ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ರಾಜಸ್ಥಾನದ ಮೃತ ಅಂಗಾಂಗ ದಾನಿಯ ತಂದೆಯ ಹಳೆಯ ವೀಡಿಯೋವನ್ನು ತಪ್ಪಾಗಿ ಸಂಬಂಧಿಸಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಆಸ್ಪತ್ರೆ ಕಾರಿಡಾರ್‌ನಲ್ಲಿ ನಡೆದಾಡುತ್ತಿರುವ ವ್ಯಕ್ತಿಯ ವೀಡಿಯೋ ಕ್ಲಿಪ್ ಅನ್ನು ಕೋಲ್ಕತ್ತಾ ಅತ್ಯಾಚಾರ-ಕೊಲೆ ಸಂತ್ರಸ್ತೆ ಮೌಮಿತಾ ದೇಬನಾಥ್ ಅವರ ತಂದೆ ಎಂದು ಹೇಳಿಕೊಂಡು ಹಂಚಿಕೊಂಡಿದ್ದಾರೆ. ಆದರೆ, ತಂದೆಯೊಬ್ಬ ತನ್ನ ಮಗನ ದೇಹವನ್ನು ವಿಶಾಖಪಟ್ಟಣಂನಲ್ಲಿ ದಾನ ಮಾಡುತ್ತಿರುವುದನ್ನು ಮೂಲ ವೀಡಿಯೋ ತೋರಿಸುತ್ತದೆ. ಇದು ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.
ಹೇಳಿಕೆ:
ಸಾಮಾಜಿಕ ಮಾಧ್ಯಮ ಬಳಕೆದಾರರು ಆಸ್ಪತ್ರೆಯ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ವೀಡಿಯೋವು ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದ ಸಂತ್ರಸ್ತೆಯ ತಂದೆಯನ್ನು ಆಕೆಯ ದೇಹದೊಂದಿಗೆ ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಆಗಸ್ಟ್ ೨೦, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್ ಮತ್ತು ಫೇಸ್‌ಬುಕ್ ಬಳಕೆದಾರರು #justiceformumita ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ ೨೨, ೨೦೨೪ ರಂದು ವೈರಲ್ ವೀಡಿಯೋ ಮತ್ತು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡ ಅದೇ ತುಣುಕಿನ ಹಳೆಯ ಪೋಷ್ಟ್ ಗಳಿಗೆ ನಮ್ಮನ್ನು ಕರೆದೊಯ್ಯಿತು. ಅದೇ ವೀಡಿಯೋ ಕ್ಲಿಪ್ ಅನ್ನು ಒಳಗೊಂಡಿರುವ ಜೂನ್ ೧, ೨೦೨೪ ರಂದು ಪ್ರಕಟಿಸಲಾದ ದೈನಿಕ್ ಭಾಸ್ಕರ್ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ವಿಶಾಖಪಟ್ಟಣಂನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಗನ ದೇಹವನ್ನು ರಾಜಸ್ಥಾನದ ಜಾಲೋರ್‌ನ ತಂದೆಯೊಬ್ಬರು ಆಸ್ಪತ್ರೆಗೆ ದಾನ ಮಾಡಿದ ವೀಡಿಯೋ ಎಂದು ವರದಿ ಹೇಳಿದೆ. ಅದರ ಶೀರ್ಷಿಕೆಯು "ಮಗ ಅಪಘಾತದಲ್ಲಿ ನಿಧನನಾದನು, ತಂದೆ ಆತನ ಅಂಗಗಳನ್ನು ದಾನ ಮಾಡಿದರು: ಆಸ್ಪತ್ರೆಯಲ್ಲಿ ಹಾಜರಿದ್ದ ೩೦೦ ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ಉದ್ಯೋಗಿಗಳು ಗಾರ್ಡ್ ಆಫ್ ಆನರ್ ನೀಡಿದರು" (ಅನುವಾದಿಸಲಾಗಿದೆ).
ಜೂನ್ ೧, ೨೦೨೪ ರಂದು ಪ್ರಕಟವಾದ ದೈನಿಕ್ ಭಾಸ್ಕರ್ ವರದಿಯ ಸ್ಕ್ರೀನ್‌ಶಾಟ್.
ನ್ಯೂಸ್18 ರಾಜಸ್ಥಾನ್ ಜೂನ್ ೨, ೨೦೨೪ ರಂದು ವೀಡಿಯೋ ಬಗ್ಗೆ ಇದೇ ರೀತಿ ವರದಿ ಮಾಡಿದೆ. ಮೃತರನ್ನು ವಿಪಿನ್ ಮೆಹ್ತಾ ಮತ್ತು ತಂದೆಯನ್ನು ವಿಶಾಖಪಟ್ಟಣಂನಲ್ಲಿ ವ್ಯಾಪಾರ ಹೊಂದಿರುವ, ಜಾಲೋರ್‌ನ ಫತೇಹ್ ರಾಯಲ್ ರೆಸಿಡೆಂಟ್ ಕಾಲೋನಿಯ ನಿವಾಸಿ ಪ್ರವೀಣ್ ಮೆಹ್ತಾ ಎಂದು ವರದಿಯು ಗುರುತಿಸಿದೆ. ಅಪಘಾತವು ಮೇ ೨೯ ರಂದು ಸಂಭವಿಸಿದೆ ಮತ್ತು ಜೂನ್ ೧ ರಂದು ವಿಪಿನ್ ಸಾವನ್ನಪ್ಪಿದ್ದಾನೆ ಎಂದು ಅದು ಹೇಳಿದೆ. ಈ ಘಟನೆಯು ಆಗಸ್ಟ್ ೨೦೨೪ ರಲ್ಲಿ ವರದಿಯಾದ ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣಕ್ಕಿಂತ ಹಳೆಯ ಘಟನೆಯಾಗಿದೆ.
ತೀರ್ಪು:
ಮೂಲ ವೀಡಿಯೋದ ವಿಶ್ಲೇಷಣೆಯು ಅದರಲ್ಲಿನ ವ್ಯಕ್ತಿ ವಿಶಾಖಪಟ್ಟಣಂನಲ್ಲಿ ಅಪಘಾತದ ನಂತರ ತನ್ನ ಮಗನ ದೇಹವನ್ನು ದಾನ ಮಾಡಿದ ತಂದೆ ವಿಪಿನ್ ಮೆಹ್ತಾ ಎಂದು ಬಹಿರಂಗಪಡಿಸುತ್ತದೆ. ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಎರಡು ತಿಂಗಳ ಮೊದಲು ಈ ಘಟನೆ ನಡೆದಿದೆ. ಆದ್ದರಿಂದ, ಈ ವೀಡಿಯೋ ಕ್ಲಿಪ್‌ನೊಂದಿಗೆ ಹಂಚಿಕೊಳ್ಳಲಾದ ಹೇಳಿಕೆ ತಪ್ಪುದಾರಿಗೆಳೆಯುತ್ತಿದೆ.