊಯ್ಯಿತು. ಆಗಸ್ಟ್ ೨೦೧೮ರ ವಿ ಎಸ್ ಕೆ ತಮಿಳುನಾಡಿನ ಅಧಿಕೃತ ವೆಬ್‌ಸೈಟ್‌ನಲ್ಲಿ ವೈರಲ್ ಚಿತ್ರಗಳಲ್ಲಿ ಒಂದನ್ನು ಒಳಗೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಆ ಸಮಯದಲ್ಲಿ ಕೇರಳದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ೩೫೦ ಸೇವಾ ಭಾರತಿ ಘಟಕಗಳು ಮತ್ತು ೫,೦೦೦ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಈ ವೆಬ್‌ಸೈಟ್ ವರದಿ ಮಾಡಿದೆ.

    ಆ ವರ್ಷ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಈ ಚಿತ್ರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಆಗಸ್ಟ್ ೨೦೧೮ ರ ಹಲವಾರು ಎಕ್ಸ್ ಪೋಷ್ಟ್ ಗಳನ್ನೂ ಕೂಡ ನಾವು ಕಂಡುಕೊಂಡಿದ್ದೇವೆ. ಉದಾಹರಣೆಗೆ, ಒಬ್ಬ ಎಕ್ಸ್ ಬಳಕೆದಾರರು ಆಗಸ್ಟ್ ೧೯, ೨೦೧೮ ರಂದು ಪ್ರವಾಹ ಸಂತ್ರಸ್ತರ ಸೇವೆಗಾಗಿ ಬಂದ ಕಾರ್ಯಕರ್ತರನ್ನು ಶ್ಲಾಘಿಸುತ್ತ ಚಿತ್ರಗಳಲ್ಲಿ ಒಂದನ್ನು ಹಂಚಿಕೊಂಡಿದ್ದಾರೆ. ವಯನಾಡಿನಲ್ಲಿ ಪ್ರಸ್ತುತ ಆರ್‌ಎಸ್‌ಎಸ್ ಪರಿಹಾರ ಪ್ರಯತ್ನಗಳು ನಡೆದಿವೆಯೇ ಎಂದು ಪರಿಶೀಲಿಸಲು ನಾವು ಆರ್‌ಎಸ್‌ಎಸ್ -ಸಂಯೋಜಿತ ಮಾಧ್ಯಮದಿಂದ ಇತ್ತೀಚಿನ ವರದಿಗಳನ್ನು ಪರಿಶೀಲಿಸಿದ್ದೇವೆ, ಮತ್ತು ಅವರು ಮಾಡಿದ ಪರಿಹಾರ ಕಾರ್ಯಗಳ ಹಲವಾರು ಚಿತ್ರಗಳನ್ನು ಕಂಡುಕೊಂಡಿದ್ದೇವೆ. ಆದರೆ, ವೈರಲ್ ಚಿತ್ರಗಳು ಇತ್ತೀಚಿನ ಪ್ರವಾಹ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿಲ್ಲ.

    ತೀರ್ಪು:

    ವಯನಾಡಿನಲ್ಲಿ ಪ್ರಸ್ತುತ ಆರ್‌ಎಸ್‌ಎಸ್ ಪರಿಹಾರ ಪ್ರಯತ್ನಗಳಾಗಿ ಹಂಚಿಕೊಳ್ಳಲಾಗುತ್ತಿರುವ ಚಿತ್ರಗಳು ವಾಸ್ತವವಾಗಿ ೨೦೧೮ ರ ಕೇರಳ ಪ್ರವಾಹದಿಂದ ಬಂದವು ಎಂದು ಇವುಗಳ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆರ್‌ಎಸ್‌ಎಸ್-ಸಂಯೋಜಿತ ಸಂಸ್ಥೆಗಳಿಂದ ಪರಿಹಾರ ಪ್ರಯತ್ನಗಳನ್ನು ತೋರಿಸುವುದಾಗಿ ಹೇಳಿಕೊಂಡು ಹಂಚಿಕೊಂಡಿರುವ ಚಿತ್ರಗಳು ಇತ್ತೀಚಿನ ಘಟನೆಗಳನ್ನು ತೋರಿಸುವುದಿಲ್ಲ ಮತ್ತು ಅವುಗಳನ್ನು ಸಂದರ್ಭಾನುಸಾರ ಹಂಚಿಕೊಳ್ಳಲಾಗುತ್ತಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಕೇರಳದಲ್ಲಿ ಪ್ರಸ್ತುತ ಪರಿಹಾರ ಕಾರ್ಯಗಳಲ್ಲಿ ಭಾಗಿಯಾಗಿದ್ದರೂ, ಈ ನಿರ್ದಿಷ್ಟ ಚಿತ್ರಗಳು ಆ ಚಟುವಟಿಕೆಗಳನ್ನು ಬಿಂಬಿಸುವುದಿಲ್ಲ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿವೆ.


    Claim Review :   Images claiming to show RSS relief work in Wayanad are from the 2018 floods and not recent
    Claimed By :  X user
    Fact Check :  Misleading
    IDTU - Karnataka

    IDTU - Karnataka