ಕೇರಳದ ನೀಟ್ ಕೋಚಿಂಗ್ ಸೆಂಟರ್‌ನ ಪತ್ರಿಕೆಯ ಜಾಹೀರಾತನ್ನು ನೀಟ್ ಹಗರಣದ ಫಲಾನುಭವಿಗಳ ಪಟ್ಟಿ ಎಂದು ಕೋಮುವಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) ೨೦೨೪ (ನೀಟ್-ಯುಜಿ ೨೦೨೪) ಪ್ರಶ್ನೆ ಪತ್ರಿಕೆ ಲೀಕ್ ನಿಂದ ಪ್ರಯೋಜನ ಪಡೆದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಪಟ್ಟಿಯನ್ನು ತೋರಿಸುತ್ತಾ ಸಾಮಾಜಿಕ ಮಾಧ್ಯಮ ಬಳಕೆದಾರರು ಪತ್ರಿಕೆ ಕ್ಲಿಪ್ಪಿಂಗ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಪತ್ರಿಕೆ ಕ್ಲಿಪ್ಪಿಂಗ್ ಕೇರಳದ ಮಲಪ್ಪುರಂನ ಕೋಚಿಂಗ್ ಸೆಂಟರ್‌ನ ಜಾಹೀರಾತನ್ನು ತೋರಿಸುತ್ತದೆ, ನೀಟ್-ಯುಜಿ ೨೦೨೪ ರಲ್ಲಿ ಅಗ್ರಸ್ಥಾನದಲ್ಲಿರುವ ಮತ್ತು ಪ್ರಶ್ನೆ ಪತ್ರಿಕೆ ಲೀಕ್ ಹಗರಣಕ್ಕೆ ಸಂಬಂಧಿಸದ ಕೋಚಿಂಗ್ ಸೆಂಟರ್ ನ ವಿವಿಧ ಧರ್ಮಗಳ ವಿದ್ಯಾರ್ಥಿಗಳನ್ನು ಪ್ರದರ್ಶಿಸುತ್ತದೆ. ಇದು ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
ಭಾರತದ ಸುಪ್ರೀಂ ಕೋರ್ಟ್ ಜುಲೈ ೧೧, ೨೦೨೪ ರಂದು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ೨೦೨೪ ರ ಸಮಯದಲ್ಲಿ ವ್ಯಾಪಕ ಅಕ್ರಮಗಳು ಮತ್ತು ಅವ್ಯವಹಾರಗಳನ್ನು ಆರೋಪಿಸಿ ಅರ್ಜಿಗಳ ಸರಣಿಯನ್ನು ಆಲಿಸುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪತ್ರಿಕೆಯ ಕ್ಲಿಪ್ಪಿಂಗ್‌ನ ಫೋಟೋವನ್ನು ಹಂಚಿಕೊಂಡಿದ್ದಾರೆ. ನೀಟ್-ಯುಜಿ ೨೦೨೪ ಪ್ರಶ್ನೆ ಪತ್ರಿಕೆಯ ಲೀಕ್ ನಿಂದ ಲಾಭ ಪಡೆದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಚಿತ್ರ ತೋರಿಸುತ್ತದೆ ಎಂದು ಪೋಷ್ಟ್ ಹೇಳುತ್ತದೆ. ಫೇಸ್‌ಬುಕ್ ಬಳಕೆದಾರರು ಜೂನ್ ೧೪, ೨೦೨೪ ರಂದು ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದು ಹೀಗೆಂದು ಹೇಳುತ್ತದೆ - "ಮದರಸಾ ಪ್ರವೇಶ ಪಟ್ಟಿ ಅಲ್ಲ, ನೀಟ್ ಪಾಸಾಗಿರುವವರು.... ವ್ಯಾಪಾರ ಜಿಹಾದ್, ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ನಾರ್ಕೋಟಿಕ್ ಜಿಹಾದ್ ಇತರ ಜಿಹಾದ್. ಹೆಚ್ಚು ಮಕ್ಕಳನ್ನು ಬೆಳೆಸಿಕೊಳ್ಳಿ. ಅವರಿಗೆ ಶಿಕ್ಷಣ ನೀಡಿ ಸಾಧ್ಯವಾದಷ್ಟು ಮತ್ತು ಅವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ" (ಅನುವಾದಿಸಲಾಗಿದೆ). ೨೦೨೪ ರ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಸಂಬಂಧಿಸಿದಂತೆ ಸಿಬಿಐ ಮುಸ್ಲಿಮರನ್ನು ಮಾತ್ರ ಬಂಧಿಸಿದೆ ಎಂದು ಪೋಷ್ಟ್ ಸೂಚಿಸುತ್ತದೆ.
ನೀಟ್-ಯುಜಿ ೨೦೨೪ ಪ್ರಶ್ನೆ ಪತ್ರಿಕೆ ಲೀಕ್ ನಿಂದ ಲಾಭ ಪಡೆದ ಮುಸ್ಲಿಂ ವಿದ್ಯಾರ್ಥಿಗಳ ಪಟ್ಟಿಯನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇನ್ನೊಬ್ಬ ಫೇಸ್‌ಬುಕ್ ಬಳಕೆದಾರರು ಜೂನ್ ೧೪, ೨೦೨೪ ರಂದು ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಕೋಮು ಶೀರ್ಷಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ವಿಶ್ಲೇಷಿಸಿದ್ದೇವೆ ಮತ್ತು ಮೇಲ್ಭಾಗದಲ್ಲಿರುವ ಮಲಯಾಳಂ ಪಠ್ಯವು "ಕೊಟ್ಟಕ್ಕಲ್ ಯುನಿವರ್ಸಲ್ ಇನ್‌ಸ್ಟಿಟ್ಯೂಟ್" ಎಂದು ಹೇಳುವುದನ್ನು ನಾವು ಕಂಡುಕೊಂಡಿದ್ದೇವೆ.
ವೈರಲ್ ಫೋಟೋದಲ್ಲಿನ ಮಲಯಾಳಂ ಪಠ್ಯದ ಸ್ಕ್ರೀನ್‌ಶಾಟ್.
ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು ಕೇರಳದ ಮಲಪ್ಪುರಂನ ಕೊಟ್ಟಕ್ಕಲ್ ನಲ್ಲಿನ ಯೂನಿವರ್ಸಲ್ ಇನ್‌ಸ್ಟಿಟ್ಯೂಟ್‌ನ ಜಾಲತಾಣವನ್ನು ಪರಿಶೀಲಿಸಿದ್ದೇವೆ ಮತ್ತು ಅವರು ಸಂಸ್ಥೆಯ ಜಾಲತಾಣದಲ್ಲಿ ನೀಟ್ ೨೦೨೪ ಟಾಪರ್‌ಗಳ ಪಟ್ಟಿಯನ್ನು ಪ್ರಕಟಿಸೀರುವುದನ್ನು ಕಂಡುಕೊಂಡಿದ್ದೇವೆ.
ನೀಟ್-ಯುಜಿ ೨೦೨೪ ರಲ್ಲಿ ಅಗ್ರಸ್ಥಾನ ಪಡೆದ ಕೊಟ್ಟಕ್ಕಲ್‌ನ ಯೂನಿವರ್ಸಲ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳ ಪಟ್ಟಿಯ ಸ್ಕ್ರೀನ್‌ಶಾಟ್.
ನಾವು ಜಾಲತಾಣದಲ್ಲಿನ ಪಟ್ಟಿಯೊಂದಿಗೆ ವೈರಲ್ ಚಿತ್ರವನ್ನು ಹೋಲಿಸಿದ್ದೇವೆ ಮತ್ತು ಅವುಗಳ ನಿಖರವಾದ ಹೊಂದಾಣಿಕೆಯನ್ನು ಕಂಡುಕೊಂಡಿದ್ದೇವೆ. ಈ ಪಟ್ಟಿಯಲ್ಲಿ ಇತರ ಧಾರ್ಮಿಕ ಸಮುದಾಯಗಳ ವಿದ್ಯಾರ್ಥಿಗಳೂ ಸೇರಿದ್ದಾರೆ.
ವೈರಲ್ ನ್ಯೂಸ್ ಪೇಪರ್ ಕ್ಲಿಪ್ಪಿಂಗ್ (ಎಡ) ಮತ್ತು ಯುನಿವರ್ಸಲ್ ಇನ್‌ಸ್ಟಿಟ್ಯೂಟ್‌ನ ಜಾಲತಾಣದಲ್ಲಿ (ಬಲ) ಪ್ರಕಟವಾದ ಫೋಟೋದ ಹೋಲಿಕೆ.
ನಂತರ ನಾವು "ಯೂನಿವರ್ಸಲ್ ಇನ್‌ಸ್ಟಿಟ್ಯೂಟ್," "ಕೊಟ್ಟಕ್ಕಲ್," ಮತ್ತು "ನೀಟ್" ನಂತಹ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಅದು ಜುಲೈ ೭, ೨೦೨೪ ರ ದಿ ಹಿಂದೂ ವರದಿಗೆ ನಮ್ಮನ್ನು ಕರೆದೊಯ್ಯಿತು.
ಜುಲೈ ೭, ೨೦೨೪ ರ ದಿ ಹಿಂದೂ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮ ಬಳಕೆದಾರರು ನೀಟ್ ೨೦೨೪ ರ ಟಾಪರ್‌ಗಳನ್ನು ಅಭಿನಂದಿಸುವ ಪತ್ರಿಕೆಯ ಜಾಹೀರಾತುಗಳಲ್ಲಿ ಒಂದನ್ನು ಕೋಮು ದ್ವೇಷವನ್ನು ಪ್ರಚಾರ ಮಾಡಲು ಬಳಸಿದ ನಂತರ ಕೋಚಿಂಗ್ ಸಂಸ್ಥೆ ಪೊಲೀಸರಿಗೆ ದೂರು ನೀಡಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಮಲಯಾಳಂ ದೈನಿಕ ಪತ್ರಿಕೆ ಮಾತೃಭೂಮಿಯಲ್ಲಿ ಕೋಮು ನಿರ್ದೇಶನದೊಂದಿಗೆ ಜಾಹೀರಾತನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿವಿಧ ಧಾರ್ಮಿಕ ಗುಂಪುಗಳ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಾರೆ ಮತ್ತು ಇತ್ತೀಚಿನ ನೀಟ್ ಹಗರಣಕ್ಕೆ ಯಾವುದೇ ರೀತಿಯಲ್ಲಿ ಸಂಸ್ಥೆಯ ಅಥವಾ ವಿದ್ಯಾರ್ಥಿಗಳ ಸಂಬಂಧವನ್ನು ನಿರಾಕರಿಸಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕರನ್ನು ವರದಿ ಉಲ್ಲೇಖಿಸಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ತಪ್ಪು ಕೋಮು ನಿರೂಪಣೆಯೊಂದಿಗೆ ಪತ್ರಿಕೆಯ ಜಾಹೀರಾತನ್ನು ಹಂಚಿಕೊಂಡಿದ್ದಾರೆ ಎಂದು ಇದು ಸ್ಪಷ್ಟಪಡಿಸುತ್ತದೆ.
ತೀರ್ಪು:
ಕೇರಳದ ಮಲಪ್ಪುರಂನಲ್ಲಿರುವ ಕೋಚಿಂಗ್ ಸೆಂಟರ್ ನ ಪತ್ರಿಕೆಯ ಜಾಹೀರಾತಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತಪ್ಪು ಕೋಮು ನಿರ್ದೇಶನ ನೀಡಿದ್ದಾರೆ ಮತ್ತು ಅದನ್ನು ನೀಟ್-ಯುಜಿ ೨೦೨೪ ಪ್ರಶ್ನೆ ಪತ್ರಿಕೆ ಲೀಕ್ ಗೆ ಸಂಬಂಧಿಸಿದ್ದಾರೆ ಎಂದು ವೈರಲ್ ಪೋಷ್ಟ್ ನ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.