Begin typing your search above and press return to search.
    Others

    ತಮಿಳುನಾಡಿನಲ್ಲಿ "ಗೋ ಬ್ಯಾಕ್ ಮೋದಿ" ಎಂಬ ಫಲಕವನ್ನು ಹಿಡಿದಿರುವ ಬಿಜೆಪಿ ಶಾಸಕರ ಚಿತ್ರವನ್ನು ಎಡಿಟ್ ಮಾಡಲಾಗಿದೆ

    IDTU - Karnataka
    4 Jun 2024 7:20 AM GMT
    ತಮಿಳುನಾಡಿನಲ್ಲಿ ಗೋ ಬ್ಯಾಕ್ ಮೋದಿ ಎಂಬ ಫಲಕವನ್ನು ಹಿಡಿದಿರುವ ಬಿಜೆಪಿ ಶಾಸಕರ ಚಿತ್ರವನ್ನು ಎಡಿಟ್ ಮಾಡಲಾಗಿದೆ
    x

    ಸಾರಾಂಶ:

    ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಕನ್ಯಾಕುಮಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ "ಗೋ ಬ್ಯಾಕ್ ಮೋದಿ" ಎಂಬ ಫಲಕವನ್ನು ಹಿಡಿದಿರುವ ಮಹಿಳೆಯ ಚಿತ್ರವನ್ನು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಈ ಚಿತ್ರವು ನಕಲಿಯಾಗಿದೆ ಏಕೆಂದರೆ ಅದನ್ನು ಎಡಿಟ್ ಮಾಡಿ ಅದರಲ್ಲಿ ಕಾಣಿಸುವ ಬರಹವನ್ನು ಬದಲಾಯಿಸಲಾಗಿದೆ. ಇದಲ್ಲದೆ, ಇದರ ಮೂಲ ಚಿತ್ರ ಅಕ್ಟೋಬರ್ ೨೦೨೧ ರದ್ದು.


    ಹೇಳಿಕೆ:

    ಜೂನ್ ೨, ೨೦೨೪ ರಂದು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿಯವರು ತಮ್ಮ ೪೫-ಗಂಟೆಗಳ ಧ್ಯಾನವನ್ನು ಮುಕ್ತಾಯಗೊಳಿಸಿದರು. ಅವರ ಭೇಟಿಯು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 'ಗೋ ಬ್ಯಾಕ್ ಮೋದಿ' ಪ್ರತಿಭಟನೆಗಳಿಗೆ ಕಾರಣವಾಯಿತು. ತಮಿಳುನಾಡಿನ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಕೊಯಮತ್ತೂರಿನ ಸದ್ಗುರುಗಳ ಇಶಾ ಯೋಗ ಕೇಂದ್ರದಲ್ಲಿರುವ ಆದಿಯೋಗಿ ಪ್ರತಿಮೆಯ ಬಳಿ ‘ಗೋ ಬ್ಯಾಕ್ ಮೋದಿ’ ಎಂಬ ಫಲಕವನ್ನು ಹಿಡಿದಿರುವ ಫೋಟೋವನ್ನು ಎಕ್ಸ್‌ನಲ್ಲಿನ ಬಳಕೆದಾರರು ಹಂಚಿಕೊಂಡಿದ್ದಾರೆ. ಪರಿಶೀಲಿಸಿದ ಬಳಕೆದಾರರೊಬ್ಬರು ಮೇ ೩೦, ೨೦೨೪ ರಂದು ಫೋಟೋವನ್ನು ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ಟ್ರೆಂಡ್ ಅಲರ್ಟ್ #GoBackModi ಇದನ್ನು ಹಂಚಿಕೊಳ್ಳಿ🔥🔥(ಅನುವಾದಿಸಲಾಗಿದೆ)." ಪೋಷ್ಟ್ ೨೦೦.೭ ಸಾವಿರ ವೀಕ್ಷಣೆಗಳು, ೧೪ ಸಾವಿರ ಇಷ್ಟಗಳು ಮತ್ತು ೩.೬ ಸಾವಿರ ಮರುಪೋಷ್ಟ್ ಗಳನ್ನು ಗಳಿಸಿದೆ.

    ಮೇ ೩೦, ೨೦೨೪ ರಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ ಚಿತ್ರದ ಸ್ಕ್ರೀನ್‌ಶಾಟ್.


    ಮತ್ತೊಬ್ಬ ಪರಿಶೀಲಿಸಿದ ಎಕ್ಸ್ ಬಳಕೆದಾರರು ಮೇ ೩೦, ೨೦೨೪ ರಂದು ಇದೇ ಫೋಟೋವನ್ನು ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ಮನೋಹರವಾಗಿದೆ, ಸದ್ಗುರುಗಳ ಆಶ್ರಮದ ಮುಂದೆ ಮಹಿಳೆ "ಗೋ ಬ್ಯಾಕ್ ಮೋದಿ" ಫಲಕದೊಂದಿಗೆ ನಿಂತಿರುವುದು. 🤡🤡🤡 (ಅನುವಾದಿಸಲಾಗಿದೆ)." ಫೋಟೋವನ್ನು ಹಂಚಿಕೊಳ್ಳಲು #GoBackModi ಎಂಬ ಹ್ಯಾಶ್‌ಟ್ಯಾಗ್ ಬಳಸಿರುವುದನ್ನು ಕೂಡ ನಾವು ಗಮನಿಸಿದ್ದೇವೆ.


    ಪುರಾವೆ:

    ನಾವು ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಮೇ ೨೦೨೨ ರಲ್ಲಿ ಪ್ರಧಾನ ಮಂತ್ರಿಯವರ ಚೆನ್ನೈ ಭೇಟಿಯ ಸಮಯದಲ್ಲಿ ಇದೇ ರೀತಿಯ ಶೀರ್ಷಿಕೆಗಳೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು ಎಂದು ಕಂಡುಬಂದಿದೆ. ಎಕ್ಸ್ ನಲ್ಲಿನ ಬಳಕೆದಾರರು ಮೇ ೨೬, ೨೦೨೨ ರಂದು ಚಿತ್ರವನ್ನು ಪೋಷ್ಟ್ ಮಾಡಿದ್ದಾರೆ.

    ಮೇ ೨೬, ೨೦೨೨ ರಂದು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಅಕ್ಟೋಬರ್ ೨೪, ೨೦೨೧ ರಂದು ವನತಿ ಶ್ರೀನಿವಾಸನ್ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಷ್ಟ್ ಮಾಡಲಾದ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಬಿಜೆಪಿ ಶಾಸಕರು "ಭಾರತವು ಇತಿಹಾಸವನ್ನು ಸೃಷ್ಟಿಸುತ್ತದೆ, ೧೦೦ ಕೋಟಿ ವ್ಯಾಕ್ಸಿನೇಷನ್‌ಗಳು. ಧನ್ಯವಾದಗಳು ಮೋದಿ ಜೀ (ಅನುವಾದಿಸಲಾಗಿದೆ)" ಎಂಬ ಫಲಕವನ್ನು ಹಿಡಿದಿರುವುದನ್ನು ಪೋಷ್ಟ್ ತೋರಿಸುತ್ತದೆ.

    ಅಕ್ಟೋಬರ್ ೨೪, ೨೦೨೧ ರಂದು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಅಕ್ಟೋಬರ್ ೨೧, ೨೦೨೧ ರಂದು ಭಾರತವು ೧೦೦ ಕೋಟಿ ಕೋವಿಡ್-೧೯ ರ ವ್ಯಾಕ್ಸಿನೇಷನ್‌ಗಳ ದಾಖಲೆಯನ್ನು ದಾಟಿತ್ತು ಮತ್ತು ಇದನ್ನು ಸಾಧಿಸಿದ ಪ್ರಧಾನ ಮಂತ್ರಿಯವರ ಪ್ರಯತ್ನಗಳಿಗೆ ಇದು ಗೌರವ ಸಲ್ಲಿಸಿದೆ ಎಂದು ಫೋಟೋದ ಶೀರ್ಷಿಕೆ ಸೂಚಿಸುತ್ತದೆ.

    ವೈರಲ್ ಚಿತ್ರ (ಎಡ) ಮತ್ತು ಮೂಲ ಚಿತ್ರಗಳ (ಬಲ) ನಡುವಿನ ಹೋಲಿಕೆ.


    ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಅಕ್ಟೋಬರ್ ೨೪, ೨೦೨೧ ರಂದು ಎಕ್ಸ್ ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ಅವರು ಮತ್ತು ವನತಿ ಶ್ರೀನಿವಾಸನ್ ಒಂದೇ ರೀತಿಯ ಫಲಕಗಳನ್ನು ಹಿಡಿದಿದ್ದಾರೆ ಎಂಬುದು ಗಮನಾರ್ಹ. ಪೋಷ್ಟ್ ನ ಶೀರ್ಷಿಕೆಯು ವೈರಲ್ ಚಿತ್ರದ ಮೂಲ ಆವೃತ್ತಿಯು ತಮಿಳುನಾಡು ಬಿಜೆಪಿಯ ಯುವ ಘಟಕವು ಇಶಾ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಿಂದ ಬಂದಿದೆ ಎಂದು ಸ್ಪಷ್ಟಪಡಿಸುತ್ತದೆ.

    ಅಕ್ಟೋಬರ್ ೨೪, ೨೦೨೧ ರ ಕೆ ಅಣ್ಣಾಮಲೈ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ತೀರ್ಪು:

    ವೈರಲ್ ಚಿತ್ರದ ವಿಶ್ಲೇಷಣೆಯು ಅಕ್ಟೋಬರ್ ೨೪, ೨೦೨೪ ರಂದು ಕೊಯಮತ್ತೂರಿನಲ್ಲಿ ಭಾರತವು ೧೦೦ ಕೋಟಿ ಕೋವಿಡ್-೧೯ ಲಸಿಕೆಗಳನ್ನು ದಾಟಿದ ಸಂದರ್ಭದ ಒಂದು ಎಡಿಟ್ ಮಾಡಿದ ಚಿತ್ರವನ್ನು ತೋರಿಸುತ್ತದೆ ಎಂದು ಕಂಡುಬಂದಿದೆ. ಆದ್ದರಿಂದ, ಚಿತ್ರವು ಪ್ರಧಾನಿಯವರ ತಮಿಳುನಾಡಿಗೆ ಭೇಟಿಯ ವಿರುದ್ಧ ಇತ್ತೀಚಿನ ಪ್ರತಿಭಟನೆಗಳನ್ನು ತೋರಿಸುತ್ತದೆ ಎಂಬ ಹೇಳಿಕೆಗಳು ತಪ್ಪು.

    Claim Review :   The image of a BJP MLA holding a “Go Back Modi” placard in Tamil Nadu is digitally altered
    Claimed By :  X user
    Fact Check :  False
    IDTU - Karnataka

    IDTU - Karnataka