Begin typing your search above and press return to search.
    Others

    ಸುದ್ದಿ ವರದಿಯು ಭಾರತದಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಪ್ಪುದಾರಿಗೆಳೆಯುವ ಶೀರ್ಷಿಕೆಯನ್ನು ಬಳಸಿದೆ

    IDTU - Karnataka
    19 Jun 2024 12:20 AM GMT
    ಸುದ್ದಿ ವರದಿಯು ಭಾರತದಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಪ್ಪುದಾರಿಗೆಳೆಯುವ ಶೀರ್ಷಿಕೆಯನ್ನು ಬಳಸಿದೆ
    x

    ಸಾರಾಂಶ:

    ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ನಿರ್ಧಾರದ ಪ್ರಕಾರ, ದೇಶಾದ್ಯಂತ ಟೋಲ್ ಪ್ಲಾಜಾಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೂಲದ ಸ್ವತಂತ್ರ ಸುದ್ದಿ ಮಾಧ್ಯಮ ಕನ್ನಡ ನೀಡ್ಸ್‌ನ ವರದಿಯೊಂದರ ಹೆಡ್ ಲೈನ್ ಹೇಳಿದೆ. ಆದರೆ, ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಫೆಬ್ರವರಿ ೨೦೨೪ ರಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಸ್ತಾಪಿಸಿದರು ಮತ್ತು ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಆಧಾರಿತ ಸಂಗ್ರಹವನ್ನು ಹಾಗೆಯೇ ಇರಿಸಿದ್ದಾರೆ. ಈ ಸುದ್ದಿ ಲೇಖನದಲ್ಲಿ ಇದೇ ರೀತಿಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಆದರೆ, ಅದರ ಶೀರ್ಷಿಕೆಯು ತಪ್ಪುದಾರಿಗೆಳೆಯುವಂತಿದೆ.

    ಹೇಳಿಕೆ:

    ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಫೆಬ್ರವರಿ ೭, ೨೦೨೪ ರ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ೨೦೨೪ ರ ಲೋಕಸಭಾ ಚುನಾವಣೆಯ ಮೊದಲೇ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹವನ್ನು ಜಾರಿಗೊಳಿಸುವ ಸಾಧ್ಯತೆಯ ಕುರಿತು ಮಾತನಾಡಿದರು. ಕರ್ನಾಟಕ ಮೂಲದ ಜಾಲತಾಣ ಎಂದು ಹೇಳಿಕೊಳ್ಳುವ ಒಂದು ಸ್ವತಂತ್ರ ಸುದ್ದಿವಾಹಿನಿಯು ಜೂನ್ ೧೨, ೨೦೨೪ ರಂದು ಈ ವರದಿಯನ್ನು ಪ್ರಕಟಿಸಿದೆ. ಇದು ಕೇಂದ್ರ ಸರ್ಕಾರವು ದೇಶಾದ್ಯಂತ ಟೋಲ್ ಪ್ಲಾಜಾಗಳನ್ನು ಮುಚ್ಚಲು ನಿರ್ಧರಿಸಿದೆ ಎಂದು ಹೇಳುತ್ತದೆ. ಇದೇ ರೀತಿ ಟಾಪ್ ಕನ್ನಡ ಎಂಬ ಜಾಲತಾಣ ಜೂನ್ ೧೪, ೨೦೨೪ ರಂದು ಅದೇ ಶೀರ್ಷಿಕೆಯೊಂದಿಗೆ ಈ ವರದಿಯನ್ನು ಪ್ರಕಟಿಸಿತು.

    ಜೂನ್ ೧೨, ೨೦೨೪ ರ ಕನ್ನಡ ನೀಡ್ಸ್ ವರದಿಯ ಸ್ಕ್ರೀನ್‌ಶಾಟ್.


    ಪುರಾವೆ:

    ನಾವು ಎರಡೂ ವರದಿಗಳನ್ನು ವಿಶ್ಲೇಷಿಸಿದ್ದೇವೆ ಮತ್ತು ಅವುಗಳ ವಿಷಯವು ಮಾರ್ಚ್ ೧೦, ೨೦೨೪ ರ ದಿ ಹಿಂದೂ ವರದಿಗೆ ಹೊಂದಿಕೆಯಾಗುತ್ತಿದೆ ಎಂದು ಕಂಡುಕೊಂಡಿದ್ದೇವೆ. ಈ ಹಿಂದೂ ವರದಿಯ ಶೀರ್ಷಿಕೆ ಹೀಗಿದೆ - “ಸರ್ಕಾರವು ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಿದೆಯೇ? | ವಿವರಿಸಲಾಗಿದೆ (ಅನುವಾದಿಸಲಾಗಿದೆ).”

    ಮಾರ್ಚ್ ೧೦, ೨೦೨೪ ರ ದಿ ಹಿಂದೂ ವರದಿಯ ಸ್ಕ್ರೀನ್‌ಶಾಟ್.


    ವರದಿಯ ಪ್ರಕಾರ, ಹೊಸದಾಗಿ ಪ್ರಸ್ತಾಪಿಸಲಾದ ಉಪಗ್ರಹ ಟೋಲ್‌ನ ಅನುಷ್ಠಾನವು ಆನ್‌ಬೋರ್ಡ್ ಘಟಕವನ್ನು (ಓಬಿಯು) ಒಳಗೊಂಡಿರುತ್ತದೆ. ಇದು ಭಾರತೀಯ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸುವ ವಾಹನದೊಳಗೆ ಅಳವಡಿಸಲಾಗಿರುವ ಟ್ರ್ಯಾಕಿಂಗ್ ಸಾಧನವಾಗಿರುತ್ತದೆ. ಅದರ ಸ್ಥಳವನ್ನು ನಕ್ಷೆ ಮಾಡಲು ಜಿಪಿಎಸ್ ನೆರವಿನ ಜಿಯೋ-ಆಗ್ಮೆಂಟೆಡ್ ನ್ಯಾವಿಗೇಷನ್ (ಗಗನ್) ಅನ್ನು ಬಳಸಲಾಗುತ್ತದೆ. ಹೆದ್ದಾರಿಯಲ್ಲಿ ಪ್ರಯಾಣಿಸಿದ ವಾಸ್ತವಿಕ ಪ್ರಯಾಣಕ್ಕೆ ಮಾತ್ರ ಬಳಕೆದಾರರು ಟೋಲ್ ಪಾವತಿಸಬೇಕು ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

    ಆದರೆ, ವಾಹನವು ಓಬಿಯು ಕಂಪ್ಲೈಂಟ್ ಆಗಿಲ್ಲದಿದ್ದರೆ ಅಥವಾ ಟೋಲ್ ಅನ್ನು ತಪ್ಪಿಸಲು ಉದ್ದೇಶಪೂರ್ವಕವಾಗಿ ಓಬಿಯು ಅನ್ನು ಸ್ವಿಚ್ ಆಫ್ ಮಾಡಿದರೆ, ವಾಹನಕ್ಕೆ ಶುಲ್ಕ ವಿಧಿಸಲಾಗುವುದೇ ಎಂಬ ಕೆಲವು ಸವಾಲುಗಳಿವೆ. ಎಲ್ಲಾ ವಾಹನಗಳಿಗೆ ಓಬಿಯು ಅನ್ನು ಕಡ್ಡಾಯಗೊಳಿಸಬೇಕೆ ಎಂಬುದರ ಕುರಿತು ಸರ್ಕಾರವು ಇನ್ನೂ ನಿರ್ಧಾರಕ್ಕೆ ಬರದಿದ್ದರಿಂದ, ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಆಧಾರಿತ ಸಂಗ್ರಹ ವ್ಯವಸ್ಥೆಯು ಮತ್ತು ಉಪಗ್ರಹ ಆಧಾರಿತ ವ್ಯವಸ್ಥೆ ಎರಡೂ ಅಸ್ತಿತ್ವದಲ್ಲಿರುತ್ತದೆ.

    ಈ ಕನ್ನಡ ಸುದ್ದಿವಾಹಿನಿಯ ವರದಿಯ ವಿಷಯ ನಿಜವಾಗಿದ್ದರೂ, ದೇಶದಾದ್ಯಂತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಅದರ ಶೀರ್ಷಿಕೆಯು ಸೂಚಿಸುತ್ತದೆ. ಅನೇಕ ಸುದ್ದಿ ಮಾಧ್ಯಮಗಳು ಓದುಗರಿಗಾಗಿ ವಾಸ್ತವಿಕವಲ್ಲದ ಆಕರ್ಷಕ ಕ್ಲಿಕ್‌ಬೈಟ್‌ ಶೀರ್ಷಿಕೆಗಳನ್ನು ಬಳಸುತ್ತವೆ.

    ಜೂನ್ ೭, ೨೦೨೪ ರ ದಿ ಎಕನಾಮಿಕ್ ಟೈಮ್ಸ್ ವರದಿಯ ಪ್ರರಕ, ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಆಧಾರಿತ ವ್ಯವಸ್ಥೆಯಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿ ನ್ ಎಸ್ ಎಸ್) ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) ಅನ್ನು ಸಂಯೋಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಹೆಚ್ ಎ ಐ) ಯೋಜಿಸಿದೆ ಎಂದು ಹೇಳುತ್ತದೆ. ಕನ್ನಡ ನೀಡ್ಸ್ ಮತ್ತು ಟಾಪ್ ಕನ್ನಡ ದ ಹೆಡ್ ಲೈನ್ ಹೇಳುವಂತೆ ಈ ವರದಿಗಳು ದೇಶಾದ್ಯಂತ ಟೋಲ್ ಪ್ಲಾಜಾಗಳನ್ನು ಸ್ಥಗಿತಗೊಳಿಸುವುದನ್ನು ಸೂಚಿಸುವುದಿಲ್ಲ.

    ತೀರ್ಪು:

    ಕನ್ನಡ ನೀಡ್ಸ್‌ನ ಸುದ್ದಿ ವರದಿಯು ಭಾರತದಲ್ಲಿ ಟೋಲ್ ಸಂಗ್ರಹವನ್ನು ಹೇಗೆ ಮುಂದುವರಿಸುತ್ತದೆ ಎಂಬುದರ ಕುರಿತು ಸರಿಯಾದ ಮಾಹಿತಿಯನ್ನು ಒಳಗೊಂಡಿದೆ. ಆದರೆ, ಅದರ ಶೀರ್ಷಿಕೆಯು ತಪ್ಪಾಗಿದೆ ಮತ್ತು ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಯೋಚಿಸುವಂತೆ ಓದುಗರನ್ನು ದಾರಿ ತಪ್ಪಿಸುತ್ತದೆ. ಆದ್ದರಿಂದ, ಭಾರತದಲ್ಲಿನ ಟೋಲ್ ಪ್ಲಾಜಾಗಳನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿವೆ.


    Claim Review :   Misleading headlines suggest shutdown of toll plazas across India
    Claimed By :  Anonymous
    Fact Check :  Misleading
    IDTU - Karnataka

    IDTU - Karnataka