Begin typing your search above and press return to search.
    Others

    ಇಲ್ಲ, ಈ ವೈರಲ್ ಚಿತ್ರವು ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದಾಗ ಉಂಟಾದ ಗುರುತನ್ನು ತೋರಿಸುವುದಿಲ್ಲ

    IDTU - Karnataka
    10 Jun 2024 11:00 AM GMT
    ಇಲ್ಲ, ಈ ವೈರಲ್ ಚಿತ್ರವು ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದಾಗ ಉಂಟಾದ ಗುರುತನ್ನು ತೋರಿಸುವುದಿಲ್ಲ
    x

    ಸಾರಾಂಶ:

    ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಸಿಬ್ಬಂದಿಯೊಬ್ಬರು ಮಂಡಿಯ ಲೋಕಸಭಾ ಸಂಸದೆ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ರನೌತ್ ಅವರ ಮುಖದ ಮೇಲೆ ಕಾಣಿಸಿಕೊಂಡ ಗುರುತು ಎಂದು ಹೇಳಿಕೊಂಡು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಆರೋಪವನ್ನು ಮಾಡಲು ಬಳಸಲಾದ ಚಿತ್ರವು ೨೦೦೬ ರ ಜಾಹೀರಾತು ಪ್ರಚಾರದಿಂದ ಬಂದಿದೆ ಮತ್ತು ಚಂಡೀಘಡದ ಘಟನೆಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಈ ಆರೋಪಗಳು ತಪ್ಪು.


    ಹೇಳಿಕೆ:

    ಜೂನ್ ೬, ೨೦೨೪ ರಂದು ಚಂಡೀಗಢದ ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ (ಸಿಐಎಸ್‌ಎಫ್) ಮಹಿಳಾ ಸಿಬ್ಬಂದಿ ನಟ-ರಾಜಕಾರಣಿ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದರು. ವರದಿಗಳ ಪ್ರಕಾರ, ರನೌತ್ ಅವರು ತಮ್ಮ ಫೋನ್ ಅನ್ನು ಭದ್ರತಾ ತಪಾಸಣೆ ಸಮಯದಲ್ಲಿ ಟ್ರೇನಲ್ಲಿ ಇರಿಸಲು ನಿರಾಕರಿಸಿದ ನಂತರ ಭದ್ರತಾ ಸಿಬ್ಬಂದಿಯನ್ನು ತಳ್ಳಿದರು. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದಾಗ ಉಂಟಾದ ಗುರುತನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪರಿಶೀಲಿಸಿದ ಬಳಕೆದಾರರು ಜೂನ್ ೭, ೨೦೨೪ ರಂದು ಫೋಟೋವನ್ನು ಹೀಗೆ ಹೇಳಿಕೊಂಡು ಪೋಷ್ಟ್ ಮಾಡಿದ್ದಾರೆ, "ಒನ್ ಅಂಡ್ ಓನ್ಲಿ ಕಂಗನಾ. ಕೆನ್ನೆಯ ಮೇಲೆ ಕಾಂಗ್ರೆಸ್ ಚಿಹ್ನೆಯೊಂದಿಗೆ ಸಂಸತ್ತಿನಲ್ಲಿ ಕುಳಿತ ಮೊದಲ ಬಿಜೆಪಿ ಸಂಸದೆ (ಅನುವಾದಿಸಲಾಗಿದೆ)". ಈ ಪೋಷ್ಟ್ ೪ ಸಾವಿರ ವೀಕ್ಷಣೆಗಳು, ೨೦೮ ಇಷ್ಟಗಳು ಮತ್ತು ೧೧೬ ಮರುಪೋಷ್ಟ್ ಗಳನ್ನು ಸ್ವೀಕರಿಸಿದೆ.

    ಜೂನ್ ೭, ೨೦೨೪ ರಂದು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಇನ್ನೊಬ್ಬ ಪರಿಶೀಲಿಸಿದ ಬಳಕೆದಾರರು ಜೂನ್ ೭, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. #NDAvsINDIA, #ModiHaiToMumkinHai, #Congress, #KanganaRanaut, ಮತ್ತು #Slapshort ಮುಂತಾದ ಹ್ಯಾಶ್‌ಟ್ಯಾಗ್‌ಗಳನ್ನು ಚಿತ್ರವನ್ನು ಪ್ರಸಾರ ಮಾಡಲು ಬಳಸಲಾಗಿದೆ.

    ಪುರಾವೆ:

    ನಾವು ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದು ನಮ್ಮನ್ನು ಮೇ ೩೧, ೨೦೦೬ ರಂದು ಬೇಗಾನ್‌ನ ಸೊಳ್ಳೆ ವಿರೋಧಿ ಸ್ಪ್ರೇಯೊಂದರ ಜಾಹೀರಾತು ಪ್ರಚಾರದ ಬ್ಲಾಗ್ ಪೋಷ್ಟ್ ಗೆ ಕರೆದೊಯ್ಯಿತು.

    ಮೇ ೩೧, ೨೦೦೬ ರ ಬ್ಲಾಗ್ ಪೋಷ್ಟ್ ನ ಸ್ಕ್ರೀನ್‌ಶಾಟ್.

    ಬ್ಲಾಗ್ ಪೋಷ್ಟ್ ಬೇರೆ ಮಹಿಳೆಯೊಬ್ಬರನ್ನು ತೋರಿಸುವ ಮತ್ತು ವೈರಲ್ ಚಿತ್ರದ ಕ್ರಾಪ್ ಮಾಡದ ಆವೃತ್ತಿಯನ್ನು ಹೊಂದಿದೆ ಎಂದು ನಾವು ಗುರುತಿಸಿದ್ದೇವೆ.

    ವೈರಲ್ ಚಿತ್ರ (ಎಡ) ಮತ್ತು ಬ್ಲಾಗ್ ಪೋಷ್ಟ್ ನಲ್ಲಿ ಕಂಡುಬಂದ ಚಿತ್ರದ (ಬಲ) ಮಧ್ಯೆ ಹೋಲಿಕೆ.


    ಮಹಿಳೆಯ ಫೋಟೋದ ರಿವರ್ಸ್ ಇಮೇಜ್ ಹುಡುಕಾಟವು ಜಾಹೀರಾತು ಪ್ರಚಾರಗಳನ್ನು ಪ್ರದರ್ಶಿಸುವ ಆಡ್ಸ್ ಆಫ್ ದಿ ವರ್ಲ್ಡ್ ಎಂಬ ವೆಬ್‌ಸೈಟ್‌ಗೆ ನಮ್ಮನ್ನು ಕರೆದೊಯ್ಯಿತು. ಈ ವೆಬ್‌ಸೈಟ್ ಫೋಟೋವನ್ನು ದೆಹಲಿಯ ಎಫ್‌ಸಿಬಿ ಉಲ್ಕಾಗೆ (ಮಾಧ್ಯಮ ಸಂಸ್ಥೆ) ಕ್ರೆಡಿಟ್ ಮಾಡಿದೆ. ಈ ವೆಬ್‌ಸೈಟ್ ಪ್ರಕಾರ, ಚಿತ್ರವನ್ನು ಮೇ ೩೦, ೨೦೨೪ ರಂದು ಪ್ರಕಟಿಸಲಾಗಿದೆ ಮತ್ತು ಇದು "ಸ್ಲ್ಯಾಪ್ ಟು" ಎಂಬ ವೃತ್ತಿಪರ ಅಭಿಯಾನದ ಭಾಗವಾಗಿದೆ.


    ತೀರ್ಪು:

    ಚಿತ್ರದ ವಿಶ್ಲೇಷಣೆಯು ಇದು ಮೇ ೩೦, ೨೦೦೬ ರಂದು ಪ್ರಕಟವಾದ ಜಾಹೀರಾತು ಪ್ರಚಾರಕ್ಕೆ ಸಂಬಂಧಿಸಿದೆ ಎಂದು ಬಹಿರಂಗಪಡಿಸುತ್ತದೆ ಮತ್ತು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದರಾಗಿ ಆಯ್ಕೆಯಾದ ಕಂಗನಾ ರನೌತ್ ಅವರ ಕಪಾಳಮೋಕ್ಷ ಘಟನೆಗೆ ಸಂಬಂಧವಿಲ್ಲ. ಆದ್ದರಿಂದ, ಈ ಬಗ್ಗೆ ಆನ್ಲೈನ್ ನಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಗಳು ತಪ್ಪು.

    Claim Review :   No, this viral image does not show slap mark on Kangana Ranaut's face
    Claimed By :  X user
    Fact Check :  False
    IDTU - Karnataka

    IDTU - Karnataka