ಅಖಿಲೇಶ್ ಯಾದವ್ ಮತ್ತು ಚಂದ್ರಬಾಬು ನಾಯ್ಡು ಅವರ ಹಳೆಯ ಚಿತ್ರವನ್ನು ಚುನಾವಣೋತ್ತರ ಮೈತ್ರಿ ಚರ್ಚೆಗೆ ತಪ್ಪಾಗಿ ಲಿಂಕ್ ಮಾಡಲಾಗಿಧೆ
ಸಾರಾಂಶ:
ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ೨೦೨೪ ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಚುನಾವಣೋತ್ತರ ಮೈತ್ರಿ ಕುರಿತು ಚರ್ಚಿಸಿದ್ದಾರೆ ಎಂದು ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಹೇಳಿಕೊಂಡಿವೆ. ವಾಸ್ತವವಾಗಿ, ಹಂಚಿಕೊಳ್ಳಲಾದ ಚಿತ್ರಗಳು ೨೦೧೯ ರ ಸಭೆಯಿಂದ ಬಂದಿದ್ದು, ಇದು ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿಲ್ಲ. ಆದ್ದರಿಂದ ಈ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಒಟ್ಟಿಗೆ ಕುಳಿತಿರುವ ಚಿತ್ರಗಳನ್ನು ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಂತಹ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ೨೦೨೪ ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಜೂನ್ ೪, ೨೦೨೪ ರಂದು ಘೋಷಿಸಿದ ನಂತರ ಈ ನಾಯಕರು ಭೇಟಿಯಾಗಿದ್ದಾರೆ ಎಂದು ಈ ಪೋಷ್ಟ್ ಗಳು ಹೇಳಿಕೊಂಡಿವೆ.
ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಅಖಿಲೇಶ್ ಯಾದವ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದರು (ಅನುವಾದಿಸಲಾಗಿದೆ).”
ಚುನಾವಣೋತ್ತರ ಮೈತ್ರಿಗಾಗಿ ಇಬ್ಬರು ನಾಯಕರು ಭೇಟಿಯಾಗುತ್ತಿದ್ದಾರೆ ಎಂದು ಹೇಳಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಚಿತ್ರದ ರಿವರ್ಸ್ ಇಮೇಜ್ ಸರ್ಚ್ ಮೇ ೧೮, ೨೦೧೯ ರಂದು ಪ್ರಕಟವಾದ “Election 2019: After Rahul Gandhi, Chandrababu Naidu Meets Akhilesh Yadav, Mayawati” (ಚುನಾವಣೆ ೨೦೧೯: ರಾಹುಲ್ ಗಾಂಧಿ ನಂತರ, ಚಂದ್ರಬಾಬು ನಾಯ್ಡು ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರನ್ನು ಭೇಟಿಅಧರು) ಎಂಬ ಶೀರ್ಷಿಕೆಯ ಎನ್‌ಡಿಟಿವಿ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ೨೦೧೯ ರ ಲೋಕಸಭಾ ಚುನಾವಣೆಯ ತೀರ್ಪಿನ ಮೊದಲು ಬಿಜೆಪಿ ವಿರೋಧಿ ತಂಡವನ್ನು ರಚಿಸುವ ಕುರಿತು ಚರ್ಚಿಸಲು ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಲಕ್ನೋದಲ್ಲಿ ಭೇಟಿಯಾಗಿರುವುದನ್ನು ಈ ವೀಡಿಯೋ ತೋರಿಸುತ್ತದೆ.
ಚಂದ್ರಬಾಬು ನಾಯ್ಡು ಅವರು ಲಕ್ನೋದಲ್ಲಿ ನಾಯಕರನ್ನು ಭೇಟಿಯಾದ ಬಗ್ಗೆ ಎನ್ಡಿಟಿವಿ ಸುದ್ದಿ ವರದಿಯ ಸ್ಕ್ರೀನ್‌ಶಾಟ್.
ಈ ಬಗ್ಗೆ ನಡೆಸಿದ ಮತ್ತಷ್ಟು ಹುಡುಕಾಟವು ಅಖಿಲೇಶ್ ಯಾದವ್ ಅವರು ಹಂಚಿಕೊಂಡಿರುವ ಅಧಿಕೃತ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು, ಅವರ ಶೀರ್ಷಿಕೆ ಹೀಗಿದೆ: "ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಎನ್ ಚಂದ್ರಬಾಬು ನಾಯ್ಡು ಜಿ ಅವರನ್ನು ಲಕ್ನೋಗೆ ಸ್ವಾಗತಿಸಲು ಸಂತೋಷವಾಗಿದೆ (ಅನುವಾದಿಸಲಾಗಿದೆ).” ಮೇ ೧೮, ೨೦೧೯ ರಂದು ಈ ಇಬ್ಬರು ನಾಯಕರು ಲಕ್ನೋದಲ್ಲಿ ಭೇಟಿಯಾಗಿ ೨೦೧೯ ರ ಲೋಕಸಭಾ ಚುನಾವಣೆಯ ತೀರ್ಪಿಗೆ ಮೊದಲು ಬಿಜೆಪಿ ವಿರೋಧಿ ತಂಡವನ್ನು ರಚಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಇದು ಖಚಿತಪಡಿಸುತ್ತದೆ.
೨೦೧೯ ರಲ್ಲಿ ಲಕ್ನೋದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ಅಖಿಲೇಶ್ ಯಾದವ್ ಅವರ ಅಧಿಕೃತ ಹ್ಯಾಂಡಲ್‌ನಿಂದ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
0೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಎನ್‌ಡಿಎ ಅಡಿಯಲ್ಲಿ ಬಿಜೆಪಿ ಮತ್ತು ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ವರದಿಗಳು ಹೇಳಿಕೊಂಡಿವೆ. ಚುನಾವಣೋತ್ತರ ಮೈತ್ರಿ ಕುರಿತು ಚರ್ಚಿಸಲು ಚಂದ್ರಬಾಬು ನಾಯ್ಡು ಇತ್ತೀಚೆಗೆ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ.
ಜೂನ್ ೫, ೨೦೨೪ ರ ಹಿಂದೂಸ್ತಾನ್ ಟೈಮ್ಸ್ ನ ವರದಿಯಪ್ರಕಾರ ಚಂದ್ರಬಾಬು ನಾಯ್ಡು ಅವರು ಎನ್‌ಡಿಎ ಯೊಂದಿಗೆ ತಮ್ಮ ಪಕ್ಷದ ಹೊಂದಾಣಿಕೆಯನ್ನು ಮಾಡಿಕೊಂಡಿಧಾರೆ ಮತ್ತು ನವದೆಹಲಿಯ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುವ ಅವರ ಉದ್ದೇಶವನ್ನು ಪುನರುಚ್ಚರಿಸಿಧಾರೆ.
ತೀರ್ಪು:
ಚುನಾವಣೋತ್ತರ ಮೈತ್ರಿ ಕುರಿತು ಚರ್ಚಿಸಲು ಅಖಿಲೇಶ್ ಯಾದವ್ ಮತ್ತು ಚಂದ್ರಬಾಬು ನಾಯ್ಡು ನಡುವೆ ಇತ್ತೀಚೆಗೆ ನಡೆದ ಸಭೆಯನ್ನು ಪ್ರತಿಪಾದಿಸುವ ಈ ಚಿತ್ರಗಳು ತಪ್ಪುದಾರಿಗೆಳೆಯುವಂತಿವೆ. ಈ ಚಿತ್ರಗಳು ೨೦೧೯ ರ ಸಭೆಯದ್ದಾಗಿದ್ದು ೨೦೨೪ ರ ಲೋಕಸಭಾ ಚುನಾವಣಾ ಫಲಿತಾಂಶಗಳ ನಂತರದ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿಲ್ಲ.