ದೆಹಲಿಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಬರೆದಿದ್ದು ಮುಸ್ಲಿಂ ವ್ಯಕ್ತಿ ಅಲ್ಲ
ಸಾರಾಂಶ:
ದೆಹಲಿಯ ರೋಹಿಣಿ ಏರಿಯಾದ ಗೋಡೆಗಳ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬರು ಪಾಕಿಸ್ತಾನದ ಪರ ಘೋಷಣೆಗಳನ್ನು ಬರೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ವೀಡಿಯೋವನ್ನು ಹಂಚಿಕೊಂಡಿವೆ. ಆದರೆ, ಆರೋಪಿ ಮುಸ್ಲಿಂ ಅಲ್ಲ, ಆತ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕ್ರಿಶ್ಚಿಯನ್. ಆದ್ದರಿಂದ ಈ ಹೇಳಿಕೆ ತಪ್ಪು.
ಹೇಳಿಕೆ:
ದೆಹಲಿಯ ಪ್ರದೇಶವೊಂದರ ಕಟ್ಟಡದ ಗೋಡೆಗಳ ಮೇಲೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಪಾಕಿಸ್ತಾನದ ಪರ ಘೋಷಣೆಗಳನ್ನು ಬರೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ವೀಡಿಯೋ ಗೋಡೆಗಳ ಮೇಲೆ "ಪಾಕಿಸ್ತಾನ್ ಜಿಂದಾಬಾದ್" ಮತ್ತು "Long live Pakistan" ಎಂಬ ಘೋಷಣೆಗಳನ್ನು ತೋರಿಸುತ್ತದೆ. ದೃಶ್ಯಾವಳಿಗಳಲ್ಲಿ, ಇಬ್ಬರು ವ್ಯಕ್ತಿಗಳು ಬಹುಶಃ ಆ ಮನೆಯ ನಿವಾಸಿಯಾದ ವ್ಯಕ್ತಿಯನ್ನು ಪ್ರಶ್ನಿಸುವುದನ್ನು ಕೇಳಬಹುದು.
ದೆಹಲಿಯ ಆವಂತಿಕಾ ಸಿ-ಬ್ಲಾಕ್‌ನಲ್ಲಿರುವ ಕಟ್ಟಡದಾದ್ಯಂತ ಮುಸ್ಲಿಂ ವ್ಯಕ್ತಿಯೊಬ್ಬರು ಘೋಷಣೆಗಳನ್ನು ಬರೆದಿದ್ದಾರೆ, ಹಿಂದೂಗಳು ಮತ್ತು ಭಾರತದ ಬಗ್ಗೆ ದ್ವೇಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಿಕ್ಕಿಬಿದ್ದರೆ ಹಿಂದೂ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರೊಬ್ಬರ ವೈರಲ್ ಪೋಷ್ಟ್ ಹೇಳಿದೆ. ಈ ಪೋಷ್ಟ್ ೧೪,೩೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ. ಸಾಮಾನ್ಯವಾಗಿ ತಪ್ಪು ಮಾಹಿತಿ-ಹರಡುವ ಎಕ್ಸ್ ಖಾತೆಯಾದ ಸುದರ್ಶನ್ ನ್ಯೂಸ್ ಕೂಡ ಈ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದೆ.
ಆಗಸ್ಟ್ ೪, ೨೦೨೪ ರಂದು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಅದು ನಮ್ಮನ್ನು ಘಟನೆಯ ಕುರಿತು ಹಲವಾರು ಸುದ್ದಿ ವರದಿಗಳಿಗೆ ಕರೆದೊವೈಯಿತು. ಆಗಸ್ಟ್ ೪, ೨೦೨೪ ರ ದಿನಾಂಕದ ಅಮರ್ ಉಜಾಲಾ ವರದಿಯು ಘಟನೆಯ ಸ್ಥಳವನ್ನು ದೆಹಲಿಯ ರೋಹಿಣಿ ಏರಿಯಾದ ಆವಂತಿಕಾ ಸಿ-ಬ್ಲಾಕ್ ಎಂದು ದೃಢಪಡಿಸಿದೆ. ಜಿಲ್ಲಾ ಪೊಲೀಸ್ ಉಪ ಕಮಿಷನರ್ ಗುರ್ ಇಕ್ಬಾಲ್ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಪ್ರಾಥಮಿಕ ತನಿಖೆಯಿಂದ ಆ ವ್ಯಕ್ತಿ ಮುಸ್ಲಿಂ ಅಲ್ಲ ಮತ್ತು ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದು ಕಂಡುಬಂದಿದೆ. ದೆಹಲಿ ಪೊಲೀಸರು ಪ್ರಶ್ನಾತೀತ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ ೪, ೨೦೨೪ ರ ಅಮರ್ ಉಜಾಲಾ ವರದಿಯ ಸ್ಕ್ರೀನ್‌ಶಾಟ್.
ನ್ಯೂಸ್‌ಎಕ್ಸ್ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ, ಆದರೆ ೬೪ ವರ್ಷದ ಜಸ್ವಂತ್ ಸಿಂಗ್ ಎಂಬ ಕ್ರಿಶ್ಚಿಯನ್. ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ದಿ ಟೈಮ್ಸ್ ಆಫ್ ಇಂಡಿಯಾ, ಮತ್ತು ನ್ಯೂಸ್ ನೇಷನ್ ಸೇರಿದಂತೆ ಹಲವಾರು ಸುದ್ದಿವಾಹಿನಿಗಳು ಈ ಘಟನೆಯ ಬಗ್ಗೆ ವರದಿ ಮಾಡಿ, ಸಿಂಗ್ ಅವರ ಗುರುತು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಪೊಲೀಸರ ಹೇಳಿಕೆಗಳನ್ನು ದೃಢಪಡಿಸಿವೆ.
ತೀರ್ಪು:
ವೈರಲ್ ಪೋಷ್ಟ್ ಗಳಲ್ಲಿ ಹೇಳಿಕೊಂಡಂತೆ ದೆಹಲಿಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಬರೆದ ವ್ಯಕ್ತಿ ಮುಸ್ಲಿಂ ಅಲ್ಲ ಎಂದು ಮೂಲ ವೀಡಿಯೋದ ವಿಶ್ಲೇಷಣೆಯಿಂದ ಕಂಡುಬಂದಿದೆ. ಆರೋಪಿ ಜಸ್ವಂತ್ ಸಿಂಗ್ ಎಂಬ ೬೪ ವರ್ಷದ ಕ್ರಿಶ್ಚಿಯನ್ ವ್ಯಕ್ತಿಯಾಗಿದ್ದು, ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.