Begin typing your search above and press return to search.
    Others

    ಸುದ್ದಿ ವರದಿಯು ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಅಂತ್ಯವಾಗಿದೆ ಎಂಬ ತಪ್ಪುದಾರಿಗೆಳೆಯುವ ಶೀರ್ಷಿಕೆಯನ್ನು ಬಳಸಿದೆ

    IDTU - Karnataka
    21 Jun 2024 8:40 AM GMT
    ಸುದ್ದಿ ವರದಿಯು ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಅಂತ್ಯವಾಗಿದೆ ಎಂಬ ತಪ್ಪುದಾರಿಗೆಳೆಯುವ ಶೀರ್ಷಿಕೆಯನ್ನು ಬಳಸಿದೆ
    x

    ಸಾರಾಂಶ:

    ಕರ್ನಾಟಕ ಮೂಲದ ಸ್ವತಂತ್ರ ಸುದ್ದಿ ಮಾಧ್ಯಮ ಕನ್ನಡ ನೀಡ್ಸ್‌ನ ಶೀರ್ಷಿಕೆಯು ಕರ್ನಾಟಕದ ಶಕ್ತಿ ಯೋಜನೆ ಅಂತ್ಯವಾಗಿದೆ ಎಂದು ಸೂಚಿಸುತ್ತದೆ. ಈ ಯೋಜನೆಯಲ್ಲಿ ರಾಜ್ಯದ ಮಹಿಳೆಯರು ಅನೇಕ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬೊಹುದು. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್ಆರ್ ಟಿಸಿ) ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಅಳವಡಿಸಲು ಕರ್ನಾಟಕ ಸರ್ಕಾರದ ನಿರ್ಧಾರವನ್ನು ವರದಿಯ ವಿಷಯವು ಚರ್ಚಿಸುತ್ತದೆ. ಆದ್ದರಿಂದ, ಈ ಶೀರ್ಷಿಕೆಯು ತಪ್ಪುದಾರಿಗೆಳೆಯುವಂತಿದೆ.


    ಹೇಳಿಕೆ:

    ೨೦೨೪ ರ ಲೋಕಸಭಾ ಚುನಾವಣೆಯ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಖಾತರಿ ಯೋಜನೆಗಳನ್ನು ಸ್ಥಗಿತಗೊಳಿಸಬಹುದು ಎಂಬ ಊಹಾಪೋಹಗಳು ಇದ್ದವು. ಅಂತಹ ಒಂದು ಖಾತರಿ ಯೋಜನೆಯಾದ ಕರ್ನಾಟಕ ಶಕ್ತಿ ಯೋಜನೆಯು ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರಿಗೆ ಕೆಎಸ್ಆರ್ ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿತು. ಕನ್ನಡ ನೀಡ್ಸ್, ಕರ್ನಾಟಕ ಮೂಲದ ಸ್ವತಂತ್ರ ಸುದ್ದಿವಾಹಿನಿಯು ಜೂನ್ ೧೯, ೨೦೨೪ ರಂದು ಉಚಿತ ಬಸ್ ಸೇವೆ ಕೊನೆಗೊಳ್ಳುತ್ತದೆ ಎಂದು ಹೇಳುವ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದೆ.

    ಜೂನ್ ೧೯, ೨೦೨೪ ರ ಕನ್ನಡ ನೀಡ್ಸ್ ನ ವರದಿಯ ಸ್ಕ್ರೀನ್‌ಶಾಟ್.


    ಪುರಾವೆ:

    ನಾವು ಶೀರ್ಷಿಕೆಯನ್ನು ವಿಶ್ಲೇಷಿಸಿದ್ದೇವೆ ಮತ್ತು ಶಕ್ತಿ ಯೋಜನೆಯ ಸ್ಥಗಿತದ ಬಗ್ಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳನ್ನು ಕಂಡುಬರಲಿಲ್ಲ. ಜೂನ್ ೧೬, ೨೦೨೪ ರ ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ, ಕೆಎಸ್ಆರ್ ಟಿಸಿ ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲು ಪ್ರಾರಂಭಿಸಿದರೆ, ಅವುಗಳನ್ನು ಸಹ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಬಹುದು ಎಂದು ಸಾರಿಗೆ ಸಚಿವರು ಎತ್ತಿತೋರಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ಕೆಲವು ಕಾಂಗ್ರೆಸ್ ನಾಯಕರು ಖಾತರಿ ಯೋಜನೆಗಳನ್ನು ಕೊನೆಗೊಳಿಸುವ ಆಲೋಚನೆಯೊಂದಿಗೆ ಮುಂದೆ ಬಂದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್ ೧೧, ೨೦೨೪ ರಂದು ತಮ್ಮ ಎಕ್ಸ್ (ಹಿಂದೆ ಟ್ವಿಟ್ಟರ್) ಪೋಸ್ಟ್ ಮೂಲಕ ಯೋಜನೆಗಳ ಟೀಕಾಕಾರರಿಗೆ ಬಲವಾದ ಸಂದೇಶವನ್ನು ಕಳುಹಿಸಿದ್ದಾರೆ. ಖಾತ್ರಿ ಯೋಜನೆಯನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

    ಜೂನ್ ೧೦, ೨೦೨೪ ರ ದಿ ಹಿಂದೂ ವರದಿಯು ಸಾರಿಗೆ ಸಚಿವರನ್ನು ಉಲ್ಲೇಖಿಸಿ, "ಶ್ರೀ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಗೆ ಬಜೆಟ್‌ನಲ್ಲಿ ರೂ. ೫,೫೦೦ ಕೋಟಿ ಮೀಸಲಿಟ್ಟಿದ್ದಾರೆ. ಇದು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಮುಂದುವರಿಯುತ್ತದೆ" (ಅನುವಾದಿಸಲಾಗಿದೆ). ಹೀಗಾಗಿ, ಇದು ಶಕ್ತಿ ಯೋಜನೆಯ ಮುಂದುವರಿಕೆಯನ್ನು ಪುನರುಚ್ಚರಿಸುತ್ತಿದೆ.

    ಜೂನ್ ೧೦, ೨೦೨೪ ರ ದಿ ಹಿಂದೂ ವರದಿಯ ಸ್ಕ್ರೀನ್‌ಶಾಟ್.


    ಕನ್ನಡದ ನೀಡ್ಸ್ ಎಂಬ ಸುದ್ದಿಯ ಶೀರ್ಷಿಕೆಗಳು ಹೇಳುವಂತೆ ಯಾವುದೇ ವಿಶ್ವಾಸಾರ್ಹ ಸುದ್ದಿ ಮಾಧ್ಯಮದ ವರದಿಗಳು ಕರ್ನಾಟಕ ಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತೆ ಎಂದು ಸೂಚಿಸುವುದಿಲ್ಲ. ಸುದ್ದಿ ಮಾಧ್ಯಮಗಳು ತಮ್ಮ ಓದುಗರನ್ನು ತಲುಪಲು ಕ್ಲಿಕ್‌ಬೈಟ್‌ನಂತೆ ಲಾಭದಾಯಕ ಶೀರ್ಷಿಕೆಗಳನ್ನು ಬಳಸುತ್ತವೆ.

    ಜೂನ್ ೧೯, ೨೦೨೪ ರಂದು ಭಾರತದಾದ್ಯಂತ ಟೋಲ್ ಪ್ಲಾಜಾಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ನಾವು ಇದೇ ರೀತಿಯ ಕನ್ನಡ ನೀಡ್ಸ್ ನ ತಪ್ಪುದಾರಿಗೆಳೆಯುವ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದೇವೆ.


    ತೀರ್ಪು:

    ಕೆಎಸ್ಆರ್ ಟಿಸಿ ಯಲ್ಲಿ ಪ್ರಯಾಣಿಕರಿಗೆ ನಗದು ರಹಿತ ಟಿಕೇಟಿಂಗ್ ಅನುಭವವನ್ನು ಜಾರಿಗೆ ತರುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಕನ್ನಡ ನೀಡ್ಸ್ ಸುದ್ದಿ ಲೇಖನವು ಸರಿಯಾದ ಮಾಹಿತಿಯನ್ನು ಒಳಗೊಂಡಿದೆ. ಆದರೆ, ಅದರ ಶೀರ್ಷಿಕೆಯು ತಪ್ಪಾಗಿದೆ ಮತ್ತು ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ (ಇಟಿಎಂ) ಗಳ ಅನುಷ್ಠಾನದೊಂದಿಗೆ, ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಅನುಮತಿಸುವ ಯೋಜನೆಯನ್ನು ಸ್ಥಗಿತಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ಓದುಗರನ್ನು ತಪ್ಪುದಾರಿಗೆಳೆಯುವ ಪ್ರವೃತ್ತಿಯನ್ನು ಹೊಂದಿದೆ.

    Claim Review :   Misleading headline suggests the end of the free bus ride scheme for women in Karnataka
    Claimed By :  Anonymous
    Fact Check :  Misleading
    IDTU - Karnataka

    IDTU - Karnataka