Begin typing your search above and press return to search.
    Others

    ಕಾಬೂಲ್‌ನ ಹಳೆಯ ಚಿತ್ರವು ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ದಾಳಿ ಎಂದು ತಪ್ಪಾಗಿ ಪ್ರತಿಪಾದಿಸಿಲಾಗಿದೆ

    IDTU - Karnataka
    13 Jun 2024 8:32 AM GMT
    ಕಾಬೂಲ್‌ನ ಹಳೆಯ ಚಿತ್ರವು ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ದಾಳಿ ಎಂದು ತಪ್ಪಾಗಿ ಪ್ರತಿಪಾದಿಸಿಲಾಗಿದೆ
    x

    ಸಾರಾಂಶ:

    ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಬಸ್ ಮೇಲೆ ನಡೆದ ದಾಳಿಯಲ್ಲಿ ಹತ್ತು ಭಾರತೀಯ ಸೈನಿಕರು ಹುತಾತ್ಮರಾದರು ಎಂಬ ಪೋಷ್ಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಈ ಹೇಳಿಕೆ ತಪ್ಪು. ಈ ಹೇಳಿಕೆಯನ್ನು ಬೆಂಬಲಿಸಲು ಬಳಸಿದ ಚಿತ್ರವು ೨೦೧೪ ರ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನಡೆದ ಘಟನೆಯಿಂದ ಬಂದಿದೆ. ಬಸ್ ಸಾಮಾನ್ಯ ಯಾತ್ರಿಕರನ್ನು ಹೊತ್ತೊಯ್ಯುತ್ತಿತ್ತು, ಸೈನಿಕರಲ್ಲ ಎಂದು ಸುದ್ದಿ ವರದಿಗಳು ಖಚಿತಪಡಿಸಿವೆ.

    ಹೇಳಿಕೆ:

    ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ ಬಳಕೆದಾರರು ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಬಸ್‌ ಮೇಲೆ ನಡೆದ ದಾಳಿಯಲ್ಲಿ ಹತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳುವ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ಹಸಿರು ಬಣ್ಣದ ಬಸ್ಸಿನ ಚಿತ್ರವು ಈ ಹೇಳಿಕೆಯನ್ನು ಬೆಂಬಲಿಸುತದ್ದೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ - “#BREAKING: ಬೃಹತ್ ಸುದ್ದಿ. ಇತ್ತೀಚೆಗಷ್ಟೇ, ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಭಾರತೀಯ ಸೇನೆಯ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ಭಾರಿ ದಾಳಿ. ಹತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ” (ಅನುವಾದಿಸಲಾಗಿದೆ).

    ಜೂನ್ ೧೦, ೨೦೨೪ ರಂದು ವೈರಲ್ ಹೇಳಿಕೆಯ ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ಹೇಳಿಕೆಗೆ ಸಂಬಂಧಪಟ್ಟ ಪದಗಳ ಕೀವರ್ಡ್ ಸರ್ಚ್ ಜೂನ್ ೯, ೨೦೨೪ ರ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರ ದಾಳಿಯಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಆಳವಾದ ಕಿರಿದಾದ ಕಣಿವೆಗೆ ಬಿದ್ದ ಘಟನೆಗೆ ನಮ್ಮನ್ನು ಕರೆದೊಯ್ಯಿತು. ಈ ದಾಳಿ ಉತ್ತರ ಪ್ರದೇಶ ಮತ್ತು ರಾಜಸ್ಥಾನಕ್ಕೆ ಸೇರಿದ ಒಂಬತ್ತು ನಾಗರಿಕರ ಸಾವಿಗೆ ಕಾರಣವಾಯಿತು.

    ಜಮ್ಮು ಕಾಶ್ಮೀರದ ಪೊಲೀಸ್ ವಕ್ತಾರರು, "ರಿಯಾಸಿ ಜಿಲ್ಲೆಯ ಪೌನಿ ಪ್ರದೇಶದಲ್ಲಿ ಸಂಜೆ ೬.೧೦ ರ ಸುಮಾರಿಗೆ ಶಿವ ಖೋರಿಯಿಂದ ಕತ್ರಾಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ" (ಅನುವಾದಿಸಲಾಗಿದೆ) ಎಂದು ಹೇಳಿದರು.

    ರಿಯಾಸಿಯ ಜಿಲ್ಲಾ ಪೊಲೀಸ್ ನ ಹೇಳಿಕೆಗಳು ಮತ್ತು ಪಬ್ಲಿಕ್ ಟಿವಿ, ಈಟಿವಿ ಭಾರತ್, ವಿಜಯ ಕರ್ನಾಟಕ, ಹಿಂದೂಸ್ತಾನ್ ಟೈಮ್ಸ್ ಮತ್ತು ಡೆಕ್ಕನ್ ಹೆರಾಲ್ಡ್‌ನ ಸುದ್ದಿ ವರದಿಗಳು ಪೀಡಿತರು ಯಾತ್ರಾರ್ಥಿಗಳು ಮತ್ತು ಸೈನಿಕರಲ್ಲ ಎಂದು ಖಚಿತಪಡಿಸುತ್ತವೆ.

    ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ವರದಿ ಮಾಡುವ ವಿಜಯ ಕರ್ನಾಟಕ ಸುದ್ದಿ ವರದಿಯ ಸ್ಕ್ರೀನ್‌ಶಾಟ್.


    ಉಪ ಪೊಲೀಸ್ ಆಯುಕ್ತ (ರಿಯಾಸಿ) ವಿಶೇಷ್ ಪಾಲ್ ಮಹಾಜನ್ ಅವರು ಒಂಬತ್ತು ಪೀಡಿತರ ಗುರುತನ್ನು ಒದಗಿಸಿದ್ದಾರೆ, ಅವರು ಎಲ್ಲರೂ ಸಾಮಾನ್ಯ ಯಾತ್ರಿಗಳು ಎಂದು ಸ್ಪಷ್ಟಪಡಿಸಿದ್ದಾರೆ. ರಿವರ್ಸ್ ಇಮೇಜ್ ಸರ್ಚ್ ವೈರಲ್ ಚಿತ್ರವು ೨೦೧೪ ರ ಕಾಬೂಲ್ ಘಟನೆಯಿಂದ ಹುಟ್ಟಿಕೊಂಡಿದೆ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಿಲಿಟರಿ ಬಸ್ಸಿನ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದು, ಎಂಟು ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ಮತ್ತು ಯುರೋ ನ್ಯೂಸ್ ವರದಿ ಮಾಡಿದೆ. ಈ ವೈರಲ್ ಚಿತ್ರವು ೨೦೧೪ ರ ಕಾಬೂಲ್ ಘಟನೆಯ ವೀಡಿಯೋಗಳ ಫ್ರೇಮ್‌ಗಳಿಗೆ ಹೊಂದಿಕೆಯಾಗುತ್ತದೆ.

    ರಿಯಾಸಿ ದಾಳಿಯಲ್ಲಿ ಬಸ್ ನೀಲಿ ಪಟ್ಟಿಯೊಂದಿಗೆ ಬಿಳಿ ಬಣ್ಣದ್ದಾಗಿತ್ತು ಮತ್ತು ಆಳವಾದ ಕಿರಿದಾದ ಕಣಿವೆಯಲ್ಲಿ ಕಂಡುಬಂದಿದೆ. ವೈರಲ್ ಚಿತ್ರವು ರಸ್ತೆಯಲ್ಲಿ ಹಸಿರು ಬಸ್ ಅನ್ನು ತೋರಿಸುತ್ತದೆ, ಇದು ರಿಯಾಸಿ ಘಟನೆಗೆ ಸಂಬಂಧಿಸಿಲ್ಲ ಎಂದು ಖಚಿತಪಡಿಸುತ್ತದೆ.

    ೨೦೧೪ ರ ಕಾಬೂಲ್ ದಾಳಿಯ ಬಿಬಿಸಿ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಹಸಿರು ಬಣ್ಣದ ಮಿಲಿಟರಿ ಬಸ್ ಅನ್ನು ತೋರಿಸುತ್ತದೆ.


    ತೀರ್ಪು:

    ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಬಸ್ ಮೇಲೆ ನಡೆದ ದಾಳಿಯಲ್ಲಿ ಹತ್ತು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ತಪ್ಪು. ಬಸ್ ಸಾಮಾನ್ಯ ಯಾತ್ರಿಕರನ್ನು ಹೊತ್ತೊಯ್ಯುತ್ತಿತ್ತು, ಸೈನಿಕರನ್ನಲ್ಲ, ಮತ್ತು ಹೇಳಿಕೆಯನ್ನು ಬೆಂಬಲಿಸಲು ಬಳಸಿದ ಚಿತ್ರವು ೨೦೧೪ ರ ಕಾಬೂಲ್ ಘಟನೆಯಿಂದ ಬಂದಿದೆ.


    Claim Review :   Old image from Kabul falsely claimed as attack on Indian soldiers in J&K’s Reasi
    Claimed By :  X user
    Fact Check :  False
    IDTU - Karnataka

    IDTU - Karnataka